ಕೋಲ್ಕತ್ತಾ ತಲುಪುವಷ್ಟೇ ಸಮಯ ಬೆಂಗಳೂರು ಏರ್‌ಪೋರ್ಟ್ ತಲುಪಲು ಬೇಕಾಯ್ತು: ಸಿಲಿಕಾನ್ ಸಿಟಿ ಟ್ರಾಫಿಕ್ ಕುರಿತು ಉದ್ಯಮಿ ಹೇಳಿದ್ದೇನು?
Viral Video: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ದಾರಿ ಎಷ್ಟು ಕ್ಲಿಷ್ಟಕರವಾಗಿದೆ ಎಂಬುದನ್ನು ಉದ್ಯಮಿಯೊಬ್ಬರು ವಿಡಿಯೋದಲ್ಲಿ ಪೋಸ್ಟ್ ಮಾಡಿದ್ದಾರೆ. ಮನೀಶ್ ಕುಮಾರ್ ಸಿಂಗ್ ಅವರು ಎಚ್‌ಎಸ್‌ಆರ್ ಲೇಔಟ್ ನಿಂದ ದೇವನಹಳ್ಳಿಯ ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ ಪ್ರಯಾಣಿಸುವಾಗ ಈ ವಿಡಿಯೋ ಮಾಡಿದ್ದಾರೆ..
ಬೆಂಗಳೂರಿನ ಟ್ರಾಫಿಕ್ ಭೀಕರತೆ ಬಗ್ಗೆ ಉದ್ಯಮಿ ಬೇಸರ -
ಬೆಂಗಳೂರು,ಜು.13: ಬೆಂಗಳೂರಿನ ಟ್ರಾಫಿಕ್ ಅನ್ನೋದು ದಿನ ನಿತ್ಯ ಪ್ರಯಾಣ ಮಾಡೋರಿಗೆ ದೊಡ್ಡ ತಲೆನೋವು ಆಗಿಬಿಟ್ಟಿದೆ. ನಗರದ ಪ್ರಮುಖ ರಸ್ತೆಗಳಲ್ಲಿಯೇ ವಾಹನಗಳು ಗಂಟೆಗಟ್ಟಲೆ ನಿಲ್ಲುವುದರಿಂದ ಸಮಯ ವ್ಯರ್ಥ ವಾಗುತ್ತಿದೆ. ಕೇವಲ ಟ್ರಾಫಿಕ್ ಸಮಸ್ಯೆ ಅಲ್ಲದೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ದಾರಿ ಎಷ್ಟು ಕ್ಲಿಷ್ಟಕರವಾಗಿದೆ ಎಂಬುದನ್ನು ಉದ್ಯಮಿಯೊಬ್ಬರು ವಿಡಿಯೋದಲ್ಲಿ ಪೋಸ್ಟ್ ಮಾಡಿದ್ದಾರೆ. ಮನೀಶ್ ಕುಮಾರ್ ಸಿಂಗ್ ಅವರು ಎಚ್‌ಎಸ್‌ಆರ್ ಲೇಔಟ್ ನಿಂದ ದೇವನಹಳ್ಳಿಯ ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ ಪ್ರಯಾಣಿಸುವಾಗ ಈ ವಿಡಿಯೋ (Viral News) ಮಾಡಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣವು ಕೋಲ್ಕತ್ತಾಕ್ಕೆ ಹೋಗುವಷ್ಟು ಸಮಯ ತೆಗೆದು ಕೊಂಡಿದೆ. ಈ ಘಟನೆಯೂ ಭಾರತದ ನಗರ ಮೂಲ ಸೌಕರ್ಯದ ಸಮಸ್ಯೆಗಳನ್ನು ಎತ್ತಿ ತೋರಿಸಿದೆ ಅಂದರು. ಬೆಂಗಳೂರಿನ ನಗರ ಪ್ರದೇಶದಿಂದ ವಿಮಾನ ನಿಲ್ದಾಣ ತಲುಪಲು 2.5 ರಿಂದ 3 ಗಂಟೆಗಳು ತನಗೆ ತೆಗೆದುಕೊಂಡಿವೆ ಆದರೆ, ಬೆಂಗಳೂರಿನಿಂದ ಕೋಲ್ಕತ್ತಾಗೆ ವಿಮಾನದಲ್ಲಿ ಹೋಗಲು ಕೇವಲ 2 ಗಂಟೆ 20 ನಿಮಿಷಗಳು ಸಾಕು.. ಫ್ಲೈಟ್ ಜರ್ನಿಗಿಂತ ಟ್ರಾಫಿಕ್ ಜರ್ನಿಯೇ ಹೆಚ್ಚಾಯಿತು ಎಂದು ವಿಡಿಯೋದಲ್ಲಿ ಅಳಲು ತೋಡಿಕೊಂಡಿದ್ದಾರೆ.
ವಿಡಿಯೋ ನೋಡಿ:
ಹಣಕಾಸು ಸಲಹೆಗಾರ ಆಗಿರುವಮನೀಶ್ ಕುಮಾರ್ ಸಿಂಗ್ ಎಂಬ ವ್ಯಕ್ತಿ HSR ಲೇಔಟ್‌ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ ಪ್ರಯಾಣಿಸುವಾಗ ವೀಡಿಯೊವನ್ನು ಹಂಚಿಕೊಂಡಿದ್ದಾರೆ. "ನಾನು ನಿಮ್ಮೊಂದಿಗೆ ಒಂದು ಆಸಕ್ತಿದಾಯಕ ವಿಷಯವನ್ನು ಹಂಚಿಕೊಳ್ಳುತ್ತೇನೆ. ನೀವು ಇದನ್ನು ಕೇಳಿದ ನಂತರ ಖಂಡಿತಾ ನಗುತ್ತೀರಿ" ಎಂದು ವೀಡಿಯೊದಲ್ಲಿ ಹೇಳಿದರು. ನಾನು ಕೋಲ್ಕತ್ತಾಕ್ಕೆ ತೇರಳುತ್ತಿದ್ದೇನೆ, ಬೆಂಗಳೂರಿನ ನಗರದಿಂದ ವಿಮಾನ ನಿಲ್ದಾಣಕ್ಕೆ ಹೋಗಲು 2.5 ರಿಂದ 3 ಗಂಟೆಗಳು ಬೇಕಾಯಿತು...ಆದರೆ ಬೆಂಗಳೂರು ವಿಮಾನ ನಿಲ್ದಾಣದಿಂದ ಕೋಲ್ಕತ್ತಾ ವಿಮಾನ ನಿಲ್ದಾಣಕ್ಕೆ ಇಳಿಯಲು ನನಗೆ ಕೇವಲ 2 ಗಂಟೆ 20 ನಿಮಿಷಗಳು ಬೇಕಾಗುತ್ತದೆ.
ವಿಮಾನ ನಿಲ್ದಾಣ ತಲುಪುವಷ್ಟರಲ್ಲಿ ಕೋಲ್ಕತ್ತಾಗೆ ಹೋಗಿ ಇಳಿಯಬಹುದು. ನಮ್ಮ ದೇಶದಲ್ಲಿ ವಿಮಾನ ನಿಲ್ದಾಣವನ್ನು ಮೊದಲು ಕಟ್ಟಿ, ಆಮೇಲೆ ಅದಕ್ಕೆ ರಸ್ತೆ ವ್ಯವಸ್ಥೆ ಕಲ್ಪಿಸುತ್ತಾರೆ. ನ್ಯೂಯಾರ್ಕ್ ಅಥವಾ ಚಿಕಾಗೋದಂತಹ ದೊಡ್ಡ ನಗರಗಳಲ್ಲಿ ಇಷ್ಟು ಸುದೀರ್ಘ ಸಮಯ ಬೇಕಾಗುವುದಿಲ್ಲ ಎಂದು ಮನೀಶ್ ಬೇಸರ ವ್ಯಕ್ತಪಡಿಸಿದ್ದಾರೆ. ಶೀರ್ಷಿಕೆಯಲ್ಲಿ, ಅವರು ಬರೆದಿದ್ದಾರೆ, “ನಮ್ಮ ನಗರ ಯೋಜನೆ ಸಂಪೂರ್ಣ ಅವ್ಯವಸ್ಥೆಯಲ್ಲಿದೆ… ನಗರಗಳು ಜನರ ಸಮಸ್ಯೆಗಳನ್ನು ಪರಿಹರಿಸುತ್ತಿಲ್ಲ, ಆದರೆ ದೊಡ್ಡ ಸಮಸ್ಯೆಯನ್ನು ಸೃಷ್ಟಿಸುತ್ತಿವೆ"ಎಂದು ಬರೆದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರ ಆಕ್ರೋಶ ಕೇಳಿಬಂದಿದ್ದು ಮನೀಶ್ ಅವರ ಈ ವಿಡಿಯೋಗೆ ನೆಟ್ಟಿಗರಿಂದ ಭಾರಿ ಬೆಂಬಲ ವ್ಯಕ್ತವಾಗಿದೆ. ಬೆಂಗಳೂರಿನ ಮೂಲಸೌಕರ್ಯದ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಕೆದಾರರೊಬ್ವರು "ಬೆಂಗಳೂರು ನಗರ ಯೋಜನೆ ಕೆಟ್ಟದಾಗಿದೆ' ಎಂದರು. ಮತ್ತೊಬ್ಬರು ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಕಾರು, ಬೈಕ್ ಗಿಂತ ಮೆಟ್ರೋ ವಾಸಿ ಎಂದರು..