ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಡೆಲಿವರಿ ನೀಡಲು ಹೋದವನಿಗೆ ಭರ್ಜರಿ ಸರ್ಪ್ರೈಸ್ ; ಜೊಮ್ಯಾಟೊ ಏಜೆಂಟ್‌ ಭಾವುಕರಾದ ವಿಡಿಯೊ ವೈರಲ್!

Viral Video: ಸಾಮಾನ್ಯವಾಗಿ ನಾವು ಆಹಾರ ಆರ್ಡರ್ ಮಾಡಿದಾಗ ಡೆಲಿವರಿ ಬಾಯ್ ಬಂದ ತಕ್ಷಣ ನಮ್ಮ ವಸ್ತುಗಳನ್ನು ಪಡೆದು ಕಳುಹಿಸುತ್ತೇವೆ. ಆದರೆ ದೆಹಲಿಯ ಈ ಒಂದು ಕುಟುಂಬ ಜೊಮ್ಯಾಟೊ ಸವಾರನ ಹುಟ್ಟು ಹಬ್ಬ ಆಚರಣೆ ಮಾಡುವ ಮೂಲಕ ಮೆಚ್ಚುಗೆ ಗಳಿಸಿದೆ..ಆರ್ಡರ್ ನೀಡಲು ಬಂದ ಜೊಮ್ಯಾಟೊ ಸವಾರನ ಬರ್ತಡೇ ಆಚರಿಸುವ ಮೂಲಕ ಆತನ ಕಣ್ಣಲ್ಲಿ ಆನಂದಭಾಷ್ಪ ಬರುವಂತೆ ಮಾಡಿರುವ ದೃಶ್ಯ ವೈರಲ್ ಆಗಿದೆ.

ಜೊಮ್ಯಾಟೊ ಸವಾರನ ಸರ್ಪ್ರೈಸ್ ಬರ್ತೆಡೇ ಆಚರಣೆ ಮಾಡಿದ ಗ್ರಾಹಕರು

ಜೊಮ್ಯಾಟೊ ಸವಾರನ ಸರ್ಪ್ರೈಸ್ ಬರ್ತೆಡೇ ಆಚರಣೆ -

Profile
Pushpa Kumari Jan 11, 2026 1:18 PM

ನವದೆಹಲಿ,ಡಿ.11: ಇಂದು ದಿನಸಿ ವಸ್ತುಗಳಿಂದ ಹಿಡಿದು ಫ್ಯಾಷನ್, ಎಲೆಕ್ಟ್ರಾನಿಕ್ಸ್, ಗೃಹೋಪಕರಣಗಳು ಸೇರಿದಂತೆ ಹಲವು ವಸ್ತುಗಳು ಅನ್ ಲೈನ್ ಮೂಲಕವೇ ಲಭ್ಯವಿದೆ. ಅದರಲ್ಲೂ ನಮಗೆ ತಕ್ಷಣಕ್ಕೆ ಯಾವುದೇ ಅಗತ್ಯ ವಸ್ತು ಬೇಕು ಅಂದಾಗ ಆರ್ಡರ್ ಮಾಡಿದರೆ ಸಾಕು. ಡೆಲಿವರಿ ಬಾಯ್ ತಕ್ಷಣಕ್ಕೆ ನಾವಿದ್ದ ಸ್ಥಳಕ್ಕೆ ಬಂದು ವಿತರಿಸುತ್ತಾರೆ‌. ಸಾಮಾನ್ಯವಾಗಿ ನಾವು ಆಹಾರ ಆರ್ಡರ್ ಮಾಡಿದಾಗ ಡೆಲಿವರಿ ಬಾಯ್ ಬಂದ ತಕ್ಷಣ ನಮ್ಮ ವಸ್ತುಗಳನ್ನು ಪಡೆದು ಕಳುಹಿಸುತ್ತೇವೆ. ಆದರೆ ದೆಹಲಿಯ ಈ ಒಂದು ಕುಟುಂಬ ಜೊಮ್ಯಾಟೊ ಸವಾರನ ಹುಟ್ಟು ಹಬ್ಬ ಆಚರಣೆ ಮಾಡುವ ಮೂಲಕ ಮೆಚ್ಚುಗೆ ಗಳಿಸಿದೆ. ಆರ್ಡರ್ ನೀಡಲು ಬಂದ ಜೊಮ್ಯಾಟೊ ಸವಾರನ ಬರ್ತಡೇ ಆಚರಿಸುವ ಮೂಲಕ ಆತನ ಕಣ್ಣಲ್ಲಿ ಆನಂದಭಾಷ್ಪ ಬರುವಂತೆ ಮಾಡಿರುವ ದೃಶ್ಯ ವೈರಲ್ (Viral Video) ಆಗಿದೆ.

ಒಬ್ಬ ಜೊಮ್ಯಾಟೊ ಸವಾರನು ಕೇಕ್ ಅನ್ನು ತಲುಪಿಸಲು ಹೋದಾಗ ಅನಿರೀಕ್ಷಿತ ಅನುಭವವನ್ನು ಅನುಭವಿಸಿದ್ದಾನೆ. ಆತ ಆರ್ಡರ್ ಮಾಡಿದ ವಿಳಾಸವನ್ನು ತಲುಪಿದಂತೆ ಕುಟುಂಬವು ಆ ಕೇಕ್‌ ನೊಂದಿಗೆ ಅವನ ಹುಟ್ಟುಹಬ್ಬವನ್ನು ಆಚರಿಸುವ ಮೂಲಕ ಅತನನ್ನೆ ಆಶ್ಚರ್ಯ ಗೊಳಿಸಿದೆ. ಕುಟುಂಬವೊಂದು ಜೊಮ್ಯಾಟೊ ಮೂಲಕ ಕೇಕ್ ಆರ್ಡರ್ ಮಾಡಿತ್ತು. ಆರ್ಡರ್ ತಲುಪಿಸಲು ಬಂದ ರೈಡರ್‌ಗೆ ಅಂದು ಹುಟ್ಟುಹಬ್ಬ ಎಂಬ ವಿಚಾರ ತಿಳಿದ ಕುಟುಂಬ ಸದಸ್ಯರು ಬಂದವನಿಗೆ ಅದೇ ಕೇಕ್ ಕತ್ತರಿಸುವಂತೆ ಹೇಳಿ ಹುಟ್ಟು ಹಬ್ಬ ಆಚರಿಸಿದ್ದಾರೆ.

ವಿಡಿಯೋ ನೋಡಿ:

ವೀಡಿಯೊದಲ್ಲಿ, ಸವಾರನು ಗ್ರಾಹಕರ ಮನೆಯೊಳಗೆ ಕುಳಿತುಕೊಂಡು ಹುಟ್ಟುಹಬ್ಬದ ಆಚರಣೆ ಯನ್ನು ಮಾಡಿರುವುದು ಕಂಡುಬಂದಿದೆ. ಮನೆಯವರು ಆತನಿಗೆ ಮೇಣದಬತ್ತಿಗಳನ್ನು ಬೆಳಗಿಸಿ ಕೇಕ್ ಕತ್ತರಿಸಲು ಹೇಳಿದ್ದಾರೆ..ಸಿಬ್ಬಂದಿಯೂ ಈ ಸಂದರ್ಭದಲ್ಲಿ ಆಶ್ಚರ್ಯದಿಂದ ಕಳೆದು ಹೋಗಿದ್ದಾನೆ.‌ ತನ್ನ ಕೆಲಸಕ್ಕಾಗಿ ಹೋದ ಈ ಪ್ರೀತಿಯನ್ನು ಕಂಡು ಆ ಡೆಲಿವರಿ ಬಾಯ್ ಮೂಕ ವಿಸ್ಮಿತನಾಗಿದ್ದಾನೆ. ಕುಟುಂಬಸ್ಥರು ಆತನಿಗೆ ಕೇಕ್ ತಿನ್ನಿಸಿ ಹಾರೈಸಿದಾಗ, ಆತ ಭಾವುಕನಾಗಿ ಕಣ್ಣೀರು ಹಾಕಿದ್ದಾನೆ.

Viral Video: ಅಯ್ಯೊಯ್ಯೋ ಹಸಿಯಾಗಿ ಇದೆಲ್ಲಾ ತಿಂತಾರಾ? ರೈಲಿನಲ್ಲಿ ವಿಚಿತ್ರ ಆಹಾರ ಸೇವನೆ ಮಾಡಿದ ವ್ಯಕ್ತಿ! ವಿಡಿಯೋ ನೋಡಿ

ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು ಸಾವಿರಾರು ಜನರು ಲೈಕ್ ನೀಡಿದ್ದು ನಾನಾ ಬಗೆಯ ಕಾಮೆಂಟ್‌ ಮಾಡಿದ್ದಾರೆ. ಬಳಕೆದಾರರೊಬ್ಬರು "ಜಗತ್ತಿನಲ್ಲಿ ಇಂತಹ ಒಳ್ಳೆಯ ಜನರು ಇರುವುದರಿಂದಲೇ ಭೂಮಿ ಇನ್ನೂ ಸುಂದರವಾಗಿದೆ" ಎಂದು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು ಜಾತಿ, ಧರ್ಮ ಯಾವುದೇ ಭೇದವಿಲ್ಲದೆ ನೀಡಿದ ಗೌರವ ಎಂದು ಬರೆದುಕೊಂಡಿದ್ದಾರೆ.ಕೆಲವು ಬಳಕೆದಾರರು ಜೊಮ್ಯಾಟೊ ಸಂಸ್ಥೆಯನ್ನು ಟ್ಯಾಗ್ ಮಾಡಿ, ನಿಮ್ಮ ಗ್ರಾಹಕರನ್ನು ನೀವು ಮೆಚ್ಚಿಕೊಳ್ಳಿ.. ನಿಮ್ಮ ಕೆಲಸಗಾರರನ್ನು ಹೀಗೆ ಪ್ರೀತಿಯಿಂದ ನೀವು ಕೂಡ ನಡೆಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.