ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡೋದು ನೋಡಿದ್ರೆ ಶಾಕ್‌ ಆಗ್ತೀರಾ! ಮುರಿದ ಕಾಲಿಗೆ ಪ್ಲಾಸ್ಟರ್ ಬದಲಿಗೆ ಕಾರ್ಡ್‌ಬೋರ್ಡ್ ಬ್ಯಾಂಡೇಜ್ ಹಾಕಿದ ವೈದ್ಯರು!

Viral Video: ಬಿಹಾರದ ಬೇಗೂಸರಾಯ್ ಆಸ್ಪತ್ರೆಯೊಂದರಲ್ಲಿ ಪ್ಲಾಸ್ಟರ್ ಬದಲಿಗೆ ಗಾಯಗೊಂಡ ವ್ಯಕ್ತಿಯ ಕಾಲಿಗೆವಖಾಲಿ ರಟ್ಟಿನ ಬಾಕ್ಸ್ ಬಳಸಿ ಬ್ಯಾಂಡೇಜ್ ಮಾಡಿರುವ ವಿಡಿಯೊವೊಂದು ವೈರಲ್ ಆಗಿದೆ. ಈ ದೃಶ್ಯ ಬಿಹಾರದ ಆರೋಗ್ಯ ವ್ಯವಸ್ಥೆಯ ಬಗ್ಗೆ ವ್ಯಾಪಕ ಟೀಕೆಗೆ ಕಾರಣವಾಗಿದ್ದು ನೆಟ್ಟಿಗರು ಆಸ್ಪತ್ರೆ ಸಿಬ್ಬಂದಿಗಳ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ.

ಪ್ಲಾಸ್ಟರ್ ಬದಲು ಕಾರ್ಡ್‌ಬೋರ್ಡ್ ಬ್ಯಾಂಡೇಜ್ ಹಾಕಿದ ವೈದ್ಯರು

ಗಾಯಗೊಂಡ ವ್ಯಕ್ತಿಗೆ ಪ್ಲಾಸ್ಟರ್ ಬದಲು ಕಾರ್ಡ್‌ಬೋರ್ಡ್ ಬ್ಯಾಂಡೇಜ್ ಹಾಕಿದ ವೈದ್ಯರು -

Profile
Pushpa Kumari Aug 6, 2026 6:58 PM

ಬಿಹಾರ,ಆ.6: ಸಾಮಾನ್ಯವಾಗಿ ಕಾಲು- ಕೈಗೆ ಯಾವುದೇ ಗಾಯವಾದಾಗ ಪ್ಲಾಸ್ಟರ್ ಹಾಕಿ ಬ್ಯಾಂಡೇಜ್ ಮಾಡಿರುವುದನ್ನು ನೀವು ನೋಡಿರಬಹುದು. ಆದರೆ ಬಿಹಾರದ ಬೇಗೂಸರಾಯ್ ಆಸ್ಪತ್ರೆಯೊಂದರಲ್ಲಿ ಪ್ಲಾಸ್ಟರ್ ಬದಲಿಗೆ ಗಾಯಗೊಂಡ ವ್ಯಕ್ತಿಯ ಕಾಲಿಗೆವಖಾಲಿ ರಟ್ಟಿನ ಬಾಕ್ಸ್ ಬಳಸಿ ಬ್ಯಾಂಡೇಜ್ ಮಾಡಿರುವ ವಿಡಿಯೊವೊಂದು ವೈರಲ್ (Viral News) ಆಗಿದೆ. ಈ ದೃಶ್ಯ ಬಿಹಾರದ ಆರೋಗ್ಯ ವ್ಯವಸ್ಥೆಯ ಬಗ್ಗೆ ವ್ಯಾಪಕ ಟೀಕೆಗೆ ಕಾರಣವಾಗಿದ್ದು ನೆಟ್ಟಿಗರು ಆಸ್ಪತ್ರೆ ಸಿಬ್ಬಂದಿಗಳ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ.

ಬಿಹಾರದ ಬೇಗುಸರಾಯ್ ಜಿಲ್ಲೆಯ ಮಂಜೌಲ್ ಉಪ-ವಿಭಾಗೀಯ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಗಾಯಾಳು ವ್ಯಕ್ತಿಗೆ ಕಾರ್ಡ್‌ಬೋರ್ಡ್ ಬಳಸಿ ಪ್ರಥಮ ಚಿಕಿತ್ಸೆ ನೀಡಲಾಯಿತು ಎಂದು ಹೇಳಲಾಗಿದೆ. ಅಧಿಕಾರಿಗಳ ಪ್ರಕಾರ, ಆಗಸ್ಟ್ 3 ರ ಸಂಜೆ ಈ ಘಟನೆ ಸಂಭವಿಸಿದೆ. ನೌಕೋಥಿ ಪೊಲೀಸ್ ಠಾಣೆ ವ್ಯಾಪ್ತಿಯ ಮಹೇಶ್ವರ ಗ್ರಾಮದ ನಿವಾಸಿ ಕುನಾಲ್ ಕುಮಾರ್ ಅವರ ಬೈಕ್ಹರ್ ಸಿಂಗ್ ಸೇತುವೆ ಬಳಿ ಅಪಘಾತಕ್ಕೀಡಾಗಿಡಾಗಿದ್ದು ಕಾಲನ್ನು ಮುರಿದುಕೊಂಡಿದ್ದರು.

ವಿಡಿಯೋ ನೋಡಿ:



ಸಾರ್ವಜನಿಕರು ಆತನನ್ನು ಆಸ್ಪತ್ರೆಗೆ ಸೇರಿಸಿದಾಗ, ವೈದ್ಯರು ಕಾಲನ್ನು ಸ್ಥಿರವಾಗಿ ಇರಿಸಲು ರಟ್ಟಿನ ಬಾಕ್ಸ್ ಕಟ್ಟಿ, ಹೆಚ್ಚಿನ ಚಿಕಿತ್ಸೆಗೆ ಬೇರೊಂದು ದೊಡ್ಡ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಹಲವಾರು ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಮಂಜೌಲ್ ಉಪ-ವಿಭಾಗೀಯ ಆಸ್ಪತ್ರೆಯಲ್ಲಿ ರಸ್ತೆ ಅಪಘಾತ ಗಳಿಂದ ಉಂಟಾಗುವ ಪ್ರಕರಣಗಳಿಗೆ ಚಿಕಿತ್ಸೆ ನೀಡಲು ಸೌಲಭ್ಯಗಳಿಲ್ಲ ನೆಟ್ಟಿಗರು ಕಿಡಿಕಾರಿದ್ದಾರೆ.

Viral Video: ಪೊಲೀಸ್ ಠಾಣೆಯಲ್ಲೇ ಕಾನ್ಸ್‌ಟೇಬಲ್‌ಗಳ ರೊಮ್ಯಾನ್ಸ್‌; ತನ್ನ ಪಾಡಿಗೆ ಕೂತಿದ್ದ ಪೇದೆಯನ್ನು ತಬ್ಬಿ ಮುತ್ತಿಕ್ಕಿದ ಲೇಡಿ ಪೊಲೀಸ್

ಈ ವಿವಾದಕ್ಕೆ ಪ್ರತಿಕ್ರಿಯಿಸಿದ ಆಸ್ಪತ್ರೆಯ ಉಸ್ತುವಾರಿ ಅಭಿನವ್ ಪ್ರಿಯದರ್ಶಿ, ಕಾಲು,ಕೈ ಮುರಿತದ ರೋಗಿಗಳಿಗೆ ತಾತ್ಕಾಲಿಕ ಸ್ಪ್ಲಿಂಟ್ ಆಗಿ ಕಾರ್ಡ್‌ಬೋರ್ಡ್ ಅನ್ನು ಬಳಸುವುದು ತುರ್ತು ಪ್ರಥಮ ಚಿಕಿತ್ಸೆಯಾಗಿದೆ. ರಕ್ತಸ್ರಾವ ತಡೆಯಲು ಮತ್ತು ಮೂಳೆ ಹೆಚ್ಚು ಅಲ್ಲಾಡದಂತೆ ಮಾಡಲು ಈ ತುರ್ತು ಪ್ರಥಮ ಸಮರ್ಥಿಸಿಕೊಂಡಿದ್ದಾರೆ. ಸದ್ಯ ಈ ಘಟನೆಯು ಬಿಹಾರದಲ್ಲಿ ತುರ್ತು ಆರೋಗ್ಯ ಸೌಲಭ್ಯಗಳ ಕುರಿತು ಚರ್ಚೆಯನ್ನು ಹುಟ್ಟುಹಾಕಿದೆ.