ಕಂಟೆಂಟ್ ಕ್ರಿಯೇಟರ್‌ಗಳಿಗೆ ಸರ್ಕಾರದಿಂದ ಬಂಪರ್ ಗಿಫ್ಟ್: 10,000 ರೂ. ಪ್ರೋತ್ಸಾಹಧನ ಘೋಷಣೆ! ಷರತ್ತೇನು?
Viral News: ಸೋಷಿಯಲ್ ಮೀಡಿಯಾ ಕ್ರಿಯೇಟರ್ ಗಳಿಗೆ ಬಿಹಾರ ಸರಕಾರವು ಗುಡ್ ನ್ಯೂಸ್ ವೊಂದನ್ನು ನೀಡಿದೆ. ಸರಕಾರದ ಯೋಜನೆಗಳನ್ನು ಪ್ರಸಾರ ಮಾಡುವ ಕಂಟೆಟ್ ಕ್ರಿಯೇಟರ್ ಗೆ ಹತ್ತು ಸಾವಿರ ಪ್ರೋತ್ಸಾಹಧನ ನೀಡುವುದಾಗಿ ಘೋಷನೆ ಮಾಡಿದೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾ ದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಾವು ಬಿಹಾರ ಶಿಪ್ಟ್ ಆಗುವುದಾಗಿ ನಾನಾ ರೀತಿಯ ತಮಾಷೆಯ ಪ್ರತಿಕ್ರಿಯೆ ನೀಡಿದ್ದಾರೆ.
(ಸಂಗ್ರಹ ಚಿತ್ರ) -
ಪಾಟ್ನಾ,ಆ.22: ಇಂದು ಸೋಷಿಯಲ್ ಮೀಡಿಯಾ ಬಳಕೆಯ ಹವಾ ಹೆಚ್ಚಾಗಿದೆ. ದಿನ ನಿತ್ಯ ಆಗು- ಹೋಗುಗಳನ್ನೇ ಬ್ಲಾಗ್ ಮಾಡಿ ಲೈಕ್, ಫಾಲೋವರ್ಸ್ ಗಿಟ್ಟಿಸಿಕೊಂಡವರು ಅನೇಕರು ಇದ್ದಾರೆ. ಈ ನಡುವೆ ಸೋಷಿಯಲ್ ಮೀಡಿಯಾ ಕ್ರಿಯೇಟರ್‌ಗಳಿಗೆ ಬಿಹಾರ ಸರಕಾರವು ಗುಡ್ ನ್ಯೂಸ್ ವೊಂದನ್ನು ನೀಡಿದೆ. ಸರಕಾರದ ಯೋಜನೆಗಳನ್ನು ಪ್ರಸಾರ ಮಾಡುವ ಕಂಟೆಟ್ ಕ್ರಿಯೇಟರ್‌ಗೆ ಹತ್ತು ಸಾವಿರ ಪ್ರೋತ್ಸಾಹಧನ ನೀಡುವುದಾಗಿ ಘೋಷಣೆ ಮಾಡಿದೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ತಾವು ಬಿಹಾರ ಶಿಫ್ಟ್ ಆಗುವುದಾಗಿ ನಾನಾ ರೀತಿಯ ತಮಾಷೆಯ ಪ್ರತಿಕ್ರಿಯೆ ನೀಡಿದ್ದಾರೆ.
ಸರ್ಕಾರಿ ಯೋಜನೆಗಳನ್ನು ಪ್ರಚಾರ ಮಾಡುವ ವೀಡಿಯೊಗಳಿಗೆ ಹಾಗೂ ಅರ್ಹ ಕಂಟೆಂಟ್ ಕ್ರಿಯೇಟರ್‌ಗಳಿಗ ಬಿಹಾರವು ಹೊಸ ಯೋಜನೆಯನ್ನು ಅನುಮೋದಿಸಿದೆ. ಸರ್ಕಾರದ ವಿವಿಧ ಕಾರ್ಯಕ್ರಮಗಳು ಹಾಗೂ ಸಾಧನೆಗಳನ್ನು ಸಾರ್ವಜನಿಕರಿಗೆ ಪ್ರಚಾರ ಮಾಡಲೆಂದು ಬಿಹಾರ ಸಚಿವ ಸಂಪುಟವು 'ಆನ್‌ಲೈನ್ ಮೀಡಿಯಾ ತಿದ್ದುಪಡಿ ನಿಯಮಾವಳಿ-2026 ಅನ್ನು ಜಾರಿಗೆ ತಂದಿದೆ.
🚨 Bihar government to pay social media creators Rs 10,000 per lakh views for videos on government schemes. 🤯 pic.twitter.com/joVr6lE89q
— Indian Tech & Infra (@IndianTechGuide) August 20, 2026
ಪರಿಷ್ಕೃತ ನೀತಿಯಡಿಯಲ್ಲಿ, ಅರ್ಹ ಕ್ರಿಯೆಟರ್‌ಗಳು ತಮ್ಮ ವೀಡಿಯೊಗಳನ್ನು ವೀಕ್ಷಣೆಗಳ ಸಂಖ್ಯೆಯ ಆಧಾರದ ಮೇಲೆ ಹಣವನ್ನು ಗಳಿಸಬಹುದು. 1 ಲಕ್ಷ ವೀಕ್ಷಣೆಗಳನ್ನು ಗಳಿಸಿದ ವೀಡಿಯೊಗಳಿಗೆ ರೂ. 10,000 ರೂ. ವನ್ನು ಸರಕಾರ ಪಾವತಿಸಲಿದೆ. ಒಂದು ವೀಡಿಯೊಗೆ ಗರಿಷ್ಠ 1 ಲಕ್ಷದವರೆಗೂ ಆದಾಯ ಗಳಿಸಲು ಅವಕಾಶವಿದೆ.
ವೀಕ್ಷಣೆಗಳನ್ನು 30 ದಿನಗಳ ನಂತರ ಪರಿಶೀಲಿಸಲಾಗುತ್ತದೆ. ಆದರೆ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನೋಂದಾಯಿಸಿಕೊಂಡ ಯೂಟ್ಯೂಬ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಖಾತೆದಾರರಿಗೆ ಮಾತ್ರ ಈ ಅವಕಾಶ ಸಿಗಲಿದೆ. ಪೂರ್ವಾನುಮತಿಯಿಲ್ಲದೆ ಮಾಡುವ ವೀಡಿಯೊಗಳಿಗೆ ಈ ಹಣ ದೊರೆಯುವುದಿಲ್ಲ. ಅರ್ಹತೆ, ವಿಷಯ ಮತ್ತು ವೀಕ್ಷಣೆಗಳ ಪರಿಶೀಲನೆಯ ನಿಯಮಗಳನ್ನು ಒಳಗೊಂಡಂತೆ ಸರ್ಕಾರವು ನಿಗದಿಪಡಿಸಿದ ಷರತ್ತುಗಳನ್ನು ಪೂರೈಸಬೇಕಾಗುತ್ತದೆ.
ವಿಷಯವು ಬಿಹಾರ ಸರ್ಕಾರದ ಯೋಜನೆಗಳು, ಕಾರ್ಯ ಕ್ರಮಗಳು, ಅಭಿವೃದ್ಧಿ ಕಾರ್ಯಗಳು ಮತ್ತು ಸಾಧನೆಗಳ ಮೇಲೆ ನಿಗದಿಯಾಗಿರಬೇಕು. ಇಲಾಖೆಯ ಅನುಮತಿಯಿಲ್ಲದೆ ಮಾಡಿದ ವೀಡಿಯೊ ಗಳು ಪಾವತಿಗೆ ಅರ್ಹವಾಗುವುದಿಲ್ಲ. ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು ಬಿಹಾರವು ಸರ್ಕಾರಿ ಯೋಜನೆಗಳನ್ನು ಯೂಟ್ಯೂಬ್ ಹಣಗಳಿಕೆಯ ಹ್ಯಾಕ್ ಆಗಿ ಪರಿವರ್ತಿಸಿದೆ ಅಂದರು. ಮತ್ತೊಬ್ಬರು "ಇನ್ಮುಂದೆ ಬಿಹಾರಕ್ಕೆ ಶಿಫ್ಟ್ ಆಗುವುದು ಉತ್ತಮ'' ಎಂದು ತಮಾಷೆ ಮಾಡಿದ್ದಾರೆ.