ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹಿಮಪಾತದ ನಡುವೆ ದಾಂಪತ್ಯಕ್ಕೆ ಕಾಲಿಟ್ಟ ಮೀರತ್ ನ ಜೋಡಿ: ವಿಡಿಯೊ ಇಲ್ಲಿದೆ!

Viral Video: ಅದ್ದೂರಿ ಮಂಟಪ, ಭರ್ಜರಿ ತಿನಿಸುಗಳು, ಬಂಧು-ಬಳಗದ ಸಮ್ಮುಖದಲ್ಲಿ ಮದುವೆ ಸಮಾರಂಭಗಳು ಸಾಮಾನ್ಯವಾಗಿ ನಡೆಯುತ್ತದೆ. ಆದರೆ ಈ ಜೋಡಿಯ ಮದುವೆಯೊಂದು ವಿಭಿನ್ನ ವಾಗಿ ನಡೆದಿದೆ‌. ಮೀರತ್ ದಂಪತಿಗಳು ಉತ್ತರಾಖಂಡದ ತ್ರಿಯುಗಿನಾರಾಯಣ ದೇವಸ್ಥಾನದಲ್ಲಿ ಭಾರೀ ಹಿಮಪಾತದ ನಡುವೆ ಮದುವೆಯಾಗಿದ್ದಾರೆ. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿವೆ‌..

ಭಾರೀ ಹಿಮಪಾತ ನಡುವೆ ಮದುವೆಯಾದ ಜೋಡಿ!

ಹಿಮಪಾತ ನಡುವೆ ಮದುವೆಯಾದ ಜೋಡಿ -

Profile
Pushpa Kumari Jan 26, 2026 3:13 PM

ಉತ್ತರಾಖಂಡ,ಜ.26: ಪ್ರತಿಯೊಬ್ಬರಿಗೂ ತಮ್ಮ ಮದುವೆಯನ್ನು ವಿಭಿನ್ನವಾಗಿ ಗ್ರ್ಯಾಂಡ್ ಆಗಿ ಆಯೋಜನೆ ಮಾಡಬೇಕು ಎನ್ನುವ ಕನಸು ಇರುತ್ತದೆ. ಅದ್ದೂರಿ ಮಂಟಪ, ಭರ್ಜರಿ ತಿನಿಸುಗಳು, ಬಂಧು-ಬಳಗದ ಸಮ್ಮುಖದಲ್ಲಿ ಮದುವೆ ಸಮಾರಂಭಗಳು ಸಾಮಾನ್ಯವಾಗಿ ನಡೆಯುತ್ತದೆ. ಆದರೆ ಈ ಜೋಡಿಯ ಮದುವೆಯೊಂದು ವಿಭಿನ್ನವಾಗಿ ನಡೆದಿದೆ‌. ಮೀರತ್ ದಂಪತಿಗಳು ಉತ್ತರಾಖಂಡದ ತ್ರಿಯುಗಿನಾರಾಯಣ ದೇವಸ್ಥಾನದಲ್ಲಿ ಭಾರೀ ಹಿಮಪಾತದ ನಡುವೆ ಮದುವೆಯಾಗಿದ್ದಾರೆ. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral Video) ಆಗಿವೆ‌.

ಮೀರತ್‌ನ ವಿವಾಹವೊಂದು ನೆಟ್ಟಿಗರ ಗಮನ ಸೆಳೆದಿದೆ. ಉತ್ತರಾಖಂಡದ ಪವಿತ್ರ ತ್ರಿಯುಗಿ ನಾರಾಯಣ ದೇವಾಲಯದಲ್ಲಿ ಜೋಡಿಯೊಂದು ವಿವಾಹವಾಗುತ್ತಿರುವಾಗ ಭಾರಿ ಹಿಮಪಾತ ವಾಗಿರುವ ದೃಶ್ಯ ಕಂಡು ಬಂದಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ದಂಪತಿಗಳು ಹಿಮದ ನಡುವೆ ದೇವಸ್ಥಾನದಿಂದ ಹೊರಬರುತ್ತಿರುವುದನ್ನು ಕಾಣಬಹುದು. ತೀವ್ರವಾದ ಚಳಿಯಿದ್ದರೂ ಮಂಜು ಬೀಳುತ್ತಿದ್ದರು ವಧು ತನ್ನ ಕೆಂಪು ಬಣ್ಣದ ಲಹೆಂಗಾದ ಮೇಲೆ ಬೆಚ್ಚಗಿನ ಜಾಕೆಟ್ ಧರಿಸಿ ಮಹಾರಾಣಿಯಂತೆ ಕಂಗೊಳಿಸಿದ್ದಾರೆ. ವರ ಕೂಡ ಶೇರ್ವಾನಿ ಮತ್ತು ಜಾಕೆಟ್ ಅನ್ನು ಧರಿಸಿದ್ದರು.

Viral Video: ಬೆಂಗಳೂರಿನಲ್ಲಿ ಮಧ್ಯರಾತ್ರಿ ಆಟೋದಲ್ಲಿ ಸಂಚರಿಸಿದ ಮಹಿಳೆ ವಿಡಿಯೋದಲ್ಲಿ ಹೇಳಿದ್ದೇನು?

ವಿಡಿಯೋ ನೋಡಿ:

ಉತ್ತರಾಖಂಡದ ಕೇದಾರನಾಥದ ಬಳಿ ಇರುವ ತ್ರಿಯುಗಿ ನಾರಾಯಣ ದೇವಾಲಯವು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಹಿಂದೂ ನಂಬಿಕೆಯ ಪ್ರಕಾರ, ಇದು ಶಿವ ಮತ್ತು ಪಾರ್ವತಿ ದೇವಿಯ ಮದುವೆಯಾದ ಪವಿತ್ರ ಸ್ಥಳವಾಗಿದೆ. ಅನೇಕ ದಂಪತಿಗಳು ತಮ್ಮ ವೈವಾಹಿಕ ಜೀವನವನ್ನು ಪ್ರಾರಂಭಿಸಲು ಇದೇ ದೇವಾಲಯವನ್ನು ಆಯ್ಕೆ ಮಾಡುತ್ತಾರೆ. ಸದ್ಯ ಹಿಮಭರಿತ ವಿವಾಹದ ದೃಶ್ಯಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು ಇನ್‌ಸ್ಟಾಗ್ರಾಮ್ ಬಳಕೆದಾರರು ಈ ಕ್ಷಣವನ್ನು "ಜೀವನದಲ್ಲಿ ಒಮ್ಮೆ ಮಾತ್ರ" ಎಂದು ಬಣ್ಣಿಸಿದ್ದಾರೆ.

ಈ ಸುಂದರ ವಿಡಿಯೋ ನೋಡಿದ ನೆಟ್ಟಿಗರು ಮಂತ್ರಮುಗ್ಧರಾಗಿದ್ದಾರೆ. ಒಬ್ಬ ಬಳಕೆದಾರರು ''ನಿಜಕ್ಕೂ ದೇವಲೋಕದ ಮದುವೆಯಂತೆ ಕಾಣುತ್ತಿದೆ" ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಈ ದಂಪತಿಗೆ ದೇವರ ಆಶೀರ್ವಾದ ಹಿಮದ ಮೂಲಕ ಸಿಕ್ಕಿದೆ ಎಂದು ಹಾರೈಸಿದ್ದಾರೆ.