ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪ್ರತಿಯೊಬ್ಬರೂ ಭಾರತಕ್ಕೆ ಏಕೆ ಭೇಟಿ ನೀಡಬೇಕು ಎಂದು ವಿವರಿಸಿದ ಆಸ್ಟ್ರೇಲಿಯಾ ಪ್ರಜೆ: ವಿಡಿಯೊ ನೋಡಿ

Viral Video: ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬರು ಭಾರತದ ಆತಿಥ್ಯ ಹಾಗೂ ಇಲ್ಲಿನ ಪ್ರವಾಸಿ ಸ್ಥಳದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಭಾರತವು ಪ್ರತಿ ಪ್ರವಾಸಿಯ ಪಟ್ಟಿಯಲ್ಲಿ ಇರಲೇಬೇಕಾದ ದೇಶ ಎಂದು ಹೇಳಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್ ಆಗಿದ್ದು ಅನೇಕರು ಲೈಕ್, ಕಮೆಂಟ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ.

ಭಾರತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಆಸ್ಟ್ರೇಲಿಯಾ ಪ್ರಜೆ

ಭಾರತದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ ಆಸ್ಟ್ರೇಲಿಯಾ ಪ್ರಜೆ -

Profile
Pushpa Kumari Feb 23, 2026 4:44 PM

ದೆಹಲಿ, ಫೆ‌. 23: ಭಾರತಕ್ಕೆ ಭೇಟಿ ನೀಡುವ ವಿದೇಶಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ‌. ಇಲ್ಲಿನ ಪ್ರವಾಸ, ಸಂಸ್ಕೃತಿ ಮತ್ತು ಆಹಾರ ರುಚಿಯ ಬಗ್ಗೆ ಅನೇಕ ವಿದೇಶಿಗರು ಕೊಂಡಾಡಿದ್ದಾರೆ. ಇದೀಗ ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬರು ಭಾರತದ ಆತಿಥ್ಯ ಹಾಗೂ ಇಲ್ಲಿನ ಪ್ರವಾಸಿ ಸ್ಥಳದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಭಾರತವು ಪ್ರತಿಯೊಬ್ಬರ ಪ್ರವಾಸಿ ಪಟ್ಟಿಯಲ್ಲಿ ಇರಲೇ ಬೇಕಾದ ದೇಶ ಎಂದು ಹೇಳಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್ (Viral Video) ಆಗಿದ್ದು, ಅನೇಕರು ಲೈಕ್, ಕಮೆಂಟ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ.

ಇತ್ತೀಚೆಗೆ ವಿದೇಶಿಯರು ಭಾರತೀಯ ದೇವಸ್ಥಾನಗಳಿಗೆ ಭೇಟಿ ನೀಡುವುದು ಮತ್ತು ಭಾಷೆಯನ್ನು ಕಲಿಯುವ ದೃಶ್ಯಗಳು ಹೆಚ್ಚು ವೈರಲ್ ಆಗಿವೆ. ಈ ನಡುವೆ ಆಸ್ಟ್ರೇಲಿಯಾದ ವ್ಯಕ್ತಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದು, ಎಲ್ಲ ವಯಸ್ಸಿನವರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ಭಾರತಕ್ಕೆ ಭೇಟಿ ನೀಡುವಂತೆ ಕೇಳಿಕೊಂಡಿದ್ದಾರೆ. ಭಾರತಕ್ಕೆ ಪ್ರಯಾಣಿಸುವುದರಿಂದ ಒಬ್ಬ ವ್ಯಕ್ತಿಯು ಜಗತ್ತನ್ನು ನೋಡುವ ರೀತಿ ಬದಲಾಗಬಹುದು ಎಂದಿದ್ದಾರೆ. ಅವರ ಪ್ರಕಾರ, ಈ ದೇಶವು ಪ್ರಕೃತಿ, ಸಂಸ್ಕೃತಿ ಮತ್ತು ದೈನಂದಿನ ಜೀವನದ ವಿಶೇಷ ಅನುಭವ ನೀಡಲಿದೆ. ಅದು ಬೇರೆ ದೇಶದಲ್ಲಿ ಸಿಗಲು ಸಾಧ್ಯವಿಲ್ಲ ಎಂದಿದ್ದಾರೆ.

ವಿಡಿಯೊ ನೋಡಿ:

ಭಾರತದಲ್ಲಿ ಅದ್ಭುತ ಆಹಾರಗಳು ಕಡಿಮೆ ದರಕ್ಕೆ ಸಿಗುತ್ತವೆ. ಅದರ ಜತೆ ಪರ್ವತಗಳಿಂದ ಮರುಭೂಮಿಗಳವರೆಗೆ, ಕಡಲ ತೀರಗಳಿಂದ ಕಾಡಿನವರೆಗೆ ದೇಶವು ಪ್ರತಿಯೊಂದು ರೀತಿಯ ಭೂ ವೈವಿಧ್ಯವನ್ನು ನೀಡುತ್ತದೆ. ಇಲ್ಲಿನ ವೈವಿಧ್ಯತೆ ಮತ್ತು‌ ಜನರ ಆತಿಥ್ಯವನ್ನು ಕೂಡ‌ ಕೊಂಡಾಡಿದ್ದಾರೆ. ನೀವು ಯುವಕರಾಗಿರಲಿ ಅಥವಾ ಯಾವುದೇ ವಯಸ್ಸಿನವರು ಆದರೂ ಹೊಸ ದೃಷ್ಟಿಕೋನ ಪಡೆಯಲು ಭಾರತಕ್ಕೆ ಭೇಟಿ ನೀಡಿ ಎಂದಿದ್ದಾರೆ.

ರೀಲ್ಸ್ ತಂದ ಅವಾಂತರ; ವಿಡಿಯೊ ಮಾಡುತ್ತ ಮೈಮರೆತು ಚರಂಡಿಗೆ ಬಿದ್ದ ಯುವತಿ

ಈ ವಿಡಿಯೊಕ್ಕೆ ಭಾರತೀಯರಿಂದ ಮತ್ತು ವಿದೇಶಿ ಪ್ರವಾಸಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ನೆಟ್ಟಿಗರೊಬ್ಬರು, ʼʼನಮ್ಮ ಸಂಸ್ಕೃತಿ, ನಮ್ಮ ಸಂಪ್ರದಾಯಗಳು ಎಲ್ಲರಿಗೂ ಪ್ರೇರಣೆ ನೀಡುತ್ತದೆʼʼ ಎಂದಿದ್ದಾರೆ. ಮತ್ತೊಬ್ಬರು ʼʼಭಾರತದಲ್ಲಿ ಜನಿಸಲು ನನಗೆ ಹೆಮ್ಮೆಯಾಗುತ್ತದೆ. ಇಲ್ಲಿನ ಜನರ ಪ್ರೀತಿಯೇ ಇದಕ್ಕೆಲ್ಲ ಕಾರಣʼʼ ಎಂದು ಬರೆದುಕೊಂಡಿದ್ದಾರೆ.