Miyazaki Mango: ಭೂಮಿಯ ಮೇಲಿನ ಅತ್ಯಂತ ದುಬಾರಿ ಮಾವು ಯಾವುದು ಗೊತ್ತೇ? ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ!
Most Expensive Mango: ಜಪಾನ್ ಹರಾಜಿನಲ್ಲಿ, "ಎಗ್ ಆಫ್ ದ ಸನ್" ಎಂದು ಕರೆಯಲ್ಪಡುವ ಮಾವಿನಹಣ್ಣು ಮಿಯಾಝಾಕಿ. ಇದರ ಬೆಲೆ ಕೂಡ ಅಷ್ಟೇ ದುಬಾರಿಯಂತೆ. ಜಪಾನ್‌ನಿನ ಹರಾಜಿನಲ್ಲಿ, ಒಂದು ಜೋಡಿ ಮಿಯಾಝಾಕಿ(Miyazaki Mango) ಮಾವಿನ ಹಣ್ಣುಗಳು 2.7 ಲಕ್ಷ ರೂ. (ಸುಮಾರು $3,000) ಗೆ ಮಾರಾಟವಾಗುತ್ತವೆಯಂತೆ.


ಟೊಕಿಯೊ: ಮಾವಿನಹಣ್ಣು ಎಂದರೆ ಎಲ್ಲರ ಬಾಯಲ್ಲಿಯೂ ನೀರು ಬರುತ್ತದೆ! ಹೌದು ಇದರ ರುಚಿ, ಪರಿಮಳವೇ ಹಾಗಿರುತ್ತದೆ. ಸಾಮಾನ್ಯವಾಗಿ ಮಲ್ಲಿಕಾ, ಬಾದಾಮ್, ಅಲ್ಫೋನ್ಸೋ ಮಾವುಗಳನ್ನು ನೀವು ತಿಂದಿರಬಹುದು. ಆದರೆ ಇಲ್ಲೊಂದು ವಿಶೇಷವಾದ ಮಾವಿನ ಹಣ್ಣಿದೆ. ಇದರ ರುಚಿ ಮತ್ತು ಭಾರೀ ಬೆಲೆಯಿಂದ ಮಾವಿನ ಹಣ್ಣು ಪ್ರಿಯರನ್ನು ಬೆರಗುಗೊಳಿಸಿದೆ. ಇದರ ಹೆಸರು ಮಿಯಾಝಾಕಿ ಮಾವು(Miyazaki Mango), ಇದನ್ನು ಅತ್ಯಂತ ದುಬಾರಿ ಮಾವು ಎಂದು ಕರೆಯುತ್ತಾರೆ. ಕಾವ್ಯಾತ್ಮಕವಾಗಿ "ಸೂರ್ಯನ ಮೊಟ್ಟೆ" ಎಂದು ಕರೆಯಲ್ಪಡುವ ಮಿಯಾಝಾಕಿ ಮಾವಿನ ಹಣ್ಣಿನ ಬಣ್ಣ ಮತ್ತು ರಚನೆಯ ಅದ್ಭುತವಾಗಿದೆ.
ಈ ಮಾವಿನಹಣ್ಣು ಕಡುಗೆಂಪು ಸಿಪ್ಪೆ ಮತ್ತು ಅದ್ಭುತವಾದ ಸುವಾಸೆಯ ಸಿಹಿಯಾದ ತಿರುಳನ್ನು ಹೊಂದಿದೆಯಂತೆ. ಇದು ಜಪಾನ್‌ನ ಮಿಯಾಝಾಕಿ ಪ್ರಾಂತ್ಯದಲ್ಲಿ ಕಾಳಜಿಯಿಂದ ಬೆಳೆಸಲಾದ ದುಬಾರಿಯಾದ ಮಾವಿನಹಣ್ಣು! ಜಪಾನ್‌ನಿನ ಹರಾಜಿನಲ್ಲಿ, ಒಂದು ಜೋಡಿ ಮಿಯಾಝಾಕಿ ಮಾವಿನ ಹಣ್ಣುಗಳು 2.7 ಲಕ್ಷ ರೂ. (ಸುಮಾರು $3,000) ಗೆ ಮಾರಾಟವಾಗುತ್ತವೆಯಂತೆ.ಉತ್ತಮ ದರ್ಜೆಯ ಈ ಮಾವಿನಹಣ್ಣಿಗೆ 'ಸೂರ್ಯನ ಮೊಟ್ಟೆಗಳು' ಎಂದು ಲೇಬಲ್ ಹಾಕುತ್ತಾರಂತೆ.
World's Most Expensive Mango - Awesome Japan Agriculture Mango Grown in Greenhouse. pic.twitter.com/cW2mEqM56q
— Agriculture Insider (@Agriculfuture) July 20, 2022
2021ರಲ್ಲಿ, ಬಿಹಾರದ ರೈತ ಸುರೇಂದ್ರ ಸಿಂಗ್, ಭಾರತದಲ್ಲಿ ಮಿಯಾಝಾಕಿ ಮಾವಿನ ಹಣ್ಣುಗಳನ್ನು ಯಶಸ್ವಿಯಾಗಿ ಬೆಳೆಸುವ ಮೂಲಕ ಸಿಕ್ಕಾಪಟ್ಟೆ ಸುದ್ದಿಯಾಗಿದ್ದ. ಜಪಾನ್‌ನಿಂದ ಎರಡು ಸಸಿಗಳನ್ನು ಆಮದು ಮಾಡಿಕೊಂಡ ನಂತರ, ಸಿಂಗ್ ಮೊದಲ ಋತುವಿನಲ್ಲಿ 21 ಮಾವಿನ ಹಣ್ಣುಗಳನ್ನು ಕೊಯ್ಲು ಮಾಡುವಲ್ಲಿ ಯಶಸ್ವಿಯಾಗಿದ್ದಾನೆ.
ಈ ಸುದ್ದಿಯನ್ನೂ ಓದಿ:Viral Video: ʼಇದು ತೇಲುವ ಹೋಟೆಲ್ʼ- ಇಲ್ಲಿ ಒಂದು ರಾತ್ರಿ ಕಳೆಯಲು ಪಾವತಿಸಬೇಕು ಬರೋಬ್ಬರಿ 59 ಲಕ್ಷ ರೂ.!
ಆತನ ಕೃಷಿ ಪ್ರಯೋಗವು ಉನ್ನತ-ಮಟ್ಟದ ಹಣ್ಣುಗಳನ್ನು ಬೆಳೆಯಲು ರೈತರಲ್ಲಿ ಆಸಕ್ತಿಯನ್ನು ಹುಟ್ಟುಹಾಕಿತು. ಭಾರತದಲ್ಲಿ ಬೆಳೆದ ಮಿಯಾಝಾಕಿ ಮಾವಿನ ಹಣ್ಣುಗಳು ಜಪಾನಿನ ಹಣ್ಣುಗಳಂತೆ ಬೆಲೆಯನ್ನು ಪಡೆಯದಿದ್ದರೂ, ಕೃಷಿ ಪದ್ಧತಿಯಲ್ಲಿ ಬದಲಾವಣೆಯನ್ನು ಸೂಚಿಸಿದೆಯಂತೆ.