ಗಂಗಾ ನದಿಗೆ ಹಾಲು ಸುರಿದ ಬೆನ್ನಲ್ಲೇ 165 ಲೀಟರ್ ತುಪ್ಪ ಅರ್ಪಣೆ; ಆಕ್ರೋಶ ಹೊರಹಾಕಿದ ನೆಟ್ಟಿಗರು!
Viral Video: ಇತ್ತೀಚೆಗಷ್ಟೇ ಗಂಗಾ ನದಿಗೆ 11,000 ಲೀಟರ್ ಹಾಲು ಸುರಿದ ಘಟನೆ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಮತ್ತೊಂದು ಅಚ್ಚರಿಯ ಘಟನೆ ಕಂಡು ಬಂದಿದ್ದು ಭಕ್ತರ ದಂಡೊಂದು ಬರೋಬ್ಬರಿ 165 ಲೀಟರ್ ತುಪ್ಪವನ್ನು ಗಂಗಾನದಿಗೆ ಸುರಿದಿದ್ದಾರೆ. ಈ ದೃಶ್ಯ ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಂಗಾ ನದಿಗೆ 165 ಲೀಟರ್ ತುಪ್ಪ ಸುರಿದ ಭಕ್ತಾದಿಗಳು -
ನವದೆಹಲಿ,ಎ.10: ಇತ್ತೀಚೆಗೆ ಜನರು ಧಾರ್ಮಿಕ ಭಕ್ತಿಯ ಹೆಸರಿನಲ್ಲಿ ನಾನಾ ರೀತಿಯ ಸಾಹಸಕ್ಕೆ ಮುಂದಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಗಂಗಾ ನದಿಗೆ 11,000 ಲೀಟರ್ ಹಾಲು ಸುರಿದ ಘಟನೆ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಮತ್ತೊಂದು ಅಚ್ಚರಿಯ ಘಟನೆ ಕಂಡು ಬಂದಿದ್ದು ಭಕ್ತರ ದಂಡೊಂದು ಬರೋಬ್ಬರಿ 165 ಲೀಟರ್ ತುಪ್ಪವನ್ನು ಗಂಗಾನದಿಗೆ ಸುರಿದಿದ್ದಾರೆ. ಈ ದೃಶ್ಯ (Viral News) ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಕ್ತರು ಈ ಆಚರಣೆಯ ಸಂದರ್ಭದಲ್ಲಿ 165 ಲೀಟರ್‌ಗಿಂತ ಹೆಚ್ಚು ದೇಸಿ ತುಪ್ಪವನ್ನು ಗಂಗಾ ನದಿಗೆ ಸುರಿದಿದ್ದಾರೆ. ಈ ಕ್ಲಿಪ್ ಹಲವಾರು ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಧಾರ್ಮಿಕ ಆಚರಣೆಯ ಭಾಗವಾಗಿ ನಡೆಸಲಾದ ಈ ಕೃತ್ಯವು ವೀಕ್ಷಕರಲ್ಲಿ ಪರಿಸರದ ಮೇಲೆ ಉಂಟಾಗುವ ಪರಿಣಾಮದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ವಿಡಿಯೋ ನೋಡಿ:
Devotees pouring what is claimed to be over 165 litres of desi ghee into the Ganga during a ritual swaha offering.. https://t.co/5bwjxhFVC2 pic.twitter.com/qrw9ZKfzoo
— SriSathya (@sathyashrii) April 9, 2026
ಈ ವೀಡಿಯೊ ನದಿಯ ಕೆಸರಿನ ದಡದಿಂದ ಆರಂಭವಾಗುತ್ತದೆ. ಅಲ್ಲಿ ಒಬ್ಬ ಪುರುಷ ಮತ್ತು ಮಹಿಳೆ ನೀರಿನ ಹತ್ತಿರ ನಿಂತಿರುವುದು ಕಂಡುಬರುತ್ತದೆ. ಅವರು ತುಪ್ಪ ತುಂಬಿದ ಪಾತ್ರೆಯನ್ನು ಹಿಡಿದು ನಿಧಾನವಾಗಿ ನದಿಗೆ ಸುರಿಯುತ್ತಿದ್ದಾರೆ. ಇದಾದ ನಂತರ ಅಲ್ಲಿ ನಿಂತಿದ್ದ ಕೆಲವು ಜನರು ತುಪ್ಪ ತುಂಬಿಸಿಕೊಂಡು ದೋಣಿಯ ಮೂಲಕ ನದಿಯ ಮಧ್ಯಭಾಗಕ್ಕೆ ಹೋಗುತ್ತಾರೆ. ಅಲ್ಲಿ ಒಬ್ಬೊಬ್ಬರಾಗಿ ಸಾಲಾಗಿ ನಿಂತು ಪಾತ್ರೆಯಲ್ಲಿದ್ದ ತುಪ್ಪವನ್ನು ಸುರಿಯುತ್ತಾರೆ.
Viral Video: ಹಾಡ ಹಗಲೇ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ; ಆರೋಪಿ ಸೆರೆ
ಈ ಬಗ್ಗೆ ಅನೇಕರು ಕಳವಳವನ್ನು ವ್ಯಕ್ತಪಡಿಸಿದ್ದಾರೆ. ತುಪ್ಪದ ಸಾಂದ್ರತೆಯು ನೀರಿಗಿಂತ ಕಡಿಮೆ ಯಾಗಿದೆ, ಆದ್ದರಿಂದ ಅದು ನೀರಿನ ಮೇಲೆ ಪದರವಾಗಿ ನಿಲ್ಲುತ್ತದೆ ಕೊಳಚೆನೀರು ಮತ್ತು ಕಸವನ್ನು ಎಸೆದ ನಂತರ ಸಮುದ್ರ ಜೀವಿಗಳಿಗೆ ಅಪಾಯವನ್ನುಂಟುಮಾಡುತ್ತದೆ ಎಂದು ಕಿಡಿಕಾರಿದ್ದಾರೆ. ಮತ್ತೊಬ್ಬರು ಧಾರ್ಮಿಕ ಆಚರಣೆಯ ಭಾಗವಾಗಿ ಜನರು ಈ ರೀತಿ ಮಾಡುವುದು ತಪ್ಪು ನೀರಿನಲ್ಲಿರುವ ಮೀನುಗಳು ಮತ್ತು ಇತರ ಜಲಚರಗಳಿಗೆ ಸಮಸ್ಯೆ ಉಂಟಾಗಿ ಸಾವನ್ನಪ್ಪುವ ಸಾಧ್ಯತೆ ಇರುತ್ತದೆ ಎಂದಿದ್ದಾರೆ.