ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಗರಗಳಿಗಿಂತಲೂ ಹೆಚ್ಚು ಸೌಕರ್ಯ ಇರುವ ಭಾರತದ ಸ್ಮಾರ್ಟ್ ಹಳ್ಳಿಗಳು: ಎಲ್ಲಿವೆ ಗೊತ್ತಾ?

Viral News: ಸಾಮಾನ್ಯವಾಗಿ 'ಸ್ಮಾರ್ಟ್ ಸಿಟಿ' ಎಂದಾಗ ಅತೀ ಎತ್ತರದ ಕಟ್ಟಡಗಳು, ಮೂಲಭೂತ ಸೌಕರ್ಯಗಳು ಇವೆಲ್ಲವು ಕಣ್ಣ ಮುಂದೆ ಬರುತ್ತವೆ.‌ ಆದರೆ ಭಾರತದ ಕೆಲವೊಂದು ಹಳ್ಳಿಗಳು ನಗರಗಳನ್ನೇ ಮೀರಿಸುವಂತೆ ಹೊಸ ಪಥದಲ್ಲಿ ಸಾಗುತ್ತಿವೆ. ಡಿಜಿಟಲ್ ವ್ಯವಹಾರ, ಸೌರಶಕ್ತಿಯಿಂದ ಹಿಡಿದು ಸುಗಮ ಮೂಲಭೂತ ಸೌಕರ್ಯಗಳೊಂದಿಗೆ ಭಾರತೀಯ ಈ ಹಳ್ಳಿಗಳು ಸ್ಮಾರ್ಟ್ ಆಗಿ ಕಾಣುತ್ತಿದೆ. ಯಾವುವು ಆ ಹಳ್ಳಿಗಳು?

ನಗರ ಪ್ರದೇಶಕ್ಕಿಂತಲೂ ಹೆಚ್ಚಿನ ಸೌಲಭ್ಯ ಇರುವ ಹಳ್ಳಿಗಳು ಯಾವುವು ಗೊತ್ತೆ?

ನಗರ ಪ್ರದೇಶಕ್ಕಿಂತಲೂ ಹೆಚ್ಚಿನ ಸೌಲಭ್ಯ ಇರುವ ಹಳ್ಳಿ -

Profile
Pushpa Kumari Apr 26, 2026 6:34 PM

ದೆಹಲಿ, ಏ. 26: ಇತ್ತೀಚೆಗೆ ಭಾರತ ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿದ್ದು, ಹಳ್ಳಿಗಳು ಕೂಡ ನಗರವಾಗಿ ಮಾರ್ಪಾಡುತ್ತಿವೆ. ಸಾಮಾನ್ಯವಾಗಿ 'ಸ್ಮಾರ್ಟ್ ಸಿಟಿ' ಎಂದಾಗ ಎತ್ತರದ ಕಟ್ಟಡಗಳು, ಮೂಲಭೂತ ಸೌಕರ್ಯಗಳು ನೆನಪಿಗೆ ಬರುತ್ತವೆ.‌ ಆದರೆ ಭಾರತದ ಕೆಲವೊಂದು ಹಳ್ಳಿಗಳು ನಗರಗಳನ್ನೇ ಮೀರಿಸುವಂತೆ ಹೊಸ ಪಥದಲ್ಲಿ ಸಾಗುತ್ತಿವೆ. ಡಿಜಿಟಲ್ ವ್ಯವಹಾರ, ಸೌರಶಕ್ತಿಯಿಂದ ಹಿಡಿದು ಸುಗಮ ಮೂಲಭೂತ ಸೌಕರ್ಯಗಳೊಂದಿಗೆ ಭಾರತೀಯ ಈ ಹಳ್ಳಿಗಳು (Indian Villages) ಸ್ಮಾರ್ಟ್ ಆಗಿ ಬದಲಾಗಿದೆ.

ಭಾರತದ ಕೆಲವು ಭಾಗಗಳಲ್ಲಿ ಹಲವು ಹಳ್ಳಿಗಳು ಆಧುನಿಕ ಸೌಕರ್ಯದ ಮೂಲಕ ಗಮನ ಸೆಳೆಯುತ್ತಿವೆ. ಇಲ್ಲಿನ ಸೌಕರ್ಯಗಳಿಗೆ ನಗರ ಪ್ರದೇಶದವರು ಕೂಡ ಅಚ್ಚರಿ ವ್ಯಕ್ತ ಪಡಿಸಿದ್ದಾರೆ. ಹೌದು, ಗುಜರಾತ್‌ನ ಪುನ್ಸಾರಿ ಗ್ರಾಮ ವೈ-ಫೈ, ಸಿಸಿಟಿವಿ ಕ್ಯಾಮರಾ ಮತ್ತು ಡಿಜಿಟಲ್ ವ್ಯವಹಾರ ಜನರ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿ ಪ್ರಸಿದ್ಧಿ ಪಡೆದಿದೆ. ಅಲ್ಲದೆ ಈ ಗ್ರಾಮ ಸಕಲ ಸೌಲಭ್ಯಗಳಿರುವ ಡಿಜಿಟಲ್ ಗ್ರಾಮ ಎಂದೇ ದೇಸಾದ್ಯಂತ ಹೆಸರು ಪಡೆದಿದೆ.

ಶೇಕಡಾ 49 ಅಂಕ ಪಡೆದ SSLC ವಿದ್ಯಾರ್ಥಿಯ ಫೋಟೊ ಶೇರ್ ಮಾಡಿದ ವ್ಯಕ್ತಿಯ ವಿರುದ್ಧ ನೆಟ್ಟಿಗರ ಆಕ್ರೋಶ

ಇನ್ನು ಮಹಾರಾಷ್ಟ್ರದಲ್ಲಿನ ಹಿವಾರೆ ಬಜಾರ್ ಅದ್ಭುತ ಜಲ ನಿರ್ವಹಣೆ ಹಾಗೂ ಕೃಷಿ ಮತ್ತು ಆರ್ಥಿಕತೆಯಲ್ಲಿ ಹೆಸರು ಮಾಡಿದೆ. ಬಿಹಾರದ ಧರ್ನೈ ಗ್ರಾಮವು ಸೌರಶಕ್ತಿ ಯೋಜನೆಯಲ್ಲಿ ಪ್ರಸಿದ್ಧಿ ಪಡೆದಿದೆ.

ಇಲ್ಲಿನ ಜನರಿಗೆ ಇದು ಕೇವಲ ಆಯ್ಕೆಯಲ್ಲ, ಅದುವೇ ಜನರ ಬದುಕಿನ ಮುಖ್ಯ ಶಕ್ತಿ ಕೇಂದ್ರ ಎನಿಸಿಕೊಂಡಿದೆ. ಇಲ್ಲಿ ತಂತ್ರಜ್ಞಾನವನ್ನು ಕೇವಲ ಪ್ರದರ್ಶನಕ್ಕಾಗಿ ಬಳಸದೆ, ಬದುಕನ್ನು ಸರಳಗೊಳಿಸಲು ಬಳಸಲಾಗುತ್ತಿದೆ. ಹಾಗಾಗಿ ಅಭಿವೃದ್ಧಿ ಎಂದರೆ ಕೇವಲ ದೊಡ್ಡ ಕಟ್ಟಡವಲ್ಲ. ಅದು ಜನರ ಜೀವನಮಟ್ಟವನ್ನು ಹೇಗೆ ಸುಧಾರಿಸುತ್ತದೆ ಎಂಬುದು ಮುಖ್ಯ.