ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಾಕು ನಾಯಿಗೆ ನಿದ್ರೆ ಮಾತ್ರೆ ನೀಡಿ ರೈಲಿನಲ್ಲಿ ಸಾಗಾಟ: ದಂಪತಿ ವಿರುದ್ಧ ಆಕ್ರೋಶ ಹೊರಹಾಕಿದ ನೆಟ್ಟಿಗರು!

Viral Video: ಇಲ್ಲೊಂದು ದಂಪತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ತಮ್ಮ ಸಾಕು ನಾಯಿಯನ್ನು ಸಾಗಿಸಲು ಅದಕ್ಕೆ ನಿದ್ರೆ ಮಾತ್ರೆ ನೀಡಿರುವ ಆಘಾತಕಾರಿ ಘಟನೆ ಕಂಡು ಬಂದಿದೆ. ಆದರೆ ನಾಯಿಗೆ ಪ್ರಜ್ಞೆ ಮರಳಿದ ನಂತರ ಒದ್ದಾ ಡುತ್ತಿರುವ ದೃಶ್ಯ ಕಂಡು ಬಂದಿದ್ದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ...

ನಾಯಿಗೆ ನಿದ್ರೆ ಮಾತ್ರೆ ನೀಡಿ ಸಾಗಾಟ: ವಿಡಿಯೊ ವೈರಲ್

ಸಾಕು ನಾಯಿಗೆ ನಿದ್ರೆ ಮಾತ್ರೆ ನೀಡಿ ರೈಲಿನಲ್ಲಿ ಸಾಗಾಟ -

Profile
Pushpa Kumari Apr 10, 2026 12:31 PM

ಮುಂಬೈ,ಎ.10: ಇತ್ತೀಚೆಗೆ ಹೆಚ್ಚಿನವರು ರೈಲು ಪ್ರಯಾಣಕ್ಕೆ ಆಸಕ್ತಿ ವಹಿಸುತ್ತಾರೆ. ಪ್ರಯಾಣ ವೆಚ್ಚ ದುಬಾರಿಯಾಗಿರದೇ ಬೇಗನೆ ತಮ್ಮ ಸ್ಥಳಕ್ಕೆ ತಲುಪಬಹುದು. ಆದರೆ ರೈಲು ಪ್ರಯಾಣ ಅಂದಾಗ ಕೆಲವೊಂದು ನಿಯಮಗಳಿದ್ದು ಅದನ್ನು ಉಲ್ಲಂಘನೆ ಮಾಡಿದ್ರೆ ದಂಡ ಕಟ್ಟಬೇಕಾಗುತ್ತದೆ. ಆದರೆ ಇಲ್ಲೊಂದು ದಂಪತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ತಮ್ಮ ಸಾಕು ನಾಯಿಯನ್ನು ಸಾಗಿಸಲು ಅದಕ್ಕೆ ನಿದ್ರೆ ಮಾತ್ರೆ ನೀಡಿರುವ ಆಘಾತಕಾರಿ ಘಟನೆ ಕಂಡು ಬಂದಿದೆ. ಆದರೆ ನಾಯಿಗೆ ಪ್ರಜ್ಞೆ ಮರಳಿದ ನಂತರ ಒದ್ದಾಡುತ್ತಿರುವ ದೃಶ್ಯ (Viral News) ಕಂಡು ಬಂದಿದ್ದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಲೀಕರು ಪ್ರಾಣಿಯನ್ನು ಶಾಂತವಾಗಿ ಇರಿಸಲು ನಿದ್ರಾ ಮಾತ್ರೆಗಳನ್ನು ನೀಡಿದ್ದರು, ಏಕೆಂದರೆ ರೈಲಿನಲ್ಲಿ ನಾಯಿಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲಾಗಿದ್ದು ಮತ್ತು ಕೆಲವು ರೈಲಿನಲ್ಲಿ ಪೂರ್ವ ಬುಕಿಂಗ್ ಮತ್ತು ವಿಶೇಷ ಕಂಟೇನರ್‌ಗಳಿಲ್ಲದೆ ಸಾಗಿಸುವಂತಿಲ್ಲ..ದಂಪತಿಯೂ ಕಾಕರ್ ಸ್ಪಾನಿಯಲ್ ತಳಿಯ ನಾಯಿಯನ್ನು ರೈಲಿನಲ್ಲಿ ಕೊಂಡೊಯ್ಯಲು ನಿದ್ರೆ ಮಾತ್ರೆಯನ್ನು ನೀಡಿದ್ದರು.ಆದರೆ ನಾಯಿ ಅಮಲು ಕಡಿಮೆಯಾದ ನಂತರ ಎಚ್ಚರಗೊಂಡಿದೆ..

ವಿಡಿಯೋ ನೋಡಿ:

ನಾಯಿಯ ವಿಚಿತ್ರ ವರ್ತನೆ ಕಂಡು ಸಹಪ್ರಯಾಣಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಬಳಿಕ ರೈಲು ರಕ್ಷಣಾ ಪಡೆ (RPF) ಮತ್ತು ಟಿಕೆಟ್ ಪರೀಕ್ಷಕರಿಗೆ ತ್ವರಿತವಾಗಿ ತಿಳಿಸಲಾಯಿತು. ತಪಾಸಣೆಯ ನಂತರರೈಲ್ವೆ ರಕ್ಷಣಾ ಪಡೆ ಮತ್ತು ಟಿಕೆಟ್ ಪರೀಕ್ಷಕರು ಮಾಲೀಕರನ್ನು ಕೆಳಗೆ ಇಳಿಸಿದ್ದಾರೆ.

Viral Video: ಸೆಲ್ಫಿಗಾಗಿ ವಿದೇಶಿ ಮಹಿಳೆ ಹಿಂದೆ ಬಿದ್ದ ಯುವಕರು; ವಿಡಿಯೊ ವೈರಲ್

ಈ ವೀಡಿಯೊ ವೈರಲ್ ಆಗಿದ್ದು, ಸಾವಿರಾರು ವೀಕ್ಷಣೆ ಗಳಿಸಿದೆ. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಡಿಯಲ್ಲಿ ಮಾಲೀಕರ ವಿರುದ್ಧ ದೂರು ದಾಖಲಿಸಬೇಕೆಂದು ಹಲವರು ಒತ್ತಾಯಿ ಸಿದ್ದಾರೆ.. ಬಳಕೆದಾರರೊಬ್ಬರು ನೀವು ನಾಯಿಯನ್ನು ನೋಡಿಕೊಳ್ಳಲು ಸಾಧ್ಯ ಇಲ್ಲದಿದ್ದರೆ ದಯವಿಟ್ಟು ಸಾಕಬೇಡಿ ಎಂದು ಅನೇಕರು ಕಿಡಿಕಾರಿದ್ದಾರೆ.