ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

90ರ ಹರೆಯದಲ್ಲಿಯೂ ಕುಂದಿಲ್ಲ ಉತ್ಸಾಹ, ಅಜ್ಜಿಯ ಕಾರ್‌ ಡ್ರೈವಿಂಗ್‌ ಕ್ರೇಜ್‌ಗೆ ನೆಟ್ಟಿಗರು ಫಿದಾ; ವಿಡಿಯೋ ನೋಡಿ

Viral Video: ಜಮ್ಮು ಕಾಶ್ಮೀರದ ಕಥುವಾ ಬೀದಿಗಳಲ್ಲಿ 90 ವಯಸ್ಸಿನ ಅಜ್ಜಿಯೊಬ್ಬರು ಆತ್ಮವಿಶ್ವಾಸ ದಿಂದ ಕಾರು ಡ್ರೈವಿಂಗ್ ಮಾಡುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ಭಾರೀ ಟ್ರಾಫಿಕ್‌ ನಡುವೆಯೂ ವೃದ್ಧ ಮಹಿಳೆಯೊಬ್ಬರು ಸುಜುಕಿ ಆಲ್ಟೋಕಾರನ್ನು ಅತ್ಯಂತ ಆತ್ಮವಿಶ್ವಾಸದಿಂದ ಓಡಿಸಿದ್ದಾರೆ. ಸದ್ಯ ಈ ಅಜ್ಜಿಯ ಧೈರ್ಯಕ್ಕೆ ಹೆಚ್ಚಿನವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಕಾರು ಓಡಿಸಿದ 90ರ ಹರೆಯದ ಅಜ್ಜಿ; ಸಾಹಸ ಕಂಡು ಫಿದಾ ಆದ ನೆಟ್ಟಿಗರು!

ಸುಜುಕಿ ಆಲ್ಟೋ ಓಡಿಸುವ 90ರ ಹರೆಯದ ಅಜ್ಜಿ -

Profile
Pushpa Kumari Feb 26, 2026 1:40 PM

ಕತುವಾ,ಫೆ.26: ಸಾಧನೆಗೆ ವಯಸ್ಸಿನ ಹಂಗಿಲ್ಲ ಎನ್ನುವ ಮಾತನ್ನು ನೀವು ಕೇಳಿರಬಹುದು. ವಯಸ್ಸು ಅನ್ನೋದು ಕೇವಲ ಒಂದು ನಂಬರ್ ಅಷ್ಟೇ ಶ್ರಮ ಪಟ್ಟರೆ ಎಲ್ಲವೂ ಸಾಧ್ಯ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಜಮ್ಮು ಕಾಶ್ಮೀರದ ಕಥುವಾ ಬೀದಿಗಳಲ್ಲಿ 90 ವಯಸ್ಸಿನ ಅಜ್ಜಿಯೊಬ್ಬರು ಆತ್ಮವಿಶ್ವಾಸದಿಂದ ಕಾರು ಡ್ರೈವಿಂಗ್ ಮಾಡುತ್ತಿರುವ ವಿಡಿಯೊವೊಂದು ವೈರಲ್ (Viral Video) ಆಗಿದೆ. ಭಾರೀ ಟ್ರಾಫಿಕ್‌ ನಡುವೆಯೂ ವೃದ್ಧ ಮಹಿಳೆಯೊಬ್ಬರು ಸುಜುಕಿ ಆಲ್ಟೋ ಕಾರನ್ನು ಅತ್ಯಂತ ಆತ್ಮವಿಶ್ವಾಸದಿಂದ ಓಡಿಸಿದ್ದಾರೆ. ಸದ್ಯ ಈ ಅಜ್ಜಿಯ ಧೈರ್ಯಕ್ಕೆ ಹೆಚ್ಚಿನವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

90 ವರ್ಷದ ಅಜ್ಜಿಯೊಬ್ಬರ ಈ ಉತ್ಸಾಹ ನೋಡಿದರೆ ನೀವು ನಿಜಕ್ಕೂ ಬೆರಗಾಗುತ್ತೀರಿ. ಈ ವಯಸ್ಸಿನಲ್ಲೂ ಇವರು ಕಾರು ಓಡಿಸುವುದನ್ನು ಕಂಡು ಯುವ ಜನರೇ ಅಚ್ಚರಿ ಪಟ್ಟಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ವ್ಲಾಗರ್ ವಿಶಾಲ್ ಲಾಲೋತ್ರ ಎನ್ನುವವರು ಈ ದೃಶ್ಯ ಶೇರ್ ಮಾಡಿಕೊಂಡಿದ್ದು, ವೃದ್ಧಾಪ್ಯದ‌ ಕಲ್ಪನೆಗಳನ್ನು ಧಿಕ್ಕರಿಸಿ, ವೃದ್ದೆಯೊಬ್ಬರು ಶಾಂತವಾಗಿ ಕಾರು ಸಂಚರಿಸುವುದನ್ನು ತೋರಿಸಲಾಗಿದೆ.

ವಿಡಿಯೋ ನೋಡಿ:

ಈ ದೃಶ್ಯವನ್ನು ನೋಡುವಾಗಲೇ ಮಂದಹಾಸ ಮೂಡುತ್ತದೆ. ಟ್ರಾಫಿಕ್ ನಡುವೆಯೂ ಅಜ್ಜಿ ಯಾವುದೇ ಭಯವಿಲ್ಲದೆ, ಆತ್ಮವಿಶ್ವಾಸದಿಂದ ಕಾರು ಚಾಲನೆ ಮಾಡಿದ್ದಾರೆ. ಈ ವಯಸ್ಸಿನಲ್ಲಿ ವೃದ್ಧ ಮಹಿಳೆಯ ಚಾಲನಾ ಕೌಶಲ್ಯಕ್ಕಾಗಿ ಹೆಚ್ಚಿನ ಜನರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಈ ವಿಡಿಯೋದಲ್ಲಿ ಅಜ್ಜಿಯ ಮೊಮ್ಮಗ ತಮಾಷೆ ಮಾಡಿದ್ದು ನನ್ನ ಅಜ್ಜಿ ಎಐ ತಂತ್ರಜ್ಞಾನದಂತೆ ಬಹಳಷ್ಟು ಚುರುಕು ಎಂದು ಬಣ್ಣಿಸಿದ್ದಾರೆ.

Viral Video: ಪಾತ್ರೆಗೆ ತಲೆ ಸಿಲುಕಿಸಿಕೊಂಡ ನಾಯಿಯ ಅವಾಂತರ: ವಿಡಿಯೊ ಫುಲ್ ವೈರಲ್!

ಇತ್ತೀಚೆಗಷ್ಟೇ ಮಂಗಳಾ‌‌ ಎನ್ನುವ 65 ವರ್ಷದ ಮಹಿಳೆ ಆಟೋರಿಕ್ಷಾ ಓಡಿಸುವ ಮೂಲಕ ಬದುಕು ಸಾಗಿಸುತ್ತಿರುವ ವಿಡಿಯೊ ಕಂಡು ಬಂದಿತ್ತು. ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕರಾದ್ ಮತ್ತು ಉಂಡೇಲ್ ರಸ್ತೆಗಳಲ್ಲಿ ಅವರು ಓಡಾಟ ನಡೆಸುತ್ತಾರೆ. ಹಣಕ್ಕಾಗಿ ತನ್ನ ಮಕ್ಕಳನ್ನು ಅವಲಂಬಿಸುವುದನ್ನು ತಪ್ಪಿಸಲು ಅವರು ಆಟೋರಿಕ್ಷಾ ಓಡಿಸುತ್ತಿದ್ದಾರೆ.