ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಇದ್ರೆ ಇಂಥ ಫ್ರೆಂಡ್‌ ಇರ್ಬೆಕಪ್ಪ; ಬಾಲ್ಯದ ಗೆಳೆಯನಿಗೆ 28 ಕೋಟಿ ರುಪಾಯಿ ಆಸ್ತಿ ದಾನ ಮಾಡಿದ 19 ವರ್ಷದ ವಿದ್ಯಾರ್ಥಿ

Viral News: ಚೀನಾದ ಲಿ ಎಂಬ ವಿದ್ಯಾರ್ಥಿ ಇತ್ತೀಚೆಗೆ ತನ್ನ ಹೆಸರಿನಲ್ಲಿರುವ ಎಲ್ಲ ಆಸ್ತಿಗಳನ್ನು (ಸುಮಾರು 28.1 ಕೋಟಿ ರುಪಾಯಿ) ಕಾನೂನುಬದ್ಧವಾಗಿ ತನ್ನ ಕುಟುಂಬದ ಬದಲು ಬಾಲ್ಯದ ಗೆಳೆಯನಿಗೆ ಬಿಟ್ಟುಕೊಟ್ಟಿದ್ದಾನೆ. ಇದರಲ್ಲಿ ಲಕ್ಷಾಂತರ ಯುವಾನ್ ಮೌಲ್ಯದ ಫ್ಲಾಟ್ ಮತ್ತು ಉಳಿತಾಯ ಹಣವೂ ಸೇರಿದೆ.

ಬಾಲ್ಯದ ಗೆಳೆಯನಿಗೆ ಆಸ್ತಿ ವಿಲ್ ಮಾಡಿಸಿದ 19 ವರ್ಷದ ವಿದ್ಯಾರ್ಥಿ

ಎಐ ರಚಿತ ಚಿತ್ರ -

Priyanka P
Priyanka P Jul 12, 2026 7:45 PM

ಬೀಜಿಂಗ್, ಜು. 12: ಕೆಲವರು ಸಾಮಾನ್ಯವಾಗಿ ತಮ್ಮ ಸಂಪತ್ತನ್ನು ಆನುವಂಶಿಕವಾಗಿ ಪಡೆಯುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಚೀನಾದ (China) ಶಾಂಘೈನಲ್ಲಿ 19 ವರ್ಷದ ವಿದ್ಯಾರ್ಥಿಯೊಬ್ಬ ವಿಭಿನ್ನವಾದ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾನೆ. ಕಾನೂನುಬದ್ಧವಾಗಿ ಸಂಪೂರ್ಣ 20 ಮಿಲಿಯನ್ ಯುವಾನ್ (ಸುಮಾರು 28.1 ಕೋಟಿ ರುಪಾಯಿ) ಆಸ್ತಿಯನ್ನು ತನ್ನ ಕುಟುಂಬದ ಬದಲು ಬಾಲ್ಯದ ಗೆಳೆಯನಿಗೆ ಬಿಟ್ಟುಕೊಟ್ಟಿದ್ದಾನೆ (Viral news).

ಲಿ ಎಂಬ ವಿದ್ಯಾರ್ಥಿ ಇತ್ತೀಚೆಗೆ ತನ್ನ ಹೆಸರಿನಲ್ಲಿರುವ ಎಲ್ಲ ಆಸ್ತಿಗಳನ್ನು ಒಳಗೊಂಡ ನೋಟರೈಸ್ಡ್ ವಿಲ್ ಅನ್ನು ನೋಂದಾಯಿಸಿದ್ದಾನೆ. ಇದರಲ್ಲಿ ಲಕ್ಷಾಂತರ ಯುವಾನ್ ಮೌಲ್ಯದ ಫ್ಲಾಟ್ ಮತ್ತು ಉಳಿತಾಯವೂ ಸೇರಿದೆ. ತನ್ನ ಹೆತ್ತವರು ವಿಚ್ಛೇದನ ಪಡೆದು ನಂತರ ಮರುಮದುವೆಯಾದರು ಎಂದು ಲಿ ಹೇಳಿದ್ದಾನೆ. ಅವರು ಆಸ್ತಿಯನ್ನು ತನಗೆ ವರ್ಗಾಯಿಸಿದರೂ, ತನ್ನ ಬಾಲ್ಯದಲ್ಲಿ ಅವರು ತನ್ನೊಂದಿಗೆ ಕಡಿಮೆ ಸಮಯ ಕಳೆದರು ಎಂದು ದೂರಿದ್ದಾನೆ. ಇದು ಆತನನ್ನು ಭಾವನಾತ್ಮಕವಾಗಿ ಕಾಡಿತು ಮತ್ತು ಆಸ್ತಿಯನ್ನು ಬಾಲ್ಯದ ಗೆಳೆಯನಿಗೆ ವರ್ಗಾಯಿಸುವಂತೆ ಪ್ರೇರೇಪಿಸಿತು.

ಇನ್ನೊಂದು ಅಂಶವೂ ಆತನ ನಿರ್ಧಾರದ ಮೇಲೆ ಪ್ರಭಾವ ಬೀರಿತು. ಲಿ ತೀವ್ರ ಕ್ರೀಡಾ ಉತ್ಸಾಹಿ ಮತ್ತು ಅಪಾಯಕಾರಿ ಸಾಹಸ ಚಟುವಟಿಕೆಗಳಲ್ಲಿ ನಿಯಮಿತವಾಗಿ ಭಾಗವಹಿಸುತ್ತಾನೆ. ಹೀಗಾಗಿ ತನ್ನ ಎಸ್ಟೇಟ್‌ನ ಭವಿಷ್ಯವನ್ನು ನಿರ್ಧರಿಸಲು ಚಿಕ್ಕ ವಯಸ್ಸಿನಲ್ಲೇ ಅದರ ವಿಲ್ ಮಾಡಿಡಲು ನಿರ್ಧರಿಸಿದ್ದ ಎನ್ನಲಾಗಿದೆ.

ಜನಸಂಖ್ಯೆ ಹೆಚ್ಚಿಸಲು ಚೀನಾ ವಿಶ್ವವಿದ್ಯಾನಿಲಯದಿಂದ ವಿದ್ಯಾರ್ಥಿಗಳಿಗೆ ವಿಶೇಷ ಸೂಚನೆ; ಲವ್‌ ಮಾಡುವಂತೆ ಕರೆ

ತನಗೆ ಏನಾದರೂ ಅಪಾಯ ಸಂಭವಿಸಿದರೆ, ಅಪರಿಚಿತರೆಂದು ಪರಿಗಣಿಸುವ ತನ್ನ ಹೆತ್ತವರ ಕಡೆಯವರು ತನ್ನ ಆಸ್ತಿಯಿಂದ ಲಾಭ ಪಡೆಯಬಾರದು ಎಂಬುದು ಆತನ ಇಂಗಿತ. ಹೀಗಾಗಿ ಬಾಲ್ಯದಿಂದಲೂ ತಿಳಿದಿರುವ ಮತ್ತು ಹೆಚ್ಚು ನಂಬುವ ಬಾಲ್ಯದ ಗೆಳೆಯನಿಗೆ ಎಲ್ಲವನ್ನೂ ಬಿಟ್ಟುಕೊಡಲು ನಿರ್ಧರಿಸಿದ್ದಾನೆ.

ಚೀನಾದ ಉತ್ತರಾಧಿಕಾರ ಕಾನೂನಿನಡಿ ವ್ಯಕ್ತಿಯ ಸಂಗಾತಿ, ಮಕ್ಕಳು ಮತ್ತು ಪೋಷಕರು ಮೊದಲ ಕಾನೂನುಬದ್ಧ ಉತ್ತರಾಧಿಕಾರಿಗಳಾಗಿರುತ್ತಾರೆ. ಲಿ ಅವಿವಾಹಿತ ಮತ್ತು ಮಕ್ಕಳಿಲ್ಲದ ಕಾರಣ ಆತನ ಪೋಷಕರು ಸಾಮಾನ್ಯವಾಗಿ ಆಸ್ತಿಯ ಮೇಲೆ ಹಕ್ಕು ಹೊಂದಿರುತ್ತಾರೆ. ಜತೆಗೆ ಚೀನಿ ಕಾನೂನು ಮಾನ್ಯವಾದ ವಿಲ್ ಮೂಲಕ ಆಸ್ತಿಗಳನ್ನು ಕುಟುಂಬದ ಹೊರಗಿನ ಯಾರಿಗಾದರೂ ಬಿಟ್ಟುಕೊಡಲು ಅನುಮತಿ ನೀಡುತ್ತದೆ. ಆ ನಿಬಂಧನೆಯು ಲಿಗೆ ತನ್ನ ಬಾಲ್ಯದ ಸ್ನೇಹಿತನನ್ನು ಏಕೈಕ ಫಲಾನುಭವಿಯಾಗಿ ಆಯ್ಕೆ ಮಾಡಲು ಅನುವು ಮಾಡಿಕೊಟ್ಟಿತು.

ಲಿ ಶಾಂಘೈನಲ್ಲಿರುವ ಚೀನಾ ವಿಲ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ ವಿಲ್ ಅನ್ನು ಅಧಿಕೃತವಾಗಿ ನೋಟರೈಸ್ ಮಾಡಿ ನೋಂದಾಯಿಸಿದ್ದಾನೆ.