ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಂಗಳೂರಿನಲ್ಲಿ ತಾಪಮಾನ ಹೆಚ್ಚಳಕ್ಕೆ ಕಾರಣವೇನು? ಅರಣ್ಯಾಧಿಕಾರಿ ಬಿಚ್ಚಿಟ್ರು ಬೆಚ್ಚಿ ಬೀಳಿಸುವ ಅಂಕಿ-ಅಂಶ

ಬೆಂಗಳೂರಿನ ತಾಪಮಾನ ಹೆಚ್ಚಾಗಲು ಅರಣ್ಯ ನಾಶವೇ ಕಾರಣ ಎಂದು ಭಾರತೀಯ ಅರಣ್ಯ ಅಧಿಕಾರಿಯೊಬ್ಬರು ಸಾಮಾಜಿಕ ಮಾಧ್ಯಮದ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅವರು ಹಂಚಿಕೊಂಡಿರುವ ಪೋಸ್ಟ್ ಭಾರಿ ವೈರಲ್ ಆಗಿದ್ದು, ಅನೇಕರು ಅವರನ್ನು ಬೆಂಬಲಿಸಿ, ದಿನೇ ದಿನೇ ಹೆಚ್ಚುತ್ತಿರುವ ತಾಪಮಾನದ ಕುರಿತು ಕಾಮೆಂಟ್ ಕೂಡ ಮಾಡಿದ್ದಾರೆ.

ಅರಣ್ಯ ನಾಶದಿಂದ ಬೆಂಗಳೂರಿನ ತಾಪಮಾನ ಹೆಚ್ಚಳ

ಸಂಗ್ರಹ ಚಿತ್ರ -

ಬೆಂಗಳೂರು: ಈ ಬಾರಿಯ ಬೇಸಗೆಯಲ್ಲಿ ಬೆಂಗಳೂರಿನ ತಾಪಮಾನ (Bengaluru temperature) ತೀವ್ರವಾಗಿ ಹೆಚ್ಚಳವಾಗಿದ್ದು, ಇದಕ್ಕೆ ದೊಡ್ಡ ಪ್ರಮಾಣದ ಅರಣ್ಯ ನಾಶವೇ ಕಾರಣ ಎಂದು ಭಾರತೀಯ ಅರಣ್ಯ ಅಧಿಕಾರಿಯೊಬ್ಬರು (Indian Forest Officer) ದೂರಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದ (Social Media) ಎಕ್ಸ್ ಖಾತೆಯಲ್ಲಿ ಬರೆದಿರುವ ಅವರು, ದೊಡ್ಡ ಪ್ರಮಾಣದ ಅರಣ್ಯ ನಾಶವನ್ನು ಖಂಡಿಸಿದ್ದಾರೆ. ಒಂದು ಕಾಲದಲ್ಲಿ ನಗರವು ಆಹ್ಲಾದಕರ ಹವಾಮಾನ ಹೊಂದಿತ್ತು. ಮರಗಳಿಂದ ಕೂಡಿದ ಮಾರ್ಗಗಳು ಇದ್ದವು. ಈಗ ಅದು ಬಹುತೇಕ ಕಣ್ಮರೆಯಾಗಿದೆ. ಪ್ರತಿ ವರ್ಷ ಹೊಸ ತಾಪಮಾನ ದಾಖಲೆ ಬರೆಯುತ್ತಿದೆ ಎಂದು ಹೇಳಿದ್ದಾರೆ.

ಭಾರತೀಯ ಅರಣ್ಯ ಸೇವೆಯ ಹಿರಿಯ ಅಧಿಕಾರಿ ದೀಪಿಕಾ ಗೋಯಲ್ ಬಾಜಪೇಯಿ ಅವರು ಸಾಮಾಜಿಕ ಮಾಧ್ಯಮ ಎಕ್ಸ್ನ್ ಖಾತೆಯಲ್ಲಿ ಬೆಂಗಳೂರಿನ ತಾಪಮಾನದ ಕುರಿತಾಗಿ ಮಾಡಿರುವ ಪೋಸ್ಟ್ ಅನೇಕರ ಗಮನ ಸೆಳೆದಿದೆ. ಸಾಕಷ್ಟು ಮಂದಿ ಇದಕ್ಕೆ ಪ್ರತಿಕ್ರಿಯೆಯನ್ನು ಕೂಡ ನೀಡಿದ್ದಾರೆ.

ಪೋಷಕರ ಬೇಜವಾಬ್ದಾರಿಯ ಪರಮಾವಧಿ: ಒಂದೇ ಸ್ಕೂಟರ್‌ನಲ್ಲಿ 6 ಮಕ್ಕಳ ಪ್ರಯಾಣ

ಈ ಬೇಸಿಗೆಯಲ್ಲಿ ಬೆಂಗಳೂರಿನಲ್ಲಿ ತಾಪಮಾನ 39 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿದೆ ಎಂದು ಹೇಳಿರುವ ದೀಪಿಕಾ, ನಗರದ ಹದಗೆಡುತ್ತಿರುವ ಉಷ್ಣತೆಗೆ ಅರಣ್ಯ ನಾಶ ಮುಖ್ಯ ಕಾರಣ ಎಂದು ತಿಳಿಸಿದ್ದಾರೆ.

ಬೆಂಗಳೂರು ಹಿಂದೆಂದೂ ಕಾಣದಷ್ಟು ಶಾಖವನ್ನು ಈ ಬಾರಿ ಕಂಡಿದೆ. ಸಮಸ್ಯೆಯ ಒಂದು ಭಾಗವೆಂದರೆ ದೊಡ್ಡ ಪ್ರಮಾಣದ ಅರಣ್ಯನಾಶ ಮತ್ತು ರಸ್ತೆ ಬದಿಯ ಮರಗಳನ್ನು ಶಾಶ್ವತವಾಗಿ ಕಡಿದು ಕಾಂಕ್ರೀಟ್ ರಸ್ತೆಗಳು ನಿರ್ಮಾಣವಾಗಿವೆ. ಇದರಿಂದ ಮುಂದಿನ ದಿನಗಳಲ್ಲಿ ನಾವು ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದರು.



ಇದಕ್ಕೆ ಇರುವ ಒಂದೇ ಪರಿಹಾರವೆಂದರೆ ಆಕ್ರಮಣಕಾರಿಯಾಗಿ ರಸ್ತೆ ಬದಿ ಮರ ನೆಡುವುದು, ನಗರ, ಅರಣ್ಯ ಉದ್ಯಾನವನಗಳನ್ನು ರಚಿಸುವುದು, ಪ್ರತಿ ವಸತಿ ಸ್ಥಳದಲ್ಲಿ ಕಡ್ಡಾಯವಾಗಿ ಮರಗಳನ್ನು ನೆಡುವುದಾಗಿದೆ. ಒಂದು ಕಾಲದಲ್ಲಿ ನಗರದಲ್ಲಿ ಅತ್ಯಂತ ಆಹ್ಲಾದಕರ ಹವಾಮಾನ ಇತ್ತು. ಆದರೆ ಈಗ ಪ್ರತಿ ವರ್ಷ ಹೊಸ ತಾಪಮಾನ ದಾಖಲೆಗಳನ್ನು ಬರೆಯುತ್ತಿದೆ ಎಂದು ತಿಳಿಸಿದ್ದಾರೆ.

ಅವರ ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. 38,500 ಕ್ಕೂ ಹೆಚ್ಚು ವೀಕ್ಷಣೆ ಪಡೆದು, 300 ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ಅನೇಕರು ಕಾಮೆಂಟ್ ಕೂಡ ಮಾಡಿದ್ದಾರೆ.

ಒಬ್ಬರು, ಸಮಸ್ಯೆ ಅಭಿವೃದ್ಧಿಯಲ್ಲ, ಅಭಿವೃದ್ಧಿ ಮಾಡುವಾಗ ಸರಿಯಾದ ಯೋಜನೆ ಮಾಡದೇ ಇರುವುದು. ಸರೋವರಗಳು, ಕಾಡುಗಳು ಇತ್ಯಾದಿಗಳ ಮೇಲೆ ಬಿಲ್ಡರ್‌ಗಳಿಗೆ ಕಟ್ಟಡ ನಿರ್ಮಾಣಕ್ಕೆ ದಾರಿ ಮಾಡಿಕೊಡಲು ನೇತಾರರು ಲಂಚವನ್ನು ಪಡೆದಿದ್ದಾರೆ. ಮರಗಳನ್ನು ಹಾಗೆಯೇ ಉಳಿಸಿಕೊಂಡು ಟೆಕ್ ಪಾರ್ಕ್‌ಗಳು, ಎತ್ತರದ ಕಟ್ಟಡಗಳು, ರಸ್ತೆಗಳನ್ನು ನಿರ್ಮಿಸಲು ವೈಜ್ಞಾನಿಕ ಯೋಜನೆ ಅಗತ್ಯವಾಗಿತ್ತು ಎಂದು ತಿಳಿಸಿದ್ದಾರೆ.

ವಿಶ್ವದ ಅತೀ ದೊಡ್ಡ ಇಟಾಲಿಯನ್ ತಿರಾಮಿಸು ಇದು; ವಂದೇ ಭಾರತ್‌ ರೈಲಿಗಿಂತ ಉದ್ದ ಈ ಖಾದ್ಯ

ಇನ್ನೊಬ್ಬರು, ಸ್ವಾರ್ಥಿ ಬಿಲ್ಡರ್‌ಗಳು ಮತ್ತು ರಾಜಕಾರಣಿಗಳು ಅರಣ್ಯನಾಶಕ್ಕೆ ಕಾರಣ. ರಾಜಕಾರಣಿಗಳು ಕೆಲವು ಪ್ರಯೋಜನಗಳಿಗೆ ಅನುಮೋದನೆ ನೀಡುತ್ತಾರೆ. ಇಲ್ಲಿನ ತಾಪಮಾನದಿಂದ ಬಿಲ್ಡರ್‌ಗಳು ತೊಂದರೆಗೊಳಗಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಮತ್ತೊಬ್ಬರು ರಸ್ತೆ ಅಗಲೀಕರಣಗೊಳಿಸಲು ಸಾವಿರಾರು ಮರಗಳನ್ನು ಕತ್ತರಿಸಲಾಗಿದೆ. ಬಳಿಕ ಬಹಳ ಕಡಿಮೆ ಮರಗಳನ್ನು ಮರು ನೆಡಲಾಗಿದೆ ಎಂದು ಹೇಳಿದ್ದಾರೆ.