ಕೇರಳಂ ಶ್ರೀ ಪದ್ಮನಾಭಸ್ವಾಮಿ ದೇವಾಲಯದ ಗೋಪುರದಲ್ಲಿ ಅದ್ಭುತವಾಗಿ ಕಂಗೊಳಿಸಿದ ಸೂರ್ಯ: ಅಪರೂಪದ ದೃಶ್ಯ ಶೇರ್ ಮಾಡಿದ ಆನಂದ್ ಮಹೀಂದ್ರಾ
Sree Padmanabhaswamy Temple: ಕೇರಳಂನ ತಿರುವನಂತಪುರದಲ್ಲಿರುವ ಖ್ಯಾತ ಶ್ರೀ ಪದ್ಮನಾಭಸ್ವಾಮಿ ದೇವಾಲಯದಲ್ಲಿ ಸೆಪ್ಟೆಂಬರ್ 23ರಂದು ಸೂರ್ಯ ಅಸ್ತಮಿಸುವ ಅಪರೂಪದ ಸೌಂದರ್ಯ ಕಣ್ಣಿಗೆ ಬಿದ್ದಿದೆ. ಈ ದೃಶ್ಯವು ಪ್ರಾಚೀನ ಭಾರತದ ಖಗೋಳಶಾಸ್ತ್ರ ಮತ್ತು ಎಂಜಿನಿಯರಿಂಗ್ ಕೌಶ್ಯಕ್ಕೆ ಸಾಕ್ಷಿ ಎಂದು ಉದ್ಯಮಿ ಆನಂದ್ ಮಹೀಂದ್ರಾ ಹಂಚಿಕೊಂಡಿದ್ದಾರೆ.
ಕೇರಳಂನ ಶ್ರೀ ಪದ್ಮನಾಭಸ್ವಾಮಿ ದೇವಾಲಯದಲ್ಲಿ ವಿಷುವತ್ ಸಂಕ್ರಾಂತಿ -
ತಿರುವನಂತಪುರಂ, ಸೆ. 24: ಕೇರಳಂ ರಾಜಧಾನಿ ತಿರುವನಂತಪುರದಲ್ಲಿರುವ ಅನಂತ ಪದ್ಮನಾಭ ದೇವಾಲಯದಲ್ಲಿ ಸೂರ್ಯನ ಅಪರೂಪದ ಸೌಂದರ್ಯ ಸವಿಯಲು ಕಾಣಸಿಗುತ್ತದೆ. ಪ್ರವೇಶ ದ್ವಾರದ ಗೋಪುರದಲ್ಲಿ ಸೂರ್ಯನು ನೇರ ಸಾಲಿನಲ್ಲಿ ಬರುವ ವಿಸ್ಮಯಕಾರಿ ಕೌತುಕವನ್ನು ಇಲ್ಲಿ ವೀಕ್ಷಿಸಬಹುದು. ವಿಷುವತ್ ದಿನದಂದು ಸೂರ್ಯ ಅಸ್ತಮಿಸುವಾಗ, ದೇವಾಲಯದ ರಾಜಗೋಪುರದ ಐದು ಕಿಟಕಿಗಳ ಮೂಲಕ ಸೂರ್ಯನ ಬೆಳಕು ಒಂದರ ನಂತರ ಒಂದರಂತೆ ಸಾಲಾಗಿ ಇಲ್ಲಿ ಹಾದು ಹೋಗುತ್ತದೆ. ಈ ವಿಸ್ಮಯದ ದೃಶ್ಯವನ್ನು ಆನಂದ್ ಮಹೀಂದ್ರಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ (Viral News) ಮಾಡಿದ್ದಾರೆ.
ವಿಷುವತ್ ದಿನದಂದು ಸೂರ್ಯ ಅಸ್ತಮಿಸುವಾಗ, ದೇವಾಲಯದ ರಾಜಗೋಪುರದ ಐದು ಕಿಟಕಿಗಳ ಮೂಲಕ ಸೂರ್ಯನ ಬೆಳಕು ಒಂದರ ನಂತರ ಒಂದರಂತೆ ಸಾಲಾಗಿ ಹಾದುಹೋಗುತ್ತದೆ. ಸೂರ್ಯನು ಭೂಮಧ್ಯರೇಖೆಯ ನೇರ ಮೇಲ್ಭಾಗದಲ್ಲಿರುವಾಗ ವಿಷುವತ್ ಸಂಕ್ರಾಂತಿ ಸಂಭವಿಸುತ್ತದೆ. ಇದರಿಂದಾಗಿ ಪ್ರಪಂಚದಾದ್ಯಂತ ಹಗಲು ಮತ್ತು ರಾತ್ರಿಯ ಅವಧಿ ಬಹುತೇಕ ಸಮಾನವಾಗಿರುತ್ತದೆ. ಪ್ರತಿ ವರ್ಷ ಎರಡು ವಿಷುವತ್ ಸಂಕ್ರಾಂತಿ ಸಂಭವಿಸುತ್ತದೆ.
ವಿಡಿಯೊ ನೋಡಿ:
Today is the Equinox.
— anand mahindra (@anandmahindra) September 23, 2026
At the magnificent Padmanabhaswamy Temple in Kerala, the setting sun performs a spectacle its builders engineered centuries ago by appearing, one by one, through the openings of its precisely aligned gopuram.
Ancient astronomy & engineering but… pic.twitter.com/iclzz2nHbE
ಸೂರ್ಯನು ಭೂಮಧ್ಯರೇಖೆಗೆ ಸರಿಯಾಗಿ ನೇರವಾಗಿ ಬಂದಾಗ ಮಾತ್ರ ಈ ಘಟನೆ ನಡೆಯುತ್ತದೆ. ಹೀಗಾಗಿ ಈ ಅದ್ಭುತ ದೃಶ್ಯ ವರ್ಷಕ್ಕೆ ಕೇವಲ ಎರಡು ಬಾರಿ ಮಾರ್ಚ್ 21 ಮತ್ತು ಸೆಪ್ಟೆಂಬರ್ 23 ರಂದು ಮಾತ್ರ ಕಾಣಸಿಗುತ್ತದೆ. ಈ ವಿಶೇಷ ದಿನದಂದು ಸೂರ್ಯನ ಕಿರಣಗಳು ಅನಂತ ಪದ್ಮನಾಭ ದೇವಾಲಯದ ಗೋಪುರದ ಕಿಂಡಿಗಳ ಮೂಲಕ ಸರಿಯಾಗಿ ನೇರವಾಗಿ ಸಾಗುತ್ತದೆ.
ನೇಪಾಳ ಪ್ರವಾಹದಲ್ಲಿ ಮೃತಪಟ್ಟ ಮಹಿಳೆಯ ಚಿನ್ನದ ಓಲೆ ಕದ್ದ ಕಿಡೀಗೆಡಿಗಳು!
ಸೂರ್ಯ ಮೇಲಿನ ಕಿಟಕಿಯಿಂದ ಕೆಳಗಿನ ಕಿಟಕಿಯತ್ತ ಜಾರುತ್ತಾ ಸಾಗುವ ದೃಶ್ಯ, ವಿಶೇಷವಾಗಿ ಮೂರನೇ ಕಿಟಕಿಗೆ ಬಂದಾಗ ಅತ್ಯಂತ ಸುಂದರವಾಗಿ ಗೋಚರಿಸುತ್ತಾನೆ. ಈ ಬಗ್ಗೆ ಹೆಮ್ಮೆ ವ್ಯಕ್ತ ಪಡಿಸಿದ ಉದ್ಯಮಿ, ಪದ್ಮನಾಭಸ್ವಾಮಿ ದೇವಾಲಯದ ಶಿಲ್ಪಿಗಳು ಶತಮಾನಗಳ ಹಿಂದೆ ನಿರ್ಮಿಸಿದ ವಿನ್ಯಾಸದಿಂದಾಗಿ, ಅಸ್ತಮಿಸುವ ಸೂರ್ಯ ಗೋಪುರದ ಕಿಟಕಿಗಳ ಮೂಲಕ ಒಂದೊಂದಾಗಿ ದರ್ಶನ ನೀಡುತ್ತಾನೆ. ಇದು ಪ್ರಾಚೀನ ಭಾರತದ ನೈಪುಣ್ಯತೆಗೆ ಸಾಕ್ಷಿ ಎಂದು ಬರೆದುಕೊಂಡಿದ್ದಾರೆ.
ಈ ಬಗ್ಗೆ ನೆಟ್ಟಿಗರು ಮೆಚ್ಚುಗೆ ನೀಡಿದ್ದು, ಒಬ್ಬರು ಇದು ನಮ್ಮ ಸಂಸ್ಕೃತಿ ಮತ್ತು ದೇವಾಲಯಗಳನ್ನು ನಿರ್ಮಿಸಿದ ವಾಸ್ತುಶಿಲ್ಪಿಗಳ ಶ್ರೇಷ್ಠತೆ ಎಂದರು. ಮತ್ತೊಬ್ಬರು ಇದು ಬಹಳಷ್ಟು ಹೆಮ್ಮೆಪಡುವ ಮತ್ತು ಗೌರವಿಸುವಂತಹ ವಿಚಾರ ಎಂದಿದ್ದಾರೆ. ʼʼಕೇರಳಂನ ತಿರುವನಂತಪುರದಲ್ಲಿರುವ ಖ್ಯಾತ ಶ್ರೀ ಪದ್ಮನಾಭಸ್ವಾಮಿ ದೇವಾಲಯದಲ್ಲಿ ಸೆಪ್ಟೆಂಬರ್ 23ರಂದು ಸೂರ್ಯ ಅಸ್ತಮಿಸುವ ಅಪರೂಪದ ಸೌಂದರ್ಯ ಕಣ್ಣಿಗೆ ಬಿದ್ದಿದೆ. ಈ ದೃಶ್ಯವು ಪ್ರಾಚೀನ ಭಾರತದ ಖಗೋಳಶಾಸ್ತ್ರ ಮತ್ತು ಇಂಜಿನಿಯರಿಂಗ್ ಕೌಶ್ಯಕ್ಕೆ ಸಾಕ್ಷಿʼʼ ಎಂದು ಉದ್ಯಮಿ ಆನಂದ್ ಮಹೀಂದ್ರಾ ಹಂಚಿಕೊಂಡಿದ್ದಾರೆ.