ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಾಲ್‌ನಲ್ಲಿ ಜನರೆದುರೇ ಚಾಕು ಹಿಡಿದು ಯುವತಿಯ ಮೇಲೆ ಹಲ್ಲೆ ನಡೆಸಿದ ಯುವಕ! ವಿಡಿಯೊ ವೈರಲ್

Viral Video: ಇಂದಿರಾಲುರಂ ಜೈಪುರಿಯಾ ಮಾಲ್ ನಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ಯುವಕನೊಬ್ಬ ಚಾಕುವನ್ನು ಹಿಡಿದುಕೊಂಡು ಯುವತಿಗೆ ಪದೇ ಪದೇ ಕಪಾಳಮೋಕ್ಷ ಮಾಡುತ್ತಿರುವ ದೃಶ್ಯ ಕಂಡು ಬಂದಿದೆ. ಅಲ್ಲಿದ್ದ ಮತ್ತೊಬ್ಬ ಯುವತಿ ರಕ್ಷಣೆಗೆ ಧಾವಿಸಿದಾಗಲೂ ಆಕೆಯನ್ನು ಪಕ್ಕಕ್ಕೆ ತಳ್ಳಿ ಬೆದರಿಸಿದ್ದಾನೆ..

ಚಾಕು ಹಿಡಿದು ಯುವತಿ ಮೇಲೆ ದೈಹಿಕ ಹಲ್ಲೆ: ಕ್ರಮ ಕೈಗೊಂಡ ಪೊಲೀಸರು

ಗಾಜಿಯಾಬಾದ್ ಮಾಲ್‌ ನಲ್ಲಿ ಚಾಕು ಹಿಡಿದು ಯುವತಿ ಮೇಲೆ ದೈಹಿಕ ಹಲ್ಲೆ -

Profile
Pushpa Kumari Aug 6, 2026 11:23 AM

ಗಾಜಿಯಾಬಾದ್,ಆ. 5: ಇತ್ತೀಚೆಗೆ ಮಹಿಳೆಯರ ಮೇಲೆ ದೈಹಿಕ ಹಲ್ಲೆಯ ಪ್ರಕರಣಗಳು ದಿನ ನಿತ್ಯ ವರದಿಯಾಗುತ್ತಲೇ ಇವೆ. ಈ ನಡುವೆ ಇಂದಿರಾಲುರಂನಲ್ಲಿರುವ ಜೈಪುರಿಯಾ ಮಾಲ್ ನಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ಯುವಕನೊಬ್ಬ ಚಾಕುವನ್ನು ಹಿಡಿದುಕೊಂಡು ಯುವತಿಗೆ ಪದೇ ಪದೇ ಕಪಾಳಮೋಕ್ಷ ಮಾಡುತ್ತಿರುವ ದೃಶ್ಯ (Viral News) ಕಂಡು ಬಂದಿದೆ. ಅಲ್ಲಿದ್ದ ಮತ್ತೊಬ್ಬ ಯುವತಿ ರಕ್ಷಣೆಗೆ ಧಾವಿಸಿದಾಗಲೂ ಆಕೆಯನ್ನು ಪಕ್ಕಕ್ಕೆ ತಳ್ಳಿ ಬೆದರಿಸಿದ್ದಾನೆ.

ಜನಸಾಗರವಿದ್ದ ಮಾಲ್‌ನಲ್ಲಿ ಈ ಘಟನೆ ಕಂಡು ಬಂದಿದೆ. ಯುವಕ ರೆಸ್ಟೋರೆಂಟ್ ನ ಅಡುಗೆ ಮನೆಯಿಂದ ತಂದ ಚಾಕುವನ್ನು ಹಿಡಿದುಕೊಂಡಿದ್ದು ಆಕೆಗೆ ಸರಿಯಾಗಿ ಥಳಿಸುತ್ತಿದ್ದಾನೆ. ಇಬ್ಬರು ಸ್ನೇಹಿತರಾಗಿದ್ದು ಈ ಹಿಂದೆ ಒಂದೇ ಕಡೆಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಆದರೆ ಈ ರೀತಿ ದೈಹಿಕ ಹಲ್ಲೆ ನಡೆಸುತ್ತಿರುವ ಯುವಕನ ವಿರುದ್ಧ ಆಕ್ರೋಶ ಕೇಳಿ ಬಂದಿದೆ. ಇಬ್ಬರ ನಡುವೆ ವೈಯಕ್ತಿಕ ವಿಚಾರಕ್ಕೆ ಜಗಳವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಡಿಯೋ ನೋಡಿ:



ಸೋಷಿಯಲ್ ಮೀಡಿಯಾದಲ್ಲಿ ಪ್ರಸಾರವಾಗುವ ಈ ದೃಶ್ಯ ಮಾಲ್‌ನೊಳಗೆ ನಡೆದ ತೀವ್ರ ವಾಗ್ವಾದದ ಸಂದರ್ಭದಲ್ಲಿ ಯುವಕನು ಯುವತಿಯ ಮೇಲೆ ಪದೇ ಪದೇ ಕಪಾಳಮೋಕ್ಷ ಮಾಡುವುದನ್ನು ತೋರಿಸುತ್ತಿದೆ. ಅವನು ಹರಿತವಾದ ಚಾಕುವನ್ನು ಹಿಡಿದಿರುವುದು ಸ್ಥಳದಲ್ಲಿದ್ದ ಜನರಲ್ಲಿ ಆತಂಕ ಮೂಡಿಸಿದೆ. ಆದಾಗ್ಯೂ ಸಹಾಯಕ್ಕೆ ಬಂದ ಮತ್ತೊಬ್ಬಳನ್ನು ಆರೋಪಿಯು ಪಕ್ಕಕ್ಕೆ ತಳ್ಳಿ ಹಲ್ಲೆ ಮುಂದುವರಿಸಿದ್ದಾನೆ.

Viral Video: ಹುಚ್ಚು ಪ್ರೀತಿ! ರೈಲು ನಿಲ್ದಾಣದಲ್ಲಿ ​ಸಾರ್ವಜನಿಕವಾಗಿ ಪ್ರೇಯಸಿಯ ಕಾಲು ಹಿಡಿದು ಯುವಕನ ಹೈಡ್ರಾಮ

ಈ ವೈರಲ್ ವೀಡಿಯೊದ ಬಗ್ಗೆ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ನಂತರ, ಇಂದಿರಾಪುರಂ ಪೊಲೀಸರು ಸಂಬಂಧಿಸಿದ ಕಾನೂನು ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನಂತರ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು ಗಲಭೆಗೆ ಕಾರಣವಾದ ಘಟನೆಗಳ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಈ ವಿಡಿಯೊ ಬಗ್ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು ವೈಯಕ್ತಿಕ ವಿಚಾರವೇ ಆಗಿರಲಿ, ಏನೇ ಇರಲಿ, ಕ್ರೂರವಾಗಿ ಹಲ್ಲೆ ನಡೆಸಿದ ಯುವಕನನ್ನು ಸುಮ್ಮನೆ ಬಿಡಬಾರದು ಸರಿಯಾದ ಕ್ರಮ ಕೈಗೊಳ್ಳಿ ಎಂದು ಕಿಡಿಕಾರಿದ್ದಾರೆ. ಯುವಜನಾಂಗ ಇಂದು ಇಂತಹ ಸಣ್ಣ ವಿಚಾರವಾಗಿ ಜಗಳವಾಡಿ ಪ್ರಾಣ ಕಳೆದುಕೊಳ್ಳುವಷ್ಟು ಮುರ್ಖರಾಗಿದ್ದಾರೆ ಎಂದು ಮತ್ತೊಬ್ಬರು ಬರೆದಿದ್ದಾರೆ..