ಶವಪೆಟ್ಟಿಗೆಯ ಮುಂದೆಯೇ ಬಾರ್ ಡ್ಯಾನ್ಸರ್ಸ್‌ಗಳಿಂದ ನೃತ್ಯ; ಮೃತರ ಕೊನೆಯ ಆಸೆಯನ್ನು ವಿಶಿಷ್ಟವಾಗಿ ಪೂರೈಸಿದ ಕುಟುಂಬಸ್ಥರು
Viral News: ತಮ್ಮ ಪ್ರೀತಿ ಪಾತ್ರರ ಅಂತ್ಯಕ್ರಿಯೆ ವೇಳೆ ಕುಟುಂಬವೊಂದು ಬಾರ್ ಡ್ಯಾನ್ಸರ್ಸ್ ಅನ್ನು ಕರೆಸಿದೆ. ಈ ವಿಚಾರ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಈ ಅಂತ್ಯಕ್ರಿಯೆಯು ಎಲ್ಲರನ್ನು ಬೆರಗುಗೊಳಿಸಿದೆ. ಮೃತರ ಕೊನೆಯ ಆಸೆಯನ್ನು ಪೂರೈಸಲು, ಕುಟುಂಬವು ಬಾರ್ ನೃತ್ಯಗಾರರನ್ನು ಆಹ್ವಾನಿಸಿತು ಎಂದು ಮೂಲಗಳು ತಿಳಿಸಿವೆ.
ಶವಪೆಟ್ಟಿಗೆಯ ಮುಂದೆ ಬಾರ್ ಡ್ಯಾನ್ಸರ್ಸ್‌ಗಳಿಂದ ನೃತ್ಯ -
ಬ್ಯಾಂಕಾಕ್, ಏ. 27: ಮೃತರ ಅಂತ್ಯಕ್ರಿಯೆ ಎಂದರೆ ಅದು ದುಃಖದ ಸಂಗತಿ. ಕುಟುಂಬಸ್ಥರಲ್ಲಿ ಯಾರಾದರೂ ಅಗಲಿದಾಗ ಅವರಿಗೆ ಭಾವುಕ ವಿದಾಯ ಹೇಳಲಾಗುತ್ತದೆ. ಆದರೆ ಥೈಲ್ಯಾಂಡ್‌ನಲ್ಲಿ ವಿಲಕ್ಷಣ ಘಟನೆ ನಡೆದಿದೆ. ತಮ್ಮ ಪ್ರೀತಿ ಪಾತ್ರರ ಅಂತ್ಯಕ್ರಿಯೆ ವೇಳೆ ಕುಟುಂಬವೊಂದು ಬಾರ್ ಡ್ಯಾನ್ಸರ್ಸ್ ಅನ್ನು ಕರೆಸಿ ನೃತ್ಯ ಪ್ರದರ್ಶನ ಏರ್ಪಡಿಸಿದೆ. ಈ ವಿಚಾರ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಈ ಅಂತ್ಯಕ್ರಿಯೆಯು ಎಲ್ಲರನ್ನು ಬೆರಗುಗೊಳಿಸಿದೆ. ಇಲ್ಲಿ, ಮೃತರ ಕೊನೆಯ ಆಸೆಯನ್ನು ಪೂರೈಸಲು, ಕುಟುಂಬವು ಬಾರ್ ನೃತ್ಯಗಾರರನ್ನು ಆಹ್ವಾನಿಸಿ ಶವಪೆಟ್ಟಿಗೆಯ ಮುಂದೆಯೇ ನೃತ್ಯ ಪ್ರದರ್ಶನವನ್ನು ಆಯೋಜಿಸಿತು (Viral News) ಎಂದು ಮೂಲಗಳು ತಿಳಿಸಿವೆ.
ಈ ಅಸಾಧಾರಣ ಘಟನೆ ಥೈಲ್ಯಾಂಡ್‌ನ ನಖೋನ್ ಸಿ ಥಮ್ಮರತ್ ಪ್ರಾಂತ್ಯದ ರಾನ್ ಫಿಬುನ್ ಜಿಲ್ಲೆಯ ವಾಟ್ ಥೆಪ್ಫನಮ್ ಚುಯೆಟ್ ದೇವಾಲಯದಲ್ಲಿ ಸಂಭವಿಸಿದೆ. 59 ವರ್ಷದ ವ್ಯಕ್ತಿಯ ಅಂತ್ಯಕ್ರಿಯೆಯ ಸಮಯದಲ್ಲಿ ಈ ದೃಶ್ಯ ಕಂಡುಬಂದಿದೆ. ವರದಿ ಪ್ರಕಾರ, ಮೃತರ ಕೊನೆಯ ಆಸೆಯನ್ನು ಪೂರೈಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕುಟುಂಬ ತಿಳಿಸಿದೆ. ಜನರು ತಮ್ಮ ಸಾವನ್ನು ಶೋಕಿಸುವ ಬದಲು ಸಂತೋಷದಿಂದ ತಮ್ಮ ಜೀವನವನ್ನು ನೆನಪಿಸಿಕೊಳ್ಳಬೇಕೆಂದು ಮೃತರು ಬಯಸಿದ್ದರು. ಈ ಕಾರಣಕ್ಕಾಗಿ, ಅಂತ್ಯಕ್ರಿಯೆಯ ಮೊದಲು ಶವಪೆಟ್ಟಿಗೆಯ ಮುಂದೆ ಪ್ರದರ್ಶನ ನೀಡಲು ಮೂವರು ನೃತ್ಯಗಾರ್ತಿಯರನ್ನು ಆಹ್ವಾನಿಸಲಾಯಿತು.
ವೈರಲ್ ಪೋಸ್ಟ್ ಇಲ್ಲಿದೆ:
NAKHON SI THAMMARAT - A funeral held in this southern province has drawn widespread attention after dancers were hired to perform in front of the coffin on the final night of mourning, in accordance with the last wishes of the deceased.
— Bangkok Post (@BangkokPostNews) April 23, 2026
Listen to the story or get the full story… pic.twitter.com/w1egcJqLNB
ಶವಪೆಟ್ಟಿಗೆಯ ಬಳಿ ಅನೇಕ ಹೂವುಗಳನ್ನು ಜೋಡಿಸಲಾಗಿತ್ತು. ಮೂವರು ನರ್ತಕಿಯರು ಅದರ ಮುಂದೆ ಸಂತೋಷದಿಂದ ಪ್ರದರ್ಶನ ನೀಡುತ್ತಿರುವ ಫೋಟೊ ವೈರಲ್ ಆಗಿವೆ. ಈ ಫೋಟೊವನ್ನು @BangkokPostNews ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಲಕ್ಷಾಂತರ ವೀಕ್ಷಣೆ ಗಳಿಸಿದೆ. ಈ ಘಟನೆಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಕುಟುಂಬದ ನಿರ್ಧಾರವನ್ನು ಶ್ಲಾಘಿಸಿದರು. ಮೃತರ ಆಶಯಗಳನ್ನು ಗೌರವಿಸಿದ್ದಕ್ಕಾಗಿ ಅವರನ್ನು ಅಭಿನಂದಿಸಿದರು. ಆದರೆ ಇತರರು ಅಂತ್ಯಕ್ರಿಯೆಗೆ ಇದು ಸೂಕ್ತವಲ್ಲ ಎಂದು ಹೇಳಿದರು.
ದಿನಸಿ ಅಂಗಡಿಗೆ ನುಗ್ಗಿ ತಿಂಡಿ ಎಗರಿಸಿದ ಆನೆ: ಇದು ಕ್ಯೂಟ್ ದರೋಡೆ ಎಂದ ನೆಟ್ಟಿಗರು
ಥೈಲ್ಯಾಂಡ್‌ನಂತಹ ದೇಶಗಳು ವೈವಿಧ್ಯಮಯ ಸಾಂಸ್ಕೃತಿಕ ಪದ್ಧತಿಗಳನ್ನು ಹೊಂದಿವೆ. ಸ್ಥಳೀಯ ಸಂಪ್ರದಾಯಗಳು ಮರಣೋತ್ತರ ಸಮಾರಂಭಗಳಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಈ ಘಟನೆಯು ಮೃತರ ವೈಯಕ್ತಿಕ ಆಶಯಗಳಿಗೆ ಎಷ್ಟು ಪ್ರಾಮುಖ್ಯತೆ ನೀಡಬೇಕು ಎಂಬುದರ ಕುರಿತು ಹೊಸ ಚರ್ಚೆಗಳನ್ನು ಹುಟ್ಟುಹಾಕಿದೆ.