ಭಾರೀ ಟ್ರೆಂಡ್ ಆಯ್ತು "How to kill men; ಯುವತಿ ಕೈಯಲ್ಲಿ ಪುಸ್ತಕ ಕಂಡ ಜನರು ಹೇಳಿದ್ದೇನು?
Viral News: ಮೆಟ್ರೋದಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ವಿಚಿತ್ರ ಶೀರ್ಷಿಕೆಯ ಪುಸ್ತಕ ಹಿಡಿದು ಓದುತ್ತಿರುವ ದೃಶ್ಯ ವೊಂದು ವೈರಲ್ ಆಗಿದೆ."ಪುರುಷರನ್ನು ಕೊಲ್ಲುವುದು ಹೇಗೆ" ಎಂಬ ಪುಸ್ತಕವನ್ನು ಮಹಿಳೆ ಓದುತ್ತಿದ್ದರು. ಸಾಮಾನ್ಯ ಪ್ರಯಾಣದ ನಡುವೆ ಮಹಿಳೆ ಇಂತಹ ಶೀರ್ಷಿಕೆಯುಳ್ಳ ಪುಸ್ತಕ ಓದುತ್ತಿರುವುದು ಕಂಡು ಸಹ ಪ್ರಯಾಣಿಕರೇ ಅಚ್ಚರಿಗೆ ಒಳಗಾಗಿದ್ದಾರೆ..
ಮೆಟ್ರೋದಲ್ಲಿ 'ಹೌ ಟು ಕಿಲ್ ಮೆನ್' ಎಂಬ ಪುಸ್ತಕ ಓದುತ್ತಿದ್ದ ಮಹಿಳೆ -
ನವದೆಹಲಿ,ಜು.2: ಜಗತ್ತಿನಲ್ಲಿ ಕೆಲವೊಮ್ಮೆ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಇದೀಗ ಮೆಟ್ರೋದಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ವಿಚಿತ್ರ ಶೀರ್ಷಿಕೆಯ ಪುಸ್ತಕ ಹಿಡಿದು ಓದುತ್ತಿರುವ ದೃಶ್ಯ ವೊಂದು ವೈರಲ್ (Viral News) ಆಗಿದೆ."ಪುರುಷರನ್ನು ಕೊಲ್ಲುವುದು ಹೇಗೆ" ಎಂಬ ಪುಸ್ತಕವನ್ನು ಮಹಿಳೆ ಓದುತ್ತಿದ್ದರು. ಸಾಮಾನ್ಯ ಪ್ರಯಾಣದ ನಡುವೆ ಮಹಿಳೆ ಇಂತಹ ಶೀರ್ಷಿಕೆಯುಳ್ಳ ಪುಸ್ತಕ ಓದುತ್ತಿರುವುದು ಕಂಡು ಸಹ ಪ್ರಯಾಣಿಕರೇ ಅಚ್ಚರಿಗೆ ಒಳಗಾಗಿದ್ದಾರೆ.
ಈ ಗಮನಾರ್ಹ ಶೀರ್ಷಿಕೆಯು ತಕ್ಷಣವೇ ವೀಕ್ಷಕರ ಗಮನ ಸೆಳೆದಿದೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಕೆಲವರು "ಮಹಿಳೆ ಯಾರನ್ನೋ ಕೊಲೆ ಮಾಡಲು ಸ್ಕೆಚ್ ಹಾಕುತ್ತಿದ್ದಾಳೆ,ಪುರುಷರೇ ಎಚ್ಚರಿದಿಂದಿರಿ" ಎಂದೆಲ್ಲ ಪ್ರತಿಕ್ರಿಯೆಗಳು ಬಂದಿವೆ. ಈ ಕ್ಲಿಪ್ ಸುಮಾರು 19 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದ್ದು 400,000 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ.
ಇತ್ತೀಚೆಗೆ ಮಹಿಳೆಯರೇ ಪುರುಷರನ್ನು ಉಪಾಯದಿಂದ ಕೊಲೆಗೈದ ಅನೇಕ ಘಟನೆಗಳು ನಡೆದಿವೆ. ಹೀಗಾಗಿ ಇಂತಹ ತಂತ್ರಗಳನ್ನೇ ಕೆಲ ಯುವತಿಯರು ಬಳಸಿಕೊಳ್ಳುತ್ತಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಕೆಲವರು ಇತ್ತೀಚೆಗೆ ನಡೆದ ಪ್ರಕರಣ ಬಗ್ಗೆ ಚರ್ಚಿಸುತ್ತಿದ್ದಾರೆ. ಆದರೆ ಪುಸ್ತಕದ ಶೀರ್ಷಿಕೆಯನ್ನು ಮಾತ್ರ ಆಧರಿಸಿ ಮಹಿಳೆಯ ನಂಬಿಕೆಗಳು ಅಥವಾ ಉದ್ದೇಶಗಳ ಬಗ್ಗೆ ತೀರ್ಮಾನಗಳನ್ನು ತೆಗೆದುಕೊಳ್ಳುವುದು ತಪ್ಪು ಎಂದು ಇನ್ನು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನೆಟ್ಟಿಗರು ಇದಕ್ಕೆ "ಇನ್ನೊಂದು ಜೀವ ಅಪಾಯದಲ್ಲಿದೆ" ಎಂಬಂತಹ ತಮಾಷೆಯ ಕ್ಯಾಪ್ಷನ್ ಗಳನ್ನು ನೀಡಿ ಶೇರ್ ಮಾಡುತ್ತಿದ್ದಾರೆ. ಪ್ರಸ್ತುತ, ವೀಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸ ಲಾಗಿಲ್ಲ. ಈ ದೃಶ್ಯ ಯಾವಾಗ ರೆಕಾರ್ಡ್ ಮಾಡಲಾಗಿದೆ ಅಥವಾ ಅದು ಯಾವ ನಗರದ ಮೆಟ್ರೋ ಎಂಬುದರ ಕುರಿತು ಯಾವುದೇ ದೃಢೀಕೃತ ಮಾಹಿತಿಯೂ ಇಲ್ಲ.
ವೀಡಿಯೊದಲ್ಲಿ ಕಂಡುಬರುವ ಪುಸ್ತಕವು ಲೇಖಕಿ ಕೇಟಿ ಬ್ರೆಂಟ್ ಅವರ ಕಾದಂಬರಿಯಾದ ಹೌ ಟು ಕಿಲ್ ಮೆನ್ ಅಂಡ್ ಗೆಟ್ ಅವೇ ವಿತ್ ಇಟ್ ಎಂದು ತಿಳಿದು ಬಂದಿದೆ..ಪುಸ್ತಕವು ಮಾನಸಿಕ ಥ್ರಿಲ್ಲರ್, ಡಾರ್ಕ್ ಕಾಮಿಡಿ, ಅಪರಾಧ ಕಾದಂಬರಿ ಮತ್ತು ವಿಡಂಬನೆಯನ್ನು ಸಂಯೋಜಿಸುವ ಕಾಲ್ಪನಿಕ ಕೃತಿಯಾಗಿದೆ.ಇದು ಯಾವುದೇ ರಿಯಲ್ ಲೈಫ್ ಗೈಡ್ ಅಥವಾ ಕೊಲೆ ಮಾಡಲು ತಿಳಿಸುವ ಪುಸ್ತಕವಲ್ಲ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಮತ್ತು ಕಾಮಿಡಿ ಶೈಲಿಯ ಕಾದಂಬರಿಯಾಗಿದೆ. ಮಹಿಳೆಯರ ಮೇಲೆ ದೌರ್ಜನ್ಯ ಎಸಗುವ ಪುರುಷರ ವಿರುದ್ಧ ಪಾಠ ಕಲ್ಪಿಸುವ ಕಾಲ್ಪನಿಕ ಪಾತ್ರವೊಂದರ ಸುತ್ತ ಈ ಕಥೆ ಸಾಗಲಿದೆ