ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈದ್ಯರ ಗ್ಲೌಸ್‌ ಗಟ್ಟಿಯಾಗಿ ಹಿಡಿದ ಆಗ ತಾನೇ ಹುಟ್ಟಿದ ಶಿಶು: ಗಮನ ಸೆಳೆದ ದೃಶ್ಯ ಇಲ್ಲಿದೆ

Viral News: ಸಾಮಾನ್ಯವಾಗಿ ಮಗು ಹುಟ್ಟಿದ ತಕ್ಷಣ ಅದು ಅಮ್ಮನ ಲಾಲನೆ ಪಾಲನೆಗಾಗಿ ಕಾಯುತ್ತಿರುತ್ತದೆ‌. ಆದರೆ ಇಲ್ಲೊಂದು ಮಗು ವೈದ್ಯರ ಗ್ಲೌಸ್‌ ಬಿಡದೇ ಗಟ್ಟಿಯಾಗಿ ಹಿಡಿದಿಟ್ಟುಕೊಂಡ ಘಟನೆ ನಡೆದಿದೆ. ಹುಟ್ಟಿದ ಕೆಲವೇ ಕ್ಷಣದಲ್ಲಿ ಆ ಮಗು ವೈದ್ಯರ ಗ್ಲೌಸ್‌ ಬಿಡದೆ ಹಿಡಿದಿರುವ ಅಪರೂಪದ ದೃಶ್ಯ ಎಲ್ಲರ ಮನ ಗೆದ್ದಿದೆ‌.

ವೈದ್ಯರ ಗ್ಲೌಸ್‌ ಹಿಡಿದ ನವಜಾತ ಶಿಶು: ಇಲ್ಲಿದೆ ಕ್ಯೂಟ್ ವಿಡಿಯೊ

ವೈದ್ಯರ ಕೈ ಬಿಡದ ಪುಟ್ಟ ಕಂದಮ್ಮ -

Profile
Pushpa Kumari Apr 26, 2026 6:55 PM

ನವದೆಹಲಿ, ಏ. 26: ಹುಟ್ಟಿದ ಮಗುವಿನಿಂದ ಹಿಡಿದು ಹಿರಿಯರಿಗೂ ತಾಯಿಯೇ ಮೊದಲ ಆಸರೆ. ಸಾಮಾನ್ಯವಾಗಿ ಮಗು ಹುಟ್ಟಿದ ತಕ್ಷಣ ಅದು ಅಮ್ಮನ ಲಾಲನೆ ಪಾಲನೆಗಾಗಿ ಕಾಯುತ್ತಿರುತ್ತದೆ‌. ಆದರೆ ಇಲ್ಲೊಂದು ನವಜಾತ ಶಿಶು ವೈದ್ಯರ ಗ್ಲೌಸ್‌ ಬಿಡದೆ ಗಟ್ಟಿಯಾಗಿ ಹಿಡಿದಿಟ್ಟುಕೊಂಡಿರುವ ಘಟನೆ ನಡೆದಿದೆ. ಹುಟ್ಟಿದ ಕೆಲವೇ ಕ್ಷಣದಲ್ಲಿ ಆ ಮಗು ವೈದ್ಯರ ಗ್ಲೌಸ್‌ ಬಿಡದ ಅಪರೂಪದ ದೃಶ್ಯ (Viral News) ಎಲ್ಲರ ಮನ ಗೆದ್ದಿದೆ‌.

ಇಂತಹ ದೃಶ್ಯ ಕಂಡು ಬರುವುದು ಅಪರೂಪ. ಇಲ್ಲಿ ನವಜಾತ ಶಿಶು ಮಾತ್ರ ವೈದ್ಯರ ಗ್ಲೌಸ್‌ ಗಟ್ಟಿಯಾಗಿ ಹಿಡಿದಿಟ್ಟುಕೊಂಡಿದೆ. ವೈದ್ಯ ಡಾ. ಇಸ್ಲಾಂ ಎಲ್ಡೆಹ್ ಮಗುವಿನ ಕೈಯಿಂದ ತಮ್ಮ ಗ್ಲೌಸ್‌ ಬಿಡಿಸಲು ಕಚಗುಳಿ ಇಡಲು ಪ್ರಯತ್ನಿಸಿದ್ದಾರೆ. ಆದರೆ ಆ ಪುಟ್ಟ ಕಂದಮ್ಮ ಕೈ ಬಿಡಿಸುವಾಗ ಅಳಲು ಆರಂಭಿಸಿದೆ. ಈ ದೃಶ್ಯ ಕಂಡು ಅನೇಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ನವಜಾತ ಶಿಶುವಿನ ವಿಡಿಯೊ:


Posts from the interesting
community on Reddit

ವೈದ್ಯರ ಗ್ಲೌಸ್‌ ಬಿಡಲು ನಿರಾಕರಿಸುವ ನವಜಾತ ಶಿಶುವಿನ ಮುದ್ದಾದ ದೃಶ್ಯ ವೈರಲ್ ಆಗಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ 28 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ಗಳಿಸಿದೆ. ವೈದ್ಯರು ಹೃದಯವಂತರು ಆಗಿದ್ದರೆ ಮಾತ್ರ ಇಂತಹ ದೃಶ್ಯ ಕಂಡು ಬರಲು ಸಾಧ್ಯ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ. ಡಾ. ಎಲ್ಡೆಹ್ ಆಗಾಗ್ಗೆ ನವಜಾತ ಶಿಶುಗಳ ಮುದ್ದಾದ ವಿಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ಈ ಕ್ಯೂಟ್ ದೃಶ್ಯ ಮಾತ್ರ ಭಾರಿ ಆಕರ್ಷಣೆ ಗಳಿಸಿದೆ.

ರೀಲ್ಸ್ ಕ್ರೇಜ್‌ಗಾಗಿ ಪತ್ನಿ ಜೊತೆಗಿನ 'ಖಾಸಗಿ' ವೀಡಿಯೋ ಶೇರ್ ಮಾಡಿದ ಯುವಕ!

ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಕಮೆಂಟ್ ಮಾಡಿದ್ದಾರೆ‌. ಬಳಕೆದಾರರೊಬ್ಬರು ಈ ಮಗುವಿನ ಸಂಬಂಧ ಗಟ್ಟಿಯಾಗಿದೆ ಎಂದು ಬರೆದಿದ್ದಾರೆ‌. ಮತ್ತೊಬ್ಬರು ನಿಜಕ್ಕೂ ಅಪರೂಪದ ದೃಶ್ಯ ಎಂದು ಬರೆದಿದ್ದಾರೆ‌. ಆದರೆ ನೋಡಲು ಇದು ಕೇವಲ ಮುದ್ದಾದ ದೃಶ್ಯವೆನಿಸಿದರೂ, ಇದರ ಹಿಂದೆ ವೈದ್ಯಕೀಯ ಕಾರಣವೂ ಇದೆ.

ನವಜಾತ ಶಿಶುಗಳ ಅಂಗೈಗೆ ಯಾವುದೇ ವಸ್ತು ತಗುಲಿದರೂ, ಅವು ತಾನಾಗಿಯೇ ಬೆರಳುಗಳನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತವೆ. ಇದು ಮಗುವು ಅರಿವಿಲ್ಲದೆಯೇ ಮಾಡುವ ಒಂದು ಕ್ರಿಯೆ‌. ಗರ್ಭದಲ್ಲಿ 16 ವಾರಗಳಲ್ಲಿ ಬೆಳವಣಿಗೆಯಾಗುವ ಮತ್ತು ಸಾಮಾನ್ಯವಾಗಿ 3-6 ತಿಂಗಳವರೆಗೆ ಮಗುವಿನ ಬೆಳವಣಿಗೆಯಲ್ಲಿ ಆಗುವ ಬದಲಾವಣೆ ಎಂದು ವೈದ್ಯರು ತಿಳಿಸಿದ್ದಾರೆ.