ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಅತ್ಯಾಧುನಿಕ ಸೌಲಭ್ಯಗಳ ಗೂಗಲ್ ಆಫೀಸ್‌ನ ವಿಡಿಯೊ ವೈರಲ್; ಅಂತಹದ್ದೇನಿದೆ ಇಲ್ಲಿ?

Viral Video: ವಿಶಿಷ್ಟ ವಿನ್ಯಾಸದ ಕಚೇರಿಯ ಸಾಲಿಗೆ ಗೂಗಲ್ ಕೂಡ ಸೇರಿಕೊಂಡಿದ್ದು ಐಟಿ ಕಂಪನಿಗಳಲ್ಲಿ ನೀಡುವಂತಹ ಅತ್ಯಾಕರ್ಷಕ ಮತ್ತು ಐಷಾರಾಮಿ ಸೇವೆಗಳನ್ನು ತನ್ನ ಉದ್ಯೋಗಿಗಳಿಗೆ ನೀಡುತ್ತಿದೆ. ಅಮೆರಿಕದಲ್ಲಿ ಪ್ರಧಾನ ಕಚೇರಿ ಇದ್ದು, ಉಪಕಚೇರಿ ಭಾರತ ಸೇರಿ ವಿವಿಧೆಡೆಗಳಲ್ಲಿ ಇದೆ. ಹರಿಯಾಣದ ಗುರುಗ್ರಾಮ್‌ನಲ್ಲಿರುವ ಕಚೇರಿಯ ವಿಡಿಯೊ ವೈರಲ್‌ ಆಗಿದೆ.

ಗುರುಗ್ರಾಮದ ಗೂಗಲ್ ಆಫೀಸ್ ವಿಡಿಯೊಕ್ಕೆ ನೆಟ್ಟಿಗರು ಫಿದಾ

Google's Gurugram Office

Profile Pushpa Kumari Mar 9, 2025 3:20 PM

ಚಂಡೀಗಢ: ವಿಶ್ವದ ಅತೀ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನಗಳ ಸಾಲಿನಲ್ಲಿ ಗೂಗಲ್ (Google) ಕೂಡ ಒಂದು. ಗೂಗಲ್ ಅಂತಾರಾಷ್ಟ್ರೀಯ ಮಟ್ಟದವರೆಗೂ ತನ್ನ ವ್ಯಾಪ್ತಿ ವಿಸ್ತರಿಸಿದ್ದು ಅದರ ಕಾರ್ಯ ವೈಖರಿ ಸರಾಗವಾಗಿ ಸಾಗಲೆಂಬ ಉದ್ದೇಶಕ್ಕೆ ಅಲಲ್ಲಿ ಕಚೇರಿಗಳನ್ನು ಸಹ ನಿರ್ಮಾಣ ಮಾಡಿದೆ. ಹೀಗಾಗಿ‌ ತನ್ನ ಸಿಬ್ಬಂದಿಗೆ‌ ಕಚೇರಿಯಲ್ಲಿ ಅತ್ಯಾಧುನಿಕ ಸೌಕರ್ಯಗಳನ್ನು ನೀಡುತ್ತಿದೆ‌. ಇತ್ತೀಚೆಗೆ ಗೂಗಲ್ ಕಚೇರಿಯ ಒಳಗೆ ಏನೆಲ್ಲ ಸೌಕರ್ಯ ಇದೆ ಎನ್ನುವ ವಿಡಿಯೊವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ (Viral Video). ಹೊರ ಜಗತ್ತಿನ ಪರಿಚಯ ಮಾಡುವ ಗೂಗಲ್ ತನ್ನ ಕಚೇರಿ ಒಳಗೆ ಮಿನಿ ಜಗತ್ತನ್ನೇ ಸೃಷ್ಟಿ ಮಾಡಿದ್ದು, ಸದ್ಯ ಈ ವಿಡಿಯೊ ನೋಡಿ ನೆಟ್ಟಿಗರು ಮನ ಸೋತಿದ್ದಾರೆ.

ವಿಶಿಷ್ಟ ವಿನ್ಯಾಸದ ಕಚೇರಿಯ ಸಾಲಿಗೆ ಗೂಗಲ್ ಕೂಡ ಸೇರಿಕೊಂಡಿದೆ. ಐಟಿ ಕಂಪನಿಗಳಲ್ಲಿ ನೀಡುವಂತಹ ಅತ್ಯಾಕರ್ಷಕ ಮತ್ತು ಐಷಾರಾಮಿ ಸೇವೆಗಳನ್ನು ಗೂಗಲ್ ತನ್ನ ಉದ್ಯೋಗಿಗಳಿಗೆ ನೀಡುತ್ತಿದೆ. ಅಮೆರಿಕದಲ್ಲಿ ಇದರ‌ ಪ್ರಧಾನ ಕಚೇರಿ ಇದ್ದು, ಉಪಕಚೇರಿಗಳು ಭಾರತ ಸೇರಿ ಕೆಲವೆಡೆ ಇದೆ. ಹರಿಯಾಣದ ಗುರುಗ್ರಾಮ್‌ನಲ್ಲೂ ಗೂಗಲ್ ಕಚೇರಿ ಇದ್ದು, ಇಲ್ಲಿನ ವೈಶಿಷ್ಟ್ಯ ಬಗ್ಗೆ ವಿಡಿಯೊವನ್ನು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ ಹಂಚಿಕೊಂಡಿದ್ದಾರೆ.

ಕೌಚರ್ ಡಿಸೈನರ್ ಶಿವಾಂಗಿ ಗುಪ್ತ ಎನ್ನುವವರು ಈ ಸರ್ಚ್ ಎಂಜಿನ್‌ನ ಗುರುಗ್ರಾಮದ ಕಚೇರಿಯ ವಿಡಿಯೊವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಗುರುಗ್ರಾಮ್ ಗೂಗಲ್ ಕಚೇರಿಯ ಸಣ್ಣ ಝಲಕ್ ಹೊಂದಿರುವ ಈ ವಿಡಿಯೊದಲ್ಲಿ ಗೂಗಲ್ ಕಂಪನಿಯ ಹೊರಾಂಗಣ, ಒಳಾಂಗಣದ ನೋಟವಿದೆ. ಒಳಗೆ ಮೈಕ್ರೋ ಕಿಚನ್ ಇದ್ದು, ತಿಂಡಿ ತಿನಿಸು, ಹೆಲ್ತಿ ಕೂಲ್ ಡ್ರಿಂಕ್ಸ್ ಮತ್ತಿತರ ಆಹಾರ ಸಾಮಗ್ರಿಗಳಿವೆ. ಫ್ರೀ ಟೈಂ ಕಳೆಯಲು ನಿದ್ರಾ ಕೊಠಡಿ, ಗೇಮ್ಸ್, ಮ್ಯೂಸಿಕ್ ಇತ್ಯಾದಿ ಸೌಕರ್ಯ ಇದೆ. ರೆಸ್ಟ್ ಮಾಡಲು ಕೂಲ್ ರೂಮ್ಸ್ , ಹಸಿವಾದಾಗ ತಿನಿಸಿಗೆ ಕೂಡ ಪ್ರತ್ಯೇಕ ಓಪನ್ ಕಿಚನ್, ಅದರಲ್ಲಿ ಅನೇಕ ಅಡುಗೆ ಸಿಬಂದಿ ತರತರದ ಭಕ್ಷ್ಯಗಳನ್ನು ತಯಾರಿಸುವ ದೃಶ್ಯ ಇದೆ. ಅದರ ಜತೆ ಮಸಾಜ್ ರೂಮ್‌ನಲ್ಲಿ ಎಸಿ ಮಸಾಜಿಂಗ್ ಚೇರ್ಸ್, ಫೂಲ್ಸ್ ಇತ್ಯಾದಿ ಸೌಲಭ್ಯಗಳು ಇದೆ. ಕಾರ್ಪೋರೇಟ್ ಕಂಪನಿಯನ್ನು ಮೀರಿಸುವಂತೆ ಗೂಗಲ್ ಕಂಪನಿ ತನ್ನ ಸಿಬಂದಿಗೆ ಸೌಲಭ್ಯ ನೀಡುತ್ತಿದೆ.

ಇದನ್ನು ಓದಿ: Viral Video: ಮೊಲ-ಆಮೆ ಓಟದ ವಿಡಿಯೊ ವೈರಲ್; ಈ ಬಾರಿ ಗೆದ್ದವರು ಯಾರು?

ಸದ್ಯ ಸೋಶಿಯಲ್ ‌ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೊವನ್ನು 4.40 ಲಕ್ಷಕ್ಕೂ ಅಧಿಕ ಮಂದಿ ಇಷ್ಟಪಟ್ಟಿದ್ದಾರೆ. ಈ ವಿಡಿಯೊ ನೋಡಿದ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದು, ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ. ನೆಟ್ಟಿಗರೊಬ್ಬರು ಇಲ್ಲಿ ಕೆಲಸ ಮಾಡುವ ಸಿಬ್ಬಂದಿ ಅದೃಷ್ಟ ಮಾಡಿದ್ದಾರೆ ಎಂದಿದ್ದಾರೆ. ಮತ್ತೊಬ್ಬರು ಇಷ್ಟೆಲ್ಲ ಸೌಕರ್ಯ ಇರುವ ಗೂಗಲ್ ಆಫೀಸ್ ಸಿಬ್ಬಂದಿಗೆ ದುಪ್ಪಟ್ಟು ವೇತನ‌ ನೀಡಬಹುದು ಎಂದಿದ್ದಾರೆ. ಅದೇನೆ ಇರಲಿ ಉದ್ಯೋಗಿ ಸ್ನೇಹಿ ಉದ್ದೇಶದಿಂದ ಗೂಗಲ್ ಕಚೇರಿಯಲ್ಲಿ ಅತ್ಯಾಧುನಿಕ, ಸ್ಫೂರ್ತಿದಾಯಕ ವ್ಯವಸ್ಥೆ ಕಲ್ಪಿಸಿದ್ದು ಇದು ಉದ್ಯೋಗಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುವಂತೆ ಮಾಡಲಿದೆ.