Viral Video: ಮದುವೆಗೆ ಬಂದ ಅತಿಥಿಯನ್ನು ಸ್ವಾಗತಿಸುವ ಬದಲು ದಿಕ್ಕುಪಾಲಾಗಿ ಓಡಿದ ಜನ; ಇಲ್ಲಿದೆ ವೈರಲ್ ವಿಡಿಯೊ
Bull Crashes Wedding Mandap: ಮದುವೆ ಸಮಾರಂಭವೊಂದಕ್ಕೆ ಆಹ್ವಾನಿಸದ ಅತಿಥಿಯೊಬ್ಬರು ಬಂದ ಕಾರಣ ವಿವಾಹ ಕಾರ್ಯಕ್ರಮವು ಗೊಂದಲದ ಗೂಡಾಗಿ ಮಾರ್ಪಟ್ಟ ಘಟನೆ ನಡೆದಿದೆ. ಅನಿರೀಕ್ಷಿತ ಘಟನೆಯಿಂದ ಅತಿಥಿಗಳು ದಿಕ್ಕಾಪಾಲಾಗಿ ಓಡಿದ್ದಾರೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

-

ದೆಹಲಿ: ಮದುವೆ (Wedding) ಸಮಾರಂಭಗಳು ಸಾಮಾನ್ಯವಾಗಿ ಸಂತೋಷ, ನಗು ಮತ್ತು ಸರ್‌ಪ್ರೈಸರ್‌ಗಳಿಂದ ತುಂಬಿರುತ್ತವೆ. ಅತಿಥಿಗಳು (Guests) ಹೊಸ-ಹೊಸ ಉಡುಪು ಧರಿಸಿ ಕಂಗೊಳಿಸುತ್ತಾರೆ. ವಧು-ವರರು ಕೂಡ ತುಂಬಾ ಚೆನ್ನಾಗಿ ಸಿಂಗರಿಸಿಕೊಂಡಿರುತ್ತಾರೆ. ಆದರೆ ಕೆಲವೊಮ್ಮೆ ಅತ್ಯಂತ ಎಚ್ಚರಿಕೆಯಿಂದ ಯೋಜಿಸಲಾದ ಮದುವೆಗಳು ಅನಿರೀಕ್ಷಿತ ತಿರುವು ಪಡೆಯಬಹುದು (Viral Video). ಇದು ಎಲ್ಲರನ್ನೂ ಆಘಾತಗೊಳಿಸುತ್ತದೆ.
ಅಂತಹ ಒಂದು ಮದುವೆಯಲ್ಲಿ, ಆಹ್ವಾನಿಸದ ಅತಿಥಿಯೊಬ್ಬರು ಆಗಮಿಸುವವರೆಗೂ ಎಲ್ಲವೂ ಸಾಮಾನ್ಯವಾಗಿಯೇ ಇತ್ತು. ಅದ್ಯಾರು ಅತಿಥಿ ಎಂದು ಅಚ್ಚರಿ ಪಡುತ್ತಿದ್ದೀರೆ? ಅದ್ಯಾರೋ ವಧುವಿನ ಅಥವಾ ವರನ ಮಾಜಿ ಸಂಗಾತಿಯಲ್ಲ. ಅದ್ಧೂರಿ ಮದುವೆಗೆ ಕರೆಯದೇ ಬಂದ ಅತಿಥಿಯಿವರು. ಅದು ಬೇರ್ಯಾರು ಅಲ್ಲ, ಗೂಳಿ. ಕೆಲವೇ ಸೆಕೆಂಡುಗಳಲ್ಲಿ, ಮಂಟಪವು ಅವ್ಯವಸ್ಥೆಯಿಂದ ಕೂಡಿತು. ಪ್ರಶಾಂತ ಸಮಾರಂಭವಾಗಬೇಕಿದ್ದ ಸ್ಥಳ ಸಂಪೂರ್ಣ ಗೊಂದಲದ ಗೂಡಾಯಿತು. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವೈರಲ್ ವಿಡಿಯೊ ವೀಕ್ಷಿಸಿ:
ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ವೈರಲ್ ವಿಡಿಯೊದಲ್ಲಿ ವಧು-ವರ ಹಾಗೂ ಕುಟುಂಬಸ್ಥರು ಮಂಟಪದಲ್ಲಿ ಕುಳಿತಿರುವುದು ಕಂಡು ಬಂದಿದೆ. ಸಾಂಪ್ರದಾಯಿಕವಾಗಿ ಆಚರಣೆ ನಡೆಯುತ್ತಿತ್ತು. ಛಾಯಾಗ್ರಾಹಕ ಈ ಸುಂದರ ಕ್ಷಣಗಳನ್ನು ಸೆರೆಹಿಡಿಯುತ್ತಿದ್ದ. ವಧು-ವರ ಹಾಗೂ ಮದುವೆಗೆ ಬಂದಿದ್ದ ಅತಿಥಿಗಳು ಕ್ಯಾಮರಾಗೆ ಪೋಸ್ ನೀಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಒಂದು ಗೂಳಿ ಮಂಟಪಕ್ಕೆ ನುಗ್ಗಿತು. ಅನಿರೀಕ್ಷಿತ ಘಟನೆಯಿಂದ ಹೆದರಿದ ಅತಿಥಿಗಳು ಎಲ್ಲ ದಿಕ್ಕುಗಳಲ್ಲೂ ಚದುರಿದರು. ಅವ್ಯವಸ್ಥೆ ಭುಗಿಲೆದ್ದಿತು.
ನವವಿವಾಹಿತರು ಮತ್ತು ಹಾಜರಿದ್ದವರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಓಡಿದ್ದಾರೆ. ಶಾಂತಿಯುತ, ಸಂತೋಷದಾಯಕ ಕ್ಷಣವು ಸಂಪೂರ್ಣ ಅವ್ಯವಸ್ಥೆಯ ದೃಶ್ಯವಾಗಿ ಪರಿವರ್ತನೆಯಾಯ್ತು. ಸದ್ಯ ಈ ವಿಡಿಯೊ ವೈರಲ್ ಆಗಿದ್ದು, ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
ಸಹೋದರ, ಆಹಾರವನ್ನು ಎಲ್ಲಿ ಬಡಿಸಲಾಗುತ್ತದೆ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮದುವೆಗೆ ಅತ್ಯಂತ ಮುಖ್ಯ ಅತಿಥಿಯ ಆಗಮನವಾಗಿದೆ ಎಂಜು ಮತ್ತೊಬ್ಬ ಬಳಕೆದಾರರು ತಮಾಷೆ ಮಾಡಿದ್ದಾರೆ.
2022ರಲ್ಲಿ ನಡೆದಿದ್ದ ಇದೇ ರೀತಿಯ ಘಟನೆ
ಈ ಘಟನೆಯು 2022ರಲ್ಲಿ ಮದುವೆ ಮಂಟಪದಲ್ಲಿ ಕಪ್ಪು ಗೂಳಿಯೊಂದು ನುಗ್ಗಿದ್ದ ಘಟನೆಯನ್ನು ಮತ್ತೆ ನೆನಪಿಸಿದೆ. ಆಹಾರ ಮತ್ತು ಪಾನೀಯಗಳಿಂದ ತುಂಬಿ ತುಳುಕುತ್ತಿದ್ದ ಮದುವೆ ಮಂಟಪದ ಮೂಲಕ ಹೋರಿ ಓಡುತ್ತಿರುವುದನ್ನು ದೃಶ್ಯ ವೈರಲ್ ಆಗಿತ್ತು. ಅತಿಥಿಗಳು ಎದ್ದೋನೋ ಬಿದ್ದೆನೋ ಎಂಬಂತೆ ಓಡಿದ್ದಾರೆ.
ಒಬ್ಬ ವ್ಯಕ್ತಿ ತನ್ನ ಕೈಗಳನ್ನು ಬೀಸುವ ಮೂಲಕ ಹೋರಿಯನ್ನು ಓಡಿಸಲು ಪ್ರಯತ್ನಿಸುತ್ತಾನೆ. ಆದರೆ ಅಲ್ಲಿಂದ ಓಡುವ ಬದಲು, ಹೋರಿಯು ಅವನ ಮೇಲೆ ದಾಳಿ ಮಾಡಿದೆ. ದಾಳಿಯಿಂದ ರಕ್ಷಿಸಿಕೊಳ್ಳಲು ಅವನು ಹತಾಶನಾಗಿ ಪ್ರಯತ್ನಿಸುವಾಗ ನೆಲಕ್ಕೆ ಬಿದ್ದಿದ್ದಾನೆ. ನಂತರ ಹೋರಿಯು ಸಂಪೂರ್ಣವಾಗಿ ಗಾಜಿನಿಂದ ಆವೃತವಾಗಿರುವ ಪ್ರದೇಶದತ್ತ ಚಲಿಸಿತು. ಆದರೆ ಅದು ಅಂತಿಮವಾಗಿ ಆ ಪ್ರದೇಶದಿಂದ ಓಡಿಹೋದ ಕಾರಣ ಯಾವುದೇ ಹಾನಿ ಸಂಭವಿಸಲಿಲ್ಲ.
ವಿಡಿಯೊ ವೀಕ್ಷಿಸಿ:
बिन बुलाए बाराती...#bull #wedding #TrendingNow #Trending #viral pic.twitter.com/4LPMo6OhCt
— Narendra Singh (@NarendraNeer007) December 8, 2022