15 ಬಾರಿ ರಿಜೆಕ್ಟ್ ಆದ್ರೂ ಛಲ ಬಿಡದ ಯುವಕ: ಕೊನೆಗೂ ಅಮೆಜಾನ್ ಕಂಪನಿಯಲ್ಲಿ 1.1 ಕೋಟಿ ರೂಪಾಯಿ ಪ್ಯಾಕೇಜ್‌ನ ಉದ್ಯೋಗ! ಸಾಧನೆ ಅಂದ್ರೆ ಇದು
Viral News: ಯುವಕನೊಬ್ಬ ಅಮೆಜಾನ್ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಸತತ 15 ಬಾರಿ ಪ್ರಯತ್ನಿಸಿದಾಗಲೂ ರಿಜೆಕ್ಟ್ ಆಗಿದ್ದಾನೆ. ಆದರೂ ಕುಗ್ಗದೆ ಛಲ ಬಿಡದ ಯುವಕ 16ನೇ ಬಾರಿ ಪ್ರಯತ್ನಿಸಿ ಅಮೆಜಾನ್ ಜರ್ಮನಿ ಶಾಖೆಯಲ್ಲಿ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಎಂಜಿನಿಯರ್ ಕೆಲಸ ಗಿಟ್ಟಿಸಿಕೊಂಡಿದ್ದಾನೆ. ಸದ್ಯ ಈತನ ಸಾಧನೆಯ ಕಥೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಸೆ. 9: ಬದುಕಿನಲ್ಲಿ ಸೋಲು ಸಾಮಾನ್ಯ. ಆದರೆ ಇದಕ್ಕೆ ಜಗ್ಗದೆ ಪ್ರಯತ್ನ ಪಟ್ಟರೆ ಮುಂದೊಂದು ದಿನ ಯಶಸ್ಸು ಗಳಿಸಲು ಸಾಧ್ಯ. ಇದಕ್ಕೆ ಸಾಕ್ಷಿ ಎನ್ನುವಂತೆ ಯುವಕನೊಬ್ಬ ಅಮೆಜಾನ್ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾನೆ. ಸತತ 15 ಬಾರಿ ಪ್ರಯತ್ನಿಸಿದಾಗಲೂ ರಿಜೆಕ್ಟ್ ಆಗಿದ್ದ. ಆದರೂ ಛಲ ಬಿಡದೆ 16ನೇ ಬಾರಿ ಪ್ರಯತ್ನಿಸಿದಾಗ ಅಮೆಜಾನ್ ಜರ್ಮನಿ ಶಾಖೆಯಲ್ಲಿ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಎಂಜಿನಿಯರಿಂಗ್ ಕೆಲಸ ಗಿಟ್ಟಿಸಿಕೊಂಡಿದ್ದಾನೆ. ಸದ್ಯ ಈತನ ಸಾಧನೆಯ ಕಥೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗಿದೆ.
ಗಂತವ್ಯ ಮಾಳವಿಯ ಮಧ್ಯ ಪ್ರದೇಶದ ಭೋಪಾಲ್‌ನ ಕಾಲೇಜಿನಿಂದ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್ (ECE) ನಲ್ಲಿ ಪದವಿ ಪಡೆದಿದ್ದ. ಗಂತವ್ಯ ಅಮೆಜಾನ್‌ನಲ್ಲಿ ಕೆಲಸಕ್ಕೆ ಪ್ರಯತ್ನಿಸಿದ್ದು, ಸತತ 15 ಬಾರಿ ಅರ್ಜಿ ತಿರಸ್ಕೃತಗೊಂಡಿದೆ. ಆದರೂ ಛಲ ಬಿಡದೇ ಶ್ರಮ ಪಡುತ್ತಲೇ ಇದ್ದ. ಕೊನೆಗೂ ಅಮೆಜಾನ್‌ನಲ್ಲಿ 1.1 ಕೋಟಿ ರೂಪಾಯಿ ಪ್ಯಾಕೇಜ್‌ನ ಕೆಲಸ ಗಿಟ್ಟಿಸಿಕೊಂಡು ಅಂದುಕೊಂಡಿದ್ದನ್ನು ಸಾಧಿಸಿದ್ದಾನೆ. ಸದ್ಯ ಆತನ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇಲ್ಲಿದೆ ವೈರಲ್ ಪೋಸ್ಟ್:
Meet Gantavya Malviya, who completed his https://t.co/BC6fLkcQNf ECE from LNCT Bhopal. This guy is from a non-CS branch, and you know what? He cracked Amazon off-campus with a ₹1.1 crore package at Amazon Germany.
— Vikas Alwys (@VikasAlwys) September 8, 2026
He was rejected by Amazon 15 times before cracking it.
The good… pic.twitter.com/wjndFgYq1R
ಕಾಲೇಜು ದಿನಗಳಲ್ಲೇ ಕೋಡಿಂಗ್, ಡೇಟಾ ಸ್ಟ್ರಕ್ಚರ್ಸ್ ಆ್ಯಂಡ್ ಆಲ್ಗರಿದಮ್ಸ್, ಮೆಷಿನ್ ಲರ್ನಿಂಗ್ ಅಭಿವೃದ್ಧಿ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ ಗಂತವ್ಯ, ಅಮೆಜಾನ್‌ನಲ್ಲಿ ಹುದ್ದೆಗೆ ಸತತವಾಗಿ ಅರ್ಜಿ ಸಲ್ಲಿಸುತ್ತಲೇ ಇದ್ದ. ಆದರೆ ಆತನ ಅರ್ಜಿ 15 ಬಾರಿ ತಿರಸ್ಕೃತಗೊಂಡಿದ್ದವು. 16ನೇ ಬಾರಿ ಪ್ರಯತ್ನಿಸಿದಾಗ ಅಮೆಜಾನ್ ಜರ್ಮನಿ ಶಾಖೆಗೆ ಶಾರ್ಟ್‌ಲಿಸ್ಟ್ ಮಾಡಲಾಗಿದ್ದು ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಇಂಜಿನಿಯರ್ (SDE) ಹುದ್ದೆಗೆ ಆಯ್ಕೆಯಾಗಿದ್ದಾನೆ. 3 ವರ್ಷಗಳ ಹಿಂದೆ ಕಂಪನಿಯು ವಾರ್ಷಿಕ ಸುಮಾರು 1.10 ಕೋಟಿ ರೂಪಾಯಿ ವೇತನದ ಪ್ಯಾಕೇಜ್ ನೀಡಿತು.
ಇಂಗ್ಲೆಂಡ್‌ನ ದುಬಾರಿ ಶಸ್ತ್ರಚಿಕಿತ್ಸೆಯಿಂದ ಬೇಸತ್ತು ಭಾರತಕ್ಕೆ ಬಂದ ವ್ಯಕ್ತಿ
ಇದೀಗ ಗಂತವ್ಯ ಮತ್ತೊಂದು ಹೊಸ ಹೆಜ್ಜೆ ಇಟ್ಟಿದ್ದು ಟ್ಯಾಕ್ಸ್‌ಫಿಕ್ಸ್‌ಗೆ ಸೇರಲು ಅಮೆಜಾನ್ ಕೆಲಸ ತೊರೆಯುತ್ತಿರುವುದಾಗಿ ಘೋಷಿಸಿದ್ದಾನೆ. ಅಮೆಜಾನ್‌ನಲ್ಲಿ ಸುಮಾರು ಮೂರು ವರ್ಷಗಳ ಕೆಲಸದ ನಂತರ ಹುದ್ದೆಗೆ ರಾಜೀನಾಮೆ ನೀಡಿದ್ದು, ಟ್ಯಾಕ್ಸ್ ಫಿಕ್ಸ್ ಎಂಬ ಸಂಸ್ಥೆಗೆ ಸೇರಿದ್ದಾನೆ. ಹೊಸ ಸಂಸ್ಥೆಯ ಲೋಗೋ ಹಿಡಿದು ಪೋಸ್ಟ್ ಶೇರ್ ಮಾಡಿದ್ದಾನೆ.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಧನಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬರು, ʼʼತುಂಬ ಸ್ಪೂರ್ತಿದಾಯಕʼʼ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ʼʼನಿಮ್ಮ ಶ್ರಮ ನಿಜಕ್ಕೂ ಅದ್ಭುತʼʼ ಎಂದು ಹೇಳಿದ್ದಾರೆ.