Viral Video: ಹನಿಮೂನ್ಗೆ ಬಂದ ನವದಂಪತಿಯ ಸರಸ-ಸಲ್ಲಾಪ ಸೋಶಿಯಲ್ ಮೀಡಿಯಾದಲ್ಲಿ ವೈರಲ್
ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಹನಿಮೂನ್‍ಗೆ ಬಂದಿದ್ದ ನವವಿವಾಹಿತ ದಂಪತಿ ತಮ್ಮ ಪ್ರಣಯದ ದೃಶ್ಯವನ್ನು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದು ಈಗ ನೆಟ್ಟಿಗರ ಮನಗೆದ್ದು ವೈರಲ್ ಆಗಿದೆ. ಇದು ಸಾವಿರಾರು ಲೈಕ್‌ಗಳು ಮತ್ತು ಕಾಮೆಂಟ್‌ಗಳನ್ನು ಗಳಿಸಿದೆ.


ಇತ್ತೀಚೆಗೆ ಬೆಡ್‌ರೂಂ ದೃಶ್ಯಗಳು, ಹನಿಮೂನ್ ವಿಡಿಯೊಗಳು ಎಲ್ಲವೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ನಾಲ್ಕು ಗೋಡೆಗಳ ಮಧ್ಯೆ ನಡೆಯಬೇಕಾಗಿದ್ದ ಸರಸ ಸಲ್ಲಾಪವು ಸೋಶಿಯಲ್ ಮೀಡಿಯಾ ಅಂಗಳದಲ್ಲಿ ಬಟಾಬಯಲಾಗುತ್ತಿವೆ. ಇತ್ತೀಚೆಗೆ ವರನೊಬ್ಬನು ಫಸ್ಟ್‌ನೈಟ್‌ನ ವಿಡಿಯೊ ಮಾಡಿದ್ದು ಅದರಲ್ಲಿ ಬೆಡ್‌ರೂಂನಲ್ಲಿ ತನ್ನ ಪತ್ನಿಯ ಆಭರಣಗಳನ್ನು ಒಂದೊಂದೇ ಕಳಚುತ್ತಿರುವ ವಿಡಿಯೊ ವೈರಲ್ ಆಗಿತ್ತು. ಇದನ್ನು ನೋಡಿ ನೆಟ್ಟಿಗರು ಆ ದಂಪತಿಯ ವಿರುದ್ಧ ಕಿಡಿಕಾರಿದ್ದರು. ಇದೀಗ ಹಿಮಾಚಲ ಪ್ರದೇಶದ ಹನಿಮೂನ್ (Honeymoon) ತಾಣವಾದ ಮನಾಲಿಯಲ್ಲಿ(Manali) ನವವಿವಾಹಿತ ದಂಪತಿ ತಮ್ಮ ಪ್ರಣಯದ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದೀಗ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ.
ವೈರಲ್ ಆದ ವಿಡಿಯೊದಲ್ಲಿ ದಂಪತಿ ಹೋಟೆಲ್ ರೂಂ ಒಳಗೆ ಬರುವ ದೃಶ್ಯ ಸೆರೆಯಾಗಿದೆ. ಚೆನ್ನಾಗಿ ಅಲಂಕರಿಸಿದ ಹಾಸಿಗೆಯ ಮೇಲೆ ಹಾಗೂ ಅದರ ಪಕ್ಕದಲ್ಲಿದ್ದ ಕೇಕ್‌ನಲ್ಲಿ 'ಹ್ಯಾಪಿ ಹನಿಮೂನ್' ಎಂದು ಬರೆಯಲಾಗಿದೆ. ಪತಿ ಬಾಗಿಲು ತೆರೆದು ಪ್ರೀತಿಯಿಂದ ತನ್ನ ಪತ್ನಿಯನ್ನು ಕೋಣೆಗೆ ಕರೆದೊಯ್ದು, ಹಿನ್ನೆಲೆಯಲ್ಲಿ ಮೃದುವಾದ ಸಂಗೀತದೊಂದಿಗೆ, ಅವಳಿಗೆ ಕೆಂಪು ಬಲೂನ್ ನೀಡಿದ್ದಾನೆ. ಅವಳ ಕೈಗಳನ್ನು ತನ್ನ ಕಣ್ಣುಗಳಿಗೆ ನಿಧಾನವಾಗಿ ಒತ್ತಿಕೊಂಡು ಅವಳ ಹಣೆಗೆ ಹೂ ಮುತ್ತಿಟ್ಟು ಪ್ರೀತಿಯಿಂದ ದೃಷ್ಟಿ ತೆಗೆದಿದ್ದಾನೆ.
ವಿಡಿಯೊ ಇಲ್ಲಿದೆ ನೋಡಿ...
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೆಲವೇ ಗಂಟೆಗಳಲ್ಲಿ, ಇದು ಸಾವಿರಾರು ಲೈಕ್‌ಗಳು ಮತ್ತು ಕಾಮೆಂಟ್‌ಗಳನ್ನು ಗಳಿಸಿದೆ. ನೆಟ್ಟಿಗರು ದಂಪತಿಗೆ ಆಶೀರ್ವಾದ ಮತ್ತು ಶುಭಾಶಯಗಳನ್ನು ತಿಳಿಸಿದ್ದಾರೆ.
ನವದಂಪತಿಯ ಹನಿಮೂನ್ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಹೊಸದೇನಲ್ಲ,. ಈ ಹಿಂದೆ ಹನಿಮೂನ್‌ಗೆ ಮನಾಲಿಗೆ ಹೋದ ನವವಿವಾಹಿತ ದಂಪತಿಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ದಂಪತಿ ತಮ್ಮ ಪ್ರಣಯದ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೊ ಲಕ್ಷಾಂತರ ವ್ಯೂವ್ಸ್ ಗಳಿಸಿತ್ತು. ಇದಕ್ಕೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಲವರು ದಂಪತಿಯನ್ನು ಹೊಗಳಿದರೆ, ಕೆಲವರು ಅದನ್ನು ಟ್ರೋಲ್ ಮಾಡಿದ್ದರು.
ಈ ಸುದ್ದಿಯನ್ನೂ ಓದಿ:Viral Video: ಅಳಿವಿನಂಚಿನಲ್ಲಿರುವ ಒರಾಂಗುಟಾನ್‌ಗೆ ವೇಪ್ ನೀಡಿದ ಬಾಕ್ಸರ್; ಮುಂದೇನಾಯ್ತು ವಿಡಿಯೊ ನೋಡಿ!
ವಿಡಿಯೊದಲ್ಲಿ ದಂಪತಿ ತಮ್ಮ ಹೋಟೆಲ್ ರೂಂಗೆ ಬಂದಾಗ , ಹಾಸಿಗೆಯ ಮೇಲೆ ಗುಲಾಬಿ ದಳಗಳಿಂದ "ಹ್ಯಾಪಿ ಹನಿಮೂನ್ ಲವ್" ಎಂದು ಬರೆದಿತ್ತು. ರೂಂ ಅನ್ನು ಕ್ಯಾಂಡಲ್ ಲೈಟ್, ಷಾಂಪೇನ್ ಬಾಟಲಿಗಳಿಂದ ವಿಶೇಷ ರೀತಿಯಲ್ಲಿ ಅಲಂಕರಿಸಲಾಗಿತ್ತು. ಇದನ್ನು ನೋಡಿ ವಧು ತುಂಬಾ ಸಂತೋಷಪಟ್ಟು ತನ್ನ ಪತಿಗೆ ಧನ್ಯವಾದ ಹೇಳಿದ್ದಳು. ಇದಾದ ನಂತರ, ಇಬ್ಬರೂ ಒಟ್ಟಿಗೆ ಕೇಕ್ ಕತ್ತರಿಸಿ ಪ್ರಣಯ ಸುಖವನ್ನು ಆನಂದಿಸಿದ್ದರು.