ಉಚಿತ ಮ್ಯಾಟ್‌ಗಾಗಿ ನೂಕು ನುಗ್ಗಲು: ಮೀರತ್‌ನ ಯೋಗ ದಿನಾಚರಣೆ ವೇಳೆ ತಳ್ಳಾಟದ ವಿಡಿಯೊ ವೈರಲ್
Viral Video: ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ಯೋಗ ಕಾರ್ಯಕ್ರಮವೊಂದು ಜಗಳ, ನೂಕಾಟಕ್ಕೆ ಕಾರಣವಾಯಿತು. ಇಲ್ಲಿ ಸರ್ಕಾರದ ವತಿಯಿಂದ ಯೋಗ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಉಚಿತ ಮ್ಯಾಟ್‌ಗಳನ್ನು ಬಂದವರಿಗೆ ಹಂಚಿಕೆ ಮಾಡಲಾಗಿತ್ತು. ಆಗ ಅಲ್ಲಿದ್ದ ಜನರು ಶಿಸ್ತು ಮರೆತು ತಳ್ಳಾಟ ಆರಂಭಿಸಿದ್ದಾರೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ಮೀರತ್‌ನಲ್ಲಿ ಉಚಿತ ಮ್ಯಾಟ್ಗಾಗಿ ನಡೆದ ಜನರ ತಳ್ಳಾಟ -
ಲಖನೌ, ಜೂ. 22: ದೇಶಾದ್ಯಂತ ಜೂನ್ 21ರಂದು ಅದ್ದೂರಿಯಾಗಿ ಯೋಗ ದಿನಾಚರಣೆ ನಡೆಸಲಾಗಿದೆ. ಮಕ್ಕಳು, ಮಹಿಳೆಯರು, ಹಿರಿಯರು ಸೇರಿ ಎಲ್ಲ ವಯೋಮಾನದವರು ಪಾಲ್ಗೊಂಡಿದ್ದಾರೆ. ಈ ಮಧ್ಯೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ಯೋಗ ಕಾರ್ಯಕ್ರಮವೊಂದು ಜಗಳ, ನೂಕಾಟಕ್ಕೆ ಕಾರಣವಾಯಿತು. ಇಲ್ಲಿ ಸರರ್ಕಾರದ ವತಿಯಿಂದ ಯೋಗವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಭಾಗವಾಗಿ ಉಚಿತ ಮ್ಯಾಟ್ ಹಂಚಿಕೆ ಮಾಡಲಾಗಿತ್ತು. ಆಗ ಅಲ್ಲಿದ್ದ ಜನರು ಶಿಸ್ತು ಮರೆತು ತಳ್ಳಾಟ ಆರಂಭ ಮಾಡಿದ್ದಾರೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗುತ್ತಿದೆ.
ಯೋಗ ದಿನದ ಕಾರ್ಯಕ್ರಮದಲ್ಲಿ ನೀಡಲಾದ ಉಚಿತ ಯೋಗ ಮ್ಯಾಟ್‌ಗಳನ್ನು ಪಡೆಯಲು ಜನರು ಪರಸ್ಪರ ತಳ್ಳಿ ಕೊಳ್ಳುತ್ತಿರುವುದನ್ನು ವಿಡಿಯೊದಲ್ಲಿ ಸೆರೆ ಹಿಡಿಯಲಾಗಿದೆ. ಯೋಗ ದಿನಾಚರಣೆಯಲ್ಲಿ ಭಾಗವಹಿಸುವವರಿಗೆ ಯೋಗ ಮ್ಯಾಟ್‌ಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ ಎಂದು ಮೊದಲೇ ಘೋಷಣೆ ಮಾಡಲಾಗಿತ್ತು. ಹೀಗಾಗಿ ಸ್ಥಳದಲಲಿ ದೊಡ್ಡ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದರು.
ವಿಡಿಯೊ ನೋಡಿ:
UP- मेरठ के कैलाशप्रकाश स्टेडियम में आज योगा-डे सेलिब्रेट हुआ. योग शुरू होने से पहले बंपर योगा मेट आये. योगा मेट के ढेर देखकर सभ्रांत लोग बंदर की तरह योगा मेट पर टूट पड़े और लूट मच गयी.
— Narendra Pratap (@hindipatrakar) June 21, 2026
मेट लूट में असफल एक व्यक्ति तो जमीन पर भी गिर गया. pic.twitter.com/oHIVYbTJUl
ಯೋಗಾಸನ ಮುಗಿಯುತ್ತಿದ್ದಂತೆ ಉಚಿತ ಮ್ಯಾಟ್ ಪಡೆಯಲು ಜನರು ಮುಗಿಬಿದ್ದಿದ್ದಾರೆ. ವೈರಲ್ ಆದ ದೃಶ್ಯದಲ್ಲಿ ಜನರು ಒಬ್ಬರನ್ನೊಬ್ಬರು ತಳ್ಳಿಕೊಂಡು ಮ್ಯಾಟ್ ಪಡೆಯಲು ಧಾವಿಸುವುದು ಕಾಣಬಹುದು. ಹಲವರು ರಾಶಿಗಳಿಂದಲೇ ಮ್ಯಾಟ್ ಎಳೆಯುವುದನ್ನು ಕಾಣಬಹುದು. ಅಂತಿಮವಾಗಿ ಈ ಕಾರ್ಯಕ್ರಮವನ್ನು ಅವ್ಯವಸ್ಥೆಯನ್ನಾಗಿ ಪರಿವರ್ತಿಸಿದ್ದಾರೆ.
ಶ್ರಾದ್ಧದ ದಿನ ಭಜನೆ ಬದಲು ರಾತ್ರಿಯಿಡೀ ನಡೆದದ್ದು ಅಶ್ಲೀಲ ನೃತ್ಯ
ಒಬ್ಬರಿಗಿಂತ ಒಬ್ಬರು ಮುಂಚಿತವಾಗಿ ಮ್ಯಾಟ್ ಗಿಟ್ಟಿಸಿಕೊಳ್ಳಲು ಪರಸ್ಪರ ತಳ್ಳಾಡಿದ್ದಾರೆ. ಕೆಲವರು ಮ್ಯಾಟ್‌ಗಳ ರಾಶಿಯ ಮೇಲೆಯೇ ಬಿದ್ದುಕೊಂಡೇ ಎಳೆದಾಡಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಸೋಷಿಯಲ್ ಮೀಡಿಯಾ ಬಳಕೆದಾರರು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಅನೇಕರು ಜನರ ನಡವಳಿಕೆಯನ್ನು ಟೀಕಿಸಿದ್ದಾರೆ. ನೆಟ್ಟಿಗರೊಬ್ಬರು, ʼʼಸರ್ಕಾರಿ ಆಸ್ತಿಯನ್ನು ಲೂಟಿ ಮಾಡಿದ ಜನರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕುʼʼ ಎಂದು ಆಗ್ರಹಿಸಿದ್ದಾರೆ. ಮತ್ತೊಬ್ಬರು "ಹೀಗೆ ವರ್ತಿಸಲು ನಾಚಿಕೆಯಾಗಬೇಕು" ಎಂದು ಕಾಮೆಂಟ್ ಮಾಡಿದ್ದಾರೆ.