Viral Video: ʼಇದು ತೇಲುವ ಹೋಟೆಲ್ʼ- ಇಲ್ಲಿ ಒಂದು ರಾತ್ರಿ ಕಳೆಯಲು ಪಾವತಿಸಬೇಕು ಬರೋಬ್ಬರಿ 59 ಲಕ್ಷ ರೂ.!
ಟ್ರಾವೆಲ್ ವ್ಲಾಗರ್ ಜೋಶ್ ಎಂಬಾತ "7 ಮಿಲಿಯನ್ ಡಾಲರ್ ತೇಲುವ ಹೋಟೆಲ್" ಎಂದು ಹೇಳಿಕೊಳ್ಳುವ ಸ್ಥಳಕ್ಕೆ ಭೇಟಿದ್ದ. ಈ ಹೋಟೆಲ್‍ನ ಸ್ಥಳವು ಯುನೈಟೆಡ್ ಕಿಂಗ್ಡಂನ ಬಳಿ ಇದೆ. ಇದರ ವಿಡಿಯೊವನ್ನು ಆತ ತನ್ನ ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಪೋಸ್ಟ್ ಮಾಡಿದ್ದಾನೆ. ಇದು ಈಗ ವೈರಲ್(Viral Video)ಆಗಿದೆ.


ಲಂಡನ್: ಕೆಲವರಿಗೆ ವಿಶೇಷವಾದ ಸ್ಥಳಗಳನ್ನು ನೋಡುವ ಕನಸಿರುತ್ತದೆ. ಆ ಸ್ಥಳಗಳ ಮಾಹಿತಿ, ಅದರ ವಿಶೇಷತೆಯನ್ನು ತಿಳಿಯುವ ಕುತೂಹಲವಿರುತ್ತದೆ. ನಿಮಗೂ ಕೂಡ ಅಂತಹ ಆಸಕ್ತಿ ಇದೆಯಾದ್ರೆ ಇಲ್ಲೊಂದು ಅದ್ಭುತವಾದ ಸ್ಥಳವಿದೆ. ಅದ್ಯಾವ ಸ್ಥಳ, ಎಲ್ಲಿರುವುದು ಎಂಬ ಕುತೂಹಲ ನಿಮಗೂ ಇದೆಯಾ...? ತಡಯಾಕೆ...? ಟ್ರಾವೆಲ್ ವ್ಲಾಗರ್ ಜೋಶ್ ಎಂಬಾತ "7 ಮಿಲಿಯನ್ ಡಾಲರ್ ತೇಲುವ ಹೋಟೆಲ್" ಬಗ್ಗೆ ಕುತೂಹಲಕಾರಿಯಾದ ಮಾಹಿತಿಯನ್ನು ಹಂಚಿಕೊಂಡಿದ್ದಾನೆ. ಇದರ ವಿಡಿಯೊವನ್ನು ಆತ ತನ್ನ ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಪೋಸ್ಟ್ ಮಾಡಿದ್ದಾನೆ. ಇದು ಈಗ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
ವೈರಲ್ ಆದ ವಿಡಿಯೊದಲ್ಲಿ ವ್ಲಾಗರ್ ಜೋಶ್ ದೋಣಿಯಲ್ಲಿ ಹೋಟೆಲ್‍ಗೆ ಬರುವುದು ಸೆರೆಯಾಗಿದೆ. ಸಮುದ್ರದ ಮಧ್ಯೆದಲ್ಲಿ ತೇಲುವ ಈ ಹೋಟೆಲ್‍ನಲ್ಲಿ ಲೈಟ್ ಹೌಸ್ ಕೂಡ ಇದೆಯಂತೆ. ಅದನ್ನು ಬಾರ್ ಆಗಿ ಪರಿವರ್ತಿಸಲಾಗಿದೆ ಎಂದು ಆತ ತಿಳಿಸಿದ್ದಾನೆ.ಇನ್ನು ಈ ಈ ಕಟ್ಟಡವು "ಮೊದಲನೇ ಮತ್ತು ಎರಡನೇ ಮಹಾಯುದ್ಧದ ಸಮಯದಲ್ಲಿ ಯುದ್ಧ ರಕ್ಷಣಾ ಕೋಟೆಯಾಗಿತ್ತು" ಎಂದು ಜೋಶ್ ಹಂಚಿಕೊಳ್ಳುತ್ತಾನೆ.
ತೇಲುವ ಹೋಟೆಲ್‌ನ ವಿಡಿಯೊ ಇಲ್ಲಿದೆ ನೋಡಿ...
ವರದಿಗಳ ಪ್ರಕಾರ, ಈ ಹೋಟೆಲ್‍ನ ಸ್ಥಳವು ಯುನೈಟೆಡ್ ಕಿಂಗ್ಡಂನ ಪೋಟೌಸ್ಮಾತ್ ಹಾರ್ಬರ್ ಹತ್ತಿರವಿದೆಯಂತೆ. ಹೋಟೆಲ್‍ನಲ್ಲಿ ಒಂದು ರಾತ್ರಿ ತಂಗಲು $ 700 ಅಥವಾ 59,000 ರೂ. ನೀಡಬೇಕಂತೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಅನೇಕರು ಕಾಮೆಂಟ್ ಮಾಡಿದ್ದಾರೆ. "ಈ ಸ್ಥಳವು ಇಷ್ಟು ಉತ್ತಮವಾಗಿದೆ ಮತ್ತು ಇಲ್ಲಿಯವರೆಗೆ ಲೂಟಿಯಾಗಿಲ್ಲ?!?" ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಏರ್‌ಪೋರ್ಟ್‌ನಲ್ಲಿ 'ತೇರಿ ಮಿಟ್ಟಿ' ಹಾಡಿಗೆ ಕೊಳಲು ನುಡಿಸಿದ ಮೆಹಬೂಬ್; ಭದ್ರತಾ ಸಿಬ್ಬಂದಿ ಮಾಡಿದ್ದೇನು?
ಇನ್ನೊಬ್ಬರು "ಈ ಸ್ಥಳವನ್ನು ದಕ್ಷಿಣ ಇಂಗ್ಲೆಂಡ್‍ನ ಸೊಲೆಂಟ್‍ನಲ್ಲಿರುವ ಸ್ಪಿಟ್ ಬ್ಯಾಂಕ್ ಕೋಟೆ ಎಂದು ಕರೆದಿದ್ದಾರೆ. ಈ ಸ್ಥಳವು ವರ್ಷಗಳಿಂದ ಅನೇಕ ವಿಷಯಗಳನ್ನು ಒಳಗೊಂಡಿದೆ. 2003 ರಿಂದ 2010 ರವರೆಗೆ ತಿಂಗಳಿಗೊಮ್ಮೆ ಅಲ್ಲಿ ನೃತ್ಯ ಕೂಟಗಳನ್ನು ನಡೆಸುತ್ತಿದ್ದರು. ಅದು ಅದ್ಭುತ ದಿನಗಳು” ಎಂದಿದ್ದಾರೆ. ಇನ್ನೊಬ್ಬರು, "ಇದು ಈಗ ದೆವ್ವದ ವಾಸಸ್ಥಳವಾಗಿದೆಯೇ?" ಎಂದು ಕೇಳಿದ್ದಾರೆ.