Viral Video: ನಟ ಶಾರೂಕ್ ಖಾನ್ ಜತೆ ಫೋಟೊ ಕ್ಲಿಕ್ಕಿಸಿಕೊಂಡು ಕಣ್ಣೀರಿಟ್ಟ ಯುವತಿ; ಅಷ್ಟಕ್ಕೂ ಆಗಿದ್ದೇನು?
ಶಾರುಖ್ ಖಾನ್ ಅವರ ಅಪ್ಪಟ ಅಭಿಮಾನ ನಟನನ್ನು ಭೇಟಿಯಾದ ಕ್ಷಣವನ್ನು ವಿಡಿಯೊ ಮೂಲಕ ಹಂಚಿಕೊಂಡು ಕಣ್ಣೀರಿಟ್ಟಿದ್ದಾಳೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಈ ವಿಡಿಯೊ ನೋಡಿ ಸಿಕ್ಕಾಪಟ್ಟೆ ಕಾಮೆಂಟ್ ಮಾಡಿದ್ದಾರೆ.


ಬಾಲಿವುಡ್‌ನ ಬಾದಷಾ ಎಂದು ಕರೆಸಿಕೊಳ್ಳುವ ನಟ ಶಾರುಖ್ ಖಾನ್‌ಗೆ ವಿಶ್ವದಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟನ ಜತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು, ಫೋಟೊ ತೆಗೆಸಿಕೊಳ್ಳುವುದು ಎಂದರೆ ಎಲ್ಲಿಲ್ಲದ ಸಂಭ್ರಮ! ಇತ್ತೀಚೆಗೆ ಶಾರುಖ್ ಅವರ ಅಪ್ಪಟ ಅಭಿಮಾನಿಯಾದ ಯುವತಿಯೊಬ್ಬಳು ನಟನನ್ನು ಭೇಟಿಯಾಗಿ ಸಂತೋಷದಿಂದ ಕಣ್ಣೀರು ಹಾಕಿದ್ದಾಳೆ. ಶಾರುಖ್ ಖಾನ್ ಅನ್ನು ಭೇಟಿಯಾದ ಅನುಭವವನ್ನು ಆಕೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೊ ಮೂಲಕ ಹಂಚಿಕೊಂಡಿದ್ದಾಳೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ವೈರಲ್ ವಿಡಿಯೊದಲ್ಲಿ ಅಸ್ಮಾ ಎಂಬ ಶಾರುಖ್ ಖಾನ್ ಅಭಿಮಾನಿಯೊಬ್ಬಳು, ನಟನ್ನು ಭೇಟಿಯಾದ ಅನುಭವವನ್ನು ಹಂಚಿಕೊಂಡಿದ್ದಾಳೆ. ನಟನನ್ನು ನೋಡಿದಾಗ ಆಕೆ ಫೋಟೊ ತೆಗೆಸಿಕೊಳ್ಳಬೇಕು ಎಂಬ ಆಸೆಯಿಂದ ಮುಂದೆ ಹೋದಾಗ ಸೆಕ್ಯುರಿಟಿ ಗಾರ್ಡ್‍ಗಳು ನಿರಾಕರಿಸಿದ್ದಾರಂತೆ. ಕೊನೆಗೆ ಅಸ್ಮಾ ಶಾರುಖ್ ಅನ್ನು ಭೇಟಿಯಾಗಿ ಫೋಟೊಗಾಗಿ ಬೇಡಿಕೆಯಿಟ್ಟಾಗ ಶಾರುಖ್ ಖಾನ್ ಅಸ್ಮಾ ಮತ್ತು ಆಕೆಯ ಸ್ನೇಹಿತರನ್ನು ತಬ್ಬಿಕೊಂಡರಂತೆ. ಆಕೆಯ ತಲೆ ಮೇಲೆ ಕೈ ಇಟ್ಟು "ದೇವರು ನಿಮಗೆ ಒಳ್ಳೆಯದು ಮಾಡಲಿ" ಎಂದು ಆಶೀರ್ವದಿಸಿದ್ದಾರಂತೆ. ಇದು ಅವಳನ್ನು ತುಂಬಾ ಆಶ್ಚರ್ಯಗೊಳಿಸಿದೆ ಎಂದು ವಿಡಿಯೊದಲ್ಲಿ ಹೇಳಿಕೊಂಡಿದ್ದಾಳೆ.
ವಿಡಿಯೊ ಇಲ್ಲಿದೆ ನೋಡಿ...
ಈ ವಿಡಿಯೊವನ್ನು ಆಕೆ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾಳೆ. ಇದರಲ್ಲಿ ಆಕೆಯನ್ನು ಶಾರುಖ್ ಖಾನ್ ತಬ್ಬಿಕೊಂಡಿರುವುದು ಸೆರೆಯಾಗಿಲ್ಲ. ಆದರೆ ಶಾರುಖ್ ಖಾನ್ ಅನ್ನು ಭೇಟಿಯಾದ ನಂತರ ಅವಳು ಎಷ್ಟು ಭಾವುಕಳಾಗಿದ್ದಾಳೆ ಎಂಬುದು ಸೆರೆಯಾಗಿದೆ. ಆಕೆ ನಟ ಶಾರುಖ್ ಖಾನ್ ಬಗ್ಗೆ ಹೇಳುತ್ತಾ ಆನಂದಭಾಷ್ಪ ಸುರಿಸಿದ್ದಾಳೆ.
ಈ ವಿಡಿಯೊವನ್ನು ಇದುವರೆಗೆ 9 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ವೈರಲ್ ವಿಡಿಯೊಗೆ ಸಾಕಷ್ಟು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. "ಶಾರುಖ್ ಖಾನ್ ಅನ್ನು ಭೇಟಿಯಾಗುವುದು ಒಂದು ಹೆಮ್ಮೆ" ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ. ಇನ್ನೊಬ್ಬ ಅಭಿಮಾನಿ "ವಾಹ್, ನೀವು ತುಂಬಾ ಅದೃಷ್ಟಶಾಲಿ. ನಾನು ಅವರನ್ನು ಈ ಹಿಂದೆ ಸಿಂಗಾಪುರದಲ್ಲಿ ಭೇಟಿಯಾಗಿದ್ದೆ. ಅವರು ತುಂಬಾ ವಿನಮ್ರ ವ್ಯಕ್ತಿ. ನಿಮ್ಮ ಭಾವನೆಗಳನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಬಾಲಿವುಡ್‌ನ ಕಿಂಗ್ ಯಾವಾಗಲೂ ತಮ್ಮ ಅಭಿಮಾನಿಗಳ ಹೃದಯವನ್ನು ಸ್ಪರ್ಶಿಸಿದ್ದಾರೆ" ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಅರಶಿನ ಶಾಸ್ತ್ರದ ವೇಳೆ ಕುಸಿದುಬಿದ್ದು ವಧು ಸಾವು; ಹೃದಯ ವಿದ್ರಾವಕ ವಿಡಿಯೊ ವೈರಲ್!
ನಟ ಶಾರುಖ್ ಖಾನ್ ಸದ್ಯ ಸಿದ್ಧಾರ್ಥ್ ಆನಂದ್ ಅವರ 'ಕಿಂಗ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಅವರ ಮಗಳು ಸುಹಾನಾ ಖಾನ್, ಅಭಿಷೇಕ್ ಬಚ್ಚನ್ ಮತ್ತು ಅಭಯ್ ವರ್ಮಾ ಕೂಡ ನಟಿಸುತ್ತಿದ್ದಾರೆ. ಆದಾಗ್ಯೂ, ಚಿತ್ರದ ಅಧಿಕೃತ ಪ್ರಕಟಣೆ ಇನ್ನೂ ಹೊರಬಿದ್ದಿಲ್ಲ.