ವಿಮಾನ ನಿಲ್ದಾಣದಲ್ಲಿ ಅಪರಿಚಿತ ಮಹಿಳೆಯನ್ನು ತಬ್ಬಿಕೊಂಡ ಕೊಹ್ಲಿ; ವಿಡಿಯೊ ವೈರಲ್
ವಿಮಾನ ನಿಲ್ದಾಣದಲ್ಲಿ ಬಿಗಿ ಭದ್ರತೆಯ ನಡುವೆಯೂ ಕೊಹ್ಲಿ, ಮಹಿಳೆಯನ್ನು ಕಂಡು ನಗು ಬೀರಿದರು. ಬಳಿಕ ಅವರ ಬಳಿ ಬಂದು ಆತ್ಮೀಯವಾಗಿ ಅಪ್ಪುಗೆ ನೀಡಿ ತೆರಳಿದರು. ವಿಡಿಯೊ ನೋಡುವಾಗ ಈ ಮಹಿಳೆ ಕೊಹ್ಲಿಗೆ ಆತ್ಮೀಯವಾಗಿ ತಿಳಿದಿರುವ ಹಾಗಿದೆ.
![ವಿಮಾನ ನಿಲ್ದಾಣದಲ್ಲಿ ಅಪರಿಚಿತ ಮಹಿಳೆಯನ್ನು ತಬ್ಬಿಕೊಂಡ ಕೊಹ್ಲಿ](https://cdn-vishwavani-prod.hindverse.com/media/original_images/Virat_Kohli_34.jpg)
![Profile](https://vishwavani.news/static/img/user.png)
ಅಹಮದಾಬಾದ್: ಇಂಗ್ಲೆಂಡ್ ವಿರುದ್ಧ ಭಾರತ ತಂಡ ಬುಧವಾರ ಮೂರನೇ(India vs England 3rd ODI) ಹಾಗೂ ಅಂತಿಮ ಏಕದಿನ ಪಂದ್ಯವನ್ನಾಡಲಿದೆ. ಈ ಪಂದ್ಯವನ್ನಾಡಲು ಅಹಮದಾಬಾದ್‌ಗೆ ತೆರಳುವ ವೇಳೆ ವಿರಾಟ್ ಕೊಹ್ಲಿ(Virat Kohli) ವಿಮಾನ ನಿಲ್ದಾಣದಲ್ಲಿ ಮಹಿಳಾ ಅಭಿಮಾನಿಯೊಬ್ಬರನ್ನು ಆತ್ಮೀಯವಾಗಿ ತಬ್ಬಿಕೊಂಡ ಘಟನೆ ನಡೆಯಿತು. ಈ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು ಕೊಹ್ಲಿ ಅಪ್ಪಿಕೊಂಡ ಆ ಮಹಿಳೆ ಯಾರು? ಕೊಹ್ಲಿ ಆಕೆಯನ್ನು ತಬ್ಬಿಕೊಂಡಿದ್ದು ಏಕೆ? ಆ ಅದೃಷ್ಟವನ್ನು ಪಡೆದ ಆಕೆ ಸಾಮಾನ್ಯ ಅಭಿಮಾನಿಯಾಗಿಯೇ? ಇಂತಹ ಪ್ರಶ್ನೆಗಳ ಮಹಾಪೂರವೇ ಹರಿದಾಡುತ್ತಿದೆ.
ಕೊಹ್ಲಿ ಸ್ನೇಹ ಸಂಬಂಧಕ್ಕೆ ಹೆಚ್ಚಿನ ಮಹತ್ವ ನೀಡುವ ವ್ಯಕ್ತಿಯಾಗಿದ್ದಾರೆ. ಒಮ್ಮೆ ಅವರೊಂದಿಗೆ ಗೆಳೆತನ ಮಾಡಿದರೆ ಅವರು ಕೂಡ ಈ ಗೆಳೆತವನ್ನು ಅಷ್ಟೇ ಗೌರವಯುತವಾಗಿ ಪಾಲಿಸುತ್ತಾರೆ. ಕಳೆದ ತಿಂಗಳು ನಡೆದ ರಣಜಿ ಟ್ರೋಫಿ ಪಂದ್ಯದ ವೇಳೆ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಕೊಹ್ಲಿಯ ಬಾಲ್ಯದ ಸ್ನೇಹಿತ ಶಾವೆಜ್ ಸಿಕ್ಕಾಗ ಕೊಹ್ಲಿ ನಡೆದುಕೊಂಡಿದ್ದ ರೀತಿಯೇ ಹಾಗಿತ್ತು.
ವಿಮಾನ ನಿಲ್ದಾಣದಲ್ಲಿ ಬಿಗಿ ಭದ್ರತೆಯ ನಡುವೆಯೂ ಕೊಹ್ಲಿ, ಮಹಿಳೆಯನ್ನು ಕಂಡು ನಗು ಬೀರಿದರು. ಬಳಿಕ ಅವರ ಬಳಿ ಬಂದು ಆತ್ಮೀಯವಾಗಿ ಅಪ್ಪುಗೆ ನೀಡಿ ತೆರಳಿದರು. ವಿಡಿಯೊ ನೋಡುವಾಗ ಈ ಮಹಿಳೆ ಕೊಹ್ಲಿಗೆ ಆತ್ಮೀಯವಾಗಿ ತಿಳಿದಿರುವ ಹಾಗಿದೆ.
Virat Kohli met a lady (close relative) at Bhubaneswar airport🥹❤️ pic.twitter.com/r71Du0Uccf
— 𝙒𝙧𝙤𝙜𝙣🥂 (@wrognxvirat) February 10, 2025
ಭಾರತ ನಾಳಿನ ಪಂದ್ಯಕ್ಕೆ ತನ್ನ ಆಡುವ ಬಳಗದಲ್ಲಿ ಒಂದು ಬದಲಾವಣೆ ಮಾಡುವ ಸಾಧ್ಯತೆ ಇದೆ. ಮೊದಲೆರಡು ಪಂದ್ಯಗಳಲ್ಲಿ ಒಂದಂಕಿಗೆ ಸೀಮಿತರಾಗಿದ್ದ ಮತ್ತು ಕೀಪಿಂಗ್‌ನಲ್ಲಿಯೂ ಎಡವಿದ್ದ ಕೆ.ಎಲ್ ರಾಹುಲ್ ಅವರನ್ನು ಈ ಪಂದ್ಯದಿಂದ ಕೈಬಿಟ್ಟು ರಿಷಭ್ ಪಂತ್‌ಗೆ ಅವಕಾಶ ನೀಡುವ ಸಾಧ್ಯತೆ ಇದೆ. ಸರಣಿ ಗೆದ್ದಾಯಿತೆಂದು ನಮ್ಮವರು ಈ ಪಂದ್ಯವನ್ನು ಲಘುವಾಗಿ ತೆಗೆದುಕೊಕೊಳ್ಳುವಂತಿಲ್ಲ. ಇನ್ನೊಂದು ವಾರದಲ್ಲಿ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದೆ. ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್ ಸೇರಿ ಕೆಲ ಆಟಗಾರರು ಇನ್ನೂ ಫಾರ್ಮ್‌ಗೆ ಮರಳಲಿಲ್ಲ. ಇನ್ನೊಂದೆಡೆ ಭಾರತ ಚಾಂಪಿಯನ್ಸ್ ಟ್ರೋಫಿಯಲ್ಲಿ ಯಾವುದೇ ಅಭ್ಯಾಸ ಪಂದ್ಯ ಕೂಡ ಆಡುವುದಿಲ್ಲ ಎನ್ನಲಾಗಿದೆ. ಈ ಎಲ್ಲ ಕಾರಣದಿಂದ ಈ ಪಂದ್ಯವನ್ನು ಕೂಡ ಭಾರತ ಮಹತ್ವದ ಪಂದ್ಯವೆಂದೇ ಪರಿಗಣಿಸಿ ಆಡಬೇಕು.
ಇದನ್ನೂ ಓದಿ IND vs ENG 3rd ODI: ಸರಣಿ ಕ್ಲೀನ್‌ಸ್ವೀಪ್ ಯೋಜನೆಯಲ್ಲಿ ಭಾರತ
ಸಂಭಾವ್ಯ ತಂಡ
ಇಂಗ್ಲೆಂಡ್: ಫಿಲ್ ಸಾಲ್ಟ್ (ವಿ.ಕೀ), ಬೆನ್ ಡಕೆಟ್, ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಾಕೋಬ್ ಬೆಥೆಲ್, ಬೈರ್ಡಾನ್ ಕಾರ್ಸೆ, ಜೋಫ್ರಾ ಆರ್ಚರ್/ಮಾರ್ಕ್ ವುಡ್, ಆದಿಲ್ ರಶೀದ್, ಸಾಕಿಬ್ ಮಹಮೂದ್.
ಭಾರತ: ರೋಹಿತ್ ಶರ್ಮ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ.