Viral Video: ವಿಮಾನದಲ್ಲಿ ಕುಳಿತು ಊಟ ಮಾಡಬೇಕಾ....? ಹಾಗಾದ್ರೆ ಬನ್ನೇರುಘಟ್ಟಕ್ಕೆ ಬನ್ನಿ- ವಿಡಿಯೊ ನೋಡಿ
ಬೆಂಗಳೂರು ನಗರದ ಬನ್ನೇರುಘಟ್ಟ ರಸ್ತೆಯಲ್ಲಿ ಇತ್ತೀಚೆಗೆ ತೆರೆಯಲಾದ ಫ್ಲೈಟ್ ಥೀಮ್ ರೆಸ್ಟೋರೆಂಟ್ ಆಹಾರ ಪ್ರಿಯರನ್ನು ಬೋರ್ಡಿಂಗ್ ಪಾಸ್‌ನೊಂದಿಗೆ ಸ್ವಾಗತಿಸುವ ಮೂಲಕ ಗ್ರಾಹಕರಿಗೆ ವಿಮಾನದಲ್ಲಿದ್ದ ಹಾಗೇ ಅನುಭವವನ್ನು ನೀಡುತ್ತದೆ. ಇದಕ್ಕೆ ಭೇಟಿ ನೀಡಿದ ಕಂಟೆಂಟ್ ಕ್ರಿಯೇಟರ್ ಇಲ್ಲಿ ಆದ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಟೊ ಮತ್ತು ವಿಡಿಯೊ ಮೂಲಕ ಹಂಚಿಕೊಂಡಿದ್ದಾರೆ. ಇದು ವೈರಲ್(Viral Video) ಆಗಿದೆ.
![ಇದು ಫ್ಲೈಟ್ ರೆಸ್ಟೋರೆಂಟ್! ಇದರ ವೈಭೋಗವನ್ನೊಮ್ಮೆ ನೀವ್ ನೋಡ್ಲೇಬೇಕು](https://cdn-vishwavani-prod.hindverse.com/media/original_images/Aeroplane_Restaurant.jpg)
ಫ್ಲೈಟ್ ರೆಸ್ಟೋರೆಂಟ್
![Profile](https://vishwavani.news/static/img/user.png)
ಬೆಂಗಳೂರು:ವಿಮಾನವೆಂದರೆ ಎಲ್ಲರಿಗೂ ಒಂದು ರೀತಿ ಖುಷಿ ಇರುತ್ತದೆ. ಹಾಗಂತ ಎಲ್ಲರಿಗೂ ವಿಮಾನದಲ್ಲಿ ಹೋಗುವುದಕ್ಕೆ ಆಗಲ್ಲ! ಇನ್ನು ಪುಟಾಣಿ ಮಕ್ಕಳಂತೂ ಆಕಾಶದಲ್ಲಿ ಹಾರುವ ವಿಮಾನ ನೋಡಿ ಕಣ್ಣರಳಿಸುತ್ತವೆ. ವಿಮಾನದಲ್ಲಿ ಕುಳಿತು ಊಟ ಮಾಡಬೇಕು ಎಂಬ ಆಸೆ ಕೂಡ ಬಹುತೇಕರ ಕನಸು. ಈ ಪುಟ್ಟ ಆಸೆಯನ್ನು ನನಸು ಮಾಡಬೇಕೆ....? ಹಾಗಾದ್ರೆ ಬೆಂಗಳೂರಿನ ಈ ರೆಸ್ಟೋರೆಂಟ್ಗೆ ಭೇಟಿ ನೀಡಿ. ಅರೆ... ಅಂಥದ್ದೇನಿದೆ ಈ ರೆಸ್ಟೋರೆಂಟ್‌ನಲ್ಲಿ ಎಂದು ಯೋಚಿಸುತ್ತಿದ್ದೀರಾ....? ಇದು ನೋಡೋದಕ್ಕೆ ಸೇಮ್ ಟು ಸೇಮ್ ವಿಮಾನದ ಹಾಗೇ ಇದೆಯಂತೆ. ವಿಮಾನದಲ್ಲಿ ಕುಳಿತು ಊಟ ಮಾಡಬೇಕು ಎನ್ನುವವರಿಗೆ ಇದೊಂದು ಒಳ್ಳೆಯ ರೆಸ್ಟೋರೆಂಟ್ ಆಗಿದೆ. ಈಗಾಗಲೇ ಸ್ಕೈ ಡೈನಿಂಗ್ ಥೀಮ್ ಬಗ್ಗೆ ನೀವು ಕೇಳಿರಬಹುದು. ಈಗ ಅಂತಹದ್ದೇ ಫ್ಲೈಟ್ ಥೀಮ್ ರೆಸ್ಟೋರೆಂಟ್ ಕೂಡ ಬಂದಿದೆ. ಬನ್ನೇರುಘಟ್ಟ ರಸ್ತೆಯಲ್ಲಿ ಇತ್ತೀಚೆಗೆ ತೆರೆಯಲಾದ ಫ್ಲೈಟ್ ಥೀಮ್ ರೆಸ್ಟೋರೆಂಟ್ ಆಹಾರ ಪ್ರಿಯರನ್ನು ಬೋರ್ಡಿಂಗ್ ಪಾಸ್‌ನೊಂದಿಗೆ ಸ್ವಾಗತಿಸುವ ಮೂಲಕ ಅವರಿಗೆ ವಿಮಾನದಲ್ಲಿದ್ದ ಹಾಗೇ ಅನುಭವವನ್ನು ನೀಡುತ್ತದೆ. ಇದರ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ಹೆಚ್ಚಿನ ಜನರ ಗಮನ ಸೆಳೆದಿದೆ.
ಶ್ರೀಹರಿ ಕಾರಂತ್ ಎಂಬ ಕಂಟೆಂಟ್ ಕ್ರಿಯೇಟರ್ ವಿಶಿಷ್ಟವಾಗಿ ವಿನ್ಯಾಸಗೊಳಿಸಲಾದ ಈ ರೆಸ್ಟೋರೆಂಟ್ಗೆ ಭೇಟಿ ನೀಡಿದ ನಂತರ ತಮ್ಮ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
The menu at this new 'Tiger Aero Restaurant' was very limited. Food was avg. It's good for kids as they can experience the inside of an aeroplane. Nice unique concept. pic.twitter.com/ygKoCVF6ms
— Srihari Karanth (@sriharikaranth) February 10, 2025
ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿ ಇತ್ತೀಚೆಗೆ ತೆರೆಯಲಾದ ಒಂದು ಹೊಸ ರೆಸ್ಟೋರೆಂಟ್ ಇದಾಗಿದೆ. ಇದು ಏರೋಪ್ಲೇನ್ ಆಕಾರದಲ್ಲಿದ್ದು,ಬಗೆಬಗೆಯ ಊಟ, ಉಪಹಾರಗಳು ಇಲ್ಲಿವೆ.ಹಅಗೇ ಇಲ್ಲಿ ಸೀಟ್ ಕಾಯ್ದಿರಿಸಲು ಬೋರ್ಡಿಂಗ್ ಪಾಸ್‍ಗಳನ್ನು ಸಹ ನೀಡುತ್ತಾರಂತೆ. ಈ ಬೋರ್ಡಿಂಗ್ ಪಾಸ್‍ನಲ್ಲಿ "ಟೈಗರ್ ಏರೋ ರೆಸ್ಟೋರೆಂಟ್" ಎಂಬ ರೆಸ್ಟೋರೆಂಟ್‍ನ ಹೆಸರು ಮತ್ತು ಸ್ಥಳ, ಕ್ಯೂಆರ್ ಕೋಡ್ ಸಹ ಇದೆಯಂತೆ. ಚಿಕ್ಕಮಕ್ಕಳಿಗೆ ಈ ರೆಸ್ಟೋರೆಂಟ್ ತುಂಬಾ ಇಷ್ಟವಾಗುತ್ತದೆಯಂತೆ. ಹೊರಗಿನಿಂದ ವಿಮಾನದಂತೆ ಕಾಣುವ ಈ ರೆಸ್ಟೋರೆಂಟ್ ನೋಡುವುದಕ್ಕೆ ಕೂಡ ಅಷ್ಟೇ ಸುಂದರವಾಗಿದೆಯಂತೆ. ಇನ್ಯಾಕೆ ತಡ ನೀವೂ ಕೂಡ ಒಮ್ಮಡ ಹೋಗಿ ಬನ್ನಿ.
ಈ ಸುದ್ದಿಯನ್ನೂ ಓದಿ: Viral Video: ದುಬಾರಿ ಮದುವೆ; ವಧುವಿನ ಮನೆ ಮೇಲೆ ವಿಮಾನದಿಂದ ಹಣದ ಸುರಿಮಳೆ: ವಿಡಿಯೊ ವೈರಲ್
ಸೋಶಿಯಲ್ ಮೀಡಿಯಾದಲ್ಲಿ ಹಲವು ವಿಚಿತ್ರ ಸಂಗತಿಗಳನ್ನು ನೋಡುತ್ತಿರುತ್ತೇವೆ. ದುಬಾರಿ ಮದುವೆ, ತೀರಾ ಸರಳ ಮದುವೆ ಹೀಗೆ ಇನ್ನಿತರ ಪೋಸ್ಟ್ ಮತ್ತು ವಿಡಿಯೊಗಳು ನಮ್ಮ ಗಮನ ಸೆಳೆಯುತ್ತಿರುತ್ತವೆ. ಇದೀಗ ದುಬಾರಿ ಮದುವೆಯ ವಿಡಿಯೊವೊಂದು ಸಖತ್ ವೈರಲ್ ಆಗಿದೆ. ಪಾಕಿಸ್ತಾನದಲ್ಲಿ ವರನ ತಂದೆಯೊಬ್ಬ ತನ್ನ ಮಗನ ಮದುವೆಗೆ ವಿಮಾನವನ್ನು ಬಾಡಿಗೆಗೆ ತೆಗೆದುಕೊಂಡು ವಧುವಿನ ಮನೆಯ ಮೇಲೆ ಲಕ್ಷಾಂತರ ರೂಪಾಯಿಯನ್ನು ಸುರಿದಿದ್ದಾನಂತೆ.
ವೈರಲ್ ಆಗಿರುವ ವಿಡಿಯೊದಲ್ಲಿ ವರನ ತಂದೆ ತನ್ನ ಮಗನ ಮದುವೆಗೆ ವಿಮಾನವನ್ನು ಬಾಡಿಗೆಗೆ ಪಡೆದು ವಧುವಿನ ಮನೆಯ ಮೇಲೆ ನೋಟುಗಳನ್ನು ಸುರಿಸಿದ್ದಾನೆ. ಆಕಾಶದಲ್ಲಿ ಹಾರಾಡುತ್ತಿರುವ ವಿಮಾನದಿಂದ ನೋಟನ್ನು ಬೀಳಿಸುತ್ತಿರುವ ದೃಶ್ಯವು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸದ್ದು ಮಾಡಿದೆ. ಈ ಘಟನೆಯು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ ಎನ್ನಲಾಗಿದೆ.