#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral Video: ರಸ್ತೆಗೆ ನುಗ್ಗಿದ ಚಿರತೆಗೆ ಹಾಲು ಮಾರುವವನ ಬೈಕ್ ಡಿಕ್ಕಿ; ಮುಂದೇನಾಯ್ತು? ಇಲ್ಲಿದೆ ಕುತೂಹಲಕಾರಿ ವಿಡಿಯೊ

ರಾಜಸ್ಥಾನದ ಉದಯಪುರದ ಮುಖ್ಯ ರಸ್ತೆಯ ಕಡೆಗೆ ಚಿರತೆಯೊಂದು ಇದ್ದಕ್ಕಿದ್ದಂತೆ ಓಡಿ ಬಂದ ಪರಿಣಾಮ ಹಾಲು ಮಾರುವವನ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಿಂದ ಚಿರತೆಗೆ ಪೆಟ್ಟಾಗಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಹಾಲು ಮಾರುವವನಿಗೆ ಡಿಕ್ಕಿ ಹೊಡೆದ ಚಿರತೆ; ಕೊನೆಗೆ ಆಗಿದ್ದೇನು?

leopard viral video

Profile pavithra Feb 11, 2025 10:57 AM

ಜೈಪುರ: ಕಾಡಿನಲ್ಲಿ ಇರಬೇಕಾಗಿದ್ದ ಹುಲಿ, ಚಿರತೆಗಳು ಈಗ ಆಹಾರ ಹುಡುಕಿಕೊಂಡು ಹಳ್ಳಿಗಳಲ್ಲಿ ಓಡಾಡುತ್ತಿವೆ. ಹುಲಿಯೊಂದು ಮನೆಯೊಳಗೆ ನುಗ್ಗಿದ್ದು, ಚಿರತೆ ದಾರಿಹೋಕನ ಮೇಲೆ ದಾಳಿ ಮಾಡಿದ್ದು ಇಂತಹ ಘಟನೆಗಳು ಸಾಕಷ್ಟು ನಡೆದಿವೆ. ಇತ್ತೀಚೆಗೆ ರಾಜಸ್ಥಾನದ ಉದಯಪುರದ ಮುಖ್ಯ ರಸ್ತೆಯ ಕಡೆಗೆ ಚಿರತೆಯೊಂದು ಇದ್ದಕ್ಕಿದ್ದಂತೆ ಓಡಿ ಬಂದ ಪರಿಣಾಮ ಹಾಲು ಮಾರುವವನ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಇದರಿಂದ ಚಿರತೆ ಗಾಯಗೊಂಡಿದಲ್ಲದೇ ಹಾಲು ಮಾರುವವನು ಕೆಳಗೆ ಬಿದ್ದು ಹಾಲೆಲ್ಲಾ ಚೆಲ್ಲಿ ಹೋಗಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದೆ.

ವೈರಲ್ ಆದ ವಿಡಿಯೊದಲ್ಲಿ, ಉದಯಪುರ ನಗರದ ಬಳಿಯ ಶಿಲ್ಪಗ್ರಾಮ್ ಮುಖ್ಯ ರಸ್ತೆಯ ಮೂಲಕ ಹಾಲು ಮಾರುವವನೊಬ್ಬ ತನ್ನ ಬೈಕ್‌ನಲ್ಲಿ ಹೋಗುವಾಗ ಚಿರತೆ ತನ್ನ ಕಡೆಗೆ ಓಡಿ ಬರುವುದನ್ನು ನೋಡಿ ಹೆದರಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಬಳಿಕ ಆತ ಚಿರತೆಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಚಿರತೆಗೆ ಕೂಡ ಪೆಟ್ಟಾಗಿದೆ. ಈ ದೃಶ್ಯವನ್ನು ನೋಡಿದ ವ್ಯಕ್ತಿಗಳಿಬ್ಬರು ಹಾಲು ಮಾರುವವನಿಗೆ ಸಹಾಯ ಮಾಡಲು ಮುಂದೆ ಬಂದಾಗ ಚಿರತೆ ಕುಂಟುತ್ತ ರಸ್ತೆ ದಾಟಿದೆ.



ಉದಯಪುರದಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದೆ. ಈ ಹಿಂದೆ ಜನವರಿಯಲ್ಲಿ ರಾತ್ರಿ ವ್ಯಕ್ತಿಯೊಬ್ಬ ತನ್ನ ಮಗ ಮತ್ತು ಸೋದರಳಿಯನೊಂದಿಗೆ ಕಾರಿನಲ್ಲಿ ಉಂಡಿತಾಲ್‍ಗೆ ಹೋಗುವಾಗ ರಸ್ತೆ ಬದಿಯಲ್ಲಿ ಸತ್ತ ಎಮ್ಮೆಯ ಮಾಂಸವನ್ನು ಚಿರತೆ ತಿನ್ನುವುದನ್ನು ನೋಡಿದ್ದಾನೆ. ತಕ್ಷಣ ಕಾರನ್ನು ನಿಲ್ಲಿಸಿ ಮೊಬೈಲ್‌ನಲ್ಲಿ ಈ ದೃಶ್ಯವನ್ನು ರೆಕಾರ್ಡ್‌ ಮಾಡಿದ್ದಾರೆ. ಇದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ವಿಡಿಯೊದಲ್ಲಿ ಕಾರಿನ ಬೆಳಕು ಬಿದ್ದ ಕೂಡಲೇ ಚಿರತೆ ಬೇಟೆಯನ್ನು ಬಿಟ್ಟು ಕಾಡಿನ ಕಡೆಗೆ ಓಡಿದೆ.

ಘಟನೆಯ ನಂತರ, ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ ಮತ್ತು ಈ ಪ್ರದೇಶದಲ್ಲಿ ಬೋನು ಇರಿಸಿ ಚಿರತೆಯನ್ನು ಹಿಡಿಯಬೇಕೆಂದು ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Viral Video: ಚಿರತೆಯ ಕಾಟಕ್ಕೆ ಬೇಸತ್ತ ಗ್ರಾಮಸ್ಥರು ಕೊನೆಗೆ ಮಾಡಿದ್ದೇನು? ವಿಡಿಯೊ ನೋಡಿ

ಉತ್ತರ ಪ್ರದೇಶದ ಮಹಾರಾಜ್‌ಗಂಜ್‌ನಲ್ಲಿ ಚಿರತೆಯೊಂದು ಕಾಣಿಸಿಕೊಂಡು ಜನರನ್ನು ಬೆಚ್ಚಿ ಬೀಳಿಸಿದೆ. ಚಿರತೆಯ ಕಾಟದಿಂದ ಹೆದರಿದ ಜನ ಕೊನೆಗೆ ತಾವೇ ಕೈಯಾರೆ ಚಿರತೆಯನ್ನು ಸೆರೆ ಹಿಡಿದಿದ್ದಾರೆ. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಚಿರತೆಯ ಕಾಟದ ಬಗ್ಗೆ ಅರಣ್ಯ ಇಲಾಖೆಗೆ ಪದೇ ಪದೆ ದೂರು ನೀಡಿದರೂ ಅವರು ಯಾವುದೇ ಕ್ರಮ ತೆಗೆದುಕೊಂಡಿಲ್ಲವಂತೆ. ಹಾಗಾಗಿ ಇನ್ನು ಕಾದರೆ ಪ್ರಯೋಜನವಿಲ್ಲವೆಂದು ಗ್ರಾಮಸ್ಥರೇ ಚಿರತೆ ಹಿಡಿಯುವ ಸಾಹಸಕ್ಕೆ ಕೈ ಹಾಕಿ ಯಶಸ್ವಿಯಾಗಿದ್ದಾರೆ. ವೈರಲ್‌ ವಿಡಿಯೊದಲ್ಲಿ ಗ್ರಾಮದ ಯುವಕರು ಚಿರತೆ ತಮ್ಮ ಕೈ ತಪ್ಪಿ ಹೋಗಬಾರದು ಎಂದು ಅದರ ಕಾಲು, ಕುತ್ತಿಗೆಯನ್ನು ಬಿಗಿಯಾಗಿ ಹಿಡಿದಿದ್ದಾರೆ. ಚಿರತೆಯನ್ನು ಹಿಡಿದ ಬಗ್ಗೆ ಅರಣ್ಯ ಇಲಾಖೆಯವರಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆಯವರು ಬಂದು ಚಿರತೆಯನ್ನು ತೆಗೆದುಕೊಂಡು ಹೋಗಿದ್ದಾರೆ.