ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Puri Jagannath Temple: ಪುರಿ ಜಗನ್ನಾಥ ದೇವಾಲಯದ ಮೇಲೆ ಬಟ್ಟೆ ಹಿಡಿದು ಹಾರಿದ ಗರುಡ; ಶುಭವೋ, ಅಶುಭವೋ?

Viral Video: ಪುರಿ ಜಗನ್ನಾಥ ದೇವಾಲಯದ ಮೇಲೆ ಹದ್ದೊಂದು ಕೇಸರಿ ಬಣ್ಣದ ಬಟ್ಟೆಯೊಂದನ್ನು ಹಿಡಿದುಕೊಂಡು ಹಾರಾಡಿದೆ. ಈ ಕುತೂಹಲಕಾರಿ ದೃಶ್ಯವನ್ನು ವಿಡಿಯೊದಲ್ಲಿ ಸೆರೆಹಿಡಿಯಲಾಗಿದೆ. ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ಚರ್ಚೆಗೆ ಕಾರಣವಾಗಿದೆ.

ಪುರಿ ಜಗನ್ನಾಥ ದೇವಾಲಯದ ಮೇಲೆ ಪವಿತ್ರ ಬಟ್ಟೆಯೊಂದಿಗೆ ಹಾರಾಡಿದ ಗರುಡ

Profile pavithra Apr 16, 2025 3:42 PM

ಭುವನೇಶ್ವರ: ಪುರಿ ಜಗನ್ನಾಥ ದೇವಾಲಯ (Puri Jagannath Temple) ಹಲವು ಪವಾಡಗಳಿಗೆ ಹೆಸರುವಾಸಿ. ಇಲ್ಲಿ ಅನೇಕ ಪವಾಡಗಳು ನಡೆಯುತ್ತಿರುತ್ತವೆ. ಇದೀಗ ಪುರಿ ಜಗನ್ನಾಥ ದೇವಾಲಯ ಬಳಿ ನಡೆದ ಘಟನೆಯೊಂದು ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆದು ವೈರಲ್ (Viral Video) ಆಗಿದೆ. ದೇವಾಲಯದ ಮೇಲೆ ಗರುಡ ಕೇಸರಿ ಬಣ್ಣದ ಬಟ್ಟೆಯ ತುಂಡೊಂದನ್ನು ಹಿಡಿದುಕೊಂಡು ಹಾರಾಡಿದೆ. ಈ ಕುತೂಹಲಕಾರಿ ದೃಶ್ಯವನ್ನು ವಿಡಿಯೊದಲ್ಲಿ ಸೆರೆ ಹಿಡಿಯಲಾಗಿದೆ. ಇದನ್ನು ನೋಡಿ ನೆಟ್ಟಿಗರು ಶಾಕ್‌ ಆಗಿದ್ದಾರೆ.

ವೈರಲ್ ಆಗಿರುವ ವಿಡಿಯೊದಲ್ಲಿ ಗರುಡ ಬಟ್ಟೆಯೊಂದನ್ನು ಹಿಡಿದುಕೊಂಡು ಜಗನ್ನಾಥನ ಮಂದಿರವನ್ನು ಸುತ್ತುತ್ತಿರುವುದು ಸೆರೆಯಾಗಿದೆ. ವರದಿ ಪ್ರಕಾರ, ಶನಿವಾರ (ಏಪ್ರಿಲ್ 12) ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಗರುಡ ಶುರುವಿನಲ್ಲಿ ದೇವಾಲಯದ ಪಶ್ಚಿಮ ದ್ವಾರದ ಕಡೆಗೆ ಹಾರಿ ನಂತರ ಸಮುದ್ರದ ಕಡೆಗೆ ಹೋಗಿ ಕಣ್ಮರೆಯಾಗಿದೆ.

ಗರುಡ ದೇವಸ್ಥಾನದ ಮೇಲೆ ಹಾರಿದ ದೃಶ್ಯ ಇಲ್ಲಿದೆ ನೋಡಿ...



ಗರುಡ ಹಿಡಿದಿರುವ ಬಟ್ಟೆ ದೇವಾಲಯದ ಧ್ವಜಕ್ಕೆ ಗಮನಾರ್ಹ ಹೋಲಿಕೆ ಇದ್ದರೂ, ಬಟ್ಟೆ ನಿಜವಾಗಿಯೂ ಜಗನ್ನಾಥ ದೇವಾಲಯಕ್ಕೆ ಸೇರಿದೆಯೇ ಅಥವಾ ಕೇವಲ ಸಾಮಾನ್ಯ ಬಟ್ಟೆಯ ತುಂಡಾಗಿದೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಆದರೆ ಈ ನಿಗೂಢ ಘಟನೆಯು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ. ನೆಟ್ಟಿಗರೊಬ್ಬರು, "ಗರುಡ ಜಗನ್ನಾಥ ದೇವಾಲಯದಿಂದ ಪವಿತ್ರ ಧ್ವಜವನ್ನು ತೆಗೆದುಕೊಂಡು ಹೋಗಿದ್ದರೆ, ಅದು ಕಳ್ಳತನವಲ್ಲ - ಅದು ಒಳ್ಳೆಯ ಸಂದೇಶ. ಭಗವಾನ್ ಜಗನ್ನಾಥನ ಆಶೀರ್ವಾದದಿಂದ ಗರುಡನೇ ಸ್ವತಃ ಸ್ವರ್ಗಕ್ಕೆ ಬಂದಿದ್ದಾನೆ. ಒಳ್ಳೆಯ ಯುಗ ಬರುತ್ತಿದೆ. ಭಗವಾನ್ ಜಗನ್ನಾಥನ ಶಕ್ತಿಯು ಜಾಗತಿಕವಾಗಿ ವಿಸ್ತರಿಸುತ್ತಿದೆ - ಅವರ ಹೆಸರು ಮತ್ತು ಸಂದೇಶವನ್ನು ವಿಶ್ವಾದ್ಯಂತ ಹರಡುವ ರೂಪಕವಾಗಿ ಆಕಾಶದಲ್ಲಿ ಗರುಡ ಧ್ವಜವನ್ನು ಹಾರಿಸುತ್ತಿದೆ” ಎಂದಿದ್ದಾರೆ. ಇನ್ನೊಬ್ಬರು, "ಖಂಡಿತವಾಗಿಯೂ, ತುಂಬಾ ಒಳ್ಳೆಯದು ಸಂಭವಿಸಲಿದೆ. ಹಿಂದೂ ಧರ್ಮಗ್ರಂಥಗಳಲ್ಲಿ ಪಕ್ಷಿಗಳಿಗೆ ಹೆಚ್ಚಿನ ಮಹತ್ವವಿದೆ ಮತ್ತು ಅವು ಶುಭದ ಸಂಕೇತ ಎನ್ನಲಾಗುತ್ತದೆ” ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಮಹಿಳೆಗೆ ಶಾಪ ಹಾಕಿದ ಚಾಟ್‍ಜಿಪಿಟಿ; ಕಾರಣ ಗೊತ್ತಾದ್ರೆ ನೀವು ಕೂಡ ಬಿದ್ದು ಬಿದ್ದು ನಗ್ತೀರಿ!

ಈ ಘಟನೆಯು ಒಳ್ಳೆಯ ಶಕುನವನ್ನು ಸೂಚಿಸುತ್ತದೆ ಎಂದು ಹಲವರು ನಂಬಿದರೆ, ಇತರರು ಇದು ಮುಂಬರುವ ಸಂಕಷ್ಟವನ್ನು ಮುಂಚಿತವಾಗಿ ಎಚ್ಚರಿಸುವ ಸೂಚನೆಯಾಗಿರಬಹುದು ಎಂದು ಹೇಳಿದ್ದಾರೆ. ಒಬ್ಬರು, "ಸರಿ, ಅದರ ಕಾರಣದ ಬಗ್ಗೆ ಯಾರಿಗೂ ತಿಳಿದಿಲ್ಲ. ಇದು ಮುಂಬರುವ ವಿಪತ್ತನ್ನು ಸೂಚಿಸುವ ಕೆಟ್ಟ ಶಕುನ ಎಂದು ಹೆಚ್ಚಿನವರು ನಂಬುತ್ತಾರೆ. ಹಾಗಾದ್ರೆ ನಾವು ಇಲ್ಲಿ ಮಾಡಬಹುದಾದ ಅತ್ಯುತ್ತಮ ಕೆಲಸವೆಂದರೆ ಸಾಧ್ಯವಾದಷ್ಟು 'ಧರ್ಮ'ವನ್ನು ಹರಡುವುದು ಮತ್ತು ಆಚರಿಸುವುದು" ಎಂದಿದ್ದಾರೆ. ಇನ್ನೊಬ್ಬರು, "ಬಹುಶಃ ಇದು ಭಯಾನಕವಾದ ಏನೋ ಸಂಭವಿಸಲಿದೆ ಎಂಬುದರ ಎಚ್ಚರಿಕೆಯಾಗಿರಬಹುದು" ಎಂದು ಹೇಳಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಜನರ ಗಮನ ಸೆಳೆಯುತ್ತಿದ್ದರೂ ದೇವಾಲಯದ ಅಧಿಕಾರಿಗಳು ಈ ವಿಷಯದ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.