ಹೈದರಾಬಾದ್ ವಿಮಾನ ನಿಲ್ದಾಣದ ಆಹಾರ ಮಳಿಗೆಯ ಜೀರಾ ರೈಸ್‌ನಲ್ಲಿ ಜಿರಳೆ ಪತ್ತೆ
Viral Video: ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಳಗಿನ ಆಹಾರ ಮಳಿಗೆಯಲ್ಲಿ ಜಿರಳೆ ಪತ್ತೆಯಾಗಿರುವ ದೃಶ್ಯ ಕಂಡು ಬಂದಿದೆ. ಸದ್ಯ ಈ ಘಟನೆಯೂ ಆಹಾರ ಸುರಕ್ಷತಾ ಮಾನದಂಡಗಳ ಬಗ್ಗೆ ಹೊಸ ಕಳವಳಗಳನ್ನು ಹುಟ್ಟುಹಾಕಿದೆ. ವಿಮಾನ ನಿಲ್ದಾಣದ ಒಳಗಿರುವ ಪ್ರಸಿದ್ಧ 'ನಿಲೋಫರ್' ಹೋಟೆಲ್ ಒಂದರಲ್ಲಿ ಜೀರಾ ರೈಸ್ ಮೇಲೆ ಜಿರಳೆ ಹರಿದಾಡಿದ್ದು ಈ ವಿಡಿಯೊ ಭಾರಿ ವೈರಲ್ ಆಗಿದ್ದು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಸಾಂದರ್ಭಿಕ ಚಿತ್ರ. -
ಹೈದರಾಬಾದ್, ಡಿ. 5: ಇತ್ತೀಚೆಗೆ ಅನೇಕ ಬೇಕರಿ, ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಕಳಪೆ ಆಹಾರಗಳು ಪತ್ತೆಯಾಗುತ್ತಿದೆ. ಈಗಾಗಲೇ ನೈರ್ಮಲ್ಯ ಕಾಯ್ದುಕೊಳ್ಳದ ಆಹಾರ ಸಂಸ್ಥೆಗಳಿಗೆ ದಂಡ ವಿಧಿಸಿದರೂ ಇದಕ್ಕೆ ಕಡಿವಾಣ ಬಿದ್ದಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಳಗಿನ ಆಹಾರ ಮಳಿಗೆಯಲ್ಲಿ ಜಿರಳೆ ಪತ್ತೆಯಾಗಿರುವ ದೃಶ್ಯ ಕಂಡು ಬಂದಿದೆ. ಸದ್ಯ ಈ ಘಟನೆಯೂ ಆಹಾರ ಸುರಕ್ಷತಾ ಮಾನದಂಡಗಳ ಬಗ್ಗೆ ಹೊಸ ಕಳವಳಗಳನ್ನು ಹುಟ್ಟುಹಾಕಿದೆ. ವಿಮಾನ ನಿಲ್ದಾಣದ ಒಳಗಿರುವ ಪ್ರಸಿದ್ಧ 'ನಿಲೋಫರ್' ಹೋಟೆಲ್ ಒಂದರಲ್ಲಿ ಜೀರಾ ರೈಸ್ ಮೇಲೆ ಜಿರಳೆ ಹರಿದಾಡಿದ್ದು, ಈ ವಿಡಿಯೊ ಭಾರಿ ವೈರಲ್ ಆಗಿದ್ದು(Viral Video) ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ವಿಮಾನ ನಿಲ್ದಾಣದ ಒಳಗೆ ಜನಸಂದಣಿ ಇರುವ ಪ್ರದೇಶ ಹಾಗಾಗಿ ಕಟ್ಟುನಿಟ್ಟಿನ ತಪಾಸಣೆಗಳು ಜಾರಿಯಲ್ಲಿವೆ ಎಂದು ಹಲವರು ನಂಬುತ್ತಾರೆ. ಆದರೆ ಇಂತಹ ಪ್ರತಿಷ್ಠಿತ ಹೋಟೆಲ್‌ನಲ್ಲಿ ನೈರ್ಮಲ್ಯ ಕಾಪಾಡದೇ ಇರುವುದು ಗಂಭೀರ ಕಳವಳ ಉಂಟು ಮಾಡಿದೆ. ಜನವರಿ 4ರಂದು ಪ್ರಯಾಣಿಕರೊಬ್ಬರು ವಿಮಾನ ನಿಲ್ದಾಣದಲ್ಲಿ ಆಹಾರ ಸೇವಿಸಲು ಹೋದಾಗ ಈ ಅಸಹ್ಯದ ದೃಶ್ಯ ಕಂಡುಬಂದಿದೆ. ಕೇವಲ ಒಂದು ಪ್ಲೇಟ್ ಜೀರಾ ರೈಸ್‌ಗೆ ಇಲ್ಲಿ 480 ರುಪಾಯಿ ಪಡೆಯುವ ಈ ಮಳಿಗೆಯಲ್ಲಿ ಸ್ವಚ್ಛತೆ ಕಾಪಾಡದೇ ಇಲ್ಲದಿರುವುದನ್ನು ನೋಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಡಿಯೊ ನೋಡಿ:
ವಿಡಿಯೊದಲ್ಲಿ ಜೀರಾ ರೈಸ್ ಮೇಲೆ ಜಿರಳೆ ಹರಿದಾಡುತ್ತಿರುವ ದೃಶ್ಯ ಕಾಣಬಹುದು. ಈ ಘಟನೆಯು ಶುಚಿತ್ವ ಕ್ರಮಗಳು ಪೋಸ್ಟರ್‌ಗಳಲ್ಲಿ ಮಾತ್ರ ಅಸ್ತಿತ್ವದಲ್ಲಿವೆಯೇ ಅಥವಾ ನಿಜವಾಗಿಯೂ ಸ್ವಚ್ಛತೆ ಕಾಪಾಡುತ್ತಿದ್ದಾರೆಯೋ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನಾವು ಇಷ್ಟೊಂದು ದುಬಾರಿ ಹಣ ನೀಡುವುದು ಜಿರಳೆ ಮಿಶ್ರಿತ ಆಹಾರಕ್ಕಾ? ಎಂದು ಪ್ರಯಾಣಿಕರೊಬ್ಬರು ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ವಿಮಾನ ನಿಲ್ದಾಣಗಳಲ್ಲಿ ಆಹಾರದ ಬೆಲೆ ದುಪ್ಪಟ್ಟು ಹೆಚ್ಚಿರುತ್ತದೆ. ಆದರೆ ಶುಚಿತ್ವ ಮಾತ್ರ ಕಳಪೆಯಾಗಿರುವುದು ಕಂಡು ಜನರೇ ಶಾಕ್ ಆಗಿದ್ದಾರೆ.
ಆಟೋ ರಿಕ್ಷಾವನ್ನೇ ಓಯೋ ರೂಮ್ ಮಾಡಿಕೊಂಡ ಜೋಡಿ
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕೂಡ ನಾನಾ ಬಗೆಯ ಕಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು ಈ ಬಗ್ಗೆ ಅಧಿಕಾರಿಗಳು ಕಟ್ಟು ನಿಟ್ಟಿನ ತಪಾಸಣೆ ನಡೆಸಬೇಕು ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ನಾವು ಪಾವತಿ ಮಾಡುವ ಮೊತ್ತ ಹೆಚ್ಚಾದಂತೆ ಸ್ವಚ್ಛತೆ ಪಾಲನೆ ಮಾಡುವುದು ಕಡಿಮೆಯಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಸದ್ಯ ತೆಲಂಗಾಣದ ಆಹಾರ ಸುರಕ್ಷತಾ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಶೀಘ್ರದಲ್ಲೇ ಆಹಾರ ಮಳಿಗೆಗೆ ತೆರಳಿ ನೈರ್ಮಲ್ಯ ತಪಾಸಣೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.