ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರೋಗಿಯ ಪ್ರಾಣ ಕಾಪಾಡಿದ ಬ್ಲಿಂಕ್‌ಇಟ್‌: ಏನಿದು ಘಟನೆ?

Viral Video: ಹತ್ತು ನಿಮಿಷದಲ್ಲಿ ದಿನಸಿ ಪದಾರ್ಥಗಳನ್ನು ಮನೆಗೆ ತಲುಪಿಸುವ ಬ್ಲಿಂಕ್‌ಇಟ್‌ ಸಂಸ್ಥೆಯು ಈಗ ತುರ್ತು ವೈದ್ಯಕೀಯ ಸೇವೆ ನೀಡುವಲ್ಲಿಯೂ ಯಶಸ್ವಿಯಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಬ್ಲಿಂಕ್‌ಇಟ್‌ ಆಂಬ್ಯುಲೆನ್ಸ್ ಸೇವೆಯನ್ನು ಬೆಳಗ್ಗೆ 4 ಗಂಟೆಗೆ ಒದಗಿಸುವ ಮೂಲಕ ತನ್ನ ಕುಟುಂಬಕ್ಕೆ ಇದರ ನೆರವು ಹೇಗೆ ಸಿಕ್ಕಿದೆ ಎಂದು ಯುವತಿಯೊಬ್ಬರು ಶೇರ್ ಮಾಡಿದ್ದಾರೆ.

ಸಕಾಲಕ್ಕೆ ನೆರವಾದ ಬ್ಲಿಂಕ್‌ಇಟ್‌ ಬಗ್ಗೆ ವಿಡಿಯೊ ಶೇರ್ ಮಾಡಿದ ಯುವತಿ

ಸಕಾಲಕ್ಕೆ ನೆರವಾದ ಬ್ಲಿಂಕಿಟ್ ಸಂಸ್ಥೆ -

Profile
Pushpa Kumari Feb 5, 2026 5:15 PM

ಮುಂಬೈ, ಫೆ. 5: ಇತ್ತೀಚೆಗೆ ಆನ್‌ಲೈನ್‌ನಲ್ಲಿ ಖರೀದಿ ಮಾಡುವ ಸಂಖ್ಯೆ ಹೆಚ್ಚಾಗಿದೆ. ಅಗತ್ಯ ವಸ್ತು ಬೇಕು ಅಂದಾಗ ಅಮೆಜಾನ್, ಜಿಯೋಮಾರ್ಟ್, ಬ್ಲಿಂಕ್‌ಇಟ್‌ ಹೀಗೆ ನಾನಾ ಆ್ಯಪ್ ಮೂಲಕ ಖರೀದಿಸುತ್ತೇವೆ. 10 ನಿಮಿಷದಲ್ಲಿ ದಿನಸಿ ಪದಾರ್ಥಗಳನ್ನು ಮನೆಗೆ ತಲುಪಿಸುವ ಬ್ಲಿಂಕ್‌ಇಟ್‌ ಸಂಸ್ಥೆಯು ಈಗ ತುರ್ತು ವೈದ್ಯಕೀಯ ಸೇವೆ ನೀಡುವಲ್ಲಿಯೂ ಯಶಸ್ವಿಯಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಬ್ಲಿಂಕ್‌ಇಟ್‌ ಆಂಬ್ಯುಲೆನ್ಸ್ ಸೇವೆಯನ್ನು ಮುಂಜಾನೆ 4 ಗಂಟೆಗೆ ಒದಗಿಸುವ ಮೂಲಕ ತನ್ನ ಕುಟುಂಬಕ್ಕೆ ಇದರ ನೆರವು ಹೇಗೆ ಸಿಕ್ಕಿದೆ ಎಂದು ಯುವತಿಯೊಬ್ಬರು ಶೇರ್ (Viral Video) ಮಾಡಿದ್ದಾರೆ.

ಮುಂಬೈಯಲ್ಲಿ ಇರುವ ಪ್ರಾಚಿ ಎಂಬುವವರು ಈ ಬಗ್ಗೆ ವಿಡಿಯೊ ಶೇರ್ ಮಾಡಿದ್ದಾರೆ. ''ಇದು ನಾನು ಅನುಭವಿಸಿದ ಅತ್ಯಂತ ಕಷ್ಟದ ದಿನಗಳಲ್ಲಿ ಒಂದಾಗಿದೆ. ನಾನು ಬೆಳಗ್ಗೆ ನಾಲ್ಕು ಗಂಟೆಗೆ ದೆಹಲಿಯಲ್ಲಿದ್ದಾಗ ನನ್ನ ಕುಟುಂಬದಿಂದ ಕರೆ ಬಂದಿದೆ. ದೆಹಲಿಯಲ್ಲಿದ್ದ ಚಿಕ್ಕಮ್ಮನಿಗೆ ಮುಂಜಾನೆ 4 ಗಂಟೆಗೆ ತೀವ್ರವಾಗಿ ಫಿಟ್ಸ್ ಕಾಣಿಸಿಕೊಂಡಿದೆ. ಆಗ ಯಾವುದೇ ಕ್ಯಾಬ್‌ಗಳು ಸಹ ಬರಲು ಸಿದ್ಧವಿರಲಿಲ್ಲʼʼ ಎಂದಿದ್ದಾರೆ.

ವಿಡಿಯೊ ನೋಡಿ:

ʼʼಈ ಸಂದರ್ಭದಲ್ಲಿಯೇ ನೆರವಾಗಿದ್ದು ಬ್ಲಿಂಕ್‌ಇಟ್‌. ಈ ಆ್ಯಪ್ ಮೂಲಕ ಆಂಬ್ಯುಲೆನ್ಸ್ ಬುಕ್ ಮಾಡಿದ್ದು ಮುಂಜಾನೆಯಾದರೂ ಆ್ಯಂಬ್ಯುಲೆನ್ಸ್ ಅತ್ಯಂತ ವೇಗವಾಗಿ ಮನೆ ಬಾಗಿಲಿಗೆ ಬಂದಿದೆ. ಈ ತುರ್ತು ಸೇವೆಗಾಗಿ ಸಂಸ್ಥೆಯು ಯಾವುದೇ ಶುಲ್ಕವನ್ನು ತೆಗೆದುಕೊಳ್ಳದೆ ಉಚಿತವಾಗಿ ನೆರವು ನೀಡಿದೆʼʼ ಎಂದು ವಿಡಿಯೊದಲ್ಲಿ ತಿಳಿಸಿದ್ದಾರೆ.

14 ಗಂಟೆಗೂ ಹೆಚ್ಚು ಕೆಲಸ ಮಾಡಿದ ಬ್ಲಿಂಕ್‌ಇಟ್ ಡೆಲಿವರಿ ಬಾಯ್; ಆತನ ಆದಾಯ ಎಷ್ಟು?

ʼʼಈ ಸೇವೆಗೆ ಹಣ ಪಾವತಿಸಲು ತಾನು ಸಿದ್ಧಳಿದ್ದೆ...ಆದರೆ ಬ್ಲಿಂಕ್‌ಇಟ್‌ ಆಂಬ್ಯುಲೆನ್ಸ್ ಅನ್ನು ಉಚಿತವಾಗಿ ತಲುಪಿಸಿದರು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ಸೇವೆಗೆ ಹಣ ಪಾವತಿಸಲು ನಾನು ಹಿಂಜರಿಯುತ್ತಿರಲಿಲ್ಲʼʼ ಎಂದು ಕ್ವಿಕ್ ಕಾಮರ್ಸ್ ಅಪ್ಲಿಕೇಶನ್ ಅನ್ನು ಶ್ಲಾಘಿಸಿದ್ದಾರೆ. ಬ್ಲಿಂಕ್‌ಇಟ್‌ ಸಿಇಒ ಅಲ್ಬಿಂದರ್ ಧೀಂಡ್ಸಾ ಅವರ ಪ್ರಕಾರ, ಈ ಆಂಬ್ಯುಲೆನ್ಸ್ ಸೇವೆಯು ಕಳೆದ ಒಂದು ವರ್ಷದಲ್ಲಿ 4,200ಕ್ಕೂ ಹೆಚ್ಚು ಪ್ರಕರಣದಲ್ಲಿ ನೆರವಾಗಿದೆ.

ಸದ್ಯಕ್ಕೆ ದೆಹಲಿ ಮತ್ತು ಗುರುಗ್ರಾಮ್ ಭಾಗದಲ್ಲಿ ಲಭ್ಯವಿರುವ ಈ ಸೇವೆಯನ್ನು ವೈದ್ಯಕೀಯ ತುರ್ತು ಸಂದರ್ಭಗಳಿಗಾಗಿ ಮಾತ್ರ ಬಳಕೆ ಮಾಡಲು ಕಂಪನಿ ಕೇಳಿಕೊಂಡಿದೆ. ಸದ್ಯ ಈ‌ ಘಟನೆಯನ್ನು ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.