ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ದೋಸೆ ತಯಾರಿಸಿದ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ: ಗ್ಲೌಸ್ ಧರಿಸದ ಬಗ್ಗೆ ನೆಟ್ಟಿಗರಿಂದ ಟೀಕೆ
Jyotiraditya Scindia: ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಬೆಂಗಳೂರಿನ ಪ್ರಸಿದ್ಧ 'ದಿ ರಾಮೇಶ್ವರಂ ಕೆಫೆ'ಗೆ ಭೇಟಿ ನೀಡಿ ಭಾರೀ ಸುದ್ದಿಯಾಗಿದ್ದಾರೆ. ಕೆಫೆಯಲ್ಲಿ ಸ್ವತಃ ದೋಸೆ ಹೊಯ್ದು ಹಾಗೂ ಫಿಲ್ಟರ್ ಕಾಫಿ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ದೋಸೆ ತಯಾರಿಸಿದ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ -
ಬೆಂಗಳೂರು, ಸೆ. 23: ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia) ಬೆಂಗಳೂರಿನ ಪ್ರಸಿದ್ಧ 'ದಿ ರಾಮೇಶ್ವರಂ ಕೆಫೆ'ಗೆ ಭೇಟಿ ನೀಡಿ ಭಾರಿ (Viral News) ಸುದ್ದಿಯಾಗಿದ್ದಾರೆ. ಕೆಫೆಯಲ್ಲಿ ಸ್ವತಃ ದೋಸೆ ಹೊಯ್ದು ಹಾಗೂ ಫಿಲ್ಟರ್ ಕಾಫಿ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ʼʼದೋಸೆ ಮಾಡಲು ಸುಲಭ ಎಂದುಕೊಂಡಿದ್ದೆ. ಆದರೆ ತಯಾರಿಸುವ ವಿಧಾನ ಬಹಳ ಕಷ್ಟʼʼ ಎಂದು ಅಡುಗೆ ಸಿಬ್ಬಂದಿಯ ಶ್ರಮಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಬಿಳಿ ಕುರ್ತಾ ಧರಿಸಿದ ಸಿಂಧಿಯಾ ಅಡುಗೆ ಸಿಬ್ಬಂದಿಯೊಂದಿಗೆ ಮಾತನಾಡುವುದನ್ನು ವಿಡಿಯೊದಲ್ಲಿ ಕಾಣಬಹುದು. ಸಿಬ್ಬಂದಿ ನೋಡುತ್ತಿದ್ದಂತೆ ಅವರು ತವಾ ಮೇಲೆ ದೋಸೆ ಹಿಟ್ಟನ್ನು ಸವರಿ ವೃತ್ತಾಕಾರದ ದೋಸೆ ಹೊಯ್ಯಲು ಪ್ರಯತ್ನಿಸಿರುವ ದೃಶ್ಯ ಸೆರೆಯಾಗಿದೆ.
ವಿಡಿಯೊ ನೋಡಿ:
ಕೆಫೆಗೆ ಭೇಟಿ ನೀಡಿದ ಸಚಿವರು, ಗ್ರಾಹಕರಾಗಿ ಕುಳಿತುಕೊಳ್ಳುವ ಬದಲು ನೇರವಾಗಿ ಅಡುಗೆ ಕೋಣೆಗೆ ತೆರಳಿ ಬಾಣಸಿಗರೊಂದಿಗೆ ಮಾತುಕತೆ ನಡೆಸಿದರು. ಕಾವಲಿಯ ಮೇಲೆ ದೋಸೆ ಹಿಟ್ಟು ಹೊಯ್ದು ಹರಡಿದ ಅವರು, ದೋಸೆ ತಯಾರಿಸಿ ಅಲ್ಲೆ ಇದ್ದ ಗ್ರಾಹಕರೊಬ್ಬರಿಗೆ ಬಡಿಸಿದರು. ನಂತರ ಸಾಂಪ್ರದಾಯಿಕ ಶೈಲಿಯಲ್ಲಿ ಫಿಲ್ಟರ್ ಕಾಫಿಯನ್ನು ಲೋಟದಿಂದ ಕಪ್‌ಗೆ ಸುರಿಯುವ ಮೂಲಕ ಮತ್ತೊಂದು ಸಾಹಸ ನಡೆಸಿದರು.
ಸೂರತ್ ರೈಲ್ವೆ ನಿಲ್ದಾಣದಲ್ಲಿ ಕಳಪೆ ಆಹಾರ; ಫುಡ್ ಕೌಂಟರ್‌ನಲ್ಲಿ ಪ್ರಯಾಣಿಕರಿಗಾಗಿ ತಯಾರಿಸಿದ ಪಫ್ ತಿಂದ ಇಲಿ
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು, ಆಹಾರ ತಯಾರಿಸುವಾಗ ಗ್ಲೌಸ್ ಹಾಗೂ ತಲೆಗೆ ಕ್ಯಾಪ್ ಏಕೆ ಧರಿಸಿಲ್ಲ? ಎಂದು ನೈರ್ಮಲ್ಯದ ಬಗ್ಗೆ ಪ್ರಶ್ನಿಸಿದ್ದಾರೆ. ಮತ್ತೊಬ್ಬರು, ʼʼಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆ ಕೇವಲ ಪ್ರಚಾರದಿಂದ ಓಡುತ್ತಿದೆ. ರುಚಿ ಮಾತ್ರ ಅದೇ" ಎಂದು ಕಾಮೆಂಟ್ ಮಾಡಿದ್ದಾರೆ.