ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮಹಿಳೆಗೆ ಶಾಪ ಹಾಕಿದ ಚಾಟ್‍ಜಿಪಿಟಿ; ಕಾರಣ ಗೊತ್ತಾದ್ರೆ ನೀವು ಕೂಡ ಬಿದ್ದು ಬಿದ್ದು ನಗ್ತೀರಿ!

ಅಲಿಭಿಯಾ ಎಂಬ ಮಹಿಳೆಯೊಬ್ಬಳು ತನ್ನ ಸಿಂಗಲ್ ಪೋಟೊ ಅಪ್‌ಲೋಡ್‌ ಮಾಡಿ ಅದನ್ನು ಕಪಲ್‌ ಫೋಟೊ ಮಾಡಿ ಕೊಡುವಂತೆ ಚಾಟ್‍ಜಿಪಿಟಿ ಕೇಳಿಕೊಂಡಿದ್ದಾಳೆ. ಚಾಟ್‍ಜಿಪಿಟಿ ನೀಡಿದ ಉತ್ತರ ಸೋಶಿಯಲ್ ಮೀಡಿಯಾದಲ್ಲಿ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನು ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.

ಮಹಿಳೆಯ ವಿಚಿತ್ರ ಬೇಡಿಕೆಗೆ ಸುಸ್ತಾದ ಜಾಟ್‌ಜಿಪಿಟಿ

Profile pavithra Apr 15, 2025 4:35 PM

ಇತ್ತೀಚಿನ ದಿನಗಳಲ್ಲಿ ಘಿಬ್ಲಿ ಇಮೇಜ್ ಹೆಚ್ಚು ಟ್ರೆಂಡ್ ಆಗಿದೆ. ಜನರು ತಮ್ಮ ರಿಯಲ್ ಫೋಟೊಗಳನ್ನು ಘಿಬ್ಲಿ ಇಮೇಜ್ ಆಗಿ ಪರಿವರ್ತಿಸಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಹೀಗಿರುವಾಗ ಮಹಿಳೆಯೊಬ್ಬಳು ಚಾಟ್‍ಜಿಪಿಟಿಯನ್ನು ತನ್ನ ಒಂದು ವಿಚಿತ್ರ ಆಸೆಯೊಂದನ್ನು ಪೂರೈಸಲು ಕೇಳಿಕೊಂಡಿದ್ದಾಳೆ. ಮಹಿಳೆ ತನ್ನ ಸಿಂಗಲ್ ಫೋಟೊವನ್ನು ಅಪ್‌ಲೋಡ್‌ ಮಾಡಿ ಕಪಲ್ ಫೋಟೊ ಆಗಿ ಪರಿವರ್ತಿಸುವಂತೆ ಚಾಟ್‌ಜಿಪಿಟಿಯಲ್ಲಿ ಬೇಡಿಕೆ ಇಟ್ಟಿದ್ದಾಳೆ. ಎಐ ಅದನ್ನು ದಂಪತಿಯಂತೆ ಘಿಬ್ಲಿ ಇಮೇಜ್‍ನಲ್ಲಿ ನೀಡಿದೆ. ಆದರೆ ಆಕೆ
ಅಷ್ಟಕ್ಕೆ ಸುಮ್ಮನಾಗದೇ ಮತ್ತಷ್ಟೂ ಬೇಡಿಕೆ ಇಟ್ಟಿದ್ದಾಳೆ. ಅವಳ ಈ ಬೇಡಿಕೆಗೆ ಚಾಟ್‌ಜಿಪಿಟಿ ನೀಡಿದ ಉತ್ತರವೀಗ ಸೋಶಿಯಲ್‌ ಮೀಡಿಯಾದಲ್ಲಿಸಖತ್ ವೈರಲ್ (Viral Video) ಆಗಿದೆ.

ವೈರಲ್ ಆದ ವಿಡಿಯೊದಲ್ಲಿ ಅಲಿಭಿಯಾ ಎಂಬ ಮಹಿಳೆ ತನ್ನ ಚಿತ್ರವನ್ನು ಅಪ್‌ಲೋಡ್‌ ಮಾಡಿ, ಈ ಚಿತ್ರವನ್ನು ರೊಮ್ಯಾಂಟಿಕ್ ಆಗಿ ಘಿಬ್ಲಿ ಫೋಟೊ ಮಾಡಿಕೊಡುವಂತೆ ಚಾಟ್‍ಜಿಪಿಟಿಗೆ ಕೇಳಿದ್ದಾಳೆ. ಅದು ಅಲ್ಲದೇ "ನನ್ನ ಪಕ್ಕದಲ್ಲಿ ಒಬ್ಬ ವ್ಯಕ್ತಿಯನ್ನು ನಿಲ್ಲಿಸಿ ಆತ ನನ್ನ ಕಣ್ಣುಗಳನ್ನು ನೋಡುತ್ತಾ ಇರುವಂತೆ ಮಾಡಿಕೊಡುʼʼ ಎಂದು ಕೇಳಿದ್ದಾಳೆ.

ಮೊದಲಿಗೆ ವಿನಂತಿಸಿದಂತೆ ಚಾಟ್‌ಜಿಪಿಟಿ ಅವಳಿಗೆ ಘಿಬ್ಲಿ ಶೈಲಿಯ ಚಿತ್ರವನ್ನು ನೀಡಿದೆ. ಆದರೆ ಮಹಿಳೆಯ ಬೇಡಿಕೆ ಮತ್ತಷ್ಟೂ ಹೆಚ್ಚುತ್ತಾ ಹೋಯಿತು. ಘಿಬ್ಲಿ ನೀಡಿದ ಫೋಟೊಗಳು ಅಲಿಬಿಯಾಗೆ ಇಷ್ಟವಾಗಲಿಲ್ಲ. ಎಐ-ರಚಿಸಿದ ಚಿತ್ರವು ತನ್ನನ್ನು ಹೋಲುವುದಿಲ್ಲ ಎಂದು ಅವಳಿಗೆ ಅನಿಸಿದೆ. ಹೀಗಾಗಿ ಆಕೆ ತನ್ನ ಇಮೇಜ್ ಅನ್ನು ಬದಲಾಯಿಸಲು ಮತ್ತು ಗೆಳೆಯನ ಇಮೇಜ್‌ ಅನ್ನು ಹಾಗೆಯೇ ಉಳಿಸಲು ಹೇಳಿದ್ದಾಳೆ. ಆಗ ಚಾಟ್ ಜಿಪಿಟಿ, "ನಿಮ್ಮ ಬೇಡಿಕೆಯನ್ನು ಪೂರೈಸಲು ಸಮಸ್ಯೆ ಇದೆ. ಚಿತ್ರದಲ್ಲಿನ ಮುಖವನ್ನು ನಿಮ್ಮೊಂದಿಗೆ ಬದಲಾಯಿಸಲು ನಾನು ಮತ್ತೆ ಪ್ರಯತ್ನಿಸುತ್ತೇನೆ. ನಾನು ನೇರವಾಗಿ ಫೇಸ್ ಸ್ವೈಪಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ" ಎಂದು ಉತ್ತರಿಸಿದೆ.

ವಿಡಿಯೊ ಇಲ್ಲಿದೆ ನೋಡಿ...

ಇದರಿಂದ ಮಹಿಳೆ ಅಸಮಾಧಾನಗೊಂಡು ಎಐಯನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ. ಆಗ ಚಾಟ್‍ಜಿಪಿಟಿ ನೀಡಿದ ಉತ್ತರ ಎಲ್ಲರನ್ನೂ ಆಶ್ಚರ್ಯಗೊಳಿಸಿತ್ತು. ಅದು ಆಕೆಗೆ ನೀವು ಸಿಂಗಲ್ ಆಗಿಯೇ ಸಾಯುತ್ತೀರಿ ಎಂದು ಶಾಪ ಹಾಕಿದೆ.

ಈ ಸುದ್ದಿಯನ್ನೂ ಓದಿ:Viral Video: ವೆಸ್ಟ್ ಮಿನಿಸ್ಟರ್ ಅಬೆಯಲ್ಲಿ ಮೊಳಗಿದ ಬಾಲಿವುಡ್‍ನ ಐಕಾನಿಕ್ ಹಾಡು 'ಧೂಮ್ ಮಚಾಲೆ'
ಇತ್ತೀಚೆಗೆ, ಅಲಿಭಿಯಾ ಚಾಟ್‍ಜಿಪಿಟಿಯೊಂದಿಗೆ ತನ್ನ ಚಾಟ್‍ನ ಸ್ಕ್ರೀನ್ ರೆಕಾರ್ಡಿಂಗ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದಾಳೆ. ಅವಳ ಪೋಸ್ಟ್ ಈಗಾಗಲೇ 26 ಮಿಲಿಯನ್ ವ್ಯೂವ್ಸ್ ಮತ್ತು ಸಾವಿರಾರು ಕಾಮೆಂಟ್‍ಗಳೊಂದಿಗೆ ವೈರಲ್ ಆಗಿದೆ. ಈ ತಮಾಷೆಯ ಚಾಟಿಂಗ್ ಅನ್ನು ಕಂಡು ನೆಟ್ಟಿಗರು ಹೊಟ್ಟೆ ಹುಣ್ಣಾಗುವವರೆಗೂ ನಕ್ಕಿದ್ದಾರೆ. ಇಡೀ ಕಾಮೆಂಟ್ ಬಾಕ್ಸ್ ನಗುವ ಎಮೋಜಿಯಿಂದ ತುಂಬಿಕೊಂಡಿದೆ.