ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Viral Video: ಕತ್ತೆಗೇನ್‌ ಗೊತ್ತು ಜಿಬ್ರಾ ಗತ್ತು? ಚೀನಾದ ಝೂನ ಈ ವಿಡಿಯೊ ಭಾರೀ ವೈರಲ್‌

ಪ್ರವಾಸಿಗರನ್ನು ಆಕರ್ಷಿಸಲು ಚೀನಾದ ಮೃಗಾಲಯದ ಅಧಿಕಾರಿಗಳು ಮೃಗಾಲಯದಲ್ಲಿರುವ ಕತ್ತೆಗಳಿಗೆ ಜೀಬ್ರಾದಂತೆ ಬಣ್ಣ ಹಚ್ಚಿದ್ದಾರೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಚೀನಾದ ಮೃಗಾಲಯಗಳ ಈ ಕೆಲಸವನ್ನು ನೆಟ್ಟಿಗರು ಖಂಡಿಸಿದ್ದಾರೆ.

ಕತ್ತೆಗೆ ಜಿಬ್ರಾ ವೇಷ ಹಾಕಿದ ಚೀನಿ ಮೃಗಾಲಯ!

Profile pavithra Feb 18, 2025 10:17 AM

ಬೀಜಿಂಗ್:‌ ಇತ್ತೀಚೆಗೆಷ್ಟೇ ನಾಯಿಗಳಿಗೆ ಪಾಂಡಗಳಂತೆ ಬಣ್ಣ ಬಡಿದು ಚೀನಿ ಮೃಗಾಲಯ ಸಾಕಷ್ಟು ಟೀಕೆಗಳನ್ನು ಎದುರಿಸಿತ್ತು. ಈಗ ಮತ್ತದೇ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ಈಗ ಕತ್ತೆಗೆ ಜಿಬ್ರಾದಂತೆ ಬಣ್ಣ ಬಳಿದಿದ್ದಾರೆ. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌(Viral Video) ಆಗಿದೆ. ಜೀಬ್ರಾಗಳನ್ನು ನೋಡಲು ಮೃಗಾಲಯಕ್ಕೆ ಭೇಟಿ ನೀಡಿದ ಜನರು ಮಾರುವೇಷದಲ್ಲಿದ್ದ ಕತ್ತೆಯನ್ನು ನೋಡಿ ಖುಷಿಪಟ್ಟಿದ್ದಾರೆ. ವರದಿ ಪ್ರಕಾರ, ಶಾಂಡೊಂಗ್ ಪ್ರಾಂತ್ಯದ ಜಿಬೊ ಸಿಟಿ ಅಮ್ಯೂಸ್ಮೆಂಟ್ ಪಾರ್ಕ್‌ನಲ್ಲಿ ಕತ್ತೆಗೆ ಜೀಬ್ರಾದಂತೆ ಬಣ್ಣ ಬಳಿಯಲಾಗಿದೆ. ಪ್ರವಾಸಿಗರನ್ನು ಆಕರ್ಷಿಸುವುದಕ್ಕಾಗಿ ಮೃಗಾಲಯದ ಅಧಿಕಾರಿಗಳು ಈ ಕೆಲಸ ಮಾಡಿದ್ದಾರೆ ಎಂಬುದನ್ನು ಒಪ್ಪಿಕೊಂಡಿದ್ದಾರಂತೆ.



ಜೀಬ್ರಾದಂತೆ ಕಾಣುತ್ತಿದ್ದ ಕತ್ತೆಯ ವಿಡಿಯೊಗಳು ಸೋಶಿಯಲ್ ಮೀಡಿಯಾ ಪ್ಲಾಟ್‍ಫಾರ್ಮ್‍ಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಪ್ರಾಣಿಗಳಿಗೆ ಬಣ್ಣ ಹಚ್ಚುವ ಮತ್ತು ಅವುಗಳನ್ನು ಬೇರೆ ಪ್ರಾಣಿಗಳ ಹಾಗೇ ಕಾಣುವಂತೆ ಮಾಡಿದ ಚೀನಾದ ಮೃಗಾಲಯಗಳ ಈ ಕೆಲಸವನ್ನು ನೆಟ್ಟಿಗರು ಖಂಡಿಸಿದ್ದಾರೆ. ಈ ಹಿಂದೆ ಈ ಮೃಗಾಲಯದ ಅಧಿಕಾರಿಗಳು ನಾಯಿಗಳಿಗೆ ಬಣ್ಣ ಹಚ್ಚಿ ಪಾಂಡಗಳ ಹಾಗೇ ಕಾಣುವಂತೆ ಮಾಡಿದ್ದರು. ಇದು ಹೆಚ್ಚು ಪ್ರವಾಸಿಗರನ್ನು ಮೃಗಾಲಯಕ್ಕೆ ಆಕರ್ಷಿಸಿತ್ತು. ಈ ಟ್ರಿಕ್ ಯಶಸ್ವಿಯಾದ ನಂತರ ಮೃಗಾಲಯವು ಈ ಗಿಮಿಕ್ ಅನ್ನು ಮಾಡಿದೆ ಎಂದು ಚೀನಾದ ಮಾಧ್ಯಮಗಳು ತಿಳಿಸಿವೆ. "ಮಾಲೀಕರು ಇದನ್ನು ಕೇವಲ ಮೋಜಿಗಾಗಿ ಮಾಡಿದ್ದಾರೆ" ಎಂದು ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ

2018ರಲ್ಲಿ ಈಜಿಪ್ಟ್‌ನ ಕೈರೋದಲ್ಲಿ ಇದೇ ರೀತಿಯ ಘಟನೆ ವರದಿಯಾಗಿತ್ತು. ಈ ಪ್ರದೇಶದ ಮೃಗಾಲಯವು ಸ್ಥಳೀಯ ಕತ್ತೆಯ ಮೇಲೆ ಜೀಬ್ರಾ ಪಟ್ಟೆಗಳನ್ನು ಚಿತ್ರಿಸಿತ್ತು. ಆದರೆ ಮೃಗಾಲಯದ ನಿರ್ದೇಶಕರು ಪ್ರಾಣಿ ನಿಜವಾದದ್ದು ಎಂದು ವಾದ ಮಾಡಿದ್ದಾರೆ. ಯುವಕನೊಬ್ಬ ಜೀಬ್ರಾ ಎಂದು ಕರೆಯಲ್ಪಡುವ ಪ್ರಾಣಿಯ ಫೋಟೋವನ್ನು ಫೇಸ್ಬುಕ್‍ನಲ್ಲಿ ಪೋಸ್ಟ್ ಮಾಡಿ ರಹಸ್ಯಗಳನ್ನು ಬಹಿರಂಗಪಡಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.

ಈ ಸುದ್ದಿಯನ್ನೂ ಓದಿ: Viral Video: ಮೃಗಾಲಯದಲ್ಲಿ ಬಾಲಕನ ಅಂಗಿ ಹಿಡಿದೆಳೆದಾಡಿದ ಹುಲಿ; ಅಮ್ಮ ಬೈತಾಳೆ ಎಂದು ಗೋಗೆರೆದ ಹುಡುಗ

ಇತ್ತೀಚೆಗೆ ಮೃಗಾಲಯಕ್ಕೆ ಹೋಗಿದ್ದ ಪುಟ್ಟ ಬಾಲಕನ ಅಂಗಿಯನ್ನು ಹುಲಿಯೊಂದು ಹಿಡಿದುಕೊಂಡು ಎಳೆದಾಡಿದ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ. ಈ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈರಲ್ ಆದ ವಿಡಿಯೊದಲ್ಲಿ ಪಂಜರದಲ್ಲಿರುವ ಹುಲಿ ತನ್ನ ಬಳಿ ಬಂದ ಬಾಲಕನ ಮೇಲೆ ದಾಳಿ ಮಾಡಲು ಮುಂದಾಗಿ ಆತನ ಅಂಗಿಯನ್ನು ಹಲ್ಲಿನಿಂದ ಕಚ್ಚಿ ಗಟ್ಟಿಯಾಗಿ ಹಿಡಿದುಕೊಂಡು ಎಳೆದಾಡಿರುವುದು ಕಂಡು ಬಂದಿದೆ. ಬಾಲಕ ಅಂಗಿಯನ್ನು ಬಿಡುವಂತೆ ಹುಲಿಯಲ್ಲಿ ಪರಿಪರಿಯಾಗಿ ಬೇಡಿಕೊಂಡಿದ್ದಾನೆ. ತಮಾಷೆ ಎಂದರೆ ಆತ “ಅಂಗಿ ಹರಿದರೆ ತಾಯಿ ಬೈಯುತ್ತಾಳೆ ದಯವಿಟ್ಟು ಅಂಗಿಯನ್ನು ಬಿಡು” ಎಂದು ಹುಲಿಯ ಬಳಿ ವಿನಂತಿಸುತ್ತಾ ಕಿರುಚಾಡಿದ್ದಾನೆ.

ಹುಲಿಯ ಬಳಿ ಅಂಗಿ ಬಿಡು ಅಂಗಿ ಹರಿದು ಹೋದರೆ ಅಮ್ಮ ಬೈಯುತ್ತಾಳೆ ಎಂದು ಬಾಲಕ ಹೇಳಿದ್ದು ನೋಡಿ ನೆಟ್ಟಿಗರು ಶಾಕ್‌ ಆಗಿದ್ದಾರೆ. ಮಕ್ಕಳು ಹುಲಿಗಿಂತ ತಾಯಿಗೆ ಹೆಚ್ಚು ಹೆದರುತ್ತಾರೆ ಎಂಬುದಕ್ಕೆ ಇದೊಳ್ಳೆ ಉದಾಹರಣೆ ಎಂದು ನೆಟ್ಟಿಗರು ಹೇಳಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.