Viral Video: ನಾಯಿ ಮರಿ ಮೇಲೆ ಇದೆಂಥಾ ಕ್ರೌರ್ಯ? ಈ ದುಷ್ಟನ ಹೀನ ಕೃತ್ಯದ ವಿಡಿಯೊ ಇಲ್ಲಿದೆ
ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಅಮಾಯಕ ನಾಯಿಮರಿಯನ್ನು ಅದರ ತಾಯಿಯ ಮುಂದೆಯೇ ಕೋಲಿನಿಂದ ಹೊಡೆದು ಎಸೆದಿದ್ದಾನೆ. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.


ಲಖನೌ: ಇತ್ತೀಚಿನ ದಿನಗಳಲ್ಲಿ ಪ್ರಾಣಿಹಿಂಸೆಯ ಘಟನೆಗಳು ಹೆಚ್ಚು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಉತ್ತರ ಪ್ರದೇಶದಲ್ಲಿ ಈ ಹಿಂದೆ ಹಲವು ಪ್ರಾಣಿ ಹಿಂಸೆಯ ಘಟನೆಗಳು ವರದಿಯಾಗಿದ್ದವು. ಇದೀಗ ಮತ್ತೊಂದು ಘಟನೆ ಬೆಳಕಿಗೆ ಬಂದಿದ್ದು, ಇದರಲ್ಲಿ ವ್ಯಕ್ತಿಯೊಬ್ಬ ನಾಯಿಮರಿಯನ್ನು ಅದರ ತಾಯಿಯ ಮುಂದೆಯೇ ಕೋಲಿನಿಂದ ಹೊಡೆದು ಎಸೆದಿದ್ದಾನೆ. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದೆ. ಈ ಮನಕಲಕುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಈ ಆಘಾತಕಾರಿ ವಿಡಿಯೊವನ್ನು ನೋಡುಗರೊಬ್ಬರು ರೆಕಾರ್ಡ್ ಮಾಡಿದ್ದು, ವೈರಲ್ ಆದ ವಿಡಿಯೊದಲ್ಲಿ ವ್ಯಕ್ತಿಯೊಬ್ಬ ನಾಯಿಮರಿಯ ಕುತ್ತಿಗೆಯನ್ನು ಹಿಡಿದಿರುವುದು ಮತ್ತು ಅದು ನೋವಿನಿಂದ ಕೂಗುವುದು ಸೆರೆಯಾಗಿದೆ. ಆ ವ್ಯಕ್ತಿ ನಾಯಿಮರಿಯನ್ನು ಕೋಲಿನಿಂದ ಹೊಡೆದು,ಅದನ್ನು ರಸ್ತೆಗೆ ಎಸೆದಿದ್ದಾನೆ. ಆಘಾತಕಾರಿ ವಿಚಾರವೆಂದರೆ ಆ ವ್ಯಕ್ತಿ ತಾಯಿ ನಾಯಿಯ ಮುಂದೆಯೇ ಈ ಕೃತ್ಯ ಎಸೆದಿದ್ದಾನೆ.
ವಿಡಿಯೊ ಇಲ್ಲಿದೆ ನೋಡಿ...
उत्तर प्रदेश के अमरोहा जिला का यह वीडियो बताया जा रहा हैं ,
— Mahender Mahi (@MahendrMahii) July 8, 2025
अमरोहा पुलिस इस व्यक्ति के ख़िलाफ़ कार्रवाई कीजिए क्यूँकि ये इंसान नहीं जानवर है 😡#amroha @amrohapolice pic.twitter.com/jdHkQCEOMw
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಕಿಡಿಕಾರಿದ್ದಾರೆ. ಪೊಲೀಸರು ಕೂಡ ಈ ಟ್ವೀಟ್‌ಗೆ ಪ್ರತಿಕ್ರಿಯಿಸಿ, ಆರೋಪಿಯನ್ನು ಬಂಧಿಸಿದ್ದಾರೆ ಮತ್ತು ಮುಗ್ಧ ಪ್ರಾಣಿಯ ವಿರುದ್ಧದ ಕ್ರೂರ ಕೃತ್ಯಕ್ಕಾಗಿ ಅವನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ದಿದೌಲಿ ಪೊಲೀಸ್ ಠಾಣೆಯು ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದೆ.
ಈ ಸುದ್ದಿಯನ್ನೂ ಓದಿ:Viral Video: ಪರೀಕ್ಷೆಯಲ್ಲಿ ಮಗ ಫೇಲ್ ಆಗಿದ್ದಕ್ಕೆ ಕ್ರೂರಿ ಅಪ್ಪ ಮಾಡಿದ್ದೇನು ನೋಡಿ; ಬೆಚ್ಚಿಬೀಳಿಸುವ ವಿಡಿಯೊ ವೈರಲ್!
ಮೂಕ ಪ್ರಾಣಿಗಳ ಮೇಲೆ ಮನುಷ್ಯರು ದೌರ್ಜನ್ಯ ಎಸಗಿದ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಪುಣೆಯಲ್ಲಿ ಮಹಿಳೆಯೊಬ್ಬಳು ತನ್ನ ಸಾಕು ಬೆಕ್ಕಿನ ಮೇಲೆ ಕ್ರೂರವಾಗಿ ದೌರ್ಜನ್ಯ ನಡೆಸಿ ಅದನ್ನು ಪದೇ ಪದೆ ಎತ್ತಿ ನೆಲಕ್ಕೆ ಹೊಡೆದಿದ್ದಾಳೆ. ಈ ಆಘಾತಕಾರಿ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಅನೇಕರು ಮಹಿಳೆಯ ಕ್ರೂರ ಕೃತ್ಯಗಳನ್ನು ಖಂಡಿಸಿದ್ದರು.
ವಿಡಿಯೊದಲ್ಲಿ, ಮಹಿಳೆ ಕಾರಿಡಾರ್‌ನಲ್ಲಿ ತನ್ನ ಕೋಣೆಗೆ ಪ್ರವೇಶಿಸಲು ಪ್ರಯತ್ನಿಸಿದ ಬೆಕ್ಕನ್ನು ಕ್ರೂರವಾಗಿ ಹಿಂಸಿಸುವುದು ಕಂಡುಬಂದಿದೆ. ಕೋಪಗೊಂಡ ಅವಳು ಬೆಕ್ಕನ್ನು ಹಲವು ಬಾರಿ ನೆಲಕ್ಕೆ ಹೊಡೆದು ಎಸೆದಿದ್ದಾಳೆ. ಮಹಿಳೆಯ ವರ್ತನೆಯಿಂದ ಹೆದರಿದ ಬೆಕ್ಕು ಅಲ್ಲಿಂದ ಓಡಿಹೋಗಿದೆ. ಆದರೆ ಮಹಿಳೆ ಅದನ್ನು ಹಿಂಬಾಲಿಸಿಕೊಂಡು ಹೋಗಿ ಮತ್ತೆ ಅದನ್ನು ಕೈಯಲ್ಲಿ ಹಿಡಿದು ಹೊಡೆದು ಎಸೆದಿದ್ದಾಳೆ. ಆಕೆಯ ವಿರುದ್ಧ ಪೊಲೀಸ್ ಕ್ರಮ ಕೈಗೊಳ್ಳಲಾಗಿದೆಯಂತೆ