ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಪ್ರಜ್ಞಾಹೀನ ಸ್ಥಿತಿಯಲ್ಲಿ ಫೇಮಸ್‌ ಕಂಟೆಂಟ್ ಕ್ರಿಯೇಟರ್ ಪತ್ತೆ; ಅಷ್ಟಕ್ಕೂ ಆಗಿದ್ದೇನು?

29 ವರ್ಷದ ಕಂಟೆಂಟ್ ಕ್ರಿಯೇಟರ್ ಆಶ್ಲೆ ಸುರ್ಕೊಂಬೆ ಮಾರ್ಚ್ 24 ರಂದು ಸಿಯೋಲ್ ಅಪಾರ್ಟ್‌ಮೆಂಟ್‌ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಪೊಲೀಸರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಕೆ ತೀವ್ರ ನಿರ್ಜಲೀಕರಣ ಮತ್ತು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದಾಳೆ ಎನ್ನಲಾಗಿದೆ.ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌(Viral News) ಆಗಿದೆ.

ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆ ಸೇರಿದ ಕಂಟೆಂಟ್ ಕ್ರಿಯೇಟರ್!

Profile pavithra Mar 27, 2025 3:35 PM

ಸಿಯೋಲ್‌: 29 ವರ್ಷದ ಕಂಟೆಂಟ್ ಕ್ರಿಯೇಟರ್ ಆಶ್ಲೆ ಸುರ್ಕೊಂಬೆ ಮಾರ್ಚ್ 24 ರಂದು ಸಿಯೋಲ್ ಅಪಾರ್ಟ್‌ಮೆಂಟ್‌ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌(Viral News) ಆಗಿದೆ. ಐದು ವರ್ಷಗಳಿಂದ ದಕ್ಷಿಣ ಕೊರಿಯಾದಲ್ಲಿ ವಾಸಿಸುತ್ತಿದ್ದ ಈಕೆಯ ಮನೆಗೆ ಇತ್ತೀಚೆಗೆ ಪೊಲೀಸರು ಬಂದು ಮನೆಯ ಬೀಗ ಒಡೆದು ಒಳಗೆ ಪ್ರವೇಶಿಸಿದಾಗ ಪ್ರಜ್ಞೆತಪ್ಪಿ ಬಿದ್ದಿದ್ದಾಳೆ. ತಕ್ಷಣ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಕೆ ತೀವ್ರ ನಿರ್ಜಲೀಕರಣ ಮತ್ತು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದಾಳೆ ಎನ್ನಲಾಗಿದೆ. ಆಶ್ಲೆ ಇದ್ದಕ್ಕಿದ್ದಂತೆ ತಮ್ಮ ಮೆಸೇಜ್‍ಗಳಿಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದ ನಂತರ ಆಶ್ಲೆಯ ಪೋಷಕರಾದ ನಿಗೆಲ್ ಮತ್ತು ಕರೆನ್ ಸುರ್ಕೊಂಬೆ ಅವರು ಗಾಬರಿಗೊಂಡಿದ್ದಾರೆ. ಆಕೆಯ ಬಗ್ಗೆ ವಿಚಾರಿಸಲು ಅವರು ದಕ್ಷಿಣ ಕೊರಿಯಾದಲ್ಲಿ ಸಂಪರ್ಕ ಹೊಂದಿರುವ ಕುಟುಂಬದ ಸ್ನೇಹಿತನ ಸಹಾಯ ಕೋರಿದ್ದಾರೆ.

ಆತ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು ಕೊನೆಗೆ ಅಧಿಕಾರಿಗಳು ಅವಳನ್ನು ಹುಡುಕಿಕೊಂಡು ಅವಳ ಮನೆಯ ಬಳಿಗೆ ಬಂದಿದ್ದಾರೆ. ಆದರೆ ಅಲ್ಲಿ ಅವಳ ಸುಳಿವು ಇರದ ಕಾರಣ ಮನೆಯೊಳಗೆ ಹೋಗಲು ಪ್ರಯತ್ನಿಸಿದ್ದಾರೆ. ಆದರೆ ಮನೆ ಒಳಗಿನಿಂದ ಲಾಕ್‍ ಮಾಡಿದ್ದ ಕಾರಣ ಬೀಗ ಒಡೆದು ಪೊಲೀಸರು ಮನೆಯೊಳಗೆ ಪ್ರವೇಶಿಸಿದ್ದಾರೆ. ಅಲ್ಲಿ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು, ತಕ್ಷಣ ಅವಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಂತೆ. ವರದಿಗಳ ಪ್ರಕಾರ ಅವಳ ರಕ್ತದಲ್ಲಿನ ಸಕ್ಕರೆ ಮಟ್ಟವು ಅಪಾಯಕಾರಿಯಾಗಿ ಕಡಿಮೆಯಾಗಿದೆಯಂತೆ.

ಆಶ್ಲೆ ಆರೋಗ್ಯ ವಿಮೆ ಇತ್ತೀಚೆಗೆ ಮುಕ್ತಾಯಗೊಂಡಿದ್ದರಿಂದ, ಪೋಷಕರು ಈಗಾಗಲೇ ಅವಳ ಚಿಕಿತ್ಸೆಗಾಗಿ £3,000 ಹಣವನ್ನು ಪಾವತಿಸಿದ್ದಾರೆ. ಆಕೆಯ ಕುಟುಂಬವು ಈಗ ಹೆಚ್ಚಿನ ವೈದ್ಯಕೀಯ ವೆಚ್ಚಗಳನ್ನು ಭರಿಸಲು ಪರದಾಡುತ್ತಿದೆಯಂತೆ. ಹಾಗಾಗಿ ಆಕೆಯ ಸಹೋದರಿ ಕ್ಯಾಟ್ ತನ್ನ ಸಹೋದರಿಯ ಚಿಕಿತ್ಸಾ ವೆಚ್ಚಗಳನ್ನು ಭರಿಸಲು ಸಹಾಯ ಮಾಡಲು ಗೋಫಂಡ್ ಮಿ ಅಭಿಯಾನವನ್ನು ಪ್ರಾರಂಭಿಸಿದ್ದಾಳೆ. ‌
ಈ ಸುದ್ದಿಯನ್ನೂ ಓದಿ:Viral News: ಇದೆಂಥಾ ಕೊನೆಯಾಸೆ ನೋಡಿ? ಚಾಕೋಲೇಟ್‌ ಶವಪಟ್ಟಿಗೆಯಲ್ಲಿ ಮಣ್ಣಾದ ಪಾಲ್‍ ಬ್ರೂಮ್‍

ಆಶ್ಲೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚುಮಂದಿ ಫಾಲೋವರ್ಸ್‍ಗಳನ್ನು ಹೊಂದಿದ್ದಾಳೆ. ಸೋಶಿಯಲ್ ಮೀಡಿಯಾ ಪ್ಲಾಟ್‍ಫಾರ್ಮ್‍ಗಳಲ್ಲಿ ಒಂದು ದಶಲಕ್ಷಕ್ಕೂ ಹೆಚ್ಚು ಫಾಲೋವರ್ಸ್‍ಗಳನ್ನು ಗಳಿಸಿದ್ದಾಳಂತೆ.