Viral Video: ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದ ಅಲ್ಬಿನೋ ಜಿಂಕೆ; ವಿಡಿಯೊ ವೈರಲ್
ಹಿಮಪ್ರದೇಶದಲ್ಲಿನ ಕಾಡುಗಳಲ್ಲಿ ಹಾಲು ಬಿಳಿ ಬಣ್ಣದ ದೇಹ ಹಾಗೂ ಗುಲಾಬಿ ಬಣ್ಣದ ಕಿವಿ ಹಾಗೂ ಮತ್ತು ಕಣ್ಣುಗಳನ್ನು ಹೊಂದಿರುವ ಅಪರೂಪದ ಅಲ್ಬಿನೋ ಜಿಂಕೆಯೊಂದು ಕಂಡುಬಂದಿದೆ. ಕಾಡಿನ ಮೂಲಕ ಆ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಈ ದೃಶ್ಯವನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿ ಟಿಕ್‍ಟಾಕ್‍ನಲ್ಲಿ ಅಪ್ಲೋಡ್ ಮಾಡಿದ್ದಾಳೆ. ಈ ವಿಡಿಯೊ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.

deer viral video

ಸೋಶಿಯಲ್ ಮೀಡಿಯಾಗಳಲ್ಲಿ ಪ್ರತಿದಿನ ಒಂದಲ್ಲ ಒಂದು ಆಶ್ಚರ್ಯಕರವಾದ ಸುದ್ದಿ, ವಿಡಿಯೊ ವೈರಲ್ ಆಗುತ್ತಿರುತ್ತದೆ. ಇದೀಗ ಹಿಮಪ್ರದೇಶದ ಕಾಡಿನಲ್ಲಿ ಅಪರೂಪದ ಜಿಂಕೆಯ ವಿಡಿಯೊಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ನೆಟ್ಟಿಗರ ಕಣ್ಣುಬ್ಬು ಏರುವಂತೆ ಮಾಡಿದೆ. ಜಿಂಕೆ ಎಂದಾಕ್ಷಣ ಮೈ ತುಂಬಾ ಚಿಳಿ ಚುಕ್ಕಿ ಇರುವ ಮುದ್ದಾದ ಪ್ರಾಣಿ ಕಣ್ಮುಂದೆ ಬರುತ್ತದೆ. ಆದರೆ ಈ ವಿಡಿಯೊದಲ್ಲಿ ಅಪರೂಪದ ಅಲ್ಬಿನೋ ಜಿಂಕೆ ಹಿಮಭರಿತ ಕಾಡಿನಲ್ಲಿ ನಿಂತು ಪೋಸ್ ನೀಡಿದ ದೃಶ್ಯ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
ಈ ವೈರಲ್ ಆಗಿರುವ ವಿಡಿಯೊದಲ್ಲಿ ಹಿಮ ತುಂಬಿದ ಪ್ರದೇಶದಲ್ಲಿ ಸಂಪೂರ್ಣವಾಗಿ ಬಿಳಿ ಬಣ್ಣದಿಂದ ಕಂಗೊಳಿಸುತ್ತಿದ್ದ ಜಿಂಕೆಯೊಂದು ಸೆರೆಯಾಗಿದೆ. ಅದರ ಗುಲಾಬಿ ಬಣ್ಣದ ಕಿವಿಗಳು ಮತ್ತು ಕಣ್ಣುಗಳಿಂದ ಮತ್ತಷ್ಟೂ ಸುಂದರವಾಗಿ ಕಾಣುತ್ತಿತ್ತು. ಕಾಡಿನ ಮೂಲಕ ಆ ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಈ ದೃಶ್ಯವನ್ನು ತನ್ನ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿ ಟಿಕ್‍ಟಾಕ್‍ನಲ್ಲಿ ಅಪ್ಲೋಡ್ ಮಾಡಿದ್ದಾಳೆ. ಕ್ಯಾರೊಲಿನ್ ಎಂಬ ಮಹಿಳೆ ಈ ಜಿಂಕೆಯ ಸೌಂದರ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಾಕೆ. ವೆದರ್ ಪೇಜ್ ಅಕ್ಯೂವೆದರ್, ಈ ಅಪರೂಪದ ಜಿಂಕೆಯ ವಿಡಿಯೊವನ್ನು ರಿಪೋಸ್ಟ್ ಮಾಡಿದೆ.
A rare majestic white deer among the winter snow 🦌🌨️ Albino deers occur an average of 1 out of 30,000 births. pic.twitter.com/tix5doSivX
— AccuWeather (@accuweather) February 1, 2025
ಈ ಅದ್ಭುತ ದೃಶ್ಯವು ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ ಮತ್ತು ಇದಕ್ಕೆ ಸಾವಿರಾರು ನೆಟ್ಟಿಗರು ಲೈಕ್ಸ್ ನೀಡಿದ್ದಾರೆ. ಹಾಗೂ ಕೆಲವರು ಈ ವಿಡಿಯೊಗೆ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ ಮತ್ತು ಜಿಂಕೆಯನ್ನು "ಅದ್ಭುತ, ನಂಬಲು ಅಸಾಧ್ಯ" ಎಂದು ಕರೆಯುವ ಮೂಲಕ ಹೊಗಳಿದ್ದಾರೆ. "ಸುಂದರವಾದ ಜಿಂಕೆ" ಎಂದು ಒಬ್ಬರು ವೈರಲ್ ವಿಡಿಯೊಗೆ ಉತ್ತರಿಸಿದರೆ, "ವಾಹ್, ಅದ್ಭುತ" ಎಂದು ಇನ್ನೊಬ್ಬರು ಹೇಳಿದ್ದಾರೆ. ಒಟ್ಟಾರೆ ಇಡೀ ಕಾಮೆಂಟ್ ವಿಭಾಗದಲ್ಲಿ ಇಂತಹ ಆಶ್ಚರ್ಯಕರವಾದ ಪ್ರತಿಕ್ರಿಯೆಗಳೇ ತುಂಬಿತ್ತು.
ಈ ಸುದ್ದಿಯನ್ನೂ ಓದಿ: Viral Video: ಹಿಮದ ನಡುವೆ ಸಿಲುಕಿದ ಜಿಂಕೆಯ ಪ್ರಾಣ ಕಾಪಾಡಿದ ವ್ಯಕ್ತಿ; ಹೃದಯಸ್ಪರ್ಶಿ ವಿಡಿಯೊ ನೋಡಿ
ಇತ್ತೀಚೆಗಷ್ಟೇ ಹಿಮದಲ್ಲಿ ಸಿಲುಕಿರುವ ಜಿಂಕೆಯೊಂದು ಅದರಿಂದ ಹೊರಗೆ ಬರಲು ಆಗದೆ ಒದ್ದಾಡುತ್ತಿದ್ದಾಗ ವ್ಯಕ್ತಿಯೊಬ್ಬರು ಅದಕ್ಕೆ ಸಹಾಯ ಮಾಡುವ ಮೂಲಕ ಅದು ಮತ್ತೆ ಕಾಡಿಗೆ ಮರಳುವಂತೆ ಮಾಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರ ಮನಗೆದ್ದಿದೆ. ಜನಪ್ರಿಯ ಪುಟ ನೇಚರ್ ಈಸ್ ಅಮೇಜಿಂಗ್ ಆನ್ ಎಕ್ಸ್ (ಹಿಂದೆ ಟ್ವಿಟರ್) ಹಂಚಿಕೊಂಡಿರುವ ಈ ವಿಡಿಯೊ ಈಗಾಗಲೇ ಸಾಕಷ್ಟು ವ್ಯೂವ್ಸ್ ಗಳಿಸಿದೆ.