ರಸ್ತೆಗೆ ತೇವಳುತ್ತ ಬಂದ ಮಗು: ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಕೂದಲೆಳೆ ಅಂತರದಲ್ಲಿ ಪಾರು
Viral News: ಕೇರಳಂನ ಮಲಪ್ಪುರಂ ಜಿಲ್ಲೆಯಲ್ಲಿ ಅತ್ಯಂತ ಅಘಾತಕಾರಿ ಘಟನೆಯೊಂದು ಕಂಡು ಬಂದಿದೆ. ಚಲಿಸುತ್ತಿರುವ ಬಸ್‌ನ ಮುಂದೆ ರಸ್ತೆಯಲ್ಲಿ ಮಗುವೊಂದು ಇದ್ದಕ್ಕಿದ್ದಂತೆ ತೆವಳಿಕೊಂಡು ಬಂದಿದ್ದು, ಚಾಲಕ ಸಮಯ ಪ್ರಜ್ಞೆ ಮೆರೆಯುವ ಅದರ ಪ್ರಾಣ ಉಳಿಸಿದ್ದಾನೆ. ಸದ್ಯ ಈ ದೃಶ್ಯವು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಮಲಪ್ಪುರಂನಲ್ಲಿ ರಸ್ತೆಗೆ ತೆವಳುತ್ತಾ ಬಂದ ಮಗುವನ್ನು ರಕ್ಷಿಸಿದ ಚಾಲಕ -
ತಿರುವನಂತಪುರಂ, ಜೂ. 11: ಸಣ್ಣ ಮಕ್ಕಳ ಬಗ್ಗೆ ಪೋಷಕರು ಎಷ್ಟು ಎಚ್ಚರಿಕೆ ವಹಿಸಿದರೂ ಕಡಿಮೆಯೇ. ಅದರಲ್ಲೂ ರಸ್ತೆ ಪಕ್ಕದಲ್ಲಿ ಮನೆಯಿರುವ ಪೋಷಕರು ಬಹಳಷ್ಟು ನಿಗಾ ವಹಿಸಬೇಕಾಗುತ್ತದೆ. ಇದಕ್ಕೆ ಪೂರಕ ಎಂಬಂತೆ ಕೇರಳಂನ ಮಲಪ್ಪುರಂ ಜಿಲ್ಲೆಯಲ್ಲಿ ಅತ್ಯಂತ ಅಘಾತಕಾರಿ ಘಟನೆಯೊಂದು ನಡೆದಿದೆ. ಚಲಿಸುತ್ತ ಇರುವ ಬಸ್‌ನ ಮುಂದೆ ಮಗುವೊಂದು ಇದ್ದಕ್ಕಿದ್ದಂತೆ ತೆವಳಿಕೊಂಡು ರಸ್ತೆಗೆ ಬಂದಿದ್ದು, ಚಾಲಕ ಸಮಯ ಪ್ರಜ್ಞೆ ಮೆರೆಯುವ ಮೂಲಕ ಅದರ ಜೀವ ಉಳಿಸಿದ್ದಾನೆ. ಸದ್ಯ ಈ ಭಯಾನಕ ದೃಶ್ಯವು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗುತ್ತಿದೆ.
ಕೇರಳಂನ ಮಲಪ್ಪುರಂ ಜಿಲ್ಲೆಯಲ್ಲಿ ಈ ದೃಶ್ಯ ಕಂಡು ಬಂದಿದೆ. ಬಸ್ ಬರುವ ಕೆಲವೇ ಕ್ಷಣಗಳ ಮುನ್ನ ಮಗುವೊಂದು ಮುಖ್ಯ ರಸ್ತೆಗೆ ತೆವಳಿಕೊಂಡು ಬಂದಿದೆ. ಇದರ ಸಿಸಿಟಿವಿ ದೃಶ್ಯವು ಭಾರಿ ವೈರಲ್ ಆಗಿದ್ದು ಬಸ್ ಚಾಲಕನ ತ್ವರಿತ ಕ್ರಮದಿಂದ ಮಗುವಿನ ಜೀವವನ್ನು ಉಳಿದಿದೆ. ಈ ಘಟನೆ ಜೂನ್ 10ರಂದು ಬೆಳಗ್ಗೆ ಸುಮಾರು 8.30ರ ಸುಮಾರಿಗೆ ನಡೆದಿದೆ.
ವಿಡಿಯೊ ನೋಡಿ:
நடுரோட்டில் தவழ்ந்து வந்த பிஞ்சு, பின்னாடி வேகமா வந்த பஸ்! - பதற வச்ச காட்சி, பரவசப்படுத்துன முடிவு
— Kᴀʙᴇᴇʀ - தக்கலை கபீர் (@Autokabeer) June 11, 2026
கேரளம் - மலப்புறம் : புளிக்கல்ல நடுரோட்டுல பால் குடி குழந்தை ஒன்று தவழ்ந்து வந்துடுச்சு.
பஸ் டிரைவர் உடனே பிரேக் போட்டு நிறுத்த, கண்டக்டர் நவாஸ் ஓடிபோய் குழந்தைய தூக்கி அதன்… pic.twitter.com/sd8XRCWgS4
ವೈರಲ್ ಆದ ವಿಡಿಯೊದಲ್ಲಿ ಮುಖ್ಯ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಲಿಸುತ್ತಿರುವುದು ಕಂಡು ಬಂದಿದೆ. ಅದೇ ರಸ್ತೆಯ ಪಕ್ಕದಲ್ಲಿ ಸಣ್ಣ ಮಗುವೊಂದು ತೆವಳಿಕೊಂಡು ಬರುತ್ತಿದೆ. ಮಗು ರಸ್ತೆಗೆ ಎಂಟ್ರಿ ನೀಡುತ್ತಿದ್ದಂತೆ ತಕ್ಷಣವೇ ನಿಗಾ ವಹಿಸಿದ ಬಸ್ ಚಾಲಕ ಬ್ರೇಕ್ ಒತ್ತುವ ಮೂಲಕ ಬಸ್ ನಿಲ್ಲಿಸಿದ್ದಾರೆ.
ವೇದಿಕೆಯಲ್ಲೇ ಆ್ಯಂಕರ್‌ಗೆ ಚಪ್ಪಲಿಯಿಂದ ಹೊಡೆದ ಖ್ಯಾತ ಗಾಯಕಿ
ಬಸ್ ನಿಂತ ನಂತರ, ಕಂಡಕ್ಟರ್ ರಸ್ತೆಗೆ ಧಾವಿಸಿ ಮಗುವನ್ನು ರಸ್ತೆಯಿಂದ ಎತ್ತಿಕೊಂಡಿದ್ದಾರೆ. ಅವರ ತ್ವರಿತ ಕ್ರಮವು ವಿರುದ್ಧ ದಿಕ್ಕಿನಿಂದ ಬಂದ ವಾಹನಗಳಿಂದ ಮಗುವನ್ನು ಸುರಕ್ಷಿತವಾಗಿರಿಸಿತು. ಮಗುವನ್ನು ಸುರಕ್ಷಿತವಾಗಿ ಪೋಷಕರಿಗೆ ಹಸ್ತಾಂತರಿಸಲಾಗಿದೆ. ಆದರೆ ಪೋಷಕರಿಗೆ ಮಗು ಬಂದಿದ್ದೇ ತಿಳಿದಿರಲಿಲ್ಲ, ಮಗುವನ್ನು ಅವರಿಗೆ ಹಿಂತಿರುಗಿಸಿದ ನಂತರವೇ ಏನಾಗಿದೆ ಎಂಬುದು ತಿಳಿದಿದೆ.
ಮಗು ಮನೆಯಿಂದ ಹೊರಗೆ ಬಂದು ಹೆದ್ದಾರಿ ತಲುಪಿದ್ದು ಹೇಗೆ ಎಂಬುದು ತಿಳಿಯದೆ ಪೋಷಕರು ಗೊಂದಲಕ್ಕೆ ಒಳಗಾಗಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಕಮೆಂಟ್ ಮಾಡಿದ್ದಾರೆ. ನೆಟ್ಟಿಗರೊಬ್ಬರು ಚಾಲಕನ ಪ್ರಜ್ಞೆಯನ್ನು ಕೊಂಡಾಡಿದ್ದಾರೆ. ಮತ್ತೊಬ್ಬರು ಪೋಷಕರ ನಿರ್ಲಕ್ಷ್ಯ ಕುರಿತು ಕಿಡಿಕಾರಿದ್ದಾರೆ.