ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Heart Attack Case: ಶಾಲೆಯಲ್ಲಿ ಪಾಠ ಮಾಡುವಾಗಲೇ ಹೃದಯಾಘಾತದಿಂದ ಕುಸಿದುಬಿದ್ದ ಶಿಕ್ಷಕ; ವಿಡಿಯೊ ವೈರಲ್!

ಲಾಹೋರ್‌ನ 36 ವರ್ಷದ ಶಿಕ್ಷಕ ನಿಯಾಜ್ ಅಹ್ಮದ್ ಎಂಬಾತ ಕ್ರೆಸೆಂಟ್ ಮಾಡೆಲ್ ಹೈಯರ್ ಸೆಕೆಂಡರಿ ಸ್ಕೂಲ್‍ನಲ್ಲಿ ಪಾಠ ಮಾಡುತ್ತಿರುವಾಗ, ಇದ್ದಕ್ಕಿದ್ದಂತೆ ತರಗತಿಯಲ್ಲಿಯೇ ಕುಸಿದು ಬಿದ್ದು ಹೃದಯಾಘಾತದಿಂದ ನಿಧನನಾಗಿದ್ದಾನೆ. ಈ ದೃಶ್ಯವನ್ನು ವಿಡಿಯೊದಲ್ಲಿ ಸೆರೆಹಿಡಿದು ಸೋಶಿಯಲ್ ಮಿಡಿಯಾದಲ್ಲಿ ಹರಿಬಿಡಲಾಗಿದೆ. ಇದು ಈಗ ಎಲ್ಲರ ಗಮನಸೆಳೆದು ವೈರಲ್(Viral News)ಆಗಿದೆ.

ಹೃದಯಾಘಾತದಿಂದ ಕುಸಿದುಬಿದ್ದ ಶಿಕ್ಷಕ- ವಿಡಿಯೊ ನೋಡಿ

Profile pavithra Jul 10, 2025 4:46 PM

ಇಸ್ಲಮಾಬಾದ್: ಇತ್ತೀಚೆಗಷ್ಟೇ ಲಾಹೋರ್‌ನ 36 ವರ್ಷದ ಶಿಕ್ಷಕ ನಿಯಾಜ್ ಅಹ್ಮದ್ ಎಂಬಾತ ಕ್ರೆಸೆಂಟ್ ಮಾಡೆಲ್ ಹೈಯರ್ ಸೆಕೆಂಡರಿ ಸ್ಕೂಲ್‍ನಲ್ಲಿ ಪಾಠ ಮಾಡುತ್ತಿರುವಾಗ, ಇದ್ದಕ್ಕಿದ್ದಂತೆ ತರಗತಿಯಲ್ಲಿಯೇ ಕುಸಿದು ಬಿದ್ದು ಹೃದಯಾಘಾತದಿಂದ(Heart attack) ನಿಧನನಾಗಿದ್ದಾನೆ. ಈ ದೃಶ್ಯವನ್ನು ವಿಡಿಯೊದಲ್ಲಿ ಸೆರೆಹಿಡಿದು ಸೋಶಿಯಲ್ ಮಿಡಿಯಾದಲ್ಲಿ ಹರಿಬಿಡಲಾಗಿದೆ. ಇದು ಈಗ ಎಲ್ಲರ ಗಮನಸೆಳೆದು ವೈರಲ್(Viral Video) ಆಗಿದೆ.

ಈ ಅಘಾತಕಾರಿ ಘಟನೆ ನಡೆದ ನಂತರ, ಕ್ರೆಸೆಂಟ್ ಮಾಡೆಲ್ ಹೈಯರ್ ಸೆಕೆಂಡರಿ ಶಾಲೆಯ ಆಡಳಿತ ತಂಡವು ಶಾಲೆಯ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ನಿಯಾಜ್ ಅಹ್ಮದ್ ಅವನ ಹಠಾತ್ ಮರಣದ ಸುದ್ದಿಯನ್ನು ಹಂಚಿಕೊಂಡಿದೆ. ಈ ವಿಡಿಯೊ ಎಲ್ಲರ ಗಮನಸೆಳೆದು ವೈರಲ್ ಆಗಿದೆ. ವೈರಲ್ ಆದ ವಿಡಿಯೊದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುವುದರಲ್ಲಿ ತಲ್ಲೀನನಾದ ನಿಯಾಜ್ ಅಹ್ಮದ್ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಅಲ್ಲೇ ಸಾವನಪ್ಪಿದ್ದಾನೆ.

ವಿಡಿಯೊ ಇಲ್ಲಿದೆ ನೋಡಿ...



ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಒಬ್ಬರು,"ಅವರು ತುಂಬಾ ಪ್ರೀತಿ ಮತ್ತು ಕಾಳಜಿಯುಳ್ಳವರಾಗಿದ್ದರು, ಕೇವಲ ಒಬ್ಬ ಶಿಕ್ಷಕನಲ್ಲ, ಸ್ನೇಹಿತ, ಸಹೋದರ ಕೂಡ ಆಗಿದ್ದರು ಹಾಗೇ ಸರಳ ಮತ್ತು ಸಭ್ಯ ವ್ಯಕ್ತಿಯಾಗಿದ್ದರು" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. "ಅವರು ಮೃದು ಮತ್ತು ದಯಾಮಯಿ ಶಿಕ್ಷಕರಾಗಿದ್ದರು" ಎಂದು ಇನ್ನೊಬ್ಬರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ನಾಯಿ ಮರಿ ಮೇಲೆ ಇದೆಂಥಾ ಕ್ರೌರ್ಯ? ಈ ದುಷ್ಟನ ಹೀನ ಕೃತ್ಯದ ವಿಡಿಯೊ ಇಲ್ಲಿದೆ

ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ (WHO) ದತ್ತಾಂಶದ ಪ್ರಕಾರ, ಪಾಕಿಸ್ತಾನದಲ್ಲಿ ಪುರುಷರು ಮತ್ತು ಮಹಿಳೆಯರ ಸಾವಿಗೆ ಮುಖ್ಯ ಕಾರಣ ಹೃದಯ ಕಾಯಿಲೆಯಾಗಿದೆ. ಗಂಭೀರ ಸಮಸ್ಯೆಯ ಹೊರತಾಗಿಯೂ, ಪಾಕಿಸ್ತಾನವು ಒಟ್ಟಾರೆ ಜೀವಿತಾವಧಿಯಲ್ಲಿ ಸ್ವಲ್ಪ ಸುಧಾರಣೆ ಕಂಡಿದೆ. 2000 ನೇ ಇಸವಿಯಲ್ಲಿ, ಜನನದ ಸಮಯದಲ್ಲಿ ಸರಾಸರಿ ಜೀವಿತಾವಧಿ ಸುಮಾರು 61.4 ವರ್ಷಗಳು ಆಗಿದ್ದವು. 2021 ರ ಹೊತ್ತಿಗೆ, ಇದು 66 ವರ್ಷಗಳಿಗೆ ಏರಿತು. ಈ ಪ್ರಗತಿಯು ಉತ್ತಮ ಸಂಕೇತವಾಗಿದ್ದರೂ, ಹೃದಯ ಸಂಬಂಧಿತ ಸಾವುಗಳ ಸಂಖ್ಯೆ, ವಿಶೇಷವಾಗಿ ಕಿರಿಯ ಜನರಲ್ಲಿ, ಹೆಚ್ಚುತ್ತಿರುವುದು ಬಹಳ ಆತಂಕಕಾರಿಯಾಗಿದೆ.