ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಚಲಿಸುತ್ತಿದ್ದ ರೈಲಿನಿಂದ ಬಿದ್ದ ಮಗುವನ್ನು ರಕ್ಷಿಸಿದ ತಂದೆ: ಕೂದಲೆಳೆ ಅಂತರದಲ್ಲಿ ಪಾರಾದ ಕಂದಮ್ಮ ವಿಡಿಯೋ ನೋಡಿ

Viral Video: ಚಲಿಸುವ ರೈಲಿನಿಂದ ಮಗುವೊಂದು ರೈಲು ಹಳಿಗೆ ಬಿದ್ದ ಘಟನೆಯೊಂದು ನಡೆದಿದೆ. ತಂದೆ - ಮಗು ಇಬ್ಬರು ರೈಲಿನಲ್ಲಿ ಪ್ರಯಾಣಿಸಿದ್ದು ಮಗುವನ್ನು ಎತ್ತಿಕೊಂಡು ಇಳಿಯಲು ಪ್ರಯತ್ನಿ ಸುವಾಗ ಮಗು ಕೈತಪ್ಪಿ ಪ್ಲಾಟ್‌ಫಾರ್ಮ್ ಮತ್ತು ರೈಲಿನ ನಡುವಿನ ಕಿರಿದಾದ ಪ್ರದೇಶಕ್ಕೆ ಬಿದ್ದಿದೆ. ಕೂಡಲೇ ತಂದೆ ರೈಲಿನಿಂದ ಹಾರಿ ಮಗುವನ್ನು ಕೂದಲೆಳೆ ಅಂತರದಿಂದ ರಕ್ಷಣೆ ಮಾಡಿದ್ದಾರೆ.‌ ಈ ಆತಂಕಕಾರಿ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಚಲಿಸುತ್ತಿದ್ದ ರೈಲಿನಿಂದ ಬಿದ್ದ ಮಗುವನ್ನು ರಕ್ಷಿಸಿದ ತಂದೆ

ಚಲಿಸುವ ರೈಲಿನಿಂದ ಬಿದ್ದ ಮಗುವನ್ನು ರಕ್ಷಿಸಿದ ತಂದೆ -

Profile
Pushpa Kumari Apr 30, 2026 3:10 PM

ಢಾಕಾ: ಬಾಂಗ್ಲಾದೇಶದ ಭೈರಬ್ ರೈಲ್ವೆ ನಿಲ್ದಾಣದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಚಲಿಸುವ ರೈಲಿನಿಂದ ಮಗುವೊಂದು ರೈಲು ಹಳಿಗೆ ಬಿದ್ದ ಘಟನೆಯೊಂದು ನಡೆದಿದೆ. ತಂದೆ - ಮಗು ಇಬ್ಬರು ರೈಲಿನಲ್ಲಿ ಪ್ರಯಾಣಿಸಿದ್ದು ಮಗುವನ್ನು ಎತ್ತಿಕೊಂಡು ಇಳಿ ಯಲು ಪ್ರಯತ್ನಿಸುವಾಗ ಮಗು ಕೈತಪ್ಪಿ ಪ್ಲಾಟ್‌ಫಾರ್ಮ್ ಮತ್ತು ರೈಲಿನ ನಡುವಿನ ಕಿರಿದಾದ ಪ್ರದೇಶಕ್ಕೆ ಬಿದ್ದಿದೆ. ಕೂಡಲೇ ತಂದೆ ರೈಲಿನಿಂದ ಹಾರಿ ಮಗುವನ್ನು ಕೂದಲೆಳೆ ಅಂತರದಿಂದ ರಕ್ಷಣೆ ಮಾಡಿದ್ದಾರೆ.‌ ಈ ಆತಂಕಕಾರಿ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral Video) ಆಗುತ್ತಿದೆ.

ಬಾಂಗ್ಲಾದೇಶದ ಭೈರಬ್ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಚಲಿಸುವ ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವಿನ ಅಂತರಕ್ಕೆ ಬಿದ್ದ ಒಂದು ವರ್ಷದ ಮಗ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾನೆ. ತಂದೆಯೂ ತನ್ನ ಪ್ರಾಣವನ್ನು ಲೆಕ್ಕಿಸದೆ ಮಗುವನ್ನು ರಕ್ಷಣೆ ಮಾಡಲು ರೈಲಿನಿಂದ ಜಿಗಿದಿದ್ದಾರೆ.

ವಿಡಿಯೋ ನೋಡಿ:



ಈ ಘಟನೆ ಏಪ್ರಿಲ್ 28 ರಂದು ಮಧ್ಯಾಹ್ನ 3:30 ರ ಸುಮಾರಿಗೆ ಭೈರಬ್ ರೈಲು ನಿಲ್ದಾಣದಲ್ಲಿ ಢಾಕಾಗೆ ಹೋಗುವ ಟೈಟಾಸ್ ಕಮ್ಯೂಟರ್ ಟ್ರೈನ್ ನಲ್ಲಿ ನಡೆದಿದೆ. ಮಾಹಿತಿಯ ಪ್ರಕಾರ ರೈಲು ನಿಂತಿದ್ದಾಗ ಇಳಿಯಲು ಸಾಧ್ಯವಾಗದ ಈ ಕುಟುಂಬ, ರೈಲು ಚಲಿಸಲು ಪ್ರಾರಂಭಿಸಿದಾಗ ಅವಸರ ದಲ್ಲಿ ಕೆಳಗೆ ಇಳಿಯಲೆಂದು ಪ್ರಯತ್ನಿಸಿದೆ. ಮಗುವನ್ನು ಹಿಡಿದು ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಇಳಿಯಲು ಪ್ರಯತ್ನಿಸುವಾಗ ಮಗು ಕೈತಪ್ಪಿ ರೈಲು ಹಳಿಗೆ ಬಿದ್ದಿದೆ.

Viral Video: ಇನ್ಸ್ಟಾಗ್ರಾಮ್​ನಲ್ಲಿ ಗೆಳೆಯನಿಗೆ ಹುಡುಗಿಯಿಂದ ಮೆಸೇಜ್‌; ಬೆಲ್ಟ್‌ನಲ್ಲಿ ಅಟ್ಟಾಡಿಸಿ ಹೊಡೆದ ಗೆಳತಿ, ವಿಡಿಯೋ ನೋಡಿ

ತಕ್ಷಣವೇ ತಂದೆ ತನ್ನ ಒಂದು ವರ್ಷದ ಮಗನನ್ನು ರಕ್ಷಿಸಲು ಕೆಳಗೆ ಹಾರಿದ್ದಾರೆ..ರೈಲು ಸಾಗುತ್ತಿ ದ್ದರೂ ಮಗುವನ್ನು ಅಪ್ಪಿಕೊಂಡು ಪ್ಲಾಟ್‌ಫಾರ್ಮ್ ಅಂಚಿನ ಕೆಳಗೆ ಪ್ಲಾಟ್‌ಫಾರ್ಮ್ ಗೋಡೆಗೆ ಅಡ್ಡಲಾಗಿ ಮಲಗಿದ್ದಾರೆ, ಚಲಿಸುತ್ತಿದ್ದ ರೈಲಿನ ಬೋಗಿ ಅವರ ಮೇಲೆ ಹಾದುಹೋದರೂ, ತಂದೆ ಮತ್ತು ಮಗು ಇಬ್ಬರೂ ಯಾವುದೇ ಗಾಯಗಳಿಲ್ಲದೆ ಬದುಕಿ ಉಳಿದಿದ್ದಾರೆ.

ವೈರಲ್ ಆದ ವಿಡಿಯೊದಲ್ಲಿ ಈ ಭಯಾನಕ ದೃಶ್ಯವನ್ನು ಗಮನಿಸಬಹುದು. ಮಗುವು ತಂದೆಯ ಕೈಯಿಂದ ಜಾರಿ ಬಿದ್ದಿದ್ದು ರೈಲಿನ ಕಿರಿದಾದ ನಡುವೆ ಸಿಲುಕಿಕೊಂಡಿದೆ.‌ ತಂದೆಯೂ ಈ ಸಮಯ ದಲ್ಲಿ ಸಮಯ ಪ್ರಜ್ಞೆ ಮೆರೆದಿದ್ದಾರೆ. ರೈಲು ಸಂಪೂರ್ಣ ವಾಗಿ ಹಾದುಹೋದ ನಂತರ, ಜನರು ಅವರ ರಕ್ಷಣೆಗೆ ಧಾವಿಸಿದ್ದಾರೆ. ಮಗುವಿನ ತಾಯಿ ಕೂಡ ಹಳಿಗಳ ಮೇಲೆ ಇಳಿದು, ತನ್ನ ಮಗನನ್ನು ಅಪ್ಪಿಕೊಂಡು, ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು ಧೈರ್ಯವಂತ ತಂದೆ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ರೈಲಿನಲ್ಲಿ ಇಳಿಯುವ ಸ್ಥಳ ಬಂದರೂ ಇಂತಹ ಸಾಹಸಮಯ ಕೆಲಸ ಮಾಡಬಾರದು ಎಂದು ಸಂದೇಶ ನೀಡಿದ್ದಾರೆ.