ಕೇವಲ ಒಂದು ಪಠ್ಯ ಪುಸ್ತಕಕ್ಕೆ 1,035 ರೂ; ಖಾಸಗಿ ಶಾಲೆಯ ದುಬಾರಿ ಶುಲ್ಕಕ್ಕೆ ಪೋಷಕರು ಗರಂ
Viral Video: ಶಿಕ್ಷಣ ವೆಚ್ಚಗಳು ಕೂಡ ದಿನೇ ದಿನೇ ದುಬಾರಿಯಾಗುತ್ತಿದೆ. ಇದೀಗ 5ನೇ ತರಗತಿ ವಿದ್ಯಾರ್ಥಿಯ ಇಂಗ್ಲೀಷ್ ಪುಸ್ತಕಕ್ಕೇ ದುಬಾರಿ ಮೊತ್ತ ವಿಧಿಸಿರುವ ಬಗ್ಗೆ ಪೋಷಕರೇ ಶಾಕ್ ಆಗಿದ್ದಾರೆ. ಇಂಗ್ಲಿಷ್ ಪಠ್ಯಪುಸ್ತಕದ ಬೆಲೆ 1,035 ರೂ. ಎಂದು ವ್ಯಕ್ತಿ ಯೊಬ್ಬರು ಬಹಿರಂಗಪಡಿಸಿದ ನಂತರ ಪೋಷಕರಲ್ಲಿ ವ್ಯಾಪಕ ಕಳವಳವನ್ನು ಹುಟ್ಟುಹಾಕಿದೆ..
5ನೇ ತರಗತಿ ಇಂಗ್ಲಿಷ್ ಪಠ್ಯಪುಸ್ತಕದ ಬೆಲೆ 1,035 ರೂಪಾಯಿ -
ಲಕ್ನೋ,ಮಾ. 26: ಇಂದು ಶಿಕ್ಷಣ ಎಂಬುವುದು ಪ್ರತಿಯೊಬ್ಬರಿಗೂ ಅಗತ್ಯವಾಗಿದೆ. ಆದರೆ ಇಂದು ಖಾಸಗಿ ಶಾಲೆಯತ್ತವೇ ಪೋಷಕರು (Private Schools) ಹೆಚ್ಚಿನ ಆಸಕ್ತಿ ವಹಿಸುತ್ತಿದ್ದು ಶಿಕ್ಷಣ ವೆಚ್ಚಗಳು ಕೂಡ ದಿನೇ ದಿನೇ ದುಬಾರಿಯಾಗುತ್ತಿದೆ. ಇದೀಗ 5ನೇ ತರಗತಿ ವಿದ್ಯಾರ್ಥಿಯ ಇಂಗ್ಲೀಷ್ ಪುಸ್ತಕಕ್ಕೇ ದುಬಾರಿ ಮೊತ್ತ ವಿಧಿಸಿರುವ ಬಗ್ಗೆ ಪೋಷಕರೇ ಶಾಕ್ ಆಗಿದ್ದಾರೆ. ಇಂಗ್ಲಿಷ್ ಪಠ್ಯಪುಸ್ತಕದ ಬೆಲೆ 1,035 ರೂ. ಎಂದು ವ್ಯಕ್ತಿ ಯೊಬ್ಬರು ಬಹಿರಂಗಪಡಿಸಿದ ನಂತರ ಪೋಷಕರಲ್ಲಿ ವ್ಯಾಪಕ ಕಳವಳವನ್ನು ಹುಟ್ಟುಹಾಕಿದೆ.
ಇಂದು ಶಿಕ್ಷಣ ಕ್ಷೇತ್ರ ಅನ್ನುವುದು ದಿನೇ ದಿನೇ ದುಬಾರಿಯಾಗುತ್ತಿದೆ. ಹೆಚ್ಚುತ್ತಿರುವ ಶಾಲಾ ಶುಲ್ಕದ ಮೊತ್ತ, ಸಮ ವಸ್ತ್ರಗಳು ಮತ್ತು ಪುಸ್ತಕದ ವೆಚ್ಚಗಳು ಮಧ್ಯಮ ವರ್ಗದ ಕುಟುಂಬಗಳಿಗೆ ಭರಿಸುವುದು ಕಷ್ಟವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವೈರಲ್ ವೀಡಿಯೊದಲ್ಲಿ, ಒಬ್ಬ ವ್ಯಕ್ತಿ ಪಠ್ಯಪುಸ್ತಕವನ್ನು ಹಿಡಿದುಕೊಂಡು ವಿವರಿಸುತ್ತಿದ್ದಾನೆ.
ವಿಡಿಯೋ ನೋಡಿ:
Hello @dpradhanbjp ji,
— Divya Gandotra Tandon (@divya_gandotra) March 25, 2026
Please bring some regulation to school textbook pricing as well.
What exactly is being taught that a single book costs ₹1000?
This is not education anymore, it’s becoming a financial burden on families. pic.twitter.com/M1v2weghLm
ಸಿಟಿ ಮಾಂಟೆಸ್ಸರಿ ಶಾಲೆಯ 5ನೇ ತರಗತಿಯ ಬರ್ಲಿಂಗ್ಟನ್ ಇಂಗ್ಲಿಷ್ ಸರಣಿಯ ಕೇವಲ ಒಂದು ಪುಸ್ತಕಕ್ಕೆ 1035ರುಪಾಯಿ. ಸಣ್ಣ ಮಕ್ಕಳ ಪುಸ್ತಕಕ್ಕೆ ಇಷ್ಟು ಹಣ ವಸೂಲಿ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ. ಕೇವಲ 50 ರೂಪಾಯಿ ಪುಸ್ತಕಕ್ಕೆ ಇಷ್ಟೊಂದು ಹಣವೇ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
Viral News: ಅತ್ತೆಯನ್ನು ನೋಡಿಕೊಳ್ಳಲು ಕೆಲಸ ಬಿಡಲು ನಿರಾಕರಿಸಿದ ಪತ್ನಿಗೆ ವಿಚ್ಛೇದನ ನೀಡಿದ ಪತಿ!
ಹಿಂದಿಯಲ್ಲಿ ಮಾತನಾಡುತ್ತಾ, ಅವರು ಬೆಲೆಯನ್ನು ಪ್ರಶ್ನಿಸುತ್ತಾ, "ಇದು ಸಿಟಿ ಮಾಂಟೆಸ್ಸರಿ ಶಾಲೆಯ ಇಂಗ್ಲಿಷ್ ಪುಸ್ತಕ. ಇದರ ಹೆಸರು ಬರ್ಲಿಂಗ್ಟನ್ ಇಂಗ್ಲಿಷ್ ಇದರ ಬೆಲೆ ಎಷ್ಟು? ಕೇವಲ ಒಂದು ಪುಸ್ತಕ. 1035 ರೂ. ಇದು ಶಿಕ್ಷಣ ಅಲ್ಲ ವಸೂಲಿ ಮಾಡುವ ಚಮತ್ಕಾರ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಹೆಚ್ಚುತ್ತಿರುವ ವೆಚ್ಚಗಳು ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿವೆ ಎಂದು ಬಳಕೆದಾರರೊಬ್ಬರು ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ.
ಈ ವೀಡಿಯೊ ಆನ್‌ಲೈನ್‌ನಲ್ಲಿ ವ್ಯಾಪಕ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಅನೇಕ ಬಳಕೆದಾರರು ಶಾಲಾ ಪುಸ್ತಕಗಳ ಬೆಲೆಯನ್ನು ಪ್ರಶ್ನಿಸಿದ್ದಾರೆ. ಒಬ್ಬ ಬಳಕೆದಾರರು ಪಠ್ಯಪುಸ್ತಕ ಬೆಲೆಯನ್ನು ಕಡಿಮೆಮಾಡುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು.