ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಇದೆಂಥಾ ಕೊನೆಯಾಸೆ ನೋಡಿ? ಚಾಕೋಲೇಟ್‌ ಶವಪಟ್ಟಿಗೆಯಲ್ಲಿ ಮಣ್ಣಾದ ಪಾಲ್‍ ಬ್ರೂಮ್‍

Viral News: ಪಾಲ್‍ ಬ್ರೂಮ್‍ ಎಂಬ ಬ್ರಿಟಿಷ್ ವ್ಯಕ್ತಿಯ ಶವವನ್ನು ಸ್ನಿಕರ್ಸ್‌ ಚಾಕೋಲೇಟ್‍ನ ಕವರ್‌ನಂತೆ ಡಿಸೈನ್ ಮಾಡಿದ ಶವ ಪೆಟ್ಟಿಗೆಯಲ್ಲಿ ಮಣ್ಣು ಮಾಡಲಾಗಿದೆ. ಇದು ಅವನ ಕೊನೆಯ ಆಸೆಯಾಗಿತ್ತಂತೆ. ಜತೆಗೆ ಈ ಬಗ್ಗೆ ತನ್ನ ಉಯಿಲಿನಲ್ಲೂ ಬರೆದಿದ್ದ. ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಈ ವಿಚಾರ ವೈರಲ್‌ ಆಗಿದೆ.

ಈ ಶವಪೆಟ್ಟಿಗೆ ನೋಡಿದ್ರೆ ನೀವೂ ಬೆರಗಾಗ್ತೀರಿ

Profile pavithra Mar 24, 2025 6:22 PM

ಲಂಡನ್‌: ಸಾಮಾನ್ಯವಾಗಿ ಕ್ರಿಶ್ಚಿಯನ್‍ ಸಮುದಾಯದಲ್ಲಿ ಮೃತದೇಹವನ್ನು ಮರದ ಶವ ಪೆಟ್ಟಿಗೆಯಲ್ಲಿ ಹಾಕಿ ಹೂಳುತ್ತಾರೆ. ಆದರೆ ಇಲ್ಲೊಬ್ಬ ಬ್ರಿಟಿಷ್ ವ್ಯಕ್ತಿಯ ಶವವನ್ನು ಸ್ನಿಕರ್ಸ್‌ ಚಾಕೋಲೇಟ್‍ನ ಕವರ್‌ನಂತೆ ಡಿಸೈನ್ ಮಾಡಿದ ಶವ ಪೆಟ್ಟಿಗೆಯಲ್ಲಿ ಮಣ್ಣು ಮಾಡಿದ್ದಾರೆ. ಅವನ ಕುಟುಂಬದವರು ಯಾಕೆ ಹೀಗೆ ಮಾಡಿದ್ದಾರೆ ಎಂಬ ಕುತೂಹಲ ಹಲವರಲ್ಲಿ ಮೂಡಿರಬಹುದು. ಸ್ನಿಕರ್ಸ್‌ ಡಿಸೈನ್‍ ಇರುವ ಶವಪೆಟ್ಟಿಗೆಯಲ್ಲಿ ಹೂಳುವುದು ಆತನ ಕೊನೆಯ ಆಸೆಯಾಗಿತ್ತು ಎನ್ನಲಾಗಿದೆ. ಆ ಮೂಲಕ ಕುಟುಂಬವು ಸಾವಿನಲ್ಲೂ ಆತನ ಹಾಸ್ಯ ಪ್ರಜ್ಞೆಯನ್ನು ಗೌರವಿಸಲು ನಿರ್ಧರಿಸಿದೆ. ಜತೆಗೆ ಅವನ ಕೊನೆಯ ಆಸೆಯನ್ನು ಪೂರೈಸಿದೆ. ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ (Viral News) ಆಗಿತ್ತು.

ಯಾವಾಗಲೂ ಖುಷಿಯಿಂದ ಇರುತ್ತಿದ್ದ ಮತ್ತು ಅದ್ಭುತವಾದ ಹಾಸ್ಯಕ್ಕೆ ಹೆಸರುವಾಸಿಯಾದ ಪಾಲ್ ಬ್ರೂಮ್ ಒಬ್ಬ ಕೇರ್ ಅಸಿಸ್ಟೆಂಟ್ ಆಗಿದ್ದನು. ಆತ ಜೀವಿತಾವಧಿಯಲ್ಲಿ ಪ್ರಸಿದ್ಧ ಚಾಕೊಲೇಟ್ ಬಾರ್‌ನಂತೆ ಕಾಣುವ ಶವಪೆಟ್ಟಿಗೆಯಲ್ಲಿ ತಾನು ಸಮಾಧಿಯಾಗಲು ಬಯಸುವ ಬಗ್ಗೆ ಆಗಾಗ್ಗೆ ತಮಾಷೆ ಮಾಡುತ್ತಿದ್ದನು. ಮೊದಮೊದಲು ಅವನ ಪ್ರೀತಿಪಾತ್ರರು ಇದನ್ನು ತಮಾಷೆ ಎಂದು ತಳ್ಳಿ ಹಾಕಿದ್ದರು.

ವರದಿ ಪ್ರಕಾರ ಅವನು ತನ್ನ ಉಯಿಲಿನಲ್ಲಿ ಮರಣದ ನಂತರ, ಚಾಕೊಲೇಟ್ ಬಾರ್‌ನಂತೆ ಕಾಣುವ ಶವಪೆಟ್ಟಿಗೆಯಲ್ಲಿ ತನ್ನ ಮೃತದೇಹವನ್ನು ಇರಿಸುವಂತೆ ಔಪಚಾರಿಕವಾಗಿ ವಿನಂತಿಯನ್ನು ಮಾಡಿದ್ದ. ಹೀಗಾಗಿ ಬ್ರೂಮ್‍ನ ಕುಟುಂಬವು ಆತನ ಅಂತಿಮ ಆಸೆಯನ್ನು ಈಡೇರಿಸಲು ಸ್ನಿಕರ್ಸ್ ಬಾರ್ ಅನ್ನು ಹೋಲುವ ಶವಪೆಟ್ಟಿಗೆಯಲ್ಲಿ ಶವವನ್ನು ಇಟ್ಟು ಮಣ್ಣು ಮಾಡಿದ್ದಾರೆ. ಆತನ ತಮಾಷೆಯ ವ್ಯಕ್ತಿತ್ವಕ್ಕೆ ಗೌರವ ಸಲ್ಲಿಸಲು ಶವಪೆಟ್ಟಿಗೆಯ ಬದಿಯಲ್ಲಿ "ಐ ಆ್ಯಮ್‍ ಸೀಡ್ಸ್!" ಎಂದು ಬರೆಯಲಾಗಿದೆ.

ಅವನ ಬುದ್ಧಿವಂತಿಕೆ ಮತ್ತು ಹಾಸ್ಯ ಪ್ರಜ್ಞೆ ಅನೇಕ ಜನರ ಮನಸ್ಸನ್ನು ಗೆದ್ದಿತ್ತು. ಹಾಗಾಗಿ ಶವ ಪೆಟ್ಟಿಗೆಯ ಮೂಲಕ ಆತನ ವಿಶಿಷ್ಟ ವ್ಯಕ್ತಿತ್ವಕ್ಕೆ ಸೂಕ್ತವಾದ ಗೌರವ ನೀಡಿರುವುದಾಗಿ ಪ್ರೀತಿಪಾತ್ರರು ತಿಳಿಸಿದ್ದಾರೆ.

ದಕ್ಷಿಣ ಲಂಡನ್‍ನಲ್ಲಿ ಜನಿಸಿದ ಬ್ರೂಮ್, ಕ್ರಿಸ್ಟಲ್ ಪ್ಯಾಲೇಸ್ ಎಫ್ಸಿಯ ದೊಡ್ಡ ಬೆಂಬಲಿಗರಾಗಿದ್ದರಿಂದ, ಶವಪೆಟ್ಟಿಗೆ ಮೇಲೆ ಅವರ ತಂಡದ ಚಿಹ್ನೆಯನ್ನು ಚಿತ್ರಿಸಲಾಗಿದೆ. ಅಂತ್ಯಕ್ರಿಯೆಯ ಮೆರವಣಿಗೆಯನ್ನು ಪಾಲ್‌ನ ಪ್ರೀತಿಯ ಬೊಗ್ನಾರ್ ರೆಗಿಸ್ ಕೆಫೆಯ ಬಳಿ ನಡೆಸಲಾಗಿತ್ತು. ಅಲ್ಲಿ ಆತನ ಸ್ನೇಹಿತರು ತಮ್ಮ ಶ್ರದ್ಧಾಂಜಲಿಯನ್ನು ಅರ್ಪಿಸುವ ಸಲುವಾಗಿ ಟಿ-ಶರ್ಟ್‌ಗಳನ್ನು ಧರಿಸಿ ಕ್ಯಾಂಡಿ-ಥೀಮ್ ಶವಪೆಟ್ಟಿಗೆಯಲ್ಲಿ ಮೆರವಣಿಗೆ ಮಾಡುವಾಗ ಎಲ್ಲರನ್ನೂ ಹುರಿದುಂಬಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಯಾರೀಕೆ ʼಯಂಗ್‌ ಮೊನಾಲಿಸಾ...? ಇವಳನ್ನು ನೋಡಿದ್ರೆ ನೀವು ಕೂಡ ಶಾಕ್‌ ಆಗ್ತೀರಿ!

ಇತ್ತೀಚಿನ ವರ್ಷಗಳಲ್ಲಿ, ಅಸಾಂಪ್ರದಾಯಿಕ ಅಂತ್ಯಕ್ರಿಯೆಗಳನ್ನು ನಡೆಸುವುದು ಹೆಚ್ಚು ಜನಪ್ರಿಯವಾಗಿದೆ. ಈ ಹಿಂದೆ 2021ರಲ್ಲಿ ವ್ಯಕ್ತಿಯೊಬ್ಬನ ಕುಟುಂಬವು ಆತನ ಆಸೆಯಂತೆ ಚಿತಾಭಸ್ಮವನ್ನು ಬಾರ್ ಚರಂಡಿಗೆ ಸುರಿದಿತ್ತು.