ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮೊಬೈಲ್ ಕದಿಯಲು ಹೋಗಿ ತಗಲಾಕೊಂಡ ಖದೀಮ! ಚಲಿಸುವ ರೈಲಿನ ಕಿಟಕಿಯ ಹೊರಗೆ 9 ಕಿಲೋ ಮೀಟರ್‌ ನೇತಾಡಿದ ವಿಡಿಯೊ ವೈರಲ್

Viral Video: ಮೊಬೈಲ್ ಕಳವು ಮಾಡಲು ಹೋಗಿದ್ದ ಖದೀಮನೊಬ್ಬ ರೆಡ್-ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ಸಂಭವಿಸಿದೆ. ಬಿಹಾರದ ಖಗರಿಯಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಚಲಿಸುವ ರೈಲಿನ ಕಿಟಕಿಯ ಮೂಲಕ ಪ್ರಯಾಣಿಕರ ಮೊಬೈಲ್ ಕದಿಯಲು ಯತ್ನಿಸಿದ್ದಾನೆ. ಆದರೆ ಪ್ರಯಾಣಿಕರು ಆತನನ್ನು ಬಿಡದೆ ಸುಮಾರು 9 ಕಿಲೋ ಮೀಟರ್ ದೂರದವರೆಗೆ ರೈಲಿನ ಕಿಟಕಿಯಿಂದ ಹೊರಗಡೆ ನೇತಾಡಿಸಿಕೊಂಡೆ ಕರೆದೊಯ್ದಿದ್ದಾರೆ.

ಚಲಿಸುವ ರೈಲಿನಲ್ಲಿ ಫೋನ್ ಕಸಿಯಲು ಹೋದ ಕಳ್ಳನ ಫಜೀತಿ ವೈರಲ್‌

ಚಲಿಸುವ ರೈಲಿನಲ್ಲಿ ಫೋನ್ ಕಸಿದುಕೊಳ್ಳಲು ಯತ್ನಿಸಿ ಸಿಕ್ಕಿಬಿದ್ದ ಕಳ್ಳ -

Profile
Pushpa Kumari Jul 12, 2026 8:36 PM

ಪಾಟ್ನಾ, ಜು.12: ಮೊಬೈಲ್ ಕಳವು ಮಾಡಲು ಹೋಗಿದ್ದ ಖದೀಮನೊಬ್ಬ ರೆಡ್-ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ಸಂಭವಿಸಿದೆ. ಬಿಹಾರದ ಖಗರಿಯಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು ಚಲಿಸುವ ರೈಲಿನ ಕಿಟಕಿಯ ಮೂಲಕ ಪ್ರಯಾಣಿಕರ ಮೊಬೈಲ್ ಕದಿಯಲು ಯತ್ನಿಸಿದ್ದಾನೆ. ಆದರೆ ಪ್ರಯಾಣಿಕರು ಆತನನ್ನು ಬಿಡದೆ ಸುಮಾರು 9 ಕಿಲೋ ಮೀಟರ್ ದೂರದವರೆಗೆ ರೈಲಿನ ಕಿಟಕಿಯ ಹೊರಗಡೆ ನೇತಾಡಿಸಿಕೊಂಡೆ ಕರೆದೊಯ್ದಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದೆ.

ಮಾನ್ಸಿ ರೈಲು ನಿಲ್ದಾಣದಿಂದ ಜನ್ಹಿತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ. ಪ್ರಯಾಣಿಕರೊಬ್ಬರ ಮೊಬೈಲ್ ಫೋನ್ ಕಸಿದುಕೊಳ್ಳಲು ಕಳ್ಳ ಕಿಟಕಿಯ ಮೂಲಕ ರೈಲಿನೊಳಗೆ ಕೈ ಹಾಕಿದ್ದಾನೆ. ಆದಾಗ್ಯೂ ಸಹ ಪ್ರಯಾಣಿಕರು ಇದನ್ನು ಗಮನಿಸಿದ್ದಾರೆ. ಆತ ತಪ್ಪಿಸಿಕೊಳ್ಳುವ ಮೊದಲು ತಕ್ಷಣ ಅವನ ತೋಳನ್ನೆ ಹಿಡಿದಿದ್ದಾರೆ. ರೈಲು ವೇಗವನ್ನೇ ಪಡೆದುಕೊಳ್ಳುತ್ತಿದ್ದಂತೆ, ಖಗಾರಿಯಾ ನಿಲ್ದಾಣ ತಲುಪುವವರೆಗೆ ಆತ ಸುಮಾರು 9 ಕಿಲೋ ಮೀಟರ್ ದೂರ‌ ಕಳ್ಳ ಕಿಟಕಿಯ ಹೊರಗೆ ನೇತಾಡಿದ್ದಾನೆ.

ವಿಡಿಯೊ ನೋಡಿ:



ಕಳ್ಳ ಮೊಬೈಲ್ ಕದಯಲು ಬರುತ್ತಿದ್ದಂತೆ ಪ್ರಯಾಣಿಕರು ಸಮಯ ಪ್ರಜ್ಞೆ ಮೆರೆದಿದ್ದಾರೆ‌. ರೈಲು ವೇಗವಾಗಿ ಹೋಗುತ್ತಿದ್ದಂತೆ ಪ್ರಯಾಣಿಕರು ಆತನ ಕೈಯನ್ನು ಬಿಟ್ಟರೆ ಆತ ಬಿದ್ದು ಸಾವನ್ನಪ್ಪುವ ಅಪಾಯವಿತ್ತು. ಆದರೆ ಗಟ್ಟಿಯಾಗಿ ಹಿಡಿದುಕೊಂಡಿರುವುದರಿಂದ ಯಾವುದೇ ಅಪಾಯವಾಗಿಲ್ಲ. ಆರೋಪಿಯು ಆರಂಭದಲ್ಲಿ ತನ್ನನ್ನು ಛೋಟು ಯಾದವ್ ಎಂದು ಹೇಳಿದ್ದು ನಂತರ ಪಂಕಜ್ ಯಾದವ್ ಎಂದು ತಿಳಿಸಿದ್ದಾನೆ.

ಬ್ಲಿಂಕ್‌ಇಟ್‌ ಉಚಿತ ಆಂಬ್ಯುಲೆನ್ಸ್‌ ಸೇವೆಯಿಂದ ಉಳಿಯಿತು ವೃದ್ಧೆಯ ಪ್ರಾಣ

ಪ್ರಯಾಣಿಕರು ಮುಂದಿನ ನಿಲ್ದಾಣ ಖಗರಿಯಾ ಬರುವವರೆಗೂ ಆತನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡೇ ಇದ್ದರು. ಅಲ್ಲಿಯವರೆಗೆ ಕಳ್ಳ ರೈಲಿನ ಕಿಟಕಿಯಿಂದ ಹೊರಗಡೆ ನೇತಾಡುತ್ತಲೇ ಪ್ರಯಾಣಿಸಿದ್ದಾನೆ​. ವೈರಲ್ ಆಗಿರುವ ವಿಡಿಯೊದಲ್ಲಿ, ಪ್ರಾಣಭಯದಿಂದ ಪ್ರಯಾಣಿಕರ ಬಳಿ ಬೇಡಿಕೊಳ್ಳುತ್ತಿರುವುದು ಕಂಡುಬಂದಿದೆ.

​ರೈಲು ಖಗರಿಯಾ ನಿಲ್ದಾಣ ತಲುಪುತ್ತಿದ್ದಂತೆ ಪ್ರಯಾಣಿಕರು ಆತನನ್ನು ರೈಲ್ವೆ ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ. ತನಿಖೆಯ ಪ್ರಕಾರ ಈತ ಹಳೆಯ ಕ್ರಿಮಿನಲ್ ಆಗಿದ್ದು, ಈ ಹಿಂದೆಯೂ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.