ಅನುಪಮ್ ಖೇರ್ ಮಾನವೀಯತೆಗೆ ಫ್ಯಾನ್ಸ್ ಫಿದಾ: ಸೆಲ್ಫಿ ಕೇಳಲು ಬಂದ ಸೆಕ್ಯೂರಿಟಿ ಗಾರ್ಡ್‌ಗೆ ಹೊಸ ಸ್ಮಾರ್ಟ್ ಫೋನ್ ಗಿಫ್ಟ್
ಸೆಲ್ಫಿ ಕೇಳಿದ ಭದ್ರತಾ ಸಿಬ್ಬಂದಿಗೆ ಅನುಪಮ್ ಖೇರ್ ಸ್ಮಾರ್ಟ್ ಫೋನ್ ಕೊಡಿಸುವ ಮೂಲಕ ನೆಟ್ಟಿಗರ ಮನ ಗೆದ್ದಿದ್ದಾರೆ. ಇತ್ತೀಚೆಗೆ ಹರಿಯಾಣದ ಗುರುಗ್ರಾಮದ ಸೋಹ್ನಾದಲ್ಲಿ ಶೂಟಿಂಗ್ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದ್ದು ವಿಡಿಯೊ ಭಾರಿ ವೈರಲ್ ಆಗಿದೆ.
ಅನುಪಮ್ ಖೇರ್ ಮತ್ತು ಸೆಕ್ಯೂರಿಟಿ ಗಾರ್ಡ್ -
ಗುರುಗ್ರಾಮ,ಜ. 20: ಬಾಲಿವುಡ್‌ನ ಹಿರಿಯ ನಟ ಅನುಪಮ್ ಖೇರ್ (Anupam Kher) ಭಾರತೀಯ ಚಿತ್ರರಂಗದ ಅತ್ಯುತ್ತಮ ನಟರಲ್ಲಿ ಒಬ್ಬರು. ಹಲವು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಅವರು ಸಿನಿಮಾ ಅಲ್ಲದೆ ನಿಜ ಜೀವನದಲ್ಲೂ ಹೀರೊ ಎನಿಸಿಕೊಂಡಿದ್ದಾರೆ. ಹಲವು ಮಾನವೀಯ ಕಾರ್ಯಗಳನ್ನು ಕೈಗೊಂಡಿದ್ದಾರೆ. ಸದ್ಯ ಸೆಲ್ಫಿ ಕೇಳಿದ ಭದ್ರತಾ ಸಿಬ್ಬಂದಿಗೆ ಅನುಪಮ್ ಖೇರ್ ಸ್ಮಾರ್ಟ್ ಫೋನ್ ಕೊಡಿಸುವ ಮೂಲಕ ಜನರ ಮನ ಗೆದ್ದಿದ್ದಾರೆ. ಇತ್ತೀಚೆಗೆ ಹರಿಯಾಣದ ಗುರುಗ್ರಾಮದ ಸೋಹ್ನಾದಲ್ಲಿ ಶೂಟಿಂಗ್ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದ್ದು ವಿಡಿಯೊ ಭಾರಿ ವೈರಲ್ ಆಗಿದೆ.
ಗುರುಗ್ರಾಮ್‌ನ ಸೋಹ್ನಾದಲ್ಲಿ ಚಿತ್ರವೊಂದರ ಶೂಟಿಂಗ್ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಯೊಬ್ಬರು ನಟನ ಜತೆ ಸೆಲ್ಫಿ ಕೇಳಿದ್ದಾರೆ. ಇದಕ್ಕೆ ಒಪ್ಪಿಗೆ ನೀಡಿದಾಗ ಆ ಗಾರ್ಡ್ ತಮ್ಮ ಜೇಬಿನಿಂದ ಫೋನ್ ಹೊರತೆಗೆಯುತ್ತಿದ್ದಂತೆ ನಟ ಭಾವುಕರಾಗಿದ್ದಾರೆ. ಆತನ ಬಳಿ ಇದ್ದದ್ದು ಹಳೆಯ ಮಾದರಿಯ ಕೀಪ್ಯಾಡ್ ಫೋನ್. ಅದರಲ್ಲಿ ಕ್ಯಾಮರಾ ಇರಲಿಲ್ಲ. ''ನನ್ನ ಬಳಿ ಇದೇ ಫೋನ್ ಇರುವುದು ಸರ್. ಇದರಲ್ಲಿ ಫೋಟೋ ಬರಲ್ಲ" ಎಂದು ಹೇಳಿದಾಗ ಅನುಪಮ್ ಖೇರ್ ಅವರಿಗೆ ಮನಸ್ಸಿಗೆ ತುಂಬಾ ಬೇಸರವಾಗಿದೆ.
ವಿಡಿಯೊ ನೋಡಿ:
ಅನುಪಮ್ ಖೇರ್ ಗಾರ್ಡ್‌ಗಾಗಿ ಹೊಚ್ಚ ಹೊಸ ಸ್ಮಾರ್ಟ್ ಫೋನ್ ಅನ್ನು ಆರ್ಡರ್ ಮಾಡಿ ಅದನ್ನು ಸ್ಥಳದಲ್ಲೇ ಅವರಿಗೆ ಉಡುಗೊರೆಯಾಗಿ ನೀಡಿದರು. ಬಳಿಕ ಹೊಸ ಫೋನ್‌ನಲ್ಲಿ ಮೊದಲ ಸೆಲ್ಪಿ ಫೋಟೋ ನಮ್ಮದೆ ಇರಲಿ ಎಂದು ಫೋಟೋ ತೆಗೆದು ಸಂಭ್ರಮಿಸಿದರು. ಸ್ಮಾರ್ಟ್‌ಫೋನ್ ಪಡೆದ ಸೆಕ್ಯೂರಿಟಿ ಗಾರ್ಡ್ ಕಣ್ಣೀರು ಹಾಕುತ್ತ ಧನ್ಯವಾದ ತಿಳಿಸಿದ್ದಾರೆ.
ವಧುವಿನ ಲೆಹೆಂಗಾ ಹಿಡಿದುಕೊಂಡು ಸಪ್ತಪದಿ ತುಳಿಯಲು ಮುಂದಾದ ಸ್ನೇಹಿತೆಯರು
ಶೂಟಿಂಗ್ ಸೆಟ್‌ನಲ್ಲಿ ಸೆರೆ ಹಿಡಿಯಲಾದ ಈ ವಿಡಿಯೊ ಗಾರ್ಡ್ ಖುಷಿಯಿಂದ ಮೊಬೈಲ್ ಹಿಡಿದು ಸಂಭ್ರಮ ಪಡುತ್ತಿರುವುದನ್ನು ತೋರಿಸುತ್ತದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು ನಟನ ಮಾನವೀಯತೆಯನ್ನು ಹೆಚ್ಚಿನವರು ಹೊಗಳಿದ್ದಾರೆ. ಒಬ್ಬರು ಇಂತಹ ನಟ ಇದ್ದರೆ ಅಭಿಮಾನಿಗಳು ಇರುವುದಕ್ಕೂ ಸಾರ್ಥಕ ಎಂದು ಬರೆದಿದ್ದಾರೆ. ಮತ್ತೊಬ್ಬರು ಒಬ್ಬ ಕಲಾವಿದನಿಗೆ ಇರಬೇಕಾದ ಮುಖ್ಯವಾದ ಗುಣವಿದು ಎಂದು ಕಮೆಂಟ್ ಮಾಡಿದ್ದಾರೆ.