ನೋಡ ನೋಡುತ್ತಲೇ ಬಿರುಗಾಳಿಗೆ ಶೀಟ್ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ; ಭಯಾನಕ ವಿಡಿಯೋ ವೈರಲ್
ಉತ್ತರ ಪ್ರದೇಶದಾದ್ಯಂತ ಭಾರೀ ಮಳೆಯಾಗುತ್ತಿದ್ದು, ಜನಜೀವನ ತತ್ತರಿಸಿದೆ. ಮಳೆ ಸಂಬಂಧಿತ ವಿವಿಧ ಪ್ರಕರಣಗಳಲ್ಲಿ ಈ ವರೆಗೂ 80ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಲ್ಲಿ ತಿಳಿದು ಬಂದಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ದೃಶ್ಯವೊಂದು ನೆಟ್ಟಿಗರನ್ನು ಬೆಚ್ಚಿ ಬೀಳಿಸುವಂತಿದೆ.
ಸಂಗ್ರಹ ಚಿತ್ರ -
ಲಖನೌ: ಉತ್ತರ ಪ್ರದೇಶದಾದ್ಯಂತ ಭಾರೀ ಮಳೆಯಾಗುತ್ತಿದ್ದು, ಜನಜೀವನ ತತ್ತರಿಸಿದೆ. ಮಳೆ ಸಂಬಂಧಿತ ವಿವಿಧ ಪ್ರಕರಣಗಳಲ್ಲಿ ಈ ವರೆಗೂ 80ಕ್ಕೂ ಅಧಿಕ ಮಂದಿ (Uttara Pradesh) ಸಾವನ್ನಪ್ಪಿದ್ದಾರೆ ಎಂದು ವರದಿಯಲ್ಲಿ ತಿಳಿದು ಬಂದಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ದೃಶ್ಯವೊಂದು ನೆಟ್ಟಿಗರನ್ನು ಬೆಚ್ಚಿ ಬೀಳಿಸುವಂತಿದೆ. ಬುಧವಾರ ರಾಜ್ಯದ ಹಲವು ಭಾಗಗಳಲ್ಲಿ ಬೀಸಿದ ಭೀಕರ (Viral Video) ಚಂಡಮಾರುತದ ವೇಳೆ, ಒಬ್ಬ ವ್ಯಕ್ತಿ ಟಿನ್ ಶೆಡ್ ಜೊತೆಗೆ ಸುಮಾರು 50 ಅಡಿ ಎತ್ತರಕ್ಕೆ ಎಸೆಯಲ್ಪಟ್ಟಿದ್ದಾನೆ. ಬರೇಲಿಯಲ್ಲಿ ಈ ಘಟನೆ ನಡೆದಿದೆ.
ನನ್ಹೇ ಮಿಯಾನ್ ಎಂದು ಗುರುತಿಸಲಾದ ವ್ಯಕ್ತಿ ಬರೋಬ್ಬರಿ 50 ಅಡಿ ಎತ್ತರಕ್ಕೆ ಹಾರಿ ಕೆಳಗಿ ಬಿದ್ದಿದ್ದಾರೆ. ಮಳೆಯಿಂದ ರಕ್ಷಿಸಿಕೊಳ್ಳಲು ಅಥವಾ ಶೀಟ್ ಹಾರಿಹೋಗದಂತೆ ತಡೆಯಲು ಆ ವ್ಯಕ್ತಿ ಟಿನ್ ಶೆಡ್ ಅನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾಗ, ಗಾಳಿಯ ತೀವ್ರತೆಯು ಆತನನ್ನು ಮೇಲಕ್ಕೆತ್ತಿ ದೂರಕ್ಕೆ ಎಸೆದಿದೆ. ಜೋರಾಗಿ ಗಾಳಿ ಬಿಸುತ್ತಿತ್ತು. ಈ ವೇಳೆ ಹಗ್ಗವನ್ನು ಹಿಡಿದಿದ್ದೆ. ಆದರೆ ಗಾಳಿಯ ರಭಸಕ್ಕೆ ಹಗ್ಗಾ ತುಂಡಾಯಿತು. ಈ ವೇಳೆ ಹಗ್ಗದ ಜೊತೆ ಇದ್ದ ಟಿನ್ ಶೀಟ್ ಜೊತೆಗೆ ನಾನೂ ಕೂಡ ಗಾಳಿಯಲ್ಲಿ ಹಾರಿಹೋದೆ. ಸುಮಾರು 50 ಅಡಿ ಎತ್ತರಕ್ಕೆ ಹಾರಿ ಸುಮಾರು 500 ಮೀಟರ್ ದೂರಕ್ಕೆ ಎಸೆಯಲ್ಪಟ್ಟೆ ಎಂದು ಗಾಯಾಳು ಹೇಳಿಕೊಂಡಿದ್ದಾರೆ.
ವಿಡಿಯೋ ನೋಡಿ
यूपी- बरेली के नन्हे मियां तेज तूफान में बारातघर की टीनशेड का पाया पकड़े खड़े थे. आंधी तेज हुई तो टीनशेड उखड़ गई और उसके साथ नन्हे मियां हवा में उड़ गए.
— Narendra Pratap (@hindipatrakar) May 13, 2026
ऐसे उड़े कि टिन जमीन पर आई लेकिन नन्हें मियां देर तक उड़ने के बाद नीचे गिरे.
हाथ पांव दोनों टूट गए है. अब अस्पताल में भर्ती… pic.twitter.com/TJX04wQ1pD
ಅದು ಸುಮಾರು 30-40 ಅಡಿ ಎತ್ತರದಲ್ಲಿತ್ತು. ನಾನು ಎಲ್ಲಿಗೆ ಬಿದ್ದೆ ಎಂಬುದೇ ಗೊತ್ತಾಗಲಿಲ್ಲ. ಕನಿಷ್ಠ 50 ಅಡಿ ದೂರಕ್ಕೆ ಎಸೆಯಲ್ಪಟ್ಟೆ, ಗಾಳಿ ರಭಸ ಹೆಚ್ಚಿದ್ದರಿಂದ ತಮ್ಮನ್ನು ರಕ್ಷಿಸಬಹುದು ಎಂಬ ಭರವಸೆಯಲ್ಲಿ ಹಗ್ಗವನ್ನು ಹಿಡಿದಿದ್ದೆ. ಆದರೆ ಬಲವಾದ ಗಾಳಿ ಹಗ್ಗವನ್ನು ತುಂಡುಮಾಡಿತು ಎಂದು ಅವರು ಹೇಳಿದರು. ಘಟನೆಯಲ್ಲಿ ಅವರ ಎರಡೂ ಕೈ ಹಾಗೂ ಕಾಲು ಮುರಿತವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕಳೆದ ಬುಧವಾರ ಉತ್ತರ ಪ್ರದೇಶದಾದ್ಯಂತ ಬಿರುಗಾಳಿ, ಸಿಡಿಲು ಮತ್ತು ಭಾರೀ ಮಳೆಯಿಂದಾಗಿ 80 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ. ರಾಜ್ಯಾದ್ಯಂತ ಹವಾಮಾನ ವೈಪರೀತ್ಯದಿಂದಾಗಿ ಹಲವಾರು ಜಿಲ್ಲೆಗಳಲ್ಲಿ ಮನೆಗಳು, ಮರಗಳು, ವಿದ್ಯುತ್ ಮೂಲಸೌಕರ್ಯ ಮತ್ತು ಕೃಷಿ ಭೂಮಿಗೆ ಹಾನಿಯಾಗಿದೆ.
ವ್ಯಾಪಕ ವಿನಾಶದ ನಂತರ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬಿರುಗಾಳಿ, ಮಿಂಚು ಮತ್ತು ಭಾರೀ ಮಳೆಯಿಂದ ಹಾನಿಗೊಳಗಾದ ಸಂತ್ರಸ್ತರಿಗೆ ತ್ವರಿತ ಪರಿಹಾರವನ್ನು ಖಚಿತಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜೀವ, ಜಾನುವಾರು ಮತ್ತು ಆಸ್ತಿಪಾಸ್ತಿ ನಷ್ಟದ ಮೌಲ್ಯಮಾಪನಗಳನ್ನು ಪೂರ್ಣಗೊಳಿಸಿ ಪರಿಹಾರವನ್ನು 24 ಗಂಟೆಗಳ ಒಳಗೆ ವಿತರಿಸುವಂತೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.