Viral Video: ಜೀಪಿನ ಮೇಲೆ ಕುಳಿತು ರಸ್ತೆಯಲ್ಲಿ ಸಂಚರಿಸಿದ ಸಿಂಹ! ಅಚ್ಚರಿಯ ವಿಡಿಯೊ ನೀವೂ ನೋಡಿ
ಜೀಪಿನಲ್ಲಿ ಸಿಂಹದ ವೇಷ ಹಾಕಿದ ನಾಯಿವೊಂದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನು ನೋಡಿದವರಿಗೆ ಅದು ನಾಯಿಯೇ? ಸಿಂಹವೇ? ಎಂಬ ಗೊಂದಲ ಉಂಟಾಗಿದ್ದು, ತಮಾಷೆಯ ಕಾಮೆಂಟ್ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೊಸದಿಲ್ಲಿ: ಸಿಂಹ ಎಂದರೆ ಸಾಕು ಎಲ್ಲರೂ ಬೆಚ್ಚಿ ಬೀಳುತ್ತಾರೆ. ಇನ್ನು ಸಿಂಹವೊಂದು ಜೀಪಿನ ಮೇಲೆ ಕುಳಿತು ರಸ್ತೆಯಲ್ಲಿ ಬಂದರೆ ನೋಡಿದವರ ಪರಿಸ್ಥಿತಿ ಹೇಗಿರಬೇಡ ಹೇಳಿ? ಆದರೆ ಇಂತಹದ್ದೊಂದು ಘಟನೆ ನಡೆದಾಗ ಆಗಿದ್ದೇ ಬೇರೆ. ಜನ ಭಯ ಮರೆತು ಜೀಪಿನ ಮೇಲಿದ್ದ ಸಿಂಹದ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ. ಇದನ್ನು ನೋಡಿದವರಿಗೆ ಒಮ್ಮೆಲೆ ಶಾಕ್ ಆಗುವುದಂತೂ ಗ್ಯಾರಂಟಿ!
ಅಸಲಿ ವಿಚಾರವೆನೆಂದರೆ ಅದು ವಾಸ್ತವವಾಗಿ ನಾಯಿ ಆಗಿತ್ತಂತೆ. ನಾಯಿಗೆ ಸಿಂಹದ ವೇಷ ಹಾಕಿ ಜೀಪಿನ ಬಾನೆಟ್ ಕೂರಿಸಿಕೊಂಡು ಕರೆದೊಯ್ಯಲಾಗಿತ್ತು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೊವನ್ನು ವಿಶಾಖಪಟ್ಟಣಂ ನಿವಾಸಿಯೊಬ್ಬರು ಪೋಸ್ಟ್ ಮಾಡಿದ್ದಾರೆ.
ಈ ವಿಡಿಯೊಗೆ ಇದುವರೆಗೆ 15 ದಶಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಬಂದಿದೆ. ಈ ವಿಡಿಯೊವನ್ನು 8 ಲಕ್ಷಕ್ಕೂ ಹೆಚ್ಚು ಬಾರಿ ಲೈಕ್ ಮಾಡಲಾಗಿದೆ. ಜನರು ಸಹ ವಿಡಿಯೊಗೆ ಸಾಕಷ್ಟು ಕಾಮೆಂಟ್‍ಗಳನ್ನು ಮಾಡುತ್ತಿದ್ದಾರೆ. ನೆಟ್ಟಿಗರೊಬ್ಬರು ,”ಯಾವ ತಳಿಯ ನಾಯಿ ಇದು” ಎಂದು ಕೇಳಿದ್ದಾರೆ. ಇನ್ನೊಬ್ಬರು, "ನಾಯಿ ನಾಯಿಯಾಗಿ ಇರುತ್ತದೆ, ಎಂದಿಗೂ ಸಿಂಹವಾಗುವುದಿಲ್ಲ" ಎಂದಿದ್ದಾರೆ.
ಇದು ಸುಲ್ತಾನ್ ಎಂಬ ಹೆಸರಿನ 20 ತಿಂಗಳ ಇಂಗ್ಲಿಷ್ ಮಾಸ್ಟಿಫ್ ತಳಿಯ ನಾಯಿ ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ. ಆದರೆ ನಾಯಿಗೆ ಈ ವೇಷ ಹಾಕಿಸಿದ ವ್ಯಕ್ತಿಯು, ಈ ರೀತಿ ಯಾಕೆ ಮಾಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ.
ಇದೇ ರೀತಿಯಲ್ಲಿ ನಾಯಿಗೆ ಸಿಂಹದ ಮುಖವಾಡ ಧರಿಸಿ ತಮಾಷೆ ಮಾಡುವ ವಿಡಿಯೊಗಳು ಆಗಾಗ ಸೋಶಿಯಲ್ ಮೀಡಿಯಾಗಳಲ್ಲಿ ಕಾಣಿಸಿಕೊಳ್ಳುತ್ತವೆ. ನೆಟ್ಟಿಗರನ್ನು ನಕ್ಕುನಗಿಸಲು ತಮಾಷೆಗಾಗಿ ಈ ರೀತಿ ವಿಡಿಯೊಗಳನ್ನು ಮಾಡಲಾಗುತ್ತದೆ.
ಈ ಸುದ್ದಿಯನ್ನೂ ಓದಿ:Viral Video: ರೈಲ್ವೆ ಟ್ರ್ಯಾಕ್ ಮೇಲಿದ್ದ ಸಿಂಹವನ್ನು ಕೋಲು ಹಿಡಿದು ಓಡಿಸಿದ ಭೂಪ! ವಿಡಿಯೊ ನೋಡಿ
ಸಿಂಹವೆಂದರೆ ಎಲ್ಲರೂ ಬೆಚ್ಚಿ ಬೀಳುತ್ತಾರೆ. ಆದರೆ ಗುಜರಾತ್ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಕೋಲನ್ನು ಹಿಡಿದುಕೊಂಡು ರೈಲ್ವೆ ಹಳಿಯ ಮೇಲಿದ್ದ ಸಿಂಹವನ್ನು ಓಡಿಸಲು ಅದರ ಬಳಿ ಬಂದಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಅನೇಕ ಗಮನ ಸೆಳೆದು ಸಖತ್ ವೈರಲ್ ಆಗಿದೆ. ಜ. 6ರಂದು ನಡೆದ ಈ ಘಟನೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹಳಿಯ ಮೇಲಿದ್ದ ಸಿಂಹವನ್ನು ಕೋಲು ಹಿಡಿದು ಓಡಿಸಿದ್ದಾರೆ. ದಾರಿ ತಪ್ಪಿದ ಹಸು ಅಥವಾ ಕುರಿಯನ್ನು ನಿಭಾಯಿಸುವಂತೆ ಸಿಂಹವನ್ನು ಓಡಿಸಿದ ಇವರನ್ನು ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ. ಸಿಂಹ ಕೂಡ ಆತನ ಮೇಲೆ ಆಕ್ರಮಣ ಮಾಡದೆ ಸುಮ್ಮನೆ ಎದ್ದು ಹೋಗಿದೆ.
ಮಧ್ಯಾಹ್ನ 3 ಗಂಟೆ ಸುಮಾರಿಗೆ ಲಿಲಿಯಾ ರೈಲ್ವೆ ನಿಲ್ದಾಣದ ಗೇಟ್ ಸಂಖ್ಯೆ ಎಲ್‌ಸಿ -31ರಲ್ಲಿ ಈ ಘಟನೆ ನಡೆದಿದೆ ಎಂದು ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಶಂಭುಜಿ ಹೇಳಿದ್ದಾರೆ. ಕಾವಲುಗಾರನ ಈ ಧೈರ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಪ್ರಶಂಸೆ ಸಿಕ್ಕಿದೆ. ನೆಟ್ಟಿಗರು ಕಾವಲುಗಾರನ ಧೈರ್ಯವನ್ನು ಹಾಡಿ ಹೊಗಳಿದ್ದಾರೆ.