ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ವಯಸ್ಸು ಆರಾದ್ರೂ ಈ ಹುಡುಗನ ಫಿಟ್‌ನೆಸ್‌ ಕ್ರೇಜ್‌ ನೋಡಿ

ಅದ್ವಿಕ್ ಪಾಲ್ ಎಂಬ 6 ವರ್ಷದ ಹುಡುಗನ ಜಿಮ್‌ನ ವರ್ಕೌಟ್ ವಿಡಿಯೊ ಈಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇವನ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ನೆಟ್ಟಿಗರು ಫುಲ್‌ ಖುಷಿಯಾಗಿ ಕಾಮೆಂಟ್‌ ಮಾಡಿದ್ದಾರೆ.

ಈ ಪುಟ್ಟ ಪೋರನ ಫಿಟ್‌ನೆಸ್‌ ವಿಡಿಯೊ ನೋಡಿ ನೆಟ್ಟಿಗರು ಹೇಳಿದ್ದೇನು?

Profile pavithra May 16, 2025 9:07 PM

ಆರನೇ ವಯಸ್ಸಿನಲ್ಲಿ, ಹೆಚ್ಚಿನ ಮಕ್ಕಳು ಓದುವುದು, ಆಟ ಆಡುವುದರಲ್ಲೇ ಕಳೆಯುತ್ತಾರೆ. ಯಾಕೆಂದರೆ ಅದು ಯಾವುದೇ ಜವಾಬ್ದಾರಿ ಇಲ್ಲದ ನಿರಾಂತರವಾಗಿ ಮೋಜು ಮಸ್ತಿ ಮಾಡುವಂತಹ ವಯಸ್ಸು! ಆದರೆ ಅದ್ವಿಕ್ ಪಾಲ್ ಎಂಬ ಚಿಕ್ಕ ಹುಡುಗ ತನ್ನ ಸ್ನೇಹಿತರ ಜತೆ ಸೇರಿ ಆಟವಾಡುವ ಬದಲು ಜಿಮ್‌ಗೆ ಹೋಗಿ ಬೆವರಿಳಿಸುತ್ತಿದ್ದಾನೆ.‌ ಈ ಪುಟ್ಟ ಪೋರನ ಫಿಟ್‌ನೆಸ್‌ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿ ನೆಟ್ಟಿಗರ ಮನಸ್ಸನ್ನು ಗೆದ್ದಿದೆ.

ವೈರಲ್ ವಿಡಿಯೊದಲ್ಲಿ ಅದ್ವಿಕ್, ಬೆಳಗ್ಗೆ 5:20ಕ್ಕೆ ಎದ್ದು ತಂದೆಯ ಜತೆಗೆ ಜಿಮ್‌ಗೆ ಹೋಗುವುದು ಕಂಡು ಬಂದಿದೆ. ಜಿಮ್‌ನಲ್ಲಿ ಟ್ರೆಡ್‌ಮಿಲ್‌ನಲ್ಲಿ ಓಡುವುದರ ಜತೆಗೆ ವ್ಯಾಯಾಮ ಕೂಡ ಮಾಡುತ್ತಾನೆ. ಜಿಮ್‌ನಿಂದ ಬಂದ ನಂತರ ಈತ ಸ್ಕೂಲ್‌ಗೆ ರೆಡಿಯಾಗುತ್ತಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಮೂರು ಮಿಲಿಯನ್‌ಗಿಂತಲೂ ಹೆಚ್ಚು ವ್ಯೂವ್ಸ್ ಪಡೆದುಕೊಂಡಿದೆ. ಕಾಮೆಂಟ್ ವಿಭಾಗದಲ್ಲಿ ನೆಟ್ಟಿಗರು ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಅದ್ವಿಕ್ ಎಲ್ಲರಿಗೂ "ನಿಜವಾದ ಸ್ಫೂರ್ತಿ" ಎಂದು ಕರೆದಿದ್ದಾರೆ.

ವಿಡಿಯೊ ಇಲ್ಲಿದೆ ನೋಡಿ...

ಈ ಸುದ್ದಿಯನ್ನೂ ಓದಿ:‌Viral Video: ಡಿಜೆ ಹಾಡಿನ ವಿಚಾರಕ್ಕೆ ಜಗಳ; ಕ್ಷಣಾರ್ಧದಲ್ಲಿ ರಣರಂಗವಾದ ಮದುವೆ ಮನೆ-ವಿಡಿಯೊ ವೈರಲ್!

"ವ್ಯಾಯಾಮದ ಬಗ್ಗೆ ಇಷ್ಟೊಂದು ಉತ್ಸಾಹವಿಟ್ಟುಕೊಂಡ ಮಗುವನ್ನು ನಾನು ಎಂದಿಗೂ ನೋಡಿಲ್ಲ. ದೇವರು ಈ ಇವನನ್ನು ಆಶೀರ್ವದಿಸಲಿ" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ನೀನು ಸ್ಫೂರ್ತಿ ಮತ್ತು ಚಾಂಪಿಯನ್! ನಿನಗೆ ಬಹಳಷ್ಟು ಶಕ್ತಿ ಸಿಗಲಿ. ಯಾವಾಗಲೂ ನನ್ನನ್ನು ಪ್ರೇರೇಪಿಸುತ್ತಿರುವುದಕ್ಕೆ ಧನ್ಯವಾದಗಳು!" ಎಂದು ಹೇಳಿದ್ದಾರೆ. "ಪ್ರತಿದಿನ ಅಭ್ಯಾಸ ಮಾಡಲು ನನಗೆ ನಿಜವಾದ ಸ್ಫೂರ್ತಿ ನೀನು " ಎಂದು ಒಬ್ಬ ವ್ಯಕ್ತಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮತ್ತೊಬ್ಬರು "ಈ ಮಗುವನ್ನು ನೋಡಿದ ನಂತರ ನನಗೆ ನಾಚಿಕೆಯಾಗುತ್ತಿದೆ" ಎಂದು ಹೇಳಿದ್ದಾರೆ.