ಮಾನಸಿಕ ರೋಗಿಗಳ ಸಮಗ್ರ ಆರೈಕೆ ಕಾರ್ಯಕ್ರಮ ಆರಂಭಿಸಿದ ಮಾರ್ಗ ಮೈಂಡ್ ಕೇರ್
ಮಾನಸಿಕ ಆರೋಗ್ಯ ಸೇವೆಗಳನ್ನು ಒದಗಿಸುವ ಮಾರ್ಗ ಮೈಂಡ್ ಕೇರ್ (Maarga Mind Care), ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಮಗ್ರ ಮಾನಸಿಕ ಕಾಳಜಿ ಕಾರ್ಯಕ್ರಮ (Integrative Day Care Program) ಆರಂಭಿಸಿದೆ. ಇದೊಂದು ಆಸ್ಪತ್ರೆಯಲ್ಲಿ ದಾಖಲೆಯಾಗದೇ ಹೊರರೋಗಿ ಯಾಗಿ ಚಿಕಿತ್ಸೆ ಪಡೆಯುವ / ನೀಡುವ ಮಾದರಿಯಾಗಿದೆ.
-
ಬೆಂಗಳೂರು ನಗರವಾಸಿಗಳ ಮಾನಸಿಕ ಅಸ್ವಸ್ಥತೆಯಲ್ಲಿ ಗಮನಾರ್ಹ ಏರಿಕೆಗೆ ಸೂಕ್ತ ಪರಿಹಾರ
ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಜನರ ಮಾನಸಿಕ ಆರೋಗ್ಯ ರಕ್ಷಣೆಯ ಕಾರ್ಯಕ್ರಮಗಳಿಗೆ ಗಮನಾರ್ಹ ಪ್ರಮಾಣದಲ್ಲಿ ಹಣ ವೆಚ್ಚ ಮಾಡಲಾಗುತ್ತಿದೆ. ಕಳೆದ ಎರಡು ದಶಕಗಳಲ್ಲಿ ಇಂತಹ ಕಾರ್ಯಕ್ರಮಗಳಿಗೆ ಅಂದಾಜು ₹9.62 ಲಕ್ಷ ಕೋಟಿ ಖರ್ಚು ಮಾಡಲಾಗಿದೆ. ಅಗತ್ಯ ಬೆಂಬಲದ ಕೊರತೆ, ನಿರಂತರ ಕಾಳಜಿ ಮತ್ತು ಮುಖ್ಯವಾಗಿ ಸಾಮಾನ್ಯ ಬದುಕಿಗೆ ಮರಳಲು ಸೂಕ್ತ ಸೇತುವೆ ಇಲ್ಲದಿರುವುದರಿಂದ ಮನೋವೈದ್ಯಕೀಯ ಚಿಕಿತ್ಸೆ ಪಡೆದು ಮಾನಸಿಕ ಆರೋಗ್ಯ ಕೇಂದ್ರಗಳಿಂದ ಹೊರ ಬರುವ ಬಹುಪಾಲು ರೋಗಿಗಳು ಅತಂತ್ರ ಸ್ಥಿತಿ ಎದುರಿಸುತ್ತಿದ್ದಾರೆ.
ಮಾನಸಿಕ ಆರೋಗ್ಯ ಸೇವೆಗಳನ್ನು ಒದಗಿಸುವ ಮಾರ್ಗ ಮೈಂಡ್ ಕೇರ್ (Maarga Mind Care), ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಮಗ್ರ ಮಾನಸಿಕ ಕಾಳಜಿ ಕಾರ್ಯಕ್ರಮ (Integrative Day Care Program) ಆರಂಭಿಸಿದೆ. ಇದೊಂದು ಆಸ್ಪತ್ರೆಯಲ್ಲಿ ದಾಖಲೆ ಯಾಗದೇ ಹೊರರೋಗಿಯಾಗಿ ಚಿಕಿತ್ಸೆ ಪಡೆಯುವ / ನೀಡುವ ಮಾದರಿಯಾಗಿದೆ.
ಮನೋವ್ಯಾಧಿಗೆ ಸೂಕ್ತ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದರೂ ದಿನನಿತ್ಯದ ಜೀವನವನ್ನು ಸ್ವತಂತ್ರವಾಗಿ ನಡೆಸಲು ಇನ್ನೂ ಸನ್ನದ್ಧರಾಗದವರನ್ನು ಕೈ ಹಿಡಿದು ಮುನ್ನಡೆಸಲು ಈ ಆರೈಕೆ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ.
ಇದನ್ನೂ ಓದಿ: Bangalore News: ಜನಗಣತಿಯಲ್ಲಿ ಸರ್ಕಾರಿ ನೌಕರರ ಬಳಕೆ: ಆಡಳಿತ ವ್ಯವಸ್ಥೆಯ ಮೇಲೆ ಕರಿನೆರಳು
ಭಾರತವು ಪ್ರಸ್ತುತ ಎದುರಿಸುತ್ತಿರುವ ಶೇ.70ರಿಂದ ಶೇ.92ರಷ್ಟು ಅಗಾಧ ಪ್ರಮಾಣದಲ್ಲಿ ಇರುವ ಚಿಕಿತ್ಸೆಯ ಕೊರತೆ ನಿವಾರಿಸುವ ಚಿಕಿತ್ಸಾ ಸೌಲಭ್ಯ ಇದಾಗಿದೆ. ಕೇವಲ ರೋಗ ಲಕ್ಷಣಗಳ ನಿಯಂತ್ರಣ ಮತ್ತು ಸಂಪೂರ್ಣ ಕ್ರಿಯಾಶೀಲ ಚೇತರಿಕೆಯ ನಡುವಣ ಅಂತರವು ಕುಟುಂಬಗಳನ್ನು ಅತಿಯಾಗಿ ಕಾಡುತ್ತದೆ. ಇದರಿಂದಾಗಿ ಮಾನಸಿಕ ಸಮಸ್ಯೆ ಮರುಕಳಿಸುವಿಕೆಯ ಪ್ರಮಾಣ ಹೆಚ್ಚಿನ ಮಟ್ಟದಲ್ಲಿಯೇ ಇದೆ, ದೇಶದ ವಯಸ್ಕ ಜನಸಂಖ್ಯೆಯ ಸುಮಾರು ಶೇಕಡ 15ರಷ್ಟು ಜನರಿಗೆ ಕ್ಲಿನಿಕಲ್ ಮಾನಸಿಕ ಆರೋಗ್ಯ ಚಿಕಿತ್ಸೆಯ ಅಗತ್ಯವಿರುತ್ತದೆ. ಆದರೆ, ಚಿಕಿತ್ಸೆ ದೊರೆಯದಿರುವುದರ ಪ್ರಮಾಣವು ( ಶೇಕಡ 92 ರಷ್ಟು) ಅಗಾಧ ಮಟ್ಟದಲ್ಲಿದೆ.
ರೋಗಿಗಳು ಕೆಲಸದ ಸಮಯದಲ್ಲಿ ಕ್ಷೇಮ ಸೌಲಭ್ಯಕ್ಕೆ ಹಾಜರಾಗಿ ಪ್ರತಿದಿನ ಸಂಜೆ ಮನೆಗೆ ಮರಳುವ ರೀತಿಯಲ್ಲಿ ಈ ನೆರವು ಕಾರ್ಯಕ್ರಮ ರೂಪಿಸಲಾಗಿದೆ. ದಿನದ ಹೆಚ್ಚಿನ ಸಮಯ ದಲ್ಲಿ ನೈಜ ಜಗತ್ತಿನ ಸಂಪರ್ಕಗಳನ್ನು ಇಟ್ಟುಕೊಳ್ಳುವ ಬಗೆಯಲ್ಲಿ ತೀವ್ರ ಸ್ವರೂಪದ ಮೇಲ್ವಿಚಾರಣೆಯ ಆರೈಕೆ ಪಡೆಯುವ ರೀತಿಯಲ್ಲಿ ಈ ಬೆಂಬಲ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ.
ಈ ಚಿಕಿತ್ಸಾ ವಿಧಾನದಡಿ ರೋಗಿಯನ್ನು ನೆರವಿನ ಮತ್ತು ಆರೈಕೆಯ ವಾತಾವರಣದಲ್ಲಿ ಚಿಕಿತ್ಸೆ ನೀಡಲಾಗುವುದು. ಮಾನಸಿಕ ಹಾಗೂ ದೈಹಿಕ ಚಟುವಟಿಕೆಗಳ ಕಾರ್ಯಕ್ಷಮತೆ ಯನ್ನು ಸುಧಾರಿಸಲಾಗುವುದು. ಜೊತೆಗೆ ಮಾನಸಿಕ ಚಿಕಿತ್ಸೆ, ಸಂಗೀತ, ಯೋಗ ಮತ್ತು ಕಲೆ ಸೇರಿದಂತೆ ಅಭಿವ್ಯಕ್ತಿಶೀಲ ಚಿಕಿತ್ಸೆಗಳನ್ನು ಒಳಗೊಂಡಿರಲಿದೆ.
ಈ ಕಾರ್ಯಕ್ರಮ ಆರಂಭಿಸಿರುವುದರ ಬಗ್ಗೆ ವಿವರಗಳನ್ನು ಹಂಚಿಕೊಂಡಿರುವ ಮಾರ್ಗ ಮೈಂಡ್ ಕೇರ್‌ನ ಸಂಸ್ಥಾಪಕಿ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಡಾ.ಜ್ಯೋತಿ ನೀರಜಾ ಅವರು, "ನಮ್ಮ ಇಂಟಿಗ್ರೇಟಿವ್ ಡೇ ಕೇರ್ ಕಾರ್ಯಕ್ರಮವನ್ನು ರಚನಾತ್ಮಕ, ಸಹಾನುಭೂತಿಯುಳ್ಳ ಮತ್ತು ವೈಯಕ್ತಿಕಗೊಳಿಸಿದ ಮಾನಸಿಕ ಆರೋಗ್ಯ ಸೇವೆಯನ್ನಾಗಿ ವಿನ್ಯಾಸಗೊಳಿಸಲಾಗಿದೆ. ಇದು ವ್ಯಕ್ತಿಗಳು ಹೆಚ್ಚು ಸಮಗ್ರ ರೀತಿಯಲ್ಲಿ ಚೇತರಿಸಿಕೊಳ್ಳಲು ನೆರವಾಗಲಿದೆ. ಚಿಕಿತ್ಸಕ ಆರೈಕೆ, ನಿಯಮಿತ, ಭಾವನೆಗಳ ನಿಯಂತ್ರಣ ಮತ್ತು ಸಾಮಾಜಿಕ ತೊಡಗಿಸಿಕೊಳ್ಳುವಿಕೆಯನ್ನು ಸಂಯೋಜಿಸುವ ಮೂಲಕ, ಈ ಕಾರ್ಯ ಕ್ರಮವು ಆತ್ಮ ವಿಶ್ವಾಸವನ್ನು ಪುನರ್ ನಿರ್ಮಿಸಲು, ಮಾನಸಿಕ ಸ್ಥಿರತೆ ಮರಳಿ ಪಡೆಯಲು ಮತ್ತು ಅವರ ದಿನನಿತ್ಯದ ಚಟುವಟಿಕೆಗಳಲ್ಲಿ ಆತ್ಮವಿಶ್ವಾಸದಿಂದ ಮುಂದುವರೆಯಲು ನೆರವಾಗಲಿದೆʼ ಎಂದು ಹೇಳಿದ್ದಾರೆ.
ಮಾನಸಿಕ ವೈದ್ಯರು ಮತ್ತು ಕ್ಲಿನಿಕಲ್ ಮನಶಾಸ್ತ್ರಜ್ಞರು ಈ ಆರೈಕೆ ಕಾರ್ಯಕ್ರಮದ ಮೇಲ್ವಿ ಚಾರಣೆ ಮಾಡುತ್ತಾರೆ. ನಿರ್ವಾಹಕರು , ಸಂಗೀತ, ಯೋಗ ಮತ್ತು ಅಭಿವ್ಯಕ್ತಿ ಕಲಾ ಪ್ರಕಾರಗಳ ಚಿಕಿತ್ಸಕರನ್ನು ಒಳಗೊಂಡ ಪರಿಣತರ ತಂಡ ಹಾಗೂ ನುರಿತ ನರ್ಸಿಂಗ್ ಸಿಬ್ಬಂದಿಯ ನೆರವಿನಿಂದ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತದೆ. ನಿಯಮಿತ ವೀಕ್ಷಣೆ ಮತ್ತು ಸಮನ್ವಯದ ಪರಾಮರ್ಶೆ, ಚೇತರಿಕೆ ಮುಂದುವರೆದಂತೆ ಪ್ರತಿ ರೋಗಿಯ ಅಗತ್ಯಗಳಿಗೆ ಅನುಗುಣವಾಗಿ ಆರೈಕೆಯ ವಿಧಾನವನ್ನು ಬದಲಿಸುವ ಅನುಕೂಲ ತೆಯೂ ಇದರಲ್ಲಿದೆ.
ಬೆಂಗಳೂರಿನಲ್ಲಿನ ವೇಗದ ಕೆಲಸದ ಸಂಸ್ಕೃತಿ ಮತ್ತು ತ್ವರಿತ ಬೆಳವಣಿಗೆಯು ಮಾನಸಿಕ ಆರೋಗ್ಯ ಸೇವೆಗಳ ಮೇಲೆ ಒತ್ತಡವನ್ನು ಹೆಚ್ಚಿಸುತ್ತಿವೆ. ನಗರದ ಕೆಲವು ಮಾನಸಿಕ ಸ್ವಾಸ್ಥ್ಯ ಕೇಂದ್ರಗಳಲ್ಲಿ ರೋಗಿಗಳ ಸಂಖ್ಯೆಯಲ್ಲಿ ಶೇಕಡ 10 ರಿಂದ ಶೇಕಡ 250ರಷ್ಟು ಗಮನಾರ್ಹ ಹೆಚ್ಚಳ ಕಂಡು ಬರುತ್ತಿದೆ. ಇದು ಚಿಕಿತ್ಸೆಗೆ ದೀರ್ಘ ಕಾಯುವ ಸಮಯಕ್ಕೆ ಕಾರಣ ವಾಗುತ್ತದೆ. ಹೊರರೋಗಿಗಳ ಆರೈಕೆಯ ಮೇಲೆ ಹೆಚ್ಚುವರಿ ಒತ್ತಡ ಬೀಳುತ್ತಿದೆ. ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಜನರಲ್ಲಿ ಜಾಗೃತಿ ಸುಧಾರಿಸುತ್ತಿದ್ದರೂ, ಅನೇಕ ಯುವ ವೃತ್ತಿಪರರು ಆರಂಭಿಕ ಹಂತದ ಬದಲಿಗೆ ಬಿಕ್ಕಟ್ಟಿನ ಹಂತದಲ್ಲಿ ಮಾತ್ರ ನೆರವು ಪಡೆಯಲು ಮುಂದಾಗುತ್ತಿದ್ದಾರೆ.
ಭಾರತದಲ್ಲಿ ಮಾನಸಿಕ ಆರೋಗ್ಯ ಚಿಕಿತ್ಸೆ ಸೂಕ್ತವಾಗಿ ದೊರೆಯದಿರುವುದರ ಪ್ರಮಾಣವು ಶೇಕಡ 70 ರಿಂದ 92 ರಷ್ಟಿದ್ದು, ಬೆಂಗಳೂರಿನಲ್ಲಿ ಆತಂಕ, ಖಿನ್ನತೆ ಮತ್ತು ಸಂಬಂಧಿತ ಮಾನಸಿಕ ಸಮಸ್ಯೆಗಳಲ್ಲಿ ಶೇಕಡ 74 ರಷ್ಟು ಏರಿಕೆಯಾಗಿದೆ ಎಂದು ಅಧ್ಯಯನಗಳು ತಿಳಿಸಿವೆ. ಮಾರ್ಗ ಮೈಂಡ್ ಕೇರ್‌ನ ಇಂಟಿಗ್ರೇಟಿವ್ ಡೇ ಕೇರ್ ಪ್ರೋಗ್ರಾಂ, ರೋಗಿಗಳು ತ್ವರಿತವಾಗಿ ಚೇತರಿಸಿಕೊಳ್ಳುವುದನ್ನು ಮುಂದುವರಿಸಲು ಮತ್ತು ಕುಟುಂಬಗಳ ಮೇಲಿನ ಹೊರೆಯನ್ನು ಕಡಿಮೆ ಮಾಡಲು ನೆರವಾಗಲಿದೆ.
ಮಾರ್ಗ ಮೈಂಡ್ ಕೇರ್‌ನ ಹಿರಿಯ ಸಲಹಾ ಮಾನಸಿಕ ವೈದ್ಯೆ ಮತ್ತು ಮನೋ ಚಿಕಿತ್ಸಕಿ ಡಾ. ಜ್ಯೋತಿ ಕಪೂರ್ ಅವರು ಪ್ರತಿಕ್ರಿಯಿಸಿ, ʼಚಿಕಿತ್ಸಾ ಚಟುವಟಿಕೆಗಳ ಜೊತೆಗೆ ಉದ್ದೇಶಪೂರ್ವಕ ವಿಶ್ರಾಂತಿ ಮತ್ತು ಪುನಶ್ಚೇತನದ ಚಿಕಿತ್ಸೆಯಲ್ಲಿ ಸಮತೋಲನ ಹೊಂದಿ ರುವುದು ಈ ಕಾರ್ಯಕ್ರಮದ ವಿಶೇಷತೆಯಾಗಿದೆ. ಈ ಕಾರ್ಯಕ್ರಮದ ಮೂಲಕ ರೋಗಿಗಳ ಕುಟುಂಬಗಳು ರೋಗಿಯ ಸ್ಥಿತಿಯನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಸಾಧ್ಯ ವಾಗಲಿದೆ. ಜೊತೆಗೆ ಸಂವಹನ ಮಾದರಿಗಳು ಸುಧಾರಿಸಲಿವೆ, ಗುಣಮುಖ ಪ್ರಕ್ರಿಯೆಯ ಮೇಲೆ ವಿಶ್ವಾಸ ಹೆಚ್ಚಾಗಲಿದೆ. ಸಮನ್ವಯದ ಮೇಲ್ವಿಚಾರಣೆಯಿಂದಾಗಿ ಆರೈಕೆದಾರರ ಮೇಲೆ ಇರುವ ಭಾರ ಕಡಿಮೆಯಾಗಿದೆʼ ಎಂದು ಅವರು ಹೇಳಿದ್ದಾರೆ.
ಮಾರ್ಗ ಮೈಂಡ್ ಕೇರ್‌ನ ಸಹ-ಸಂಸ್ಥಾಪಕ, ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಿಬಿಒ ಡಾ.ಅಭಿಷೇಕ್ ಹರಿಹರನ್ ಕಂಡ್ಲೂರಿ ಅವರು ಮಾತನಾಡಿ, "ಮಾನಸಿಕ ಆರೋಗ್ಯ ರಕ್ಷಣೆಗೆ ಸಂಬಂಧಿಸಿದಂತೆ ವಿಶಿಷ್ಟ ಚಿಕಿತ್ಸಾ ಕ್ರಮಗಳನ್ನು ಮೀರಿ ರೋಗಿಗಳು ಮತ್ತು ಆರೈಕೆ ನೀಡುವವರ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸುವಂತಹ ಹೆಚ್ಚು ರಚನಾತ್ಮಕ ಮಾರ್ಗಗಳನ್ನು ರೂಪಿಸುವ ಅಗತ್ಯ ಇದೆ. ನಮ್ಮ ಸಮಗ್ರ ಕಾಳಜಿ ಕಾರ್ಯಕ್ರಮವನ್ನು ವೈಯಕ್ತಿಕಗೊಳಿಸಿದ ಮತ್ತು ನಿರಂತರ ಆರೈಕೆ ಒದಗಿಸಲು ವಿನ್ಯಾಸ ಗೊಳಿಸಲಾಗಿದೆ" ಎಂದು ಹೇಳಿದ್ದಾರೆ.
ಬೆಂಗಳೂರು ಮತ್ತು ಗುರುಗ್ರಾಮ್‌ನಲ್ಲಿ ಸೌಲಭ್ಯಗಳನ್ನು ಹೊಂದಿರುವ ಮತ್ತು 2030 ರ ವೇಳೆಗೆ 25 ಕೇಂದ್ರಗಳಿಗೆ ವಿಸ್ತರಿಸಲು ಯೋಜಿಸಿರುವ ಮಾರ್ಗ ಮೈಂಡ್ ಕೇರ್, ದೇಶದಲ್ಲಿನ ಮಾನಸಿಕ ಆರೋಗ್ಯ ಮೂಲಸೌಕರ್ಯದಲ್ಲಿನ ಕೊರತೆಗಳನ್ನು ನಿವಾರಿಸಲು ಪಣತೊಟ್ಟಿದೆ.