ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

“ಹೊಸ ಸಿಮ್ ಖರೀದಿಸಿದರೆ 1 ಲೀಟರ್ ಪೆಟ್ರೋಲ್ ಉಚಿತ”: ಮೊಬೈಲ್ ಅಂಗಡಿಯೊಂದರ ವಿನೂತನ ಆಫರ್

Mobile shop’s unique offer: ಹೊಸ ಸಿಮ್ ಖರೀದಿಸಿ, 350 ರುಪಾಯಿ ರೀಚಾರ್ಜ್ ಮಾಡಿದರೆ 1 ಲೀಟರ್ ಪೆಟ್ರೋಲ್ ಉಚಿತವಾಗಿ ನೀಡುವುದಾಗಿ ಮೊಬೈಲ್ ಅಂಗಡಿಯೊಂದರ ಮಾಲಿಕ ಘೋಷಿಸಿದ್ದಾರೆ. ಒಂದು ಲೀಟರ್ ಪೆಟ್ರೋಲ್‌ಗೆ ಪ್ರತಿಯಾಗಿ ಮೊಬೈಲ್ ಸಿಮ್‌ ಖರೀದಿಸುವಂತೆ ಗ್ರಾಹಕರಿಗೆ ಆಮಿಷವೊಡ್ಡುತ್ತಿರುವ ವಿಡಿಯೊ ವೈರಲ್‌ ಆಗಿದೆ.

ಸಿಮ್ ಖರೀದಿಗೆ 1 ಲೀಟರ್ ಪೆಟ್ರೋಲ್ ಘೋಷಿಸಿದ ಮೊಬೈಲ್ ಅಂಗಡಿ

ಸಿಮ್ ಖರೀದಿಸಿಗೆ 1 ಲೀಟರ್ ಪೆಟ್ರೋಲ್ ಉಚಿತ ಕೊಡುಗೆ ಘೋಷಿಸಿದ ಮೊಬೈಲ್‌ ಅಂಗಡಿ -

Priyanka P
Priyanka P Apr 29, 2026 9:52 PM

ಹೈದರಾಬಾದ್, ಏ. 29: ಇರಾನ್ ಯುದ್ಧದಿಂದಾಗಿ ಇಂಧನ ಪೂರೈಕೆಯಲ್ಲಿ ಅನಿಶ್ಚಿತತೆ ಉಂಟಾಗಿರುವ ನಡುವೆ, ತೆಲಂಗಾಣದ ಭದ್ರಾದ್ರಿ ಕೊಥಗುಡೆಮ್‌ನ ಮೊಬೈಲ್ ಸೇವಾ ಪೂರೈಕೆದಾರರೊಬ್ಬರು ಆಸಕ್ತಿದಾಯಕ ಮಾರ್ಕೆಟಿಂಗ್ ಗಿಮಿಕ್ ಜಾರಿಗೆ ತಂದಿದ್ದಾರೆ. ಹೊಸ ಸಿಮ್ ಖರೀದಿಸಿ, 350 ರುಪಾಯಿ ರೀಚಾರ್ಜ್ ಮಾಡಿದರೆ 1 ಲೀಟರ್ ಪೆಟ್ರೋಲ್ ಉಚಿತವಾಗಿ ನೀಡುವುದಾಗಿ ಘೋಷಿಸಿದ್ದಾರೆ (viral news).

ತೆಲಂಗಾಣದ ದಮ್ಮಪೇಟದಲ್ಲಿ ಹೊಸದಾಗಿ ತೆರೆಯಲಾದ ಭಾರ್ತಿ ಏರ್‌ಟೆಲ್ ಅಂಗಡಿಯಲ್ಲಿ ಈ ಕೊಡುಗೆ ಜಾರಿಗೆ ತರಲಾಗಿದೆ. ಒಂದು ಲೀಟರ್ ಪೆಟ್ರೋಲ್‌ಗೆ ಪ್ರತಿಯಾಗಿ ತಮ್ಮ ಮೊಬೈಲ್ ಅಂಗಡಿಯಲ್ಲಿ ಸಿಮ್‌ ಖರೀದಿಸುವಂತೆ ಗ್ರಾಹಕರಿಗೆ ಆಮಿಷವೊಡ್ಡುತ್ತಿರುವ ಅವರ ವಿಡಿಯೊ ವೈರಲ್‌ ಆಗಿದೆ.

ವೈರಲ್‌ ವಿಡಿಯೊ ಇಲ್ಲಿದೆ:



ʼʼಉತ್ತಮ ಮೊಬೈಲ್ ಸೇವೆಗಳನ್ನು ಒದಗಿಸಲು ನಾವು ದಮ್ಮಪೇಟದಲ್ಲಿ ಅಂಗಡಿ ತೆರೆದಿದ್ದೇವೆ. ಸಾರ್ವಜನಿಕರ ಗಮನ ಸೆಳೆಯಲು ನಾವು ಪೆಟ್ರೋಲ್ ಸಹ ನೀಡುತ್ತಿದ್ದೇವೆʼʼ ಎಂದು ಅಂಗಡಿಯ ಜಾಹೀರಾತಿನಲ್ಲಿ ತಿಳಿಸಲಾಗಿದೆ. ಈ ಕೊಡುಗೆಯು ಉದ್ಯಮಿಗೆ ಹೊರೆಯಾಗುವ ಸಾಧ್ಯತೆ ಇದೆ. ಆದರೆ ಮಾರ್ಕೆಟಿಂಗ್ ಗಿಮಿಕ್ ಸಾಮಾಜಿಕ ಮಾಧ್ಯಮದಲ್ಲಿ ಜನರನ್ನು ಆಕರ್ಷಿಸಿದೆ.

ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ; ಪಾಕಿಸ್ತಾನದಲ್ಲಿ ಲೀಟರ್‌ಗೆ 80 ರೂ. ಇಳಿಕೆ

ಇತ್ತೀಚೆಗೆ ತೆಲಂಗಾಣದಲ್ಲಿ ಇಂಧನ ಕೊರತೆ ಉಂಟಾಗಿದೆ ಎನ್ನುವ ವದಂತಿ ಆತಂಕಕ್ಕೆ ಕಾರಣವಾಗಿತ್ತು. ಇದೀಗ ನಾಗರಿಕ ಸರಬರಾಜು ಇಲಾಖೆ ಈ ಬಗ್ಗೆ ಸ್ಪಷ್ಟನೆ ನೀಡಿ, ರಾಜ್ಯವು ಸಾಕಷ್ಟು ಇಂಧನ ಸಂಗ್ರಹವನ್ನು ಹೊಂದಿದೆ ಎಂದು ಹೇಳಿದೆ. ರಾಜ್ಯವು ದಿನಕ್ಕೆ ಸುಮಾರು 7,443 ಕಿಲೋ ಲೀಟರ್ ಪೆಟ್ರೋಲ್ ಮತ್ತು 11,081 ಕಿಲೋ ಲೀಟರ್ ಡೀಸೆಲ್ ಪಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದರಿಂದಾಗಿ ಒಟ್ಟು ದೈನಂದಿನ ಪೂರೈಕೆ 18,500 ಕಿಲೋ ಲೀಟರ್‌ಗಿಂತ ಹೆಚ್ಚಾಗಿದೆ. ರಾಜ್ಯದಲ್ಲಿ 40-45 ದಿನಗಳ ಸಾಮಾನ್ಯ ಬೇಡಿಕೆಯನ್ನು ಪೂರೈಸಲು ಸಾಕಷ್ಟು ಸ್ಟಾಕ್ ಇದೆ ಮತ್ತು ಒಟ್ಟಾರೆ ಇಂಧನ ಒಳಹರಿವು ಸ್ಥಿರವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವರದಿಗಳನ್ನು ಅಲ್ಲಗಳೆದ ಕೇಂದ್ರ ಸರ್ಕಾರ

ಅಂದಹಾಗೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂಬ ವರದಿಗಳನ್ನು ಮೊನ್ನೆಯಷ್ಟೇ (ಏ. 23) ಕೇಂದ್ರ ಸರ್ಕಾರ ತಳ್ಳಿಹಾಕಿದ್ದು, ಇದು ಕೇವಲ ಊಹಾಪೋಹ, ಜನರನ್ನು ದಾರಿತಪ್ಪಿಸುವ ಸುಳ್ಳು ಸುದ್ದಿ ಎಂದು ಹೇಳಿದೆ. ಕಚ್ಚಾ ತೈಲ ಬೆಲೆ ಏರಿಕೆಯಿಂದಾಗಿ ಸಂಸ್ಕರಣಾಗಾರಗಳ ಮೇಲೆ ಒತ್ತಡ ಹೇರುತ್ತಿರುವುದರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಲೀಟರ್‌ಗೆ 25-28 ರು.ಗಳಷ್ಟು ಏರಿಕೆಯಾಗಬಹುದು ಎಂದು ಕೋಟಕ್ ಇನ್ಸ್ಟಿಟ್ಯೂಷನಲ್ ಈಕ್ವಿಟೀಸ್ ಎಚ್ಚರಿಕೆ ನೀಡಿರುವುದನ್ನು ಉಲ್ಲೇಖಿಸಿದ ವರದಿಗಳ ನಂತರ ಸರ್ಕಾರ ಈ ಸ್ಪಷ್ಟೀಕರಣ ನೀಡಿದೆ.

ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ಇಂಧನ ಬೆಲೆಗಳನ್ನು ಹೆಚ್ಚಿಸುವ ಯಾವುದೇ ಪ್ರಸ್ತಾಪ ಪರಿಗಣನೆಯಲ್ಲಿಲ್ಲ ಎಂದು ಹೇಳಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಬಗ್ಗೆ ಕೆಲವು ಸುದ್ದಿ ವರದಿಗಳಿವೆ. ಅಂತಹ ಯಾವುದೇ ಪ್ರಸ್ತಾಪವು ಸರ್ಕಾರದ ಪರಿಗಣನೆಯಲ್ಲಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.