ಗೋವಾದಲ್ಲಿ ಬೆಂಗಳೂರು ಪ್ರವಾಸಿಗರ ಜೊತೆ ಅಮಾನುಷ ವರ್ತನೆ: ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿದ ಹೊಟೆಲ್ ಸಿಬ್ಬಂದಿ
Viral Video: ಗೋವಾದ ಪ್ರಸಿದ್ಧ ಬೀಚ್ ಕ್ಯಾಲಂಗುಟ್ ನ ಕಡಲ ತೀರದ ಹೋಟೆಲ್ ಸಿಬ್ಬಂದಿ ಯೊರ್ವರು ಹಲ್ಲೆ ಎಸಗಿದ್ದಾರೆ. ಸನ್ ಬೆಡ್ ಗಳ ಮೇಲೆ ಕುಳಿತ ವಿಚಾರವಾಗಿ ಉಂಟಾದ ಸಣ್ಣ ಜಗಳವು ವಿಕೋಪಕ್ಕೆ ಕಾರಣವಾಗಿದೆ. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ..
ಗೋವಾದಲ್ಲಿ ಬೆಂಗಳೂರು ಪ್ರವಾಸಿಗರ ಮೇಲೆ ಹಲ್ಲೆ -
ಪಣಜಿ,ಮಾ.25: ಗೋವಾದಲ್ಲಿ ಬೆಂಗಳೂರು ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ ಆಘಾತಕಾರಿ ಘಟನೆವೊಂದು ಬೆಳಕಿಗೆ ಬಂದಿದೆ. ಗೋವಾದ ಪ್ರಸಿದ್ಧ ಬೀಚ್ ಕ್ಯಾಲಂಗುಟ್‌ನ ಕಡಲ ತೀರದ ಹೋಟೆಲ್ ಸಿಬ್ಬಂದಿಯೊರ್ವರು ಹಲ್ಲೆ ಎಸಗಿದ್ದಾರೆ. ಸನ್ ಬೆಡ್ ಗಳ ಮೇಲೆ ಕುಳಿತ ವಿಚಾರವಾಗಿ ಉಂಟಾದ ಸಣ್ಣ ಜಗಳವು ವಿಕೋಪಕ್ಕೆ ಕಾರಣವಾಗಿದೆ. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗಿದೆ.
ಸಮವಸ್ತ್ರ ಧರಿಸಿದ ಸಿಬ್ಬಂದಿಗಳು ಪೈಪ್‌ಗಳಂತೆ ಕಾಣುವ ವಸ್ತುಗಳಿಂದ ಪ್ರವಾಸಿಯ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಕಾಣಬಹುದು. ಪ್ರವಾಸಿಗರು ಈಜಲು ಹೋದ ನಂತರ ಬೀಚ್ ನ ಹಾಸಿಗೆಯ ಮೇಲೆ ಕುಳಿತಿದ್ದರು. ಇದು ಸಿಬ್ಬಂದಿಯೊಂದಿಗೆ ವಾಗ್ವಾದಕ್ಕೆ ಕಾರಣವಾಯಿತು.
ವಿಡಿಯೋ ನೋಡಿ:
Viral Video of a #Bengaluru tourist assaulted by shack staff for sitting on sun beds at Calangute beach #Goa pic.twitter.com/U2Wnnh6RWI
— Siraj Noorani (@sirajnoorani) March 25, 2026
ಬೆಂಗಳೂರಿನಿಂದ ಬಂದಿದ್ದ ಪ್ರವಾಸಿಗರು ಸಮುದ್ರದಲ್ಲಿ ಈಜಾಡಿ ನಂತರ ಸನ್ ಬೆಡ್ ಮೇಲೆ ಕುಳಿತಿದ್ದರು. ಆಗ ಅಲ್ಲಿದ್ದ ಸಿಬ್ಬಂದಿ ಮತ್ತು ಪ್ರವಾಸಿಗರ ಮೇಲೆ ಜಗಳವಾಗಿದ್ದು ವಿಕೋಪಕ್ಕೆ ತಿರುಗಿದೆ. ಸುಮಾರು 15 ರಿಂದ 20 ಮಂದಿ ಸಿಬ್ಬಂದಿಗಳು ಕಬ್ಬಿಣದ ರಾಡ್ ಹಾಗೂ ಪೈಪ್‌ಗಳಿಂದ ಪ್ರವಾಸಿಗರ ಮೇಲೆ ಮುಗಿಬಿದ್ದಿದ್ದಾರೆ. ಬಳಿಕ ಪೊಲೀಸರು ಶ್ಯಾಕ್ ಸಿಬ್ಬಂದಿಯನ್ನು ಬಂಧಿಸಿದ್ದು ತನಿಖೆ ಆರಂಭಿಸಿದ್ದಾರೆ.
ಈ ದಾಳಿಯ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಿಬ್ಬಂದಿಗಳು ಪ್ರವಾಸಿಗನ ಮೇಲೆ ಪೈಪ್‌ಗಳನ್ನು ಎಸೆಯುತ್ತಿರುವುದು ಕಂಡು ಬಂದಿದೆ. ಈ ದಾಳಿಯಿಂದ ಪ್ರವಾಸಿಗರಿಗೆ ಗಾಯವಾಗಿದೆ. ಈ ಘಟನೆಗೆ ಪ್ರತಿಕ್ರಿಯೆ ನೀಡಿದ ಗೋವಾದ ಪ್ರವಾಸೋದ್ಯಮ ಸಚಿವ ರೋಹನ್ ಖೌಂಟೆ ಸರಿಯಾದ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದಾರೆ.